For Quick Alerts
ALLOW NOTIFICATIONS  
For Daily Alerts

ಬಟ್ ಪಿಂಪಲ್ ನಿವಾರಿಸಲು ಮದ್ದು

By Super
|

ಯಾವಾಗಲು ಲಿಪ್‍ಸ್ಟಿಕ್, ಹೇರ್ ಕೇರ್, ಫೌಂಡೇಶನ್ ಕ್ರೀಮ್, ಕನ್ಸೀಲರ್, ಉಗುರುಗಳು ಇತ್ಯಾದಿಗಳ ಬಗ್ಗೆ ಎಷ್ಟು ದಿನ ಮತ್ತು ಎಷ್ಟು ಅಂತಾ ಮಾತನಾಡೋಣ. ಇಂದು ಮೊಡವೆಗಳನ್ನು ಶೀಘ್ರ ಉಪಶಮನ ಮಾಡುವ ವಿಚಾರಗಳ ಬಗ್ಗೆ ಸಹ ಮಾತನಾಡೋಣ. ನೀವು ಎಂದಾದರು ಒಬ್ಬ ಪ್ರಖ್ಯಾತ ವ್ಯಕ್ತಿ ಅಥವಾ ಸೆಲೆಬ್ರಿಟಿಯನ್ನು ದೊಡ್ಡದಾಗಿ ಕಾಣುವ ಬುಟ್ ಪಿಂಪಲ್ಸ್ ಸಹಿತ ನೋಡಿದ್ದೀರಾ? ಉತ್ತರ " ಇಲ್ಲಾ" ಎಂಬ ಉತ್ತರ ನಿಮ್ಮಿಂದ ಬರುತ್ತದೆ. ಎಲ್ಲರೂ ತಿಳಿದಿರುವಂತೆ ಮೊಡವೆಗಳು ಕೇವಲ ಮುಖದ ಮೇಲೆ ಮಾತ್ರ ಬರುವುದಿಲ್ಲ. ಬದಲಿಗೆ ದೇಹದ ಇತರ ಅಂಗಗಳ ಮೇಲು ಸಹ ಕಾಣಿಸಿಕೊಳ್ಳುತ್ತದೆ. ಇದನ್ನು ಬುಟ್ ಪಿಂಪಲ್ಸ್ ಎಂದು ಕರೆಯುತ್ತಾರೆ. ಇದು ಪೃಷ್ಠದ ಮೇಲೆ ಹಾಗು ನಿತಂಬದ ಮೇಲೆ ಕಾಣಿಸಿಕೊಂಡು ಕಸಿವಿಸಿಯನ್ನುಂಟು ಮಾಡುವುದರ ಜೊತೆಗೆ ಕೀವು ಮತ್ತು ರಕ್ತ ತುಂಬಿಕೊಂಡು ಅಪಾರ ಯಾತನೆಯನ್ನು ನೀಡುತ್ತದೆ.

ಮತ್ತೊಂದು ವಿಷಯ ನಿಮ್ಮ ಪೃಷ್ಠವು ನಿಮ್ಮ ದೇಹದ ಸೌಂದರ್ಯದ ಪ್ರಧಾನ ಪಾತ್ರವಹಿಸುವ ಅಂಗಗಳಲ್ಲಿ ಮೂರನೆಯ ಸ್ಥಾನವನ್ನು ಸಂಪಾದಿಸಿದೆ. ಅಲ್ಲದೆ ಪೃಷ್ಠ ಭಾಗವು ಇನ್‍ಫೆಕ್ಷನ್‍ಗೆ ಈಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಹಲವಾರು ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ತಮ್ಮ ನೆಲೆಕಂಡುಕೊಳ್ಳುವ ಸ್ಥಳವು ಸಹ ಆಗಿರುತ್ತದೆ. ಮುಖದ ಮೇಲೆ ಮೊಡವೆಗಳನ್ನು ಹೊಂದಿರುವ ಜನರಿಗೆ ದೇಹದ ಇತರ ಭಾಗದ ಮೇಲು ಸಹ ಮೊಡವೆಗಳು ಬರುವ ಸಾಧ್ಯತೆಯಿರುತ್ತದೆ. ಅದಕ್ಕೆ ಪೃಷ್ಠ ಭಾಗವು ಸಹ ಹೊರತಲ್ಲ. ಬುಟ್ ಪಿಂಪಲ್ಸ್ ಸಹ ಕಟ್ಟಿಕೊಂಡ ರೋಮ ಕೂಪಗಳ ( ಕ್ಲಾಗಡ್ ಪೊರ್ಸ್) ಪರಿಣಾಮವಾಗಿ ಕಂಡು ಬರುತ್ತದೆ.

ಈ ಬುಟ್ ಪಿಂಪಲ್ಸ್ ಕಂಡು ಬಂದ ತಕ್ಷಣ ನೀವು ಅದಕ್ಕೆ ಬೇಕಾದ ಔಷಧಿಗಳನ್ನು ತೆಗೆದುಕೊಳ್ಳಿ. ಇಲ್ಲವಾದಲ್ಲಿ ಚರ್ಮ ರೋಗ ತಙ್ಞರನ್ನು ಸಂಪರ್ಕಿಸಿ. ಆದರೂ ಸಹ ನಿಮ್ಮ ತ್ವಚೆಯ ಮೇಲೆ ಉಂಟಾಗುವ ತುರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ. ಚರ್ಮದ ತುರಿಕೆಯು ಕೇವಲ ಅಸೌಕ್ಯವನ್ನಷ್ಟೇ ಅಲ್ಲದೆ, ಪರಿಸ್ಥಿತಿಯನ್ನು ವಿಕೋಪಕ್ಕೆ ಸಹ ತೆಗೆದುಕೊಂಡು ಹೋಗುತ್ತದೆ. ಬುಟ್ ಪಿಂಪಲ್ಸ್ ತಡೆಗಟ್ಟಲು ನೀವು ಪರಿಹಾರೋಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಒಳ್ಳೆಯದು. ಇಲ್ಲಿ ನಾವು ನಿಮಗಾಗಿ ಅಂತಹ ಕೆಲವು ಪರಿಹಾರ ಮತ್ತು ಅದಕ್ಕೆ ಸಂಬಂಧಪಟ್ಟ ಸಲಹೆಗಳನ್ನು ನೀಡಿದ್ದೇವೆ.

ಪ್ರಕೃತಿ ಚಿಕಿತ್ಸೆ

ಪ್ರಕೃತಿ ಚಿಕಿತ್ಸೆ

ಬುಟ್ ಪಿಂಪಲ್ಸ್ ತಡೆಗಟ್ಟಲು ತೆಂಗಿನ ಎಣ್ಣೆಯು ರಾಮಬಾಣವೆಂದು ಹಲವರು ನಂಬುತ್ತಾರೆ. ತೆಂಗಿನ ಎಣ್ಣೆಯಲ್ಲಿ ಬುಟ್ ಪಿಂಪಲ್ಸ್ ವಿರುದ್ಧ ಹೋರಾಡುವ ಅಂಶಗಳು ಯಥೇಚ್ಛವಾಗಿ ಇವೆ. ಹಾಗಾಗಿ ಬುಟು ಪಿಂಪಲ್ಸ್ ಅನ್ನು ನಿವಾರಿಸಲು ತೆಂಗಿನ ಎಣ್ಣೆಯನ್ನು ಹಚ್ಚಿ.

ಜೇನು ತುಪ್ಪ

ಜೇನು ತುಪ್ಪ

ನಿಜ ಜೇನು ತಪ್ಪವು ಸಿಹಿಯಾಗಿರುವುದಷ್ಟೇ ಅಲ್ಲ, ತನ್ನೊಳಗೆ ಹಲವಾರು ರೋಗ ನಿರೋಧಕ ಶಕ್ತಿಗಳನ್ನು ಒಳಗೊಂಡ ಸಂಜೀವಿನಿ ಸಹ ಹೌದು. ಜೇನು ತುಪ್ಪವನ್ನು ಹಲವಾರು ಶತಮಾನಗಳಿಂದ ಗಾಯಗಳಿಗೆ ಮುಲಾಮಾಗಿ ಉಪಯೋಗಿಸುತ್ತಿದ್ದಾರೆ. ಇದು ಬುಟ್ ಪಿಂಪಲ್ಸ್ ಮೇಲೂ ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾವು ಕೇಕ್ ಮತ್ತು ಬಿಸ್ಕೆಟ್‍ಗಳನ್ನು ತಯಾರಿಸಲು ಅತ್ಯಾವಶ್ಯಕವಾಗಿರುವ ರಾಸಾಯನಿಕವಾಗಿದೆ. ಇದರ ಜೊತೆಗೆ ಇದು ಬುಟ್ ಪಿಂಪಲ್ಸ್ ಅನ್ನು ನಿವಾರಿಸುವ ವಿಶೇಷ ಔಷಧೀಯ ಗುಣಗಳನ್ನು ತನ್ನಲ್ಲಿ ಒಳಗೊಂಡಿದೆ. ಇದು ಬುಟ್ ಪಿಂಪಲ್ಸ್ ಅನ್ನು ಶುಚಿಗೊಳ್ಳಿಸುತ್ತದೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ.

ನಿಂಬೆ ಹಣ್ಣಿನ ರಸದ ಪರಿಣಾಮ

ನಿಂಬೆ ಹಣ್ಣಿನ ರಸದ ಪರಿಣಾಮ

ನಿಂಬೆ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳು ಇರುವುದು ತಿಳಿದಿರುವ ವಿಚಾರವೇ. ಇದು ಅತ್ಯುತ್ತಮ ಬ್ಲೀಚಿಂಗ್ ಏಜೆಂಟ್ ಆಗಿ ಸಹ ಕಾರ್ಯ ನಿರ್ವಹಿಸುತ್ತದೆ. ನಿಂಬೆಹಣ್ಣಿನ ರಸವು ಬುಟ್ ಪಿಂಪಲ್ಸ್ ಮೇಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಬಳಸಿ ನಂತರ ಪವಾಡವನ್ನು ನೀವೇ ನೋಡುತ್ತೀರಿ.

ಎಕ್ಸ್ ಫೋಲಿಯೇಶನ್ ಟ್ರೀಟ್‍ಮೆಂಟ್

ಎಕ್ಸ್ ಫೋಲಿಯೇಶನ್ ಟ್ರೀಟ್‍ಮೆಂಟ್

ನಮಗೆಲ್ಲ ತಿಳಿದಿರುವಂತೆ ಕಟ್ಟಿಕೊಂಡ ರೋಮ ಕೂಪಗಳ ( ಕ್ಲಾಗಡ್ ಪೊರ್ಸ್) ಪರಿಣಾಮವಾಗಿ ಬಟ್ ಪಿಂಪಲ್ಸ್ ಕಂಡು ಬರುತ್ತದೆ. ಇದನ್ನು ತಹಬಂದಿಗೆ ತರಲು ಎಕ್ಸ್ ಫೋಲಿಯೇಶನ್ ಚಿಕಿತ್ಸೆಯಿಂದ ಚರ್ಮಕ್ಕೆ ಅಗತ್ಯವಿರುವ ಉಸಿರಾಟವು ದೊರೆತು ಬಟ್ ಪಿಂಪಲ್ಸ್ ಬರುವುದಿಲ್ಲ. ಈ ಎಕ್ಸ್ ಫೋಲಿಯೇಶನ್ ಬೊಬ್ಬೆಗಳನ್ನು ಮತ್ತು ಗುಳ್ಳೆಗಳನ್ನು ನಿವಾರಿಸಿ ಮೊಡವೆಗಳುಂಟಾಗದಂತೆ ತಡೆಯುತ್ತದೆ.

ಪೃಷ್ಠದ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ಪೃಷ್ಠದ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ಬಟ್ ಪಿಂಪಲ್ಸ್ ಬರಲು ಬ್ಯಾಕ್ಟೀರಿಯಾಗಳೇ ಮುಖ್ಯ ಕಾರಣ. ಬ್ಯಾಕ್ಟೀರಿಯಾಗಳಿಗೆ ಆಮ್ಲಜನಕದ ಅಗತ್ಯವಿಲ್ಲ, ಹಾಗಾಗಿ ಅದು ಎಲ್ಲಿ ಬೇಕಾದರು ಜೀವಿಸುತ್ತದೆ. ಇದು ಚರ್ಮದಲ್ಲಿರುವ ಸೆಬುಮ್ ಅನ್ನು ಸೇವಿಸಿ ಶೀಘ್ರವಾಗಿ ಬೆಳೆಯುತ್ತವೆ. ಹಾಗಾಗಿ ನಿಮ್ಮ ಪೃಷ್ಠದ ಪ್ರದೇಶವನ್ನು ಸ್ವಚ್ಛ ಮತ್ತು ಶುಚಿಯಾಗಿಟ್ಟುಕೊಳ್ಳಿ.

ನಿಮ್ಮ ಒಳ ಉಡುಪುಗಳ ಬಗ್ಗೆ ಕಾಳಜಿವಹಿಸಿ.

ನಿಮ್ಮ ಒಳ ಉಡುಪುಗಳ ಬಗ್ಗೆ ಕಾಳಜಿವಹಿಸಿ.

ಬ್ಯಾಕ್ಟೀರಿಯಾಗಳು ಎಲ್ಲಿ ಬೇಕಾದರು ಜೀವಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದಾಗಿ ನಿಮ್ಮ ಒಳ ಉಡುಪುಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. ಆದಷ್ಟು ಶುದ್ಧವಾಗಿರುವ ಒಳ ಉಡುಪುಗಳನ್ನೆ ಧರಿಸಿ. ಒಳ ಉಡುಪುಗಳನ್ನು ಆಯ್ಕೆ ಮಾಡುವಾಗ ಉತ್ತಮ ಗುಣಮಟ್ಟದ ಒಳ ಉಡುಪುಗಳನ್ನೆ ಆರಿಸಿಕೊಳ್ಳಿ. ಆದಷ್ಟು ಹತ್ತಿಯ ಒಳ ಉಡುಪುಗಳನ್ನೆ ಖರೀದಿಸಿ. ಯಾವುದೇ ಇನ್‍ಫೆಕ್ಷನ್‍ಗೆ ಎಡೆ ಮಾಡಿಕೊಡಬೇಡಿ.

ಮೊಡವೆ ನಿರೋಧಕ ಪದಾರ್ಥಗಳನ್ನು ಬಳಸಿನೋಡಿ.

ಮೊಡವೆ ನಿರೋಧಕ ಪದಾರ್ಥಗಳನ್ನು ಬಳಸಿನೋಡಿ.

ಸ್ಯಾಲಿಸಿಲಿಕ್ ಆಮ್ಲವು ಬಟ್ ಪಿಂಪಲ್ಸ್ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡುತ್ತದೆ. ಇದರಿಂದಾಗಿ ಬಹುತೇಕ ಬಾವುಗಳು ಮತ್ತು ಗುಳ್ಳೆಗಳು ಉಂಟಾಗುವುದು ಕಡಿಮೆಯಾಗುತ್ತದೆ. ಬೆನ್ಜೊಯಿಲ್- ಪೆರಾಕ್ಸೈಡ್ ಹೊಂದಿರುವ ಉತ್ಪನ್ನಗಳನ್ನು ಬುಟ್ ಪಿಂಪಲ್ಸ್ ಇರುವ ಕಡೆ ಸಿಂಪಡಿಸಿದರೆ ಆ ಮೊಡವೆಗಳು ಕಡಿಮೆಯಾಗುತ್ತವೆ.

ಬುಟ್ ಪಿಂಪಲ್ಸ್ ನಿಮಗೆ ಕಿರಿಕಿರಿಯುಂಟು ಮಾಡದಿರಲು ಕೆಲವು ಸಲಹೆಗಳನ್ನು ಪಾಲಿಸಿ.

ಬುಟ್ ಪಿಂಪಲ್ಸ್ ನಿಮಗೆ ಕಿರಿಕಿರಿಯುಂಟು ಮಾಡದಿರಲು ಕೆಲವು ಸಲಹೆಗಳನ್ನು ಪಾಲಿಸಿ.

ಹತ್ತಿಯ ಬಟ್ಟೆಗಳನ್ನು ಧರಿಸಿ ; ಇದು ಚರ್ಮಕ್ಕೆ ಅಗತ್ಯವಾಗಿರುವ ಗಾಳಿಯನ್ನು ಒದಗಿಸುತ್ತದೆ.

ನಿಮ್ಮ ಬಟ್ಟೆಗಳನ್ನು ನಿಯಮಿತವಾಗಿ ಬದಲಿಸಿ. ಇದರಿಂದಾಗಿ ಬೆವರು ಮತ್ತು ಕಟ್ಟಿಕೊಂಡ ರೋಮ ಕೂಪಗಳ ( ಕ್ಲಾಗಡ್ ಪೊರ್ಸ್) ಸಮಸ್ಯೆ ನಿಮಗೆ ಉಂಟಾಗುವುದಿಲ್ಲ.

ಪೃಷ್ಠದ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ ( ದಿನಕ್ಕೆ 3-4 ಬಾರಿ ಸ್ವಚ್ಛಗೊಳಿಸಿ)

ನಿಮ್ಮ ತ್ವಚೆಯ ಮೇಲೆ ತುರಿಕೆಯನ್ನು ತರುವ ಅಂಶಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆದಷ್ಟು ಅಂತಹ ಅಂಶಗಳು ನಿಮ್ಮ ತ್ವಚೆಯ ಸಂಪರ್ಕಕ್ಕೆ ಬರುವುದನ್ನು ನಿಯಂತ್ರಿಸಿ.

ನಿಮಗೆ ಅಲರ್ಜಿಯನ್ನುಂಟು ಮಾಡುವ ಅಂಶಗಳ ಬಗ್ಗೆ ಒಂದು ದಾಖಲೆಯನ್ನು ಇಡಿ. ಇದರಿಂದಾಗಿ ನಿಮಗೆ ಬರುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಆಂಗ್ಲ ಗಾದೆ ಮಾತು ಇದನ್ನೇ ಹೇಳುತ್ತದೆ " ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್" ಎಂದು. ಪರಿಹಾರಕ್ಕಿಂತ ನಿವಾರಾಣೋಪಾಯ ಒಳ್ಳೆಯದಲ್ಲವೇ?

X
Desktop Bottom Promotion