For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಹೆಚ್ಚು ವರ್ಷ ಎದೆಹಾಲು ನೀಡುವುದರ ಪ್ರಯೋಜನಗಳು ಹಾಗೂ ಅಡ್ಡಪರಿಣಾಮಗಳೇನು ಗೊತ್ತಾ?

|

ಅನೇಕರು ಮಗುವಿಗೆ ಎದೆಹಾಲು ಬಿಡಿಸಲು ಸೂಕ್ತ ಸಮಯ ಯಾವುದು, ಎಷ್ಟು ವರ್ಷದವರೆಗೂ ಮಗುವಿಗೆ ಎದೆಹಾಲು ನೀಡಬೇಕು ಎನ್ನುವ ಕನ್‌ಫ್ಯೂಶನ್‌ನಲ್ಲಿರುತ್ತಾರೆ. ಈ ವಿಷಯದಲ್ಲಿ ವೈದ್ಯರ ಸಲಹೆಗಿಂತ ಮನೆಯವರ, ಅವರಿವರ ಮಾತು ಕೇಳುವುದು ಹೆಚ್ಚು. ಕೆಲವರು ಮಗುವಿಗೆ ಬೇಗನೆ ಎದೆಹಾಲು ಬಿಡಿಸುವುದು ಒಳ್ಳೆಯದು. ಮಗು ಬೆಳೆಯುತ್ತಿದ್ದಂತೆ ಬಿಡಿಸೋದು ಕಷ್ಟ ಎಂದುಬಿಡುತ್ತಾರೆ.

breastfeeding

ಆದರೆ ಕೆಲವು ಮಗುವಿಗೆ ಎರಡುವರ್ಷದವರೆಗೂ ಕೊಡಬೇಕು, ಅದಕ್ಕಿಂತ ಹೆಚ್ಚೆಂದರೆ ಮೂರ್ನಾಲ್ಕು ವರ್ಷದವರೆಗೂ ನೀಡಬಹುದು ಎನ್ನುತ್ತಾರೆ. ಈಗಿನ ಕಾಲದಲ್ಲಿ ಎಲ್ಲರೂ ದುಡಿವ ಮಹಿಳೆಯರೇ ಹಾಗಾಗಿ ಬೇಗನೇ ಎದೆಹಾಲು ಬಿಡಿಸಿಬಿಡುತ್ತಾರೆ. ಆದರೆ ಕೆಲವರು ಅವರದೇ ನಿರ್ಧಾರದಿಂದಲೋ, ಬೇರೆಯವರ ಕಿವಿಮಾತಿಗೋ ಅಥವಾ ಮಗು ಎದೆಹಾಲು ಬಿಡದೇ ಇದ್ದರೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದವರೆಗೂ ಎದೆಹಾಲು ನೀಡುವುದನ್ನು ಮುಂದುವರೆಸುತ್ತಾರೆ. ಇದು ಸರಿಯೇ, ಇದರಿಂದ ಏನಾದರೂ ಸಮಸ್ಯೆಯೇ ಎನ್ನುವ ಚಿಂತೆ ನಿಮಗಿದ್ದಲ್ಲಿ ಈ ಸ್ಟೋರಿ ಓದಿ.

1. ಎದೆಹಾಲು ಮುಂದುವರಿಸುವುದರ ಪ್ರಯೋಜನಗಳು

1. ಎದೆಹಾಲು ಮುಂದುವರಿಸುವುದರ ಪ್ರಯೋಜನಗಳು

ಹುಟ್ಟಿನಿಂದ ಆರು ತಿಂಗಳವರೆಗೆ ವಿಶೇಷವಾಗಿ ಸ್ತನ್ಯಪಾನ ಮಾಡಿಸಿ, ಆರು ತಿಂಗಳ ಕೊನೆಯಲ್ಲಿ ಪೂರಕ ಆಹಾರವನ್ನು ಆರಂಭಿಸಿ ಹಾಗೂ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೂ ಎದೆಹಾಲು ನೀಡಬಹುದು ಎನ್ನುತ್ತದೆ WHO. ಹೌದು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಸ್ತನ್ಯಪಾನ ಮುಂದುವರಿಸುವುದರಿಂದ ಮಗುವಿಗೆ ಮತ್ತು ತಾಯಿಗೂ ಭಾವನಾತ್ಮಕ ಹಾಗೂ ಆರೋಗ್ಯಕರ ಪ್ರಯೋಜನಗಳೂ ಇದೆ. ಅದೇನೆಂದರೆ,

* ಎಷ್ಟು ವರ್ಷದವರೆಗೂ ಹಾಲುಣಿಸುತ್ತೀರೋ ಅಷ್ಟು ವರ್ಷದವರೆಗೆ ಮಗುವಿಗೆ ರೋಗನಿರೋಧಕ ಶಕ್ತಿಯು ತಾಯಿಯ ಎದೆಹಾಲಿನಿಂದಲೇ ದೊರೆಯುತ್ತದೆ.

* ಎರಡು ವರ್ಷದವರೆಗೂ ಹಾಲು ನೀಡುವುದರಿಂದ ಮಗುವಿನ ದೇಹಕ್ಕೆ ಬೇಕಾಗುವ ಮೂವತ್ತೈದರಿಂದ ನಲವತ್ತು ಶೇಕಡಾ ಕ್ಯಾಲೋರಿ ಮಗುವಿಗೆ ತಾಯಿಯ ಎದೆಹಾಲಿನಿಂದಲೇ ಸಿಗುತ್ತದೆ. ಹೆಚ್ಚು ಕೊಬ್ಬಿನ ಅಂಶವು ವಿಟಮಿನ್‌ ಎ ಮತ್ತು ವಿಟಮಿನ್‌ ಡಿನಂತಹ ಕೊಬ್ಬು ಕರಗುವ ವಿಟಮಿನ್‌ಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ನ ಪ್ರಮಾಣವೂ ಕೂಡಾ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

* ಹೆಚ್ಚು ಸಮಯ ಎದೆಹಾಲು ನೀಡುವುದರಿಂದ, ಇತರ ಆಹಾರಗಳ ಮೇಲಿನ ಕುತೂಹಲವೂ ಹೆಚ್ಚುತ್ತದೆ, ಎದೆಹಾಲನ್ನು ಹೊರತುಪಡಿಸಿ ಇತರ ಆಹಾರವನ್ನೂ ಗಮನಿಸಿ ಮಗು ಸೇವಿಸಲು ಪ್ರಯತ್ನಿಸುವುದು.

2. ರೋಗ ನಿರೋಧಕಶಕ್ತಿ

2. ರೋಗ ನಿರೋಧಕಶಕ್ತಿ

* ಇನ್ನೊಂದು ಪ್ರಯೋಜನವೆಂದರೆ ಅನಾರೋಗ್ಯದ ಸಮಯದಲ್ಲಿ ಹೆಚ್ಚಿನ ಮಕ್ಕಳು ಆಹಾರ ಸೇವಿಸಲು ನಿರಾಕರಿಸುತ್ತಾರೆ, ಈ ಸಮಯದಲ್ಲಿ ಎದೆಹಾಲು ಮಗುವಿನ ದೇಹದಲ್ಲಿ ದ್ರವಾಂಶ ಹಾಗೂ ಪೋಷಕಾಂಶಗಳನ್ನೂ ಒದಗಿಸುತ್ತೆ. ಅಲ್ಲದೇ ಎದೆಹಾಲಿನಲ್ಲಿರುವ ರೋಗ ನಿರೋಧಕಗಳು ಮಗು ಬೇಗನೆ ಅನಾರೋಗ್ಯದಿಂದ ಚೇತರಿಸಿಕೊಳ್ಳುವಂತೆ ಮಾಡುತ್ತದೆ.

* ಸ್ತನ್ಯಪಾನವು "ಮೊದಲ 1000 ದಿನಗಳ ಪೋಷಣೆ" ಯ ಪ್ರಮುಖ ಅಂಶವಾಗಿದೆ, ಇದು ಮಗುವಿನ ಬೆಳವಣಿಗೆಯನ್ನು ಸುಧಾರಿಸಲು ಗರ್ಭಾವಸ್ಥೆಯಿಂದ ಪ್ರಾರಂಭಿಸಿ ಮಗುವಿನ ಜನನವಾದ ನಂತರ ಎರಡು ವರ್ಷಗಳವರೆಗೆ ಎದೆಹಾಲು ರೋಗನಿರೋಧಕ ಅಂಶಗಳು ಮತ್ತು ಅನೇಕ ಪೋಷಕಾಂಶಗಳ ಮೂಲವಾಗಿರುತ್ತದೆ.

* ವರ್ಕಿಂಗ್‌ನಲ್ಲಿರುವ ತಾಯಂದಿರು ಎದೆಹಾಲು ಬೇಗನೆ ಬಿಡಿಸುತ್ತಾರೆ. ಆದರೆ ಸ್ತನ್ಯಪಾನವು ಮಗುವಿನೊಂದಿಗೆ ಮತ್ತೆ ಒಂದಾಗಲು ಪರಿಣಾಮಕಾರಿ ವಿಧಾನ. ಕೆಲಸಕ್ಕಾಗಿ ಕೆಲಸಮಯ ದೂರವಿರಬೇಕಾಗಿ ಬಂದರೆ, ಎದೆಹಾಲು ಕುಡಿಸುವ ಮೂಲಕ ಮತ್ತೆ ಮಗುವಿನೊಂದಿಗೆ ಅದೇ ಬಂಧವನ್ನು ಮುಂದುವರಿಸಬಹುದು.

3. ಮಾರಣಾಂತಿಕ ಕಾಯಿಲೆಯಿಂದ ಮುಕ್ತಿ

3. ಮಾರಣಾಂತಿಕ ಕಾಯಿಲೆಯಿಂದ ಮುಕ್ತಿ

* ಎದೆಹಾಲನ್ನು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದವರೆಗೂ ನೀಡುವುದರಿಂದ ಬಾಲ್ಯದಲ್ಲಿ ಬರುವ ಕ್ಯಾನ್ಸರ್‌, ಟೈಪ್‌ 1, ಟೈಪ್‌ 2 ಮಧುಮೇಹದ ಅಪಾಯ ತುಂಬಾ ಕಡಿಮೆಯಿರುತ್ತದೆ. ಅಲ್ಲದೇ ಇದು ಬಾಲ್ಯ, ಹದಿಹರೆಯದಲ್ಲಿ ಅಥವಾ ಪ್ರೌಢಾವಸ್ಥೆಯಲ್ಲಿ ಸ್ಥೂಲಕಾಯದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

* ಹೆಚ್ಚು ವರ್ಷದವರೆಗೂ ಮಗುವಿಗೆ ಎದೆಹಾಲು ಕುಡಿಸುವುದರಿಂದ ತಾಯಂದಿರಿಗೂ ಆರೋಗ್ಯ ಪ್ರಯೊಜನಗಳಿವೆ. ಅದೇನೆಂದರೆ ಮೆನೋಪಾಸ್‌ ಮುಂಚಿತವಾಗಿ ಬರುವ ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್‌ನ ಅಪಾಯದ ವಿರುದ್ಧ ರಕ್ಷಣೆ ನೀಡುತ್ತದೆ. ಟೈಪ್‌ 2 ಮಧುಮೇಹ ಹಾಗೂ ಹೃದಯ ರಕ್ತನಾಳದ ಕಾಯಿಲೆಯ ಅಪಾಯವೂ ಕಡಿಮೆ.

4. ದೀರ್ಘಾವಧಿಯ ಸ್ಯನ್ಯಪಾನ್ಯದಿಂದ ಸಮಸ್ಯೆಯಾಗುವುದೇ..

4. ದೀರ್ಘಾವಧಿಯ ಸ್ಯನ್ಯಪಾನ್ಯದಿಂದ ಸಮಸ್ಯೆಯಾಗುವುದೇ..

ಮಗುವಿಗೆ ಹೆಚ್ಚು ವರ್ಷದವರೆಗೂ ಸ್ತನ್ಯಪಾನದಿಂದ ಸಮಸ್ಯೆ ಏನಿರದಿದ್ದರೂ ಹಲ್ಲಿನ ಕ್ಷಯದ ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಬಾಯಿಯ ಶುಚಿತ್ವವನ್ನು ಕಾಪಾಡಿಕೊಳ್ಳದಿರುವುದು ಹಾಗೂ ರಾತ್ರಿ ಬಾಟಲಿಯಲ್ಲಿ ಎದೆಹಾಲು ನೀಡುವುದು. ಇದಕ್ಕೆ ಪರಿಹಾರವೆಂದರೆ ರಾತ್ರಿ ಬಾಟಲಿಯಲ್ಲಿ ಹಾಲನ್ನು ನೀಡಬೇಡಿ. ಪ್ರತಿ ಊಟದ ನಂತರ ಬಾಯನ್ನು ಸ್ವಚ್ಛಗೊಳಿಸಿ, ನೀರು ಕುಡಿಸಿ.

ವೈದ್ಯರ ಸಲಹೆಯಂತೆ ಅವರೇ ಸೂಚಿಸಿದ ಟೂತ್‌ಪೇಸ್ಟ್‌ನಿಂದ ಮಗುವಿನ ಹಲ್ಲುಗಳನ್ನು ಮೃದುವಾಗಿಯೇ ಉಜ್ಜಿ. ಯಾಕೆಂದರೆ ಮಗುವಿನ ವಸಡುಗಳು ಸೂಕ್ಷ್ಮವಾಗಿರುತ್ತದೆ. ಹಲ್ಲಿನ ಕ್ಷಯ ಅಂದರೆ ಹಲ್ಲಿನ ಹುಳುಕು ಕಬ್ಬಿಣಾಂಶದ ಕೊರತೆಯ ಲಕ್ಷಣವೂ ಆಗಿರಬಹುದು ಹಾಗಾಗಿ ಮಕ್ಕಳಿಗೆ ಒಂದು ವರ್ಷವಾದ ನಂತರವೂ ಪೌಷ್ಟಿಕಾಂಶದ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ. ಮಗುವಿಗೆ ಎದೆಹಾಲಿನೊಂದಿಗೆ ಕಬ್ಬಿಣಾಂಶಭರಿತ ಆಹಾರವನ್ನೂ ನೀಡಿ.

ಮಗುವಿಗೆ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚು ಅಂದರೆ ನಾಲ್ಕು ವರ್ಷದವರೆಗೂ ಎದೆಹಾಲು ನೀಡಬಹುದು, ಮುಜುಗರಪಟ್ಟುಕೊಳ್ಳಬೇಡಿ, ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳದಿರಿ, ತಾಯಿಗೆ ಮಗುವಿನ ಆರೋಗ್ಯಕ್ಷೇಮ ಮುಖ್ಯ. ಬೇಗನೇ ಹಾಲುಬಿಡಿಸುವುದರ ಬಗ್ಗೆ ಯೋಚಿಸಬೇಡಿ. ಮಗು ತಾನಾಗಿ ಎದೆಹಾಲುಬಿಡುವವರೆಗೂ ಎದೆಹಾಲು ನೀಡುವುದು ಉತ್ತಮ.

English summary

Benefits and Disadvantages of Extended Breastfeeding in Kannada

Here we are discussing about Benefits and Disadvantages of Extended Breastfeeding in Kannada. Read moe.
Story first published: Thursday, August 4, 2022, 11:55 [IST]
X
Desktop Bottom Promotion