Just In
Don't Miss
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- News
ಪಾಲಿಕೆ ಮೈತ್ರಿ ಗೊಂದಲ: ಭಿನ್ನಮತ ಶಮನಕ್ಕೆ ಮುಂದಾದ ಹೈಕಮಾಂಡ್?
- Sports
"ಮೈಲಿಗಲ್ಲುಗಳ ಬಗ್ಗೆ ಬಹಳಷ್ಟು ಹಿಂದೆಯೇ ಯೋಚಿಸುವುದು ಬಿಟ್ಟಿದ್ದೇನೆ"
- Movies
ಹುಬ್ಬಳ್ಳಿಯಲ್ಲಿ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು, ಪೊಲೀಸರಿಂದ ಲಾಠಿಚಾರ್ಜ್
- Automobiles
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಂಚುಕ ಸರಿಹೊಂದುತ್ತಾ, ಸಂಕೋಚವಿಲ್ಲದೆ ಹೇಳಿ!
ಇದು ಹೆಂಸರಿಗಾಗಿ ಮಾತ್ರ! ಲಂಗ, ಟವಲ್ಲು, ಒಳ ಉಡುಪುಗಳು ಬೇಕಾದ ಬಟ್ಟೆಗಳ ಕೊಳ್ಳೋಣ ಎಂದು ಅಂಗಡಿಯ ಹೊಕ್ಕರೆ ಕಿಸಿಯುವುದು ಬರೀ ಗಂಡಸರ ಹಲ್ಲುಗಳು. ಇರೋ ಒಬ್ಳೇ ಹೆಂಗಸಿಗೆ ಕೇಳೋಣ ಅಂದ್ರೆ ಮಾಲಿಕ ಪಂಚೆ, ಲುಂಗಿಗಳನ್ನು ಮಡಿಚಿಡಲು ಹೇಳಿರುತ್ತಾನೆ. ಇಷ್ಟು ಮಾತ್ರವಲ್ಲದೆ, ಕಣ್ಣು ಹಾಯಿಸಿದಲ್ಲೆಲ್ಲ ಅಂದದ ಬ್ರಾ, ಪ್ಯಾಂಟಿಗಳನ್ನು ಹಾಕಿಕೊಂಡ ಚೆಂದುಳ್ಳಿ ಚೆಲುವೆಯರ ಜಾಹೀರಾತಿರುವ ಭಾವಚಿತ್ರಗಳೇ.
ಜೊತೆಗೆ ಗಂಡ ಮಕ್ಕಳು ಬೇರೆ ಇದ್ದರೆ ಮುಜುಗರವಾಗದೆ ಇರಲು ಸಾಧ್ಯವೆ? ಅನ್ಯ ಮಾರ್ಗವಿಲ್ಲದೆ ಗಂಡನನ್ನು ಹೊರಗಡೆಯೇ ನಿಲ್ಲಿಸಿ, ಸಾಧ್ಯವಾದಷ್ಟು ಸೂಟಬಲ್ ಆಗಿರುವಂಥ ಒಳಉಡುಪುಗಳನ್ನು ಆದಷ್ಟು ಕಮ್ಮಿ ಸಮಯದಲ್ಲಿ ಕೊಂಡು ಬಂದರೆ ಕೆಲಸ ಆದಂತೆ. ಬೇಕಿದ್ದ ಬಣ್ಣ, ಸೈಜು, ವಿನ್ಯಾಸಗಳನ್ನು ಹುಡುಕುವಷ್ಟರಲ್ಲಿ ಕೆಲವರಿಗೆ ಬೆವರು ಕುತ್ತಿಗೆ ಇಳಿಜಾರಲ್ಲಿ ಇಳಿದಿರುತ್ತದೆ. ನಮ್ಮ ದೇಹಕ್ಕೆ ಒಪ್ಪುತ್ತೋ ಇಲ್ಲವೋ ಅನ್ನುವುದು ಬೇರೆ ಮಾತು.
ವಿಷಯ ಏನಂದ್ರೆ, ಶೇ.80ರಷ್ಟು ಮಹಿಳೆಯರು ಈ ಗಡಿಬಿಡಿಯಲ್ಲಿ ತಮ್ಮ ದೇಹಕ್ಕೆ ಒಪ್ಪದ ಒಳಉಡುಪುಗಳನ್ನು ಕೊಂಡು ತಂದಿರುತ್ತಾರೆ ಎನ್ನುತ್ತದೆ ಒಂದು ಅಧ್ಯಯನ. ಇನ್ನು ಬೆಂಗಳೂರಿನ ಜಯನಗರದಂಥ ಮುಕ್ತ ಮಾರುಕಟ್ಟೆಯಲ್ಲಿ ಕಂಚುಕಗಳನ್ನು ಕೊಳ್ಳುವ ಮಹಿಳೆಯರ ಪಾಡಂತೂ ಕೇಳುವುದೇ ಬೇಡ. ಸಂಕೋಚವೋ ಸಂಕೋಚ. ಮೊದಲೇ ಅಗ್ಗ, ಹಾಕ್ಕೊಂಡ್ರಂತೂ ಸೈಜು ಹಿಗ್ಗಾಮುಗ್ಗ.
ಆ ಉಡುಪು ಸರಿ ಹೊಂದುತ್ತೋ ಇಲ್ಲವೋ, ಅವುಗಳನ್ನು ಧರಿಸಿದರೆ ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತದೆ, ಅವು ಉತ್ತಮ ಗುಣಮಟ್ಟದ ಬಟ್ಟೆ ಇವೆಯೋ ಇಲ್ಲವೋ ಎಂಬ ಬಗ್ಗೆ ಮಹಿಳೆಯರು ಚಿಂತನೆಯನ್ನೂ ಮಾಡುವುದಿಲ್ಲ. ಒಳಉಡುಪು ಧರಿಸಿರುವ ಮಹಿಳೆಯರ ಜಾಹೀರಾತುಗಳನ್ನು ಸತ್ಯವೆಂದೇ ನಂಬಿ ಮೋಸ ಹೋಗುವವರೇ ಜಾಸ್ತಿ. ಇಂಥ ಉಡುಪು ಧರಿಸಿದರೆ ಇಂತಿಂಥ ಆಭಾಸಗಳು ಜರುಗಬಹುದು ಎಂದು ಅರಿವು ಕೂಡ ಇರುವುದಿಲ್ಲ.
ಆದರೆ, ಇಂಥದೊಂದು ಸಾಹಸಕ್ಕೆ ಕೆನಡಾದ ಕಂಪನಿಯೊಂದು ಕೈಹಾಕಿದೆ. ಕಂಚುಕ ಧರಿಸಿದ ಸುಂದರ ಮಹಿಳೆಯರ ಚಿತ್ರಗಳ ಬದಲು, ಸರಿಹೊಂದದ ಕಂಚುಕ ಧರಿಸಿದ ಮಹಿಳೆಯರ 'ಭಯಾನಕ' ಚಿತ್ರಗಳ ಮುಖಾಂತರ ಒಳಉಡುಪುಗಳ ಕುರಿತಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದೆ. ಈ ಬಗ್ಗೆ ಕಾಳಜಿ ತೋರಿದರೆ ಸ್ತನಗಳು ಜೋತುಬೀಳುವುದನ್ನು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ತಪ್ಪಿಸಲು ಸಾಧ್ಯ ಎಂದು ಜಗತ್ತಿಗೆ ಸಾರುತ್ತಿದೆ.