For Quick Alerts
ALLOW NOTIFICATIONS  
For Daily Alerts

ಪುರುಷರೇ, ಸ್ಟೈಲಿಶ್ ಲುಕ್ ನಿಮ್ಮದಾಗಬೇಕೆ?

By Super
|

ಸ್ಟೈಲ್ ಆಗಿ ಕಾಣಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬರೂ ಇಚ್ಚಿಸುತ್ತಾರೆ. ಹುಡುಗರು ಸ್ಟೈಲ್ ಆಗಿ ಕಾಣಿಸಿಕೊಂಡು ಹುಡುಗಿಯರ ಗಮನ ಸೆಳೆಯಲು ಬಯಸುತ್ತಾರೆ. ಹಾಗೆ ಸ್ಟೈಲ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಮಾತ್ರಕ್ಕೆ ಸಾಕಷ್ಟು ಆಭರಣಗಳನ್ನು ಧರಿಸಿದರೂ ಕೂಡ ಸ್ಟೈಲ್ ಎನಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಅಂಶವನ್ನೂ ಗಮನದಲ್ಲಿಟ್ಟುಕೊಂಡು ಬಳಸುವ ವಿಧಾನ ತಿಳಿದಿರಬೇಕು. ಟ್ರೆಂಡ್ ಗೆ ತಕ್ಕಂತೆ ಬಟ್ಟೆಗಳ ಬಳಕೆ ಇರಬೇಕು.

ಸಿಂಪಲ್ ಆಗಿ ತಯಾರಾಗಿ ನೋಡಲು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವುದು ಕೂಡ ಒಂದು ಕಲೆ.ಅ ವುಗಳ ಬಗ್ಗೆ ತಿಳಿದುಕೊಂಡರೆ ನೋಡುಗರ ಗಮನ ಸೆಳೆಯುವುದು ಖಂಡಿತ. ಈ ರೀತಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಬೇಕಾಗುವ ಸಣ್ಣಪುಟ್ಟ ಮಾಹಿತಿಗಳ ಬಗ್ಗೆ ತಿಳಿದುಕೊಂಡಿರುವುದು ಉತ್ತಮ.

ಫ್ಯಾಶನ್ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ, ಆದರೆ ಸ್ಟೈಲ್ ಗೆ ಮಾತ್ರ ಯಾವುದೇ ರೀತಿಯ ಸಮಯದ ಗಡಿ ಇಲ್ಲ.ಆದ್ದರಿಂದ ಇಲ್ಲಿ ಹುಡುಗರು ಸ್ಟೈಲಿಶ್ ಆಗಿ ಕಾಣಲು ಕೆಲವು ಪ್ರಾಥಮಿಕ ಹಂತದ ಬಗ್ಗೆ ಮಾಹಿತಿ ನೀಡಲಾಗಿದೆ.ಇದರ ಬಗ್ಗೆ ತಿಳಿದುಕೊಂಡು ಸ್ಟೈಲಿಶ್ ಆಗಲು ತಯಾರಾಗಿ.

ಪುರುಷರು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಕೆಲವು ಅಪರೂಪದ ವಸ್ತುಗಳ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಫಿಟ್ನೆಸ್ ಎನ್ನುವುದು ಪ್ರಮುಖ

ಫಿಟ್ನೆಸ್ ಎನ್ನುವುದು ಪ್ರಮುಖ

ಇಲ್ಲಿ ನಾವು ಕೇವಲ ನಿಮ್ಮ ದೇಹದ ಫಿಟ್ನೆಸ್ ಬಗ್ಗೆ ಮಾತ್ರವಲ್ಲ ನಿಮ್ಮ ಶರ್ಟ್ ನ ಫಿಟ್ನೆಸ್ ಬಗ್ಗೆ ಹೇಳುತ್ತಿದ್ದೇವೆ.ಹೆಚ್ಚಿನ ಪುರುಷರು ತಾವು ಧರಿಸುವ ಬಟ್ಟೆ ತಮ್ಮ ಅಳತೆಗಿಂತ ದೊಡ್ದದಿರುವುದನ್ನು ಬಳಸುತ್ತಾರೆ.ನೀವು ಧರಿಸುವ ಬಟ್ಟೆ ನಿಮ್ಮ ದೇಹದ ರಚನೆಯನ್ನು ತಿಳಿಸುತ್ತದೆ ಆದ್ದರಿಂದ ದೊಡ್ಡದಾಗಿರುವ ಬಟ್ಟೆ ಧರಿಸಬೇಡಿ ನಿಮ್ಮ ದೇಹಕ್ಕೆ ಫಿಟ್ ಆಗುವ ಬಟ್ಟೆ ಧರಿಸಿ. ಫಿಟ್ ಆಗದ ಬಟ್ಟೆ ಒಂದು ರೋಗದಂತೆ ಭಾವಿಸಿ ಅದನ್ನು ದೂರವಿಡಿ.

ಸಿಂಪಲ್ ಆಗಿರುವಂತೆ ನೋಡಿಕೊಳ್ಳಿ

ಸಿಂಪಲ್ ಆಗಿರುವಂತೆ ನೋಡಿಕೊಳ್ಳಿ

ನಿಮ್ಮ ಕಪಾಟಿನಲ್ಲಿ ನಿಮಗೆ ಒಪ್ಪುವ ಗ್ರಾಂಡ್ ಸಂಗ್ರಹ ಇರಬಹುದು ಆದರೆ ಅದನ್ನೆಲ್ಲ ಒಟ್ಟಿಗೆ ಉಪಯೋಗಿಸಬೇಡಿ. ಸಾಕಷ್ಟು ಆಭರಣಗಳಿರಬಹುದು ಆದರೆ ಅದರ ಬಳಕೆಯ ಬಗ್ಗೆ ತಿಳಿದಿರಲಿ ಒಮ್ಮೆಗೆ 3 ಕ್ಕಿಂತ ಹೆಚ್ಚು ಆಭರಣ ಮತ್ತು 3 ಕ್ಕಿಂತ ಹೆಚ್ಚು ಬಣ್ಣವನ್ನು ಬಳಸಬೇಡಿ. ನೀವು ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿದ್ದರೆ ಮಾತ್ರ ಹೆಚ್ಚಿನದನ್ನು ಬಳಸಬಹುದು.ಇತರ ಸಮಯದಲ್ಲಿ ಸಿಂಪಲ್ ಮತ್ತು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಪ್ರಯತ್ನಿಸಿ.ಕಪ್ಪು ಬಣ್ಣದ ಉದ್ದ ಗೆರೆಗಲಿರುವ ಶರ್ಟ್ ಒಳಗೆ ಹಾಕಿ ಮೇಲಿನಿಂದ ಬಿಳಿ ಕೋಟ್ ಜೊತೆಗೆ ಗಾಢ ಬಣ್ಣದ ಜೀನ್ಸ್ ಜೊತೆಗೆ ಶಾರ್ಪ್ ಬಣ್ಣದ ಶೂ ಧರಿಸಿದರೆ ಒಳ್ಳೆಯ ಲುಕ್ ಬರುತ್ತದೆ. ಜೊತೆಗೆ ಒಂದು ವಾಚ್ ಕೂಡ ಕಟ್ಟಿದರೆ ಆಕರ್ಷಕ ಲುಕ್ ನಿಮ್ಮದಾಗುವುದು.

ಇತರ ಸಣ್ಣ ವಸ್ತುಗಳ ಬಗ್ಗೆ ಗಮನವಿರಲಿ

ಇತರ ಸಣ್ಣ ವಸ್ತುಗಳ ಬಗ್ಗೆ ಗಮನವಿರಲಿ

ನೀವು ಸ್ವೆಟರ್ ಹಾಕಿಕೊಳ್ಳುತ್ತೀರಾದರೆ ಸರಿಯಾದ ಅಳತೆ ಇರುವುದು ಅಗತ್ಯ. ಕೆಲವು ಸ್ವೆಟರ್ ಗಳು ದೊಡ್ದವಾಗಿರುತ್ತವೆ ಮತ್ತೆ ಕೆಲವು ತೆಳುವಾಗಿ ಕಾಣುತ್ತವೆ.ನೀವು ಮೊದಲು ಗಮನಿಸಬೇಕಾದುದು ನೀವು ಕೆಳಗೆ ಹಾಕಿಕೊಂಡ ಬಟ್ಟೆಗೆ ಇದು ಹೊಂದಾಣಿಕೆ ಆಗುವಂತೆ ಇದೆಯೇ ಎಂಬುದನ್ನು. ನೀವು ದಪ್ಪ, ದೊಡ್ಡ ಮತ್ತು ಒರಟಾದ ಸ್ವೆಟರ್ ಹಾಕಿದರೆ ಕೆಳಗೆ ಹಾಕುವ ಪ್ಯಾಂಟ್ ಕೂಡ ಒರಟಾಗಿ ಇರುವಂತೆ ನೋಡಿಕೊಳ್ಳಿ. ಸುಂದರವಾಗಿರುವ ನುಣಪಾಗಿರುವ ರೇಷ್ಮೆ ಪ್ಯಾಂಟ್ ಜೊತೆ ಹಾಕಿಕೊಳ್ಳಬೇಡಿ ಬದಲಿಗೆ ಕಾರ್ಗೊಸ್ ಅಥವಾ ಜೀನ್ಸ್ ಜೊತೆ ಹಾಕಿಕೊಳ್ಳಿ.

ಕ್ಯಾಶ್ಯೂವಲ್ಸ್

ಕ್ಯಾಶ್ಯೂವಲ್ಸ್

ನೀವು ಕ್ಯಾಶ್ಯೂವಲ್ ಅನ್ನು ನೋಡುವ ರೀತಿಯನ್ನು ಬದಲಾಯಿಸಿಕೊಳ್ಳಬೇಕು. ಒಂದೇ ರೀತಿಯದನ್ನು ಬಳಸಿದರೆ ಬೋರಿಂಗ್ ಅನಿಸುವುದು. ಬಣ್ಣಬಣ್ಣದ ಚೆಕ್ಸ್ ಇರುವ ಕ್ಯಾಶ್ಯೂವಲ್ ಬಳಸಿ ಮತ್ತು ಸುಂದರವಾಗಿ ಕಾಣಿಸಿಕೊಳ್ಳಿ.

ಸ್ಥಾನ ಕಾಪಾಡಿಕೊಳ್ಳಿ

ಸ್ಥಾನ ಕಾಪಾಡಿಕೊಳ್ಳಿ

ಹೊಸ ಪ್ರಯೋಗ ಮಾಡಲು ತಯಾರಿರಿ ಆದರೆ ಯಾವುದೇ ಕಾರಣಕ್ಕೂ ತಪ್ಪಾಗದಂತೆ ನೋಡಿಕೊಳ್ಳಿ.ಏನೂ ಡ್ರೆಸ್ ಮಾಡಿಕೊಳ್ಳದೇ ಇರುವುದಕ್ಕಿಂತ ಸ್ವಲ್ಪ ಹೆಚ್ಚು ಡ್ರೆಸ್ ಮಾಡಿಕೊಳ್ಳುವುದು ಒಳ್ಳೆಯದು. ನೀವು ಎಲ್ಲಿ ಹೋಗುತ್ತಿದ್ದೀರಿ ಯಾರ ಜೊತೆ ಹೋಗುತ್ತಿದ್ದೀರಿ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ತಯಾರಾಗಿ.ಆದರೆ ಎಲ್ಲಾದರೂ ಹೋಗುವಾಗ ಯಾವು ಮುಖ್ಯ ಆಕರ್ಷಕರೋ ಅವರಿಗಿಂತ ಹೆಚ್ಚು ಡ್ರೆಸ್ ಮಾಡಿಕೊಳ್ಳದಂತೆ ಗಮನ ಹರಿಸಿ.

ಒಬ್ಬರೇ ಎಂದಿಗೂ ಶಾಪಿಂಗ್ ಮಾಡಬೇಡಿ

ಒಬ್ಬರೇ ಎಂದಿಗೂ ಶಾಪಿಂಗ್ ಮಾಡಬೇಡಿ

ನಿಮಗೆ ಸೇಲ್ಸ್ ಹುಡುಗರ ಬಗ್ಗೆ ಸಂಪೂರ್ಣ ನಂಬಿಕೆ ಇದ್ದರೂ ಕೂಡ ನಿಮ್ಮ ಒಳ್ಳೆಯ ಗೆಳೆಯರೊಂದಿಗೆ ಹೋಗಿ ಶಾಪಿಂಗ್ ಮಾಡುವುದು ಎಂದಿಗೂ ಉತ್ತಮ.

ವಿವರವಾಗಿ ತಿಳಿದುಕೊಂಡಿರಿ

ವಿವರವಾಗಿ ತಿಳಿದುಕೊಂಡಿರಿ

ಎಲ್ಲದರ ಬಗ್ಗೆ ವಿವರವಾಗಿ ತಿಳಿದುಕೊಂಡಿರುವುದು ಒಳಿತು.ನೀವು ಟೈ ಕಟ್ಟುವುದರ ಬಗ್ಗೆ,ನಿಮ್ಮಲ್ಲಿರುವ ಜೇಬಿನ ಬಗ್ಗೆ ಅಥವಾ ಬಳಸಬಹುದಾದ ಸ್ಕಾರ್ಫ್ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿ.

ಶೂ

ಶೂ

ಶೂ ಕೊಂಡುಕೊಳ್ಳಲು ಹೆಚ್ಚು ಹಣ ವ್ಯಯಿಸಿ. ಮಹಿಳೆಯರು ಮೊದಲು ಗಮನ ಹರಿಸುವುದು ನೀವು ಧರಿಸಿರುವ ಶೂ ಮತ್ತು ಅದು ಎಷ್ಟು ಸ್ವಚ್ಛವಾಗಿದೆ ಎಂಬುದರ ಬಗ್ಗೆ. ನೀವು ನಿಮ್ಮ ಶೂ ಅನ್ನು ಸರಿಯಾಗಿ ಕಾಪಾಡಿಕೊಂಡು ಬರಬೇಕು. ಮಹಿಳೆಯರಿಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ನಿಮ್ಮ ಶೂ ಬಗ್ಗೆ ಎಂಬುದು ನೋಡುತ್ತಿದ್ದಂತೆಯೇ ತಿಳಿಯುವಂತೆ ಮಾಡಿಕೊಳ್ಳಿ.

ಟ್ರೆಂಡ್ ಕಡೆಗಣಿಸುವುದು

ಟ್ರೆಂಡ್ ಕಡೆಗಣಿಸುವುದು

ಈಗ ಯಾವುದು ಟ್ರೆಂಡ್ ನಲ್ಲಿ ಇದೆಯೋ ಅದು ಕೊಂಡುಕೊಳ್ಳಲು ನಿಮ್ಮಲ್ಲಿ ಇರುವ ಹಳೆಯ ಬಟ್ಟೆಗಳನ್ನು ಎಸೆಯಬೇಕು ಎಂದೇನಿಲ್ಲ.ಅದನ್ನು ಬಳಸಿ ಅದರ ಜೊತೆಗೆ ಹೊಸ ಟ್ರೆಂಡ್ ಬಂದಿರುವ ಬಟ್ಟೆಗಳನ್ನು ಹೊಂದಿಸಿಕೊಂಡು ಬಳಸಿಕೊಂಡರೆ ಹಣವನ್ನು ಕೂಡ ಉಳಿತಾಯ ಮಾಡಬಹುದು.

ಲೋಗೋ ಇರುವ ಟೀ ಶರ್ಟ್

ಲೋಗೋ ಇರುವ ಟೀ ಶರ್ಟ್

ನೀವು ಬಳಸುವ ಟೀ ಶರ್ಟ್ ಗಳಲ್ಲಿ ಬೇರೆಬೇರೆ ರೀತಿಯ ಲೋಗೋ ಇದ್ದರೂ ಅದು ನೋಡಲು ಲುಕ್ ಇರುವುದಿಲ್ಲ.ವಿ ನೆಕ್ ಇರುವ ಟೀ ಶರ್ಟ್ ಗಳನ್ನು ಬಳಸಿ ಮತ್ತು ಬ್ರಾಂಡ್ ಬಗ್ಗೆ ಎಲ್ಲರಿಗೂ ತಿಳಿಯದಂತೆ ಗಮನ ಹರಿಸಿ.

English summary

Style Essentials For Men

Fashion comes and goes, style is timeless. True. So listen up guys, here are some basic style tips for all of you, including what you must have in your closet, shopping advice and more. Read on to keep it stylish
Story first published: Tuesday, October 22, 2013, 14:45 [IST]
X
Desktop Bottom Promotion