For Quick Alerts
ALLOW NOTIFICATIONS  
For Daily Alerts

ಬೆರಳಂಚಿನಲ್ಲಿ ಅಡಗಿದೆ ನಿಮ್ಮ ಸೌಂದರ್ಯ

|
Nail care tips
ಆಕರ್ಷಕ ಕೈಗಳನ್ನು ಪಡೆಯಬೇಕೆಂದು ವಿಧವಿಧ ನೈಲ್ ಪಾಲಿಶ್, ಮೆನಿಕ್ಯೂರ್ ಮಾಡಿಸುವವರು ಇನ್ನೊಂದು ಮುಖ್ಯ ಅಂಶ ಮರೆತುಬಿಟ್ಟಿರುತ್ತಾರೆ. ಉಗುರನ್ನು ಶುದ್ಧವಾಗಿಟ್ಟುಕೊಳ್ಳದೆ ಏನೇ ಅಲಂಕಾರ ಮಾಡಿಕೊಂಡರೂ ಅದು ವ್ಯರ್ಥ.

ಆದ್ದರಿಂದ ಉಗುರನ್ನು ಶುದ್ಧವಾಗಿರಿಸುವ ಆರು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

1. ವಾರಕ್ಕೆ ಒಂದು ಬಾರಿ ನೇಲ್ ಪಾಲಿಶ್ ತೆಗೆಯಬೇಕು. ಯಾವಾಗಲೂ ನೇಲ್ ಪಾಲಿಶ್ ಬಳಸುವುದನ್ನು ಕಡಿಮೆಮಾಡಬೇಕು. ನೇಲ್ ಪಾಲಿಶ್ ತೆಗೆದುಹಾಕದೆ ಹಾಗೇ ಇದ್ದರೆ ಅದರಲ್ಲಿನ ಕೆಮಿಕಲ್ ಉಗುರಿನ ನೈಸರ್ಗಿಕ ಬಣ್ಣವನ್ನು ಹಾಳು ಮಾಡುತ್ತದೆ.

2. ಉಗುರಿನ ಸುತ್ತ ಮತ್ತು ಸಂದುಗಳ ಚರ್ಮವನ್ನು ಶುಚಿಗೊಳಿಸಬೇಕು. ಕಿತ್ತು ಬಂದಿರುವ ಚರ್ಮ ನಿರ್ಜೀವ ಕಣವಿದ್ದಂತೆ, ಇದರಲ್ಲಿ ಕೊಳೆ ತುಂಬಿಕೊಂಡರೆ ಅದು ಉಗುರಿಗೂ ತೊಂದರೆಯುಂಟು ಮಾಡಿ ನೋವನ್ನು ತರುತ್ತದೆ.

3. ನಿಮ್ಮ ಉಗುರುಗಳು ಹೊಳೆಯುವಂತೆ ಮತ್ತು ಆರೋಗ್ಯಕರವಾಗಿರಬೇಕೆಂದರೆ, ಉಗುರುಗಳನ್ನು ಆಗಾಗ್ಗೆ ಕೊಬ್ಬರಿಎಣ್ಣೆ ಅಥವಾ ಹರಳೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು.

4. ಪ್ರತಿನಿತ್ಯ ಅನೇಕ ಕೆಲಸ ಮಾಡುವುದರಿಂದ ಕೈಗಳು ಬಹುಬೇಗನೆ ಸೋಂಕಿಗೆ ಒಳಗಾಗುತ್ತದೆ. ಆದ್ದರಿಂದ ಬಿಸಿ ನೀರಿಗೆ ಸೋಪು ಬೆರೆಸಿ ಅದರಲ್ಲಿ ಕೈ ಅದ್ದಿ ಮೃದುವಾಗಿ ಉಜ್ಜಿಕೊಳ್ಳಬಹುದು ಅಥವಾ ನಿಂಬೆ ಹೋಳಿನಿಂದ ಬೆರಳುಗಳನ್ನು ಸುರುಳಿಯಾಕಾರವಾಗಿಯೂ ಉಜ್ಜಿಕೊಂಡರೆ ಕೊಳೆ ಹೊರಟುಹೋಗುತ್ತದೆ.

5. ನಿಮ್ಮ ಉಗುರುಗಳಿಗೆ ಆಕಾರ ನೀಡುವಾಗ ಒಂದೇ ಬದಿಯಿಂದ ನೀಡಬೇಕು. ಇಲ್ಲದಿದ್ದರೆ ಉಗುರಿನ ಆಕಾರ ಕೆಡುವುದರೊಂದಿಗೆ ಉಗುರಿನ ಗುಣಮಟ್ಟವೂ ಕುಂದುತ್ತದೆ.

6. ಪೋಷಕಾಂಶಯುಕ್ತ ಆಹಾರವಿರಲಿ. ಕ್ಯಾಲ್ಸಿಯಂ ಹೆಚ್ಚಿರುವ ಹಾಲು, ಹಣ್ಣುಗಳ ಸೇವನೆ ಉಗುರಿಗೆ ಸ್ವಾಸ್ಥ್ಯವನ್ನು ನೀಡುತ್ತದೆ.

English summary

Nail Care Tips | 6 Tips for Good Nails | ಉಗುರಿನ ಪೋಷಣೆಗೆ ಸಲಹೆ | ಉಗುರಿನ ಸ್ವಾಸ್ಥ್ಯಕ್ಕೆ ಆರು ಸೂತ್ರ

At present nail art has gained popularity. But all the nail decoration and nail polish looks beautiful on beautiful and healthy nails. Thus, nail care is important. Lets look at some nail care tips.
Story first published: Monday, September 12, 2011, 16:09 [IST]
X
Desktop Bottom Promotion