ಡಾರ್ಕ್ ಸರ್ಕಲ್ ನಿವಾರಣೆಗೆ 14 ಮನೆ ಮದ್ದುಗಳು

By: ಲೇಖಕ
Subscribe to Boldsky

ಕಣ್ಣು ಸೂಕ್ಷ್ಮ ಜಾಗ. ಹೆಣ್ಣಿನ ಸೌಂದರ್ಯಕ್ಕೆ ಕಣ್ಣು ಮುಖ್ಯವಾದ ಅಂಗ. ಅಂದವಾದ ಕಣ್ಣು ಸೌಂದರ್ಯವನ್ನು ದ್ವಿಗುಣಗೊಳಿಸುತ್ತದೆ. ಹೆಣ್ಣಿನ ಮೊದಲ ಆಕರ್ಷಣೆ ಕಣ್ಣು. ಹೀಗಿರುವಾಗ ಕಣ್ಣಿನ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಕಣ್ಣಿನ ಸುತ್ತ ಬಿದ್ದ ಕಪ್ಪು ವರ್ತುಲಗಳಿಂದ ಮುಖದ ಸೌಂದರ್ಯವೇ ಕಳೆಗುಂದಿಬಿಡುತ್ತದೆ. ಆದ್ದರಿಂದ ಕಣ್ಣಿನ ಆರೈಕೆ ಬಹಳ ಪ್ರಮುಖವಾದುದು.

ಡಾರ್ಕ್ ಸರ್ಕಲ್ ಸಾಮಾನ್ಯವಾಗಿ ಹೆಚ್ಚಿನ ಜನರನ್ನು ಕಾಡುವ ಸಮಸ್ಯೆ. ಇದು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸಂಭವಿಸುತ್ತದೆ. ಆದರೆ ಮಹಿಳೆಯರ ಸೌಂದರ್ಯಕ್ಕೆ ಹೆಚ್ಚಿನ ಸಮಸ್ಯೆಯಾಗಿದೆ. ಕಣ್ಣಿನ ಸುತ್ತಲೂ ಇರುವ ಚರ್ಮ ಇತರ ಭಾಗದ ಚರ್ಮಕ್ಕಿಂತ ಹೆಚ್ಚು ಮೃದುವಾಗಿ ಇರುತ್ತದೆ ಆದ್ದರಿಂದ ಇದಕ್ಕೆ ಹೆಚ್ಚಿನ ಕಾಳಜಿಯ ಅಗತ್ಯವಿದೆ.

ಕಣ್ಣಿನ ಸುತ್ತಲ ಕಪ್ಪು ವೃತ್ತಕ್ಕೆ ಕಾರಣಗಳು ಅನೇಕ. ಇದು ಅನುವಂಷಿಕ ಆಗಿರಬಹುದು ಅಥವಾ ಅತಿಯಾದ ಬಳಲಿಕೆ ಕಾರಣವಾಗಿರಬಹುದು. ಮನೆಯಲ್ಲಿಯೇ ಇರುವ ಆನೇಕ ವಸ್ತುಗಳಿಂದ ಕಣ್ಣಿನ ಸುತ್ತಲು ಆಗುವ ಕಪ್ಪು ವರ್ತುಲಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ಈ ಕಪ್ಪು ವೃತ್ತವನ್ನು ಹೋಗಲಾಡಿಸಲು ಈ ಕೆಳಗೆ ಕೆಲವು ಮನೆ ಮದ್ದನ್ನು ನೀಡಲಾಗಿದೆ.

14 Best Home Remedies For Dark Circles

1. ಕಪ್ಪು ವೃತ್ತಗಳು ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳಬಹುದು, ಆದರೆ ಇದು ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲು ಉತ್ತಮ ವಿಧಾನವೆಂದರೆ ಪೌಷ್ಟಿಕ ಆಹಾರ ತೆಗೆದುಕೊಳ್ಳುವುದು, ತಾಜಾ ಹಣ್ಣು ತಿನ್ನುವುದು ಮತ್ತು ಮೊಸರು , ಬೇಳೆಕಾಳುಗಳು, ಸಂಸ್ಕರಿಸಿದ ಧಾನ್ಯಗಳು, ಕೆನೆ ತೆಗೆದ ಹಾಲು, ಸೊಪ್ಪುಗಳು ಮತ್ತು ಬೀನ್ಸ್ ಇವುಗಳನ್ನು ಹೆಚ್ಚಾಗಿ ಬಳಸುವುದು.

2. ಪ್ರತಿದಿನ ವ್ಯಾಯಾಮ ಮಾಡುವುದು, ರಕ್ತ ಸಂಚಲನ ಸುಲಭವಾಗಿ ಆಗಲು ಉಸಿರಾಟದ ವ್ಯಾಯಾಮಗಳನ್ನು ಮಾಡುವುದು ಮತ್ತು ಒತ್ತಡ, ಆತಂಕಗಳನ್ನು ಕಡಿಮೆ ಮಾಡಿಕೊಳ್ಳುವುದು ಕೂಡ ಕಪ್ಪು ವೃತ್ತ ತಡೆಯಲು ಉತ್ತಮ ವಿಧಾನವಾಗಿದೆ.

3. ಪ್ರತಿದಿನ ಕಡಿಮೆ ಎಂದರೆ 7 ತಾಸು ನಿದ್ದೆ ಮಾಡಿ. ಪ್ರತಿದಿನ 20 ನಿಮಿಷ ಧ್ಯಾನ ಮತ್ತು ಸಂಗೀತ ಕೇಳುವುದರ ಮೂಲಕ ಕಳೆಯಿರಿ.

4. ಕ್ರೀಂ ಹಚ್ಚುವಾಗ ಮತ್ತು ಮೇಕಪ್ ಮಾಡುವಾಗ ನಿಧಾನವಾಗಿ ಹಚ್ಚಿ. ಕಣ್ಣಿನ ಕೆಳ ಭಾಗದಲ್ಲಿ ಹೆಚ್ಚು ಮಸಾಜ್ ಮಾಡಬೇಡಿ. ಕಣ್ಣಿನ ಕೆಳಗೆ ಮಸಾಜ್ ಮಾಡಲು ವೃತ್ತಿಪರ ಮಸಾಜುಗಾರರಿಗೆ ಮಾತ್ರ ಅವಕಾಶ ಕೊಡಿ.

5. ಕಣ್ಣಿನ ಸುತ್ತ ವಿಶೇಷವಾಗಿ ಅದಕ್ಕೆಂದೇ ತಯಾರಿಸಿದ ಕ್ರೀಮ್ ಬಳಸಿ. 15 ನಿಮಿಷಗಳ ನಂತರ ಹತ್ತಿಯಿಂದ ಒರೆಸಿ ತೆಗೆಯಿರಿ. ರಾತ್ರಿ ಪೂರ್ತಿ ಕ್ರೀಂ ಅನ್ನು ಹಾಗೆಯೇ ಬಿಡಬೇಡಿ. ಬಾದಾಮಿಯನ್ನು ಒಳಗೊಂಡ ಕಣ್ಣಿನ ಕೆಳಗೆ ಬಳಸುವ ಕ್ರೀಂ ಅನ್ನು ಬಳಸಿ ಇದರಲ್ಲಿ ಪೋಷಕಾಂಶಗಳು ಅಧಿಕವಾಗಿ ಇರುತ್ತವೆ. ಇದು ರಕ್ತ ಸಂಚಲನವನ್ನು ಸುಗಮವಾಗಿಸುತ್ತದೆ. ಕಣ್ಣಿನ ಸುತ್ತ ಫೇಶಿಯಲ್ ಮಾಸ್ಕ್ ಬಳಸಬೇಡಿ.

6. ಕಣ್ಣಿನ ಆಯಾಸ ಕಡಿಮೆ ಮಾಡಲು ಬೆಚ್ಚಗಿನ ನೀರಿನಿಂದ ತೊಳೆಯಿರಿ ನಂತರ ತಣ್ಣನೆ ನೀರಿನಿಂದ ಕೂಡ ಕಣ್ಣನ್ನು ತೊಳೆಯಿರಿ. ಇದು ರಕ್ತ ಸಂಚಲನವನ್ನು ಸುಗಮವಾಗಿಸುವುದರ ಮೂಲಕ ಕಪ್ಪು ವೃತ್ತ ಹೋಗಲಾಡಿಸುತ್ತದೆ.

7. ಸೌತೆಕಾಯಿಯ ರಸವನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ ಮತ್ತು 15 ನಿಮಿಷದ ನಂತರ ನೀರಿನಿಂದ ತೊಳೆಯಿರಿ.

8. ಕಪ್ಪು ವೃತ್ತ ಹೋಗಲಾಡಿಸಲು ಆಲುಗಡ್ಡೆ ಮತ್ತು ಸೌತೆಕಾಯಿ ಮಿಶ್ರಣದ ರಸವನ್ನು ಕೂಡ ಬಳಸಬಹುದು.

9. ನಿಂಬೆ ಹಣ್ಣು ಮತ್ತು ಸೌತೆ ಕಾಯಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅದರ ರಸವನ್ನು ಪ್ರತಿದಿನ ಹಚ್ಚಿ ಮತ್ತು 15 ನಿಮಿಷದ ನಂತರ ನೀರಿನಲ್ಲಿ ತೊಳೆದುಕೊಂಡರೆ ಕಪ್ಪು ವೃತ್ತಕ್ಕೆ ಮುಕ್ತಿ ಸಿಗುತ್ತದೆ.

10. ಟೊಮೆಟೊ ಜ್ಯೂಸ್ ಕೂಡ ಅಷ್ಟೇ ಒಳ್ಳೆಯದು. ಇದನ್ನು ಹಚ್ಚಿ 20 ನಿಮಿಷ ಹಾಗೆಯೇ ಬಿಡಿ. ಇದಕ್ಕೆ ಐಸ್ ಅಥವಾ ತಣ್ಣನೆಯ ನೀರನ್ನು ಹಚ್ಚಿ 10 ನಿಮಿಷ ಹಾಗೆಯೇ ಬಿಡಿ.

11. ತಣ್ಣಗಿನ ಟೀ ಬ್ಯಾಗ್ ಅನ್ನು ಕಣ್ಣಿನ ಕೆಳಭಾಗದಲ್ಲಿ ಇಡುವುದರಿಂದ ಕೂಡ ಕಣ್ಣಿನ ಕಪ್ಪು ಕಲೆಗಳು ಮಾಯವಾಗುತ್ತವೆ.

12. ಬಾದಾಮಿ ಎಣ್ಣೆ ಕೂಡ ಉತ್ತಮ ಮನೆ ಮದ್ದು. ಮಲಗುವ ಮೊದಲು ಬಾದಾಮಿ ಮತ್ತು ಹಾಲನ್ನು ಮಿಶ್ರ ಮಾಡಿ ಅದನ್ನು ಕಣ್ಣಿನ ಸುತ್ತಲು ಹಚ್ಚಿ. ಮಾರನೆಯ ದಿನ ಬೆಳಗ್ಗೆ ತಣ್ಣನೆಯ ನೀರಿನಿಂದ ತೊಳೆಯಿರಿ.

13. ಜಜ್ಜಿದ ಪುದೀನ ಎಲೆಗಳು ಕೂಡ ಕಣ್ಣಿನ ಸುತ್ತಲಿನ ಕಪ್ಪು ಕಲೆ ಹೋಗಲಾಡಿಸಲು ಉತ್ತಮ ಮದ್ದು.  ಜಜ್ಜಿನ ಪುದೀನವನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ ಮತ್ತು 10 ರಿಂದ 15 ನಿಮಿಷ ಬಿಟ್ಟು ತೊಳೆಯಿರಿ.

14. ಕಿತ್ತಳೆ ರಸವನ್ನು ಗ್ಲಿಸರಿನ್ ಜೊತೆ ಬೆರೆಸಿ ವಾರದಲ್ಲಿ 3 ಭಾರಿ ಕಣ್ಣಿನ ಸುತ್ತ ಹಚ್ಚಿ 20 ನಿಮಿಷದ ನಂತರ ತೊಳೆಯಿರಿ. ಕಣ್ಣಿನ ಸುತ್ತಲ ಕಪ್ಪು ಕಲೆಗಳನ್ನು ಹೋಗಲಾಡಿಸಿ.

English summary

14 Best Home Remedies For Dark Circles

Dark circle is a common beauty problem that affect many people. This will affect both men and women, but in women it is more prominent. The skin around the eyes is far delicate and thinner than the skin on other areas of the face, so it needs extra care.
Please Wait while comments are loading...
Subscribe Newsletter