For Quick Alerts
ALLOW NOTIFICATIONS  
For Daily Alerts

ಪರ್ಫೆಕ್ಟ್ ಶೇವ್ ಗಾಗಿ ಸರಳ 6 ಸ್ಟೆಪ್

By Staff
|

ಪುರುಷರು ನೋಡಲು ನೀಟಾಗಿ , ಆಕರ್ಷಕವಾಗಿ ಕಾಣಲು ಶೇವ್ ಮಾಡಿರಬೇಕು, ಗಡ್ಡ ಬಿಡುವವರು ಅದನ್ನು ಸರಿಯಾಗಿ ಟ್ರಿಮ್ ಮಾಡಿರಬೇಕು. ಅಡ್ಡ-ದಿಡ್ಡಿ ಬೆಳೆದ ಗಡ್ಡ ಅವರಿಗೆ ದೇವದಾಸ್ ನ ಲುಕ್ ಕೊಡುತ್ತದೆ. ಹೆಚ್ಚಿನರಿಗೆ ಶೇವ್ ಮಾಡಿದಾಗ ನೋವು , ಉರಿ ಕಾಣಿಸಿಕೊಳ್ಳುತ್ತದೆ.

ಶೇವ್ ಮಾಡುವ ಟೆಕ್ನಿಕ್ ಕಲಿತರೆ ಗಾಯವಾಗಲಿ, ಉರಿಯಾಗಲಿ ಉಂಟಾಗುವುದಿಲ್ಲ.

ಇಲ್ಲಿ ನಾವು ಪರ್ಫೆಕ್ಟ್ ಶೇವ್ ಗೆ ನೀವು ಮಾಡಬೇಕಾದ 6 ಸ್ಟೆಪ್ ಗಳ ಬಗ್ಗೆ ಹೇಳಿದ್ದೇವೆ ನೋಡಿ

6 steps to a perfect shave

ಸ್ಟೆಪ್ 1
ಶೇವ್ ಮಾಡುವ ಮುಂಚೆ ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ಒಂದು ವೇಳೆ ಪುಟ್ಟ ಗಾಯವಾದರೂ ಸೋಂಕು ಹರಡುವುದನ್ನು ತಡೆಯಬಹುದು.

ಸ್ಟೆಪ್ 2
ಗಡ್ಡವನ್ನು ಮೃದು ಮಾಡಲು ಟವಲ್ ಅನ್ನು ಬಿಸಿ ನೀರಿನಲ್ಲಿ ನೆನೆಸಿ 30 ಸೆಕೆಂಡ್ ಮುಖಕ್ಕೆ ಒತ್ತಿ ಹಿಡಿಯಿರಿ.

ಸ್ಟೆಪ್ 3
ನಂತರ ಶೇವಿಂಗ್ ಕ್ರೀಮ್ ಹಚ್ಚಬೇಕು. ಇದನ್ನು ವೃತ್ತಾಕಾರವಾಗಿ ಹಚ್ಚಿ . ನಂತರ ಹೊಸ ರೇಝರ್ ಬಳಸಿ ಶೇವ್ ಪೊಜಿಷನ್ ನಲ್ಲಿ ಹಿಡಿಯಿರಿ.

ಸ್ಟೆಪ್ 4
ಕೆಲವರು ಶೇವ್ ಅನ್ನು ಗಲ್ಲದಿಂದ ಕೆನ್ನೆಯ ಕಡೆಗೆ ಮಾಡುತ್ತಾರೆ. ಆದರೆ ಶೇವ್ ಅನ್ನು ಕೆನ್ನೆಯಿಂದ ಗಲ್ಲದ ಕಡೆಗೆ ಮಾಡಬೇಕು.

ಸ್ಟೆಪ್ 5
ಕುತ್ತಿಗೆ ಭಾಗವನ್ನು ಶೇವ್ ಮಾಡಬೇಕು. ತುಟಿಯನ್ನು ಶೇವ್ ಮಾಡುವಾಗ ಮೇಲ್ಭಾಗದ ತುಟಿಯನ್ನು ಹಲ್ಲಿನಿಂದ ಎಳೆದು ಹಿಡಿದು ನಂತರ ಮಾಡಬೇಕು. ನಂತರ ರೇಝರ್ ಅನ್ನು ಕ್ಲೀನ್ ಆಗಿ ತೊಳೆಯಬೇಕು.

ಸ್ಟೆಪ್ 6
ಮುಖವನ್ನು ಬಿಸಿ ನೀರಿನಿಂದ ತೊಳೆದು ನಂತರ ಮಾಯಿಶ್ಚರೈಸರ್ ಹಚ್ಚಿದರೆ ಪರ್ಫೆಕ್ಟ್ ಶೇವ್ ನಿಂದ ನಿಮ್ಮ ಮುಖದ ಹೊಳಪು ಹೆಚ್ಚುವುದು.

English summary

6 steps to a perfect shave

If you're a man, you are going to shave for the rest of your life, whether you like it or not. Many men find shaving painful and uncomfortable, but this is mainly the result of a poor technique.
X
Desktop Bottom Promotion