ಜಂಟಲ್ ಮೆನ್ ಶೇವ್ ಗೆ ಕೆಲವೊಂದು ಟಿಪ್ಸ್

By Hemanth Amin
Subscribe to Boldsky

ಕ್ಷೌರ ಪರಿಪೂರ್ಣವಾದರೆ ಆಗ ಯಾವುದೇ ವ್ಯಕ್ತಿಗೆ ಆಗುವ ಭಾವನೆಯೇ ಬೇರೆ. ಇದು ಶ್ರೇಷ್ಠ ಭಾವನೆ ಮೂಡಿಸಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಇದು ಯಾವುದೇ ಪ್ರಮುಖ ಮೀಟಿಂಗ್ ಅಥವಾ ಡೇಟ್ ಆಗಿರಲಿ, ನೀವು ಜಂಟಲ್ ಮೆನ್ ಪ್ರಭಾವ ಬೀರಲು ಮುಖ ತುಂಬಾ ತೀಕ್ಷ್ಣ ಮತ್ತು ಮೃದುವಾಗಿ ಕಾಣಬೇಕು. ಎಲ್ಲಾ ಮಹಿಳೆಯರು ಒಂದೇ ರೀತಿ ಇರುವುದಿಲ್ಲ. ಕೆಲವು ಮಹಿಳೆಯರಿಗೆ ಡೇಟಿಂಗ್ ವೇಳೆ ಪುರುಷ ಕ್ಷೌರ ಮಾಡದೆ ಬಂದರೆ ತುಂಬಾ ಕಿರಿಕಿರಿಯಾಗುತ್ತದೆ. ಅನೇಕ ಮಹಿಳೆಯರು ಕ್ಷೌರ ಮಾಡಿದಂತಹ ಮೃದುವಾದ ಮುಖ ಬಯಸುತ್ತಾರೆ.

ಪ್ರತೀ ಸಲ ಕ್ಷೌರ ಮಾಡಿಸಲು ನೀವು ರೇಜರ್ ಹಿಡಿದಾಗ ಜಂಟಲ್ ಮೆನ್ ಹಾಗೆ ಕಾಣಿಸಿಕೊಳ್ಳಲು ನೀವು ಕೆಲವೊಂದು ತಯಾರಿಗಳನ್ನು ಮಾಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿರುವ ಕೆಲವು ರೇಜರ್ ಗಳ, ಜೆಲ್ ಅಥವಾ ಕ್ರೀಮ್ ಗಳ ಜಾಹೀರಾತುಗಳನ್ನು ನೋಡಿ ಮರುಳಾಗಿ ಕ್ಲೀನ್ ಶೇವ್ ಆಗುತ್ತದೆಯೆಂದು ನಂಬಬೇಡಿ. ಈ ಎಲ್ಲಾ ಉಪಕರಣಗಳು ಮಾರುಕಟ್ಟೆಗೆ ಬರುವ ಮೊದಲೇ ಒಳ್ಳೆಯ ಕ್ಷೌರವಾಗುತ್ತಿತ್ತು. ರೇಜರ್ ನ್ನು ಕೆನ್ನೆ ಮೇಲಿಡುವ ಮೊದಲು ನೀವು ಕ್ರೀಮ್ ನ್ನು ಯಾವ ರೀತಿಯಲ್ಲಿ ಬಳಸುತ್ತೀರಿ ಎನ್ನುವುದು ತುಂಬಾ ಮುಖ್ಯ.

Tips to shave like a gentleman

 ಕ್ಷೌರ ಆರಂಭಿಸುವ ಮೊದಲು ನಿಮ್ಮ ಗಡ್ಡವನ್ನು ತೇವಾಂಶಗೊಳಿಸುವುದು ಅತ್ಯಗತ್ಯ. ಹೆಚ್ಚಿನ ಕ್ರೀಮ್ ಹಾಕಿ ನಿಮ್ಮ ಮುಖದಲ್ಲಿರುವ ಕೂದಲುಗಳಿಗೆ ತೇವಾಂಶ ನೀಡುವುದರಿಂದ ಒಣ ಕೂದಲಿಗಿಂತ ಹೆಚ್ಚಿನ ನೊರೆ ನೀಡುತ್ತದೆ. ಎರಡನೇಯದಾಗಿ ಒಳ್ಳೆಯ ಗುಣಮಟ್ಟದ ಕ್ರೀಮ್ ಬಳಸಿ ಇದರಿಂದ ಹೆಚ್ಚಿನ ನೊರೆ ಬರುತ್ತದೆ. ಕ್ಷೌರಕ್ಕೆ ಮೊದಲು ಬ್ಲೇಡ್ ಚೂಪಾಗಿದೆಯಾ ಎಂದು ಪರೀಕ್ಷಿಸಿ. ಕ್ಷೌರ ಮಾಡಿದ ಬಳಿಕ ಆಫ್ಟರ್ ಶೇವ್ ಮತ್ತು ಮೊಶ್ಚಿರೈಸರ್ ಹಚ್ಚಿ ಜರ್ಜರಿತ ಚರ್ಮವನ್ನು ತಂಪುಗೊಳಿಸಿ.

ಕ್ಷೌರದ ಕೆಲಸ ಆರಂಭಿಸುವ ಮೊದಲು ಮುಖದಲ್ಲಿರುವ ಕೂದಲುಗಳಿಗೆ ಹೆಚ್ಚಿನ ತೇವಾಂಶ ನೀಡಬೇಕು. ಮುಖದಲ್ಲಿರುವ ಕೂದಲುಗಳಿಗೆ ತೇವಾಂಶ ನೀಡಿದಾಗ ಅದು ಮೃದು ಮತ್ತು ದುರ್ಬಲವಾಗುತ್ತದೆ. ಇದರಿಂದ ಕ್ಷೌರ ಸುಲಭವಾಗುತ್ತದೆ. ಕ್ಷೌರಕ್ಕೆ ಮೊದಲು ಸ್ನಾನ ಮಾಡಿ ಅಥವಾ ಫೇಸ್ ವಾಶ್ ಹಾಕಿ ಬಿಸಿ ನೀರಿನಲ್ಲಿ ತೊಳೆಯಿರಿ. ಯಾವಾಗಲೂ ಗುಣಮಟ್ಟದ ಕ್ರೀಮ್ ಮತ್ತು ಜೆಲ್ ಗಳನ್ನು ಬಳಸಿ. ಕಡಿಮೆ ಗುಣಮಟ್ಟದ ಕ್ರೀಮ್ ಗಳಿಂದ ಹೆಚ್ಚಿನ ನೊರೆ ಬರದೆ ನೀವು ಬಯಸಿದಷ್ಟು ಕ್ಲೀನ್ ಶೇವ್ ಸಿಗದಿರಬಹುದು. ನೀವು ಬಳಸುವ ಜೆಲ್ ಅಥವಾ ಕ್ರೀಮ್ ನಲ್ಲಿ ಲೂಬ್ರಿಕೆಂಟ್ಸ್ ಅಂಶ ಉತ್ತಮವಾಗಿದ್ದರೆ ಮೃದುವಾದ ನೊರೆಯಿಂದಾಗಿ ಒಳ್ಳೆಯ ಶೇವ್ ಮಾಡಲು ಸಾಧ್ಯ.

ಶೇವಿಂಗ್ ಬ್ರಶ್ ವಿಷಯಕ್ಕೆ ಬಂದರೆ ತುಂಬಾ ಮೃದು ಮತ್ತು ಎಲ್ಲಾ ಕಡೆಯೂ ತಿರುಗಬಲ್ಲದನ್ನು ಆಯ್ಕೆ ಮಾಡುವುದು ಮುಖ್ಯ. ಒಳ್ಳೆಯ ಗುಣಮಟ್ಟದ ಬ್ರಶ್ ನಿಂದ ಜಂಟಲ್ ಮೆನ್ ರೀತಿಯ ಶೇವ್ ಪಡೆಯಲು ನೆರವಾಗುತ್ತದೆ. ತುಂಬಾ ಮೃದು ಮತ್ತು ಬಲಿಷ್ಠವಾಗಿರುವ ಬ್ರಶ್ ನ್ನು ಆಯ್ಕೆ ಮಾಡಿ.

ಜಂಟಲ್ ಮೆನ್ ಶೇವ್ ಮಾಡಲು ರೇಜರ್ ತುಂಬಾ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮೃದುವಾದ ಕ್ಷೌರಕ್ಕಾಗಿ ತುಂಬಾ ಚೂಪಾದ ಬ್ಲೇಡ್ ಗಳೊಂದಿಗೆ ಬರುವ ರೇಜರ್ ನ್ನು ಬಳಸಬೇಕು. ಬ್ಲೇಡ್ ಗಳು ಚೂಪಾಗಿದೆಯಾ ಎಂದು ನೋಡುವುದು ತುಂಬಾ ಮುಖ್ಯ. ಮೊಂಡಾದ ಬ್ಲೇಡ್ ಗಳನ್ನು ಬಳಸಬೇಡಿ. ಇದರಿಂದ ನಿಮ್ಮ ಚರ್ಮಕ್ಕೆ ತುಂಬಾ ಹಾನಿಯಾಗಬಹುದು.

ಹೆಚ್ಚಿನ ಅಭ್ಯಾಸದಿಂದ ರೇಜರ್ ನ್ನು ಹೇಗೆ ಬಳಸಬೇಕು ಎನ್ನುವುದು ತನ್ನಿಂದ ತಾನೇ ತಿಳಿಯುತ್ತದೆ. ಇದನ್ನು ಹೀಗೆ ಬಳಸಬೇಕೆಂದು ಏನೂ ಇಲ್ಲ. ಆದರೆ ನಿಮ್ಮ ಚರ್ಮ ಮತ್ತು ಮುಖಕ್ಕೆ ಹೊಂದಿಕೊಂಡು ಇದನ್ನು ಬಳಸಬೇಕು. 1-2 ಇಂಚಿಗಿಂತ ದೊಡ್ಡದಿಲ್ಲದ ಸಣ್ಣ ಸ್ಟ್ರೋಕ್ ಗಳನ್ನು ಬಳಸಿ. ಬ್ಲೇಡ್ ಗಳನ್ನು ತೊಳೆಯಲು ಬಿಸಿ ನೀರನ್ನು ಬಳಸಿ. ಇದರಿಂದ ಕ್ಷೌರ ಮೃದುವಾಗುತ್ತದೆ.

ರೇಜರ್ ಕೆಲಸ ಮುಗಿದ ಬಳಿಕ ಜರ್ಜರಿತವಾಗಿರುವ ಚರ್ಮದ ಕಡೆ ಗಮನಹರಿಸಬೇಕು. ಎಷ್ಟೇ ಎಚ್ಚರಿಕೆ ವಹಿಸಿದರೂ ಅಥವಾ ತಯಾರಿ ನಡೆಸಿದರೂ ಕ್ಷೌರ ಮಾಡುವಾದ ಸಣ್ಣ ಮಟ್ಟದ ಗಾಯ ಅಥವಾ ಮುಖದ ಮೇಲೆ ಗೀರು ಬೀಳುವುದು ಸಾಮಾನ್ಯ. ಇದು ಕೆಲವು ಸಲ ಕಣ್ಣಿಗೆ ಕಾಣುವುದಿಲ್ಲ. ಕ್ಷೌರ ಬಳಿಕ ಟೀ ಟ್ರೀ ಆಯಿಲ್ ಅಥವಾ ಇತರ ಆ್ಯಂಟಿಸ್ಪೆಟಿಕ್ ಗಳನ್ನು ಬಳಸಿ.

ಕ್ಷೌರದ ಬಳಿಕ ನಿಮ್ಮ ಚರ್ಮವನ್ನು ಚೆನ್ನಾಗಿ ಆರೈಕೆ ಮಾಡಿ. ವಾಸ್ತವವಾಗಿ ಕ್ಷೌರದ ವೇಳೆ ಚರ್ಮದ ಒಂದು ಪದರವನ್ನು ಬೋಳಿಸಲಾಗುತ್ತದೆ. ಇದರಿಂದ ಹೊಸ ಚರ್ಮಕ್ಕೆ ಒಳ್ಳೆಯ ಮೊಶ್ಚಿರೈಸರ್ ಅಥವಾ ಆಫ್ಟರ್ ಶೇವ್ ಹಾಕಿ ಆರೈಕೆ ಮಾಡಿ.

For Quick Alerts
ALLOW NOTIFICATIONS
For Daily Alerts

    English summary

    Tips to shave like a gentleman

    It is a great feeling for any man to get a perfect shave. It gives you a great feeling and immensely boosts your confidence. Be it for a important meeting or an important date you need to look sharp and smooth to have a lasting gentleman impression.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more