For Quick Alerts
ALLOW NOTIFICATIONS  
For Daily Alerts

ಉಗುರಿನ ಹಳದಿ ಬಣ್ಣ ಹೋಗಲಾಡಿಸಲು ಟಿಪ್ಸ್

|

ನಿಮ್ಮ ಉಗುರುಗಳನ್ನು ಗಮನಿಸಿ, ಹಳದಿ ಬಣ್ಣಕ್ಕೆ ತಿರುಗಿದೆಯೇ? ಇಲ್ಲವೆಂದರೆ ಚಿಂತೆ ಬಿಡಿ, ಮೊದಲು ಉಗುರುಗಳು ಹಳದಿ ಬಣ್ಣಕ್ಕೆ ಯಾಕೆ ತಿರುಗಿದೆ ಎಂಬ ಕಾರಣಗಳನ್ನು ತಿಳಿದುಕೊಳ್ಳಿ. ಕೆಲವೊಮ್ಮೆ ನಿಮ್ಮ ದೇಹದಲ್ಲಿ ಯಾವುದಾದರೂ ಕಾಯಿಲೆ ಇದ್ದರೆ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಈ ರೀತಿ ಅನುಮಾನ ಬಂದರೂ ವೈದ್ಯರನ್ನು ಕಂಡು ಖಚಿತಪಡಿಸಿಕೊಳ್ಳಿ. ಹಾಗೇನು ಇಲ್ಲ? ನೀವು ಉಗುರನ್ನು ಆರೈಕೆ ಮಾಡದಿರುವುದೇ ಉಗುರು ಹಳದಿಯಾಗಲು ಕಾರಣವೆಂದರೆ ಈ ಲೇಖನ ಓದಿ, ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು.

ನೀಟಾಗಿ ಕತ್ತರಿಸಿದ, ಬಿಳಿ ಉಗುರುಗಳು ನಿಮ್ಮ ಚೆಲುವನ್ನು ಹೆಚ್ಚಿಸುತ್ತದೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಉಗುರುಗಳನ್ನು ಬೆಳ್ಳಗಾಗಿಸಲು ಇಲ್ಲಿ ನಾವು ಕೆಲ ಟಿಪ್ಸ್ ನೀಡಿದ್ದೇವೆ ನೋಡಿ:

ನಿಂಬೆ ಹಣ್ಣು

ನಿಂಬೆ ಹಣ್ಣು

ನಿಂಬೆ ಹಣ್ಣನ್ನು ಕತ್ತರಿಸಿ, ಅದರಿಂದ ಬೆರಳನ್ನು ಉಜ್ಜಿದರೆ ಉಗುರುಗಳು ಬೆಳ್ಳಗಾಗುವುದು. ನಿಂಬೆರಸವನ್ನು ಉಜ್ಜಿ 2 ಗಂಟೆಗಳ ಒಣಗಲು ಬಿಡಿ, ನಂತರ ಬ್ರೆಷ್ ನಿಂದ ತಿಕ್ಕಿ ತೊಳೆಯಿರಿ, ಉಗುರುಗಳು ಬೆಳ್ಳಗಾಗುವುದು.

ಹಾಲು

ಹಾಲು

ಹಾಲನ್ನು ನಿಮ್ಮ ಉಗುರುಗಳಿಗೆ ಸವರಿ 15 ನಿಮಿಷ ದ ಬಳಿಕ, ಸ್ವಲ್ಪ ಹತ್ತಿಯನ್ನು ಹಾಲಿನಲ್ಲಿ ಅದ್ದಿ ಬೆರಳನ್ನು ಉಜ್ಜಿ, ಈ ರೀತಿ ಮಾಡಿದರೆ ಉಗುರುಗಳ ಹೊಳಪು ಹೆಚ್ಚುವುದು.

ಹೈಡ್ರೋಜನ್ ಪರಾಕ್ಸೈಡ್

ಹೈಡ್ರೋಜನ್ ಪರಾಕ್ಸೈಡ್

ಉಗುರುಗಳನ್ನು ಸುಲಭದಲ್ಲಿ ಬೆಳ್ಳಗಾಗಿಸುವ ಮತ್ತೊಂದು ವಿಧಾನವೆಂದರೆ ಹೈಡ್ರೋಜನ್ ಪರಾಕ್ಸೈಡ್. 2 ಚಮಚ ಅಡುಗೆ ಸೋಡಾಕ್ಕೆ 2-3 ಹನಿ ಹೈಡ್ರೋಜನ್ ಪರಾಕ್ಸೈಡ್ ಹಾಕಿ ಉಗುರನ್ನು ತಿಕ್ಕಿದರೆ ಉಗುರುಗಳು ಬೇಗನೆ ಬೆಳ್ಳಗಾಗುತ್ತದೆ.

ಟೂತ್ ಪೇಸ್ಟ್

ಟೂತ್ ಪೇಸ್ಟ್

ಟೂತ್ ಪೇಸ್ಟ್ ಕೂಡ ತುಂಬಾ ಪರಿಣಾಮಕಾರಿಯಾದ ವಿಧಾನ. ಹಳೆಯ ಬ್ರೆಷ್ ಗೆ ಟೂತ್ ಪೇಸ್ಟ್ ಹಾಕಿ ಅದರಿಂದ ಬೆರಳನ್ನು ತಿಕ್ಕಿದರೆ ಸಾಕು ಉಗುರುಗಳಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಬಹುದು.

 ವಿನೆಗರ್ ಮತ್ತು ಗ್ಲಿಸೆರಿನ್

ವಿನೆಗರ್ ಮತ್ತು ಗ್ಲಿಸೆರಿನ್

ವಿನೆಗರ್ ಮತ್ತು ಗ್ಲಿಸೆರನ್ ಅನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ. ನಂತರ ಕಾಟನ್ ಅನ್ನು ಅದ್ದಿ ಅದರಿಂದ ಉಗುರುಗಳನ್ನು ಸ್ವಚ್ಛ ಮಾಡಿ. ಈ ರೀತಿ ವಾರಕ್ಕೆ ಒಮ್ಮೆ ಮಾಡಿದರೂ ಸಾಕು, ನಿಮ್ಮ ಉಗುರುಗಳು ಸುಂದರವಾಗಿರುವುದು.

ಆಲೀವ್ ಎಣ್ಣೆ

ಆಲೀವ್ ಎಣ್ಣೆ

ಉಗುರುಗಳು ನಯವಾಗಿ ಹೊಳಪಿನಿಂದ ಕೂಡಿರಲು ದಿನಾ ಆಲೀವ್ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಿ.

 ವೈಟ್ನಿಂಗ್ ಪೆನ್ಸಿಲ್

ವೈಟ್ನಿಂಗ್ ಪೆನ್ಸಿಲ್

ನಿಮ್ಮ ಉಗುರುಗಳನ್ನು ಬೆಳ್ಳಗೆ ವೈಟ್ನಿಂಗ್ ಪೆನ್ಸಿಲ್ ಬಳಸಿ ಸ್ವಚ್ಛ ಮಾಡುವ ವಿಧಾನವನ್ನು ಕೂಡ ಪ್ರಯತ್ನಿಸಬಹುದು, ಆದರೆ ಮೊದಲು ಹೇಳಿರುವ ವಿಧಾನಗಳು ತುಂಬಾ ಒಳ್ಳೆಯದು.

ಮೊದಲು ನ್ಯೂಡ್ ನೇಲ್ ಪಾಲಿಷ್ ಹಚ್ಚಿ, ನಂತರ ಬಣ್ಣದ ನೇಲ್ ಪಾಲಿಷ್ ಹಚ್ಚಿ

ಮೊದಲು ನ್ಯೂಡ್ ನೇಲ್ ಪಾಲಿಷ್ ಹಚ್ಚಿ, ನಂತರ ಬಣ್ಣದ ನೇಲ್ ಪಾಲಿಷ್ ಹಚ್ಚಿ

ನೇಲ್ ಪಾಲಿಷ್ ಹಚ್ಚುವುದರಿಂದ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ, ಇದನ್ನು ತಪ್ಪಿಸಲು ಮೊದಲು ನ್ಯೂಡ್ (ಉಗುರು ಬಣ್ಣದ ನೇಲ್ ಪಾಲಿಷ್ ) ಹಚ್ಚಿ ನಂತರ ಬಣ್ಣದ ನೇಲ್ ಪಾಲಿಷ್ ಹಚ್ಚಿ.

English summary

Time To Get Rid Of Yellow Stained Nails

Getting rid of dirty yellow nails is a challenge. But, it is possible through a few home remedies which will leave your nails bright and sparkling.These simple tips given below in the slide will help you get rid of yellow nails. The tips are easy to follow and is convenient since it is home remedial.
X
Desktop Bottom Promotion