For Quick Alerts
ALLOW NOTIFICATIONS  
For Daily Alerts

ಬಾಡಿ ಮಸಾಜ್ ಗೆ ಸೂಕ್ತವಾದ ಎಣ್ಣೆಗಳಿವು

|

ಎಣ್ಣೆ ಮಸಾಜ್ ನಮ್ಮ ಆರೋಗ್ಯ ಮತ್ತು ಸೌಂದರ್ಯದ ರಕ್ಷಣೆಗೆ ಮಾಡುವ ಪುರಾತನವಾದ ವಿಧಾನವಾಗಿದೆ. ಆಯುರ್ವೇದದಲ್ಲಿ ಎಣ್ಣೆ ಮಸಾಜ್ ಒಂದು ಪ್ರಮುಖವಾದ ಚಿಕಿತ್ಸಾ ವಿಧಾನವಾಗಿದೆ. ಮೈ ಕೈ ನೋವು, ವಿಪರೀತ ಮಾನಸಿಕ ಒತ್ತಡವಾದಾಗ ಎಣ್ಣೆ ಮಸಾಜ್ ಮಾಡಿಸಿದರೆ ಸಾಕು ನಿಮ್ಮ ನೋವು, ಮಾನಸಿಕ ಒತ್ತಡ ಎಲ್ಲಾ ಮಾಯವಾಗಿ ಮನಸ್ಸು ನಿರಾಳವಾಗುವುದು, ದೇಹಕ್ಕೆ ವಿಶ್ರಾಂತಿಯ ಅನುಭವ ದೊರೆಯುವುದು.

ಎಣ್ಣೆ ಮಸಾಜ್ ಅನ್ನು ತಿಂಗಳಿಗೆ 1-2 ಬಾರಿ ಮಾಡಿಸಿದರೆ ಸುಂದರ ಮತ್ತು ಸದೃಢ ತ್ವಚೆ ನಿಮ್ಮದಾಗುವುದು, ಆರೋಗ್ಯವೂ ವೃದ್ಧಿಸುವುದು. ಮಸಾಜ್ ಮಾಡುವಾಗ ಯಾವ ಎಣ್ಣೆ ಉಪಯೋಗಿಸುತ್ತೀರ ಅನ್ನೋದೂ ಕೂಡ ಅಷ್ಟೇ ಮುಖ್ಯ. ಇಲ್ಲಿ ನಾವು ಮಸಾಜ್ ಗೆ ಸೂಕ್ತವಾದ ಎಣ್ಣೆಗಳಾವುವು ಎಂದು ಹೇಳಿದ್ದೇವೆ ನೋಡಿ:

Oil Therapy: The Best Oil For Your Body

* ಸೂರ್ಯಕಾಂತಿ ಎಣ್ಣೆ: ಅಂಟಿಕೊಳ್ಳದ ಈ ಸೂರ್ಯಕಾಂತಿ ಎಣ್ಣೆ ತ್ವಚೆಯನ್ನು ತಿಳಿಗೊಳಿಸುತ್ತೆ. ಇದರಲ್ಲಿನ ಲೀನೊಲೀಕ್ ಆಸಿಡ್, ಪಾಲ್ಮಿಟಿಕ್, ಸ್ಟೀರಿಯಕ್ ಆಸಿಡ್ ತ್ವಚೆಯನ್ನು ತಾಜಾ ಇರಿಸುತ್ತದೆ. ವಿಟಮಿನ್ ಇ ಮತ್ತು ಅರಿಶಿನ ಬೆರೆಸಿ ಮಸಾಜ್ ಮಾಡಿಕೊಂಡರೆ ಇನ್ನೂ ಉತ್ತಮ ಫಲಿತಾಂಶ ಪಡೆಯಬಹುದು.

* ಸಾಸಿವೆ ಎಣ್ಣೆ: ಇದರಲ್ಲಿರುವ ಔಷಧೀಯ ಅಂಶವನ್ನು ಆಯುರ್ವೇದದಲ್ಲಿ ಉತ್ತಮವಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಇದನ್ನು ನಿತ್ಯವೂ ಮಸಾಜ್ ಮಾಡಿಕೊಳ್ಳುವುದರಿಂದ ದುರ್ಬಲ ಮೂಳೆ ಸುಧಾರಿಸುತ್ತದೆ ಮತ್ತು ರಕ್ತಸಂಚಲನವೂ ಚೆನ್ನಾಗಿರುತ್ತದೆ. ಸಾಸಿವೆ ಎಣ್ಣೆ ತ್ವಚೆಗೆ ಉತ್ತಮ ಟೋನರ್ ಕೂಡ ಹೌದು.

* ಕೊಬ್ಬರಿ ಎಣ್ಣೆ: ಸುಲಭವಾಗಿ ದೊರೆಯುವ ಕೊಬ್ಬರಿ ಎಣ್ಣೆ ಕೂದಲಿಗೆ ಮತ್ತು ತ್ವಚೆಗೆ ಎರಡಕ್ಕೂ ತುಂಬಾ ಉಪಯೋಗಕ್ಕೆ ಬರುವ ಎಣ್ಣೆ. ಕಡಿಮೆ ಬೆಲೆಯಲ್ಲಿ ಸಿಗುವ ಈ ಎಣ್ಣೆ ಚರ್ಮಕ್ಕೆ ತೇಂವಾಂಶ ಒದಗಿಸಿ ಚರ್ಮ ಹೊಳೆಯುವಂತೆ ನೋಡಿಕೊಳ್ಳುತ್ತದೆ.

* ಬಾದಾಮಿ ಎಣ್ಣೆ: ಮಸಾಜ್ ಎಣ್ಣೆಗಳಲ್ಲಿ ಬಾದಾಮಿ ಎಣ್ಣೆಗೆ ವಿಶೇಷ ಸ್ಥಾನವಿದೆ. ಈ ಎಣ್ಣೆಯನ್ನು ಚರ್ಮ ಬೇಗನೆ ಹೀರಿಕೊಳ್ಳುತ್ತದೆ. ವಿಟಮಿನ್ ಇ ಎಣ್ಣೆಯೊಂದಿಗೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿಕೊಂಡರೆ ಚರ್ಮಕ್ಕೆ ಅವಶ್ಯಕವಿರುವ ಪೋಷಕಾಂಶವನ್ನು ಒದಗಿಸಿದಂತೆ.

* ಜೋಜೋಬಾ ಎಣ್ಣೆ: ಬೆನ್ನು ನೋವಿನಿಂದ ಬಳಲುತ್ತಿದ್ದವರಿಗೆ ಜೋಜೋಬಾ ಎಣ್ಣೆಯ ಮಸಾಜ್ ಉತ್ತಮ ರಿಲ್ಯಾಕ್ಸ್ ನೀಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶವಿರುವುದರಿಂದ ಚರ್ಮದ ಅನೇಕ ಕಾಯಿಲೆಗಳನ್ನು ದೂರವಿರಿಸುತ್ತದೆ. ನಿರ್ಜೀವ ಕಣಕ್ಕೆ ಜೀವ ತುಂಬಲು ಇದು ಹೆಚ್ಚು ಸಹಕಾರಿ.

English summary

Oil Therapy: The Best Oil For Your Body

To be able to enjoy a massage and reap maximum benefits, the choice of the oil is very important. While at a spa, you are more likely to be treated to a blend of aromatic oils, if you are planning to get yourself the soothing treatment at home, here's are the options you can pick from. 
Story first published: Friday, November 8, 2013, 13:49 [IST]
X
Desktop Bottom Promotion