For Quick Alerts
ALLOW NOTIFICATIONS  
For Daily Alerts

ಚಾಲಕಿಯರಿಗೆ ಸೌಂದರ್ಯದ ಕೆಲ ಟಿಪ್ಸ್

|

ಈಚಿನ ದಿನಗಳಲ್ಲಿ ಸೈಕಲ್ ಮತ್ತು ಗಾಡಿಯನ್ನು ಪ್ರಯಾಣಿಸಲು ಬಳಸುವುದು ಹೆಚ್ಚಾಗಿದೆ. ಹೆಂಗಸರು ಕೂಡ ಇದಕ್ಕೆ ಹೊರತಲ್ಲ. ಮಹಿಳೆಯರು ತಮ್ಮ ಚರ್ಮದ ಬಗ್ಗೆ ಕೂಡ ಕಾಳಜಿ ವಹಿಸಿದೆ ನೇರವಾಗಿ ಸೂರ್ಯನ ಪ್ರಖರತೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಗಾಳಿ, ಬಿಸಿಲು, ಮಳೆ, ಬೆವರು ಇವೆಲ್ಲವೂ ಚರ್ಮದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಗಮನದಲ್ಲಿರಲಿ.

ಗಾಡಿ ಹೆಚ್ಚಾಗಿ ಓಡಿಸುವವರಲ್ಲಿ ಗುಳ್ಳೆಗಳು, ಸನ್ ಟ್ಯಾನ್ ಗಳಂತಹ ಸಮಸ್ಯೆಗಳು ಎದುರಾಗುವುದನ್ನು ಕಾಣಬಹುದು. ಇದರೊಂದಿಗೆ ಒಣ ಮತ್ತು ಒರಟು ಕೂದಲ ಸಮಸ್ಯೆಯನ್ನು ಕೂಡ ಕಾಣಬಹುದು. ಆದ್ದರಿಂದ ಚರ್ಮವನ್ನು ಸೂರ್ಯನಿಂದ ರಕ್ಷಿಸಿಕೊಳ್ಳಿ.

ಮುಖ್ಯವಾಗಿ ಚರ್ಮದ ಆರೈಕೆಯು ಸ್ವಚ್ಛತೆ, ಮಾಯ್ಸಿಶ್ಚುರೈಸಿಂಗ್ ಇವುಗಳನ್ನು ಬೇಡುತ್ತದೆ. ಗಾಡಿಯನ್ನು ಓಡಿಸುವವರು ಇವುಗಳ ಕಡೆ ಗಮನ ಹರಿಸಬೇಕಾದದ್ದು ಅತ್ಯಗತ್ಯ. ದಿನವೂ ಕಾಲೇಜು ಅಥವ ಆಫೀಸುಗಳಿಗೆ ಗಾಡಿಯಲ್ಲಿ ಓಡಾಡುವವರು ಇದರ ಕಡೆ ಗಮನ ಹರಿಸಿದರೆ ಒಳಿತು. ಅವರಿಗಾಗಿ ನಾವಿಲ್ಲಿ ಕೆಲವು ಟಿಪ್ಸ್ ಗಳನ್ನು ಕೊಟ್ಟಿದ್ದೇವೆ.

ಸ್ವಚ್ಛತೆ

ಸ್ವಚ್ಛತೆ

ಚರ್ಮವನ್ನು ಸ್ವಚ್ಛವಾಗಿರಿಸಿಕೊಳ್ಳಿ. ಸ್ವಚ್ಛತೆಯು ಸತ್ತ ಚರ್ಮದ ಕಣಗಳನ್ನು ತೆಗೆದುಹಾಕುತ್ತದೆ.

ಟೋನಿಂಗ್

ಟೋನಿಂಗ್

ಟೋನಿಂಗ್ ಮಾಡಿಸಿಕೊಳ್ಳುವುದರಿಂದ ಗುಳ್ಳೆ ಮೊದಲಾದ ಸಮಸ್ಯೆಗಳು ಬಗೆಹರಿಯುತ್ತದೆ.

ಸನ್ ಸ್ಕ್ರೀನ್ ಬಳಸಿ

ಸನ್ ಸ್ಕ್ರೀನ್ ಬಳಸಿ

ನೀವು ಸ್ಕಾರ್ಫ್ ಬಳಸಿದರೂ ಇಲ್ಲದಿದ್ದರೂ ಸನ್ ಸ್ಕ್ರೀನ್ ಬಳಸುವುದನ್ನು ತಪ್ಪಿಸಬೇಡಿ. ಕಣ್ಣು, ಮುಖ, ಕುತ್ತಿಗೆ, ತೋಳು, ಕಿವಿ ಮತ್ತು ಪಾದಗಳಿಗೆ ಸನ್ ಸ್ಕ್ರೀನ್ ಲೋಶನ್ ಹಚ್ಚಿ.

ಫೌಂಡೇಶನ್

ಫೌಂಡೇಶನ್

ಸನ್ ಸ್ಕ್ರೀನ್ ಲೋಶನ್ ಹಚ್ಚಿದ ನಂತರ ಫೌಂಡೇಶನ್ ಹಚ್ಚುವುದು ಉತ್ತಮ.

ಚರ್ಮವನ್ನು ಮುಚ್ಚಿಕೊಳ್ಳಿ

ಚರ್ಮವನ್ನು ಮುಚ್ಚಿಕೊಳ್ಳಿ

ಗಾಳಿ ಮತ್ತು ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ನಿಮ್ಮನ್ನು ನೀವು ಸರಿಯಾಗಿ ಬಟ್ಟೆಯಿಂದ ಮುಚ್ಚಿಕೊಳ್ಳಿ. ತುಂಬು ತೋಳಿನ ಬಟ್ಟೆಗಳನ್ನು ಗಾಡಿ ಓಡಿಸುವಾಗ ಬಳಸುವುದು ಉತ್ತಮ.

ಲಿಪ್ ಕೇರ್

ಲಿಪ್ ಕೇರ್

ನಿಮ್ಮ ತುಟಿಗಳು ಕೂಡ ಆರೈಕೆಯನ್ನು ಬೇಡುತ್ತದೆ. ಗಾಳಿಯಿಂದ ಉರಿಯುಂಟಾಗಬಹುದು ಮತ್ತು ಕಳೆಗುಂದಬಹುದು. ಆದ್ದರಿಂದ spf ಕ್ರೀಂ ಹಚ್ಚಿ ನಂತರ ಲಿಪ್ ಸ್ಟಿಕ್ ಬಳಸಿ.

ಕೂದಲ ಕಡೆ ಗಮನ ನೀಡಿ

ಕೂದಲ ಕಡೆ ಗಮನ ನೀಡಿ

ಹೆಲ್ಮೆಟ್ ಬಳಸುವುದು ಒಳ್ಳೆಯದು.

ಗಾಡಿ ಓಡಿಸಿದ ನಂತರ ಹೀಗೆ ಮಾಡಿ

ಗಾಡಿ ಓಡಿಸಿದ ನಂತರ ಹೀಗೆ ಮಾಡಿ

ಗಾಡಿ ಓಡಿಸಿಯಾದ ನಂತರ ನಿಮ್ಮ ಕೂದಲನ್ನು ಬಾಚಿ ಮತ್ತು ಮುಖವನ್ನು ತೊಳೆದುಕೊಳ್ಳಿ. ಇದು ಧೂಳು ಮತ್ತು ಮಾಲಿನ್ಯಯುಕ್ತ ಕಣಗಳು ನಿಮ್ಮ ಮುಖಕ್ಕೆ ಹಾನಿಯುಂಟುಮಾಡುವುದನ್ನು ತಪ್ಪಿಸುತ್ತದೆ. ದಿನದಲ್ಲಿ 3-4 ಬಾರಿ ಮುಖ ತೊಳೆಯಿರಿ.

English summary

Skin n Hair Care Tips For Bikers

Biking and cycling are the most common ways of traveling. Even women do not bother about their skin and go out under the direct rays of the sun. Well, bikers need to take proper care of their skin. Wind, sun, rain, perspiration affects their skin.
Story first published: Thursday, November 28, 2013, 16:42 [IST]
X
Desktop Bottom Promotion