For Quick Alerts
ALLOW NOTIFICATIONS  
For Daily Alerts

ಕಲೆರಹಿತ ಬೆನ್ನು ನಿಮ್ಮದಾಗಬೇಕೆ?

|

ಮಹಿಳೆಯರಿಗೆ ಪುರುಷರಿಗಿಂತ ಸೌಂದರ್ಯ ಪ್ರಜ್ಞೆ ಅಧಿಕವಿರುತ್ತದೆ. ಅಲ್ಲದೆ ಫ್ಯಾಷನಬಲ್ ಡ್ರೆಸ್ ಧರಿಸುವಾಗ ತ್ವಚೆ ಆರೈಕೆ ಕೊಡುವುದು ಅಗತ್ಯ. ಡೀಪ್ ನೆಕ್ ನ ಡ್ರೆಸ್ ಧರಿಸುವುದು ಈಗೀನ ಫ್ಯಾಷನ್ ಆಗಿದೆ. ಸೀರೆ ಬ್ಲೌಸ್ ಅಂತೂ ತುಂಬಾ ಡೀಪ್ ಆಗಿರಬೇಕೆಂದು ಟೈಲರ್ ಗೆ ಅಳತೆ ಕೊಡುವಾಗ ಹೇಳಿಯೇ ಬ್ಲೌಸ್ ಸ್ಟಿಚ್ ಮಾಡಲು ಕೊಡುತ್ತಾರೆ. ಈ ರೀತಿಯ ಡೀಪ್ ನೆಕ್ ನ ಡ್ರೆಸ್ ಹಾಕುವಾಗ ಬೆನ್ನು ಕೂಡ ಸುಂದರವಾಗರಬೇಕು. ಬೆನ್ನಿನಲ್ಲಿ ಮೊಡವೆ, ಕಲೆಗಳಿದ್ದರೆ ನೋಡುಗರಿಗೆ ನಿಮ್ಮ ಬ್ಲೌಸ್ ಅಥವಾ ಡ್ರೆಸ್ ಡಿಸೈನ್ ಗಿಂತ ನಿಮ್ಮ ಕಲೆಯೇ ಎದ್ದು ಕಾಣುವಂತಾಗುವುದು.

ಬೆನ್ನಿನಲ್ಲಿ ಕಲೆಗಳಿದ್ದರೆ ನಿಮ್ಮ ಇಷ್ಟದ ಡ್ರೆಸ್ ಧರಿಸಲು ಆಗುವುದಿಲ್ಲವೆಂದು ಚಿಂತೆ ಮಾಡಬೇಡಿ. ಈ ಕೆಳಗಿನಂತೆ ಮಾಡಿದರೆ ಕಲೆರಹಿತ ಸುಂದರ ಬೆನ್ನು ನಿಮ್ಮದಾಗುವುದು.

Get A Clear N Glowing Back

ಸ್ಟೀಮ್ ಬಾತ್: ಹಬೆ ನಿಮ್ಮ ತ್ವಚೆಯನ್ನು ಸುಂದರವಾಗಿಸಲು ಸಹಾಯಮಾಡುತ್ತದೆ. ಏಕೆಂದರೆ ಹಬೆ ಬಿದ್ದಾಗ ತಾಗಿದಾಗ ರಂಧ್ರಗಳು ತೆರೆದುಕೊಳ್ಳುತ್ತದೆ. ಬಿಸಿ ನೀರನ್ನು ಕಾಯಿಸಿ ಅದರ ಹಬೆಗೆ ನಿಮ್ಮ ಬೆನ್ನನ್ನು 5-10 ನಿಮಿಷ ಕಾಲ ಹಿಡಿಯರಿ. ಈ ರೀತಿ ಮಾಡುತ್ತಾ ಬಂದರೆ ಬೆನ್ನಿನಲ್ಲಿರುವ ಕಲೆಗಳು ಕಡಿಮೆಯಾಗುವುದು.

ಸ್ಕ್ರಬ್: ಬೆನ್ನನ್ನು ಚೆನ್ನಾಗಿ ತಿಕ್ಕಿ, ನಿಮಗೆ ಸಾಧ್ಯವಾಗದಿದ್ದರೆ ಮನೆಯಲ್ಲಿ ಅಮ್ಮ ಅಥವಾ ಸಹೋದರಿಯ ಕೈಯಿಂದ ತಿಕ್ಕಿಸಿಕೊಳ್ಳಿ. ಬೆನ್ನಿಗೆ ನಿಂಬೆ ಹಣ್ಣು ಹಚ್ಚಿ ಬೆನ್ನು ತಿಕ್ಕಿ ಸ್ವಲ್ಪ ಹೊತ್ತು ಬಿಟ್ಟು ಬೆನ್ನು ಉಜ್ಜಿದರೆ ಕಲೆ ಕಡಿಮೆಯಾಗುವುದು.

ಕಲೆಯನ್ನು ಮರೆ ಮಾಚುವುದು: ಮೊಡವೆ ಕಲೆಯಿದ್ದರೆ ಕನ್ಸೀಲರ್ ಹಚ್ಚಿ ಮರೆ ಮಾಚಿ ನಂತರ ಡೀಪ್ ನೆಕ್ ಡ್ರೆಸ್ ಹಾಕಬಹುದು.

ಎಣ್ಣೆ ಮಸಾಜ್: .ತ್ವಚೆಗೆ ಎಣ್ಣೆ ಮಸಾಜ್ ಮಾಡುತ್ತಿದ್ದರೆ ತ್ವಚೆ ಒಣಗುವುದಿಲ್ಲ ಹಾಗೂ ಕಲೆಗಳು ಉಂಟಾಗುವುದಿಲ್ಲ.

English summary

Get A Clear N Glowing Back | Tips For Body care | ಕಲೆರಹಿತ ಬೆನ್ನು ನಿಮ್ಮದಾಗಬೇಕೆ? | ದೇಹದ ಆರೈಕೆಗೆ ಕೆಲ ಸಲಹೆಗಳು

If you suffer from back acne or have rashes or scars on your back, you have to work on it at the earliest. As New Year party plans have started, you have to be prepared to flaunt your bare back in scooped outfits.
X
Desktop Bottom Promotion