For Quick Alerts
ALLOW NOTIFICATIONS  
For Daily Alerts

ಎದೆಹಾಲು ಮತ್ತು ಋತುಚಕ್ರದ ಪ್ರಮುಖ ಸತ್ಯಗಳು

By Poornima Hegade
|

ಮಹಿಳೆಯ ಜೀವನದ ಅತ್ಯಂತ ಪ್ರಮುಖವಾದ ಘಟ್ಟ ಗರ್ಭಧಾರಣೆ. ಇದೊಂದು ವಿಷಿಷ್ಟ ಮತ್ತು ಅನನ್ಯ ಭಾವ. ತನ್ನಿಂದಾಗಿ ಹೊಸ ಜೀವಕ್ಕೆ ಜನ್ಮ ಸಿಗುತ್ತಿದೆ ಎಂಬ ಖುಷಿ. ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗುತ್ತಿದೆ ಎಂಬ ಸಂತೋಷ, ಸಂಭ್ರಮ. ಬರಿ ಮಹಿಳೆಗೆ ಅಲ್ಲ ಇದು ಕುಟುಂಬದ ಸದಸ್ಯರೆಲ್ಲರಿಗೂ ವಿಶೇಷವೇ ಆದರೂ ಅದರ ಅನುಭವ ಹೆಚ್ಚಾಗಿ ಸಿಗುವುದು ಮಹಿಳೆಗೆ.

ಈ ಎಲ್ಲಾ ಖುಷಿ, ಸಂಭ್ರಮಗಳ ನಡುವೆ ಇದು ಬಹಳ ಸಂದೇಹಗಳು ಮತ್ತು ಗೊಂದಲಗಳನ್ನು ಸೃಷ್ಟಿಸುವ ಅವಧಿಯೂ ಹೌದು. ಮಹಿಳೆ ಬಾಣಂತಿ ಆದ ಮೇಲೆ ಮುಂದಿನ ಮುಖ್ಯ ಸಮಸ್ಯೆ ಬರುವುದು ಋತುಚಕ್ರ ಸಾಮಾನ್ಯವಾಗಿರುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ. ಋತುಚಕ್ರದಿಂದಾಗಿ ಎದೆಹಾಲು ಉಣಿಸುವುದರಲ್ಲಿ ಬದಲಾವಣೆಗಳು ಆಗುತ್ತವೆ ಎಂಬ ಬಗ್ಗೆಯೂ ನೀವು ಓದಿರಬಹುದು ಅಥವಾ ಕೇಳಿರಬಹುದು. ಎಲ್ಲಾ ಮಹಿಳೆಯರಲ್ಲಿ ಋತುಚಕ್ರ ಬದಲಾಗಿರುತ್ತದೆ. ಋತುಚಕ್ರವನ್ನು ಎಲ್ಲಾ ಮಹಿಳೆಯರಿಗೆ ಒಂದೇ ಸಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಬಾಣಂತಿ ಆದಮೇಲೆ ಹಿಂದಿನ ರೀತಿಯಲ್ಲೇ ಋತುಚಕ್ರ ಮುಂದುವರೆಯುತ್ತದೆ ಎಂಬುದೂ ಖಾತರಿಯಿಲ್ಲ. ಎದೆ ಹಾಲು ಉಣಿಸುವುದು ನಿಮ್ಮ ಋತುಚಕ್ರವನ್ನು ಹಲವು ತಿಂಗಳ ತನಕ ನಿಲ್ಲಿಸಬಹುದು ಎಂಬುದು ಗೊತ್ತಿರುವ ಸತ್ಯ. ಆದರೆ ನಾವು ಕಾಣುವುದು ಇದಕ್ಕಿಂತ ಬೇರೆಯೇ ಆಗಿದೆ.

ಹಲವು ಮಹಿಳೆಯರು ಎದೆಹಾಲು ಉಣಿಸುತ್ತಿದ್ದರೂ ಎರಡೇ ತಿಂಗಳುಗಳಲ್ಲಿ ತಮ್ಮ ಋತುಚಕ್ರವನ್ನು ಮರಳಿ ಯಥಾ ಸ್ಥಿತಿಯಲ್ಲಿ ಪಡೆಯುತ್ತಾರೆ. ಇದು ನಿಮ್ಮನ್ನು ಗೊಂದಲದಲ್ಲಿಡುವುದಂತೂ ನಿಜ. ನೀವು ಹೆಚ್ಚಾಗಿ ಎದೆ ಹಾಲು ಉಣಿಸಿದಷ್ಟೂ ನಿಮ್ಮ ಋತು ಚಕ್ರ ನಿಧಾನವಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಎದೆ ಹಾಲು ಉಣಿಸುವ ಆವರ್ತನವನ್ನು ಕಡಿಮೆ ಮಾಡಿದಷ್ಟೂ ನೀವು ಬೇಗನೆ ಋತುಚಕ್ರವನ್ನು ಮರಳಿ ಪಡೆಯುತ್ತೀರಿ.

Does Menstrual Cycle Affect Breastfeeding

ಒಮ್ಮೆ ನೀವು ಋತುಚಕ್ರವನ್ನು ಮರಳಿ ಪಡೆದ ಮೇಲೆ ಇದು ನಿಮ್ಮ ಎದೆಹಾಲು ಉಣಿಸುದರ ಮೇಲೆ ಪ್ರಭಾವ ಬೀರುತ್ತದೆ. ಇಲ್ಲಿ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಇದು ನೀವು ಮಗುವಿಗೆ ಗಟ್ಟಿ ಆಹಾರ ನೀಡಲು ಆರಂಭಿಸಿದ ಸಮಯ, ಮಗು ರಾತ್ರಿಯಲ್ಲಿ ಮಲಗುವ ಸಮಯ ಹಾಗೂ ನಿಮ್ಮ ಮಗು ಬಾಟಲಿಯ ಹಾಲನ್ನು ತೆಗೆದುಕೊಳ್ಳುತ್ತದೆಯೇ ಇಲ್ಲವೇ ಎಂಬೆಲ್ಲಾ ಅಂಶಗಳನ್ನು ಅವಲಂಬಿಸಿದೆ. ನಿಮ್ಮ ಋತುಚಕ್ರಗಳು ಎದೆಹಾಲು ಉಣಿಸುವುದರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ.

ಫಲವಂತಿಕೆ ಮರಳಿ ಪಡೆಯುತ್ತೀರಿ
ನಿಮ್ಮ ಮೊದಲ ಋತುಚಕ್ರದ ಆರಂಭಕ್ಕಿಂತಲೂ ಮುನ್ನವೇ ಮಹಿಳೆ ತನ್ನ ಫಲವಂತಿಕೆಯನ್ನು ಮರಳಿ ಪಡೆದಿರುತ್ತಾಳೆ. ಆದ್ದರಿಂದ ಈ ಸಂದರ್ಭದಲ್ಲಿ ಮತ್ತೆ ಗರ್ಭಧಾರಣೆ ಮಾಡುವ ಅವಕಾಶಗಳು ಹೆಚ್ಚಿರುತ್ತವೆ. ಗರ್ಭಧಾರಣೆ ಆದ ಮೇಲೆ ನೀವು ಒತ್ತಾಯಪೂರ್ವಕವಾಗಿ ಎದೆಹಾಲುಣಿಸುವುದನ್ನು ನಿಲ್ಲಿಸಬೇಕಾಗುತ್ತದೆ. ಇದು ಋತುಚಕ್ರ ಎದೆಹಾಲನ್ನು ಉಣಿಸುವುದರ ಮೇಲೆ ಪ್ರಭಾವ ಬೀರುವ ಒಂದು ಅಂಶ

ಹಾರ್ಮೋನುಗಳಲ್ಲಿ ಬದಲಾವಣೆ: ಋತುಚಕ್ರದೊಂದಿಗೆ ಸಂಬಂಧ ಹೊಂದಿರುವ ಹಾರ್ಮೋನುಗಳ ಬದಲಾವಣೆ ಎದೆಹಾಲುಣಿಸುವ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮನಸ್ಥಿತಿಯ ಮೇಲೆ ಮತ್ತು ದೈಹಿಕವಾಗಿಯೂ ಬಹಳ ಪರಿಣಾಮ ಬೀರುತ್ತದೆ. ಇದರಿಂದಾಗಿ ಎದೆಹಾಲುಣಿಸುವ ಸಮಯದಲ್ಲಿ ನೋವಾಗುವ ಸಾಧ್ಯತೆಗಳಿವೆ.

ರುಚಿಯಲ್ಲಿ ಬದಲಾವಣೆ: ಹಾರ್ಮೋನುಗಳ ಬದಲಾವಣೆ ನಿಮ್ಮ ಎದೆಹಾಲಿನ ರುಚಿಯ ಮೇಲೂ ಬದಲಾವಣೆ ತರುವ ಸಾಧ್ಯತೆಗಳಿವೆ. ಇದರಿಂದಾಗಿ ಮಗು ಹಾಲನ್ನು ಸೇವಿಸದೇ ಇರುವ ಸಾಧ್ಯತೆಗಳಿವೆ. ಇದೂ ಕೂಡ ಋತುಚಕ್ರ ಮಹಿಳೆಯನ್ನು ಬಾಧಿಸುವ ದಾರಿಯಾಗಿದೆ.

ತಲೆನೋವು: ಇದು ಬಹಳ ಸಾಮಾನ್ಯವಾದ ಲಕ್ಷಣವಾಗಿದೆ. ಇದು ನಿಮ್ಮನ್ನು ಬೇರೆ ಯಾವುದೇ ಕೆಲಸದ ಮೇಲೆ ಗಮನ ಕೊಡದಂತೆ ಮಾಡುತ್ತದೆ. ಇದೆಲ್ಲದಕ್ಕೂ ಹಾರ್ಮೋನುಗಳಲ್ಲಿ ಆಗುವ ಬದಲಾವಣೆಗಳೇ ಕಾರಣ.

ಕಡಿಮೆಯಾದ ಹಾಲು: ಹಾರ್ಮೋನುಗಳಲ್ಲಿನ ಬದಲಾವಣೆ ತಾಯಿಯ ಎದೆಹಾಲಿನ ಮಟ್ಟವನ್ನು ಕಡಿಮೆ ಮಾಡಬಹುದು. ಇದಕ್ಕಾಗಿಯೇ ತಾಯಿಯ ರಕ್ತದ ಮಟ್ಟವನ್ನು ಹೆಚ್ಚಿಸುವ ದಾರಿಗಳನ್ನು ಕಂಡುಕೊಳ್ಳುವುದು ಬಹಳ ಮುಖ್ಯ.

ಮೊಲೆಯಲ್ಲು ನೋವು: ಋತುಚಕ್ರದ ಸಮಯದಲ್ಲಿ ಮೊಲೆಯಲ್ಲಿ ಕಾಣಿಸಿಕೊಳ್ಳೂವ ನೋವು ಇನ್ನೊಂದು ಪ್ರಮುಖ ಸಮಸ್ಯೆ. ಇದರಿಂದಾಗಿ ಮಗುವಿಗೆ ಹಾಲುಣಿಸಲು ಕಷ್ಟವಾಗುತ್ತದೆ. ಇದರಿಂದ ಹೊರಬರಲು ಯಾವುದಾದರೂ ದಾರಿಯನ್ನು ತಾಯಿ ಕಂಡುಕೊಳ್ಳಬೇಕಾಗುತ್ತದೆ. ನಿಪ್ಪಲ್ ಶೀಲ್ಡ್ ಅನ್ನು ಬಳಸುವುದರ ಮೂಲಕ ಇದನ್ನು ಕಡಿಮೆ ಮಾಡಬಹುದು.

ಎದೆಹಾಲುಣಿಸುವುದನ್ನು ನಿಲ್ಲಿಸದಿರಿ: ಋತುಚಕ್ರ ಆರಂಭವಾದ ಮೇಲೆ ಇಂತಹ ಕೆಲವು ಸಮಸ್ಯೆಗಳು ಸಾಮಾನ್ಯ. ಋತುಚಕ್ರದ ಆರಂಭ ಎದೆಹಾಲುಣಿಸುವ ಕೊನೆಯಲ್ಲ ಎಮ್ದು ನೆನಪಿನಲ್ಲಿಡಿ. ಇದರಿಂದಾಗಿ ಉತ್ಪತ್ತಿಯಾದ ಎದೆ ಹಾಲು ಮಗುವಿಗೆ ಸೇರುವುದರ ಜೊತೆಗೆ ತಾಯಿ ಎದುರಿಸಬಹುದಾದ ಇನ್ನಿತರ ಸಮಸ್ಯೆಗಳಿಂದಲೂ ಮುಕ್ತಿ ಸಿಗುತ್ತದೆ. ಇದು ಬಹಳ ಮುಖ್ಯವಾದ ಹಾಗೂ ಹೆಚ್ಚಿನವರು ನಿರ್ಲಕ್ಷಿಸುವ ಸಂಗತಿಯಾಗಿದೆ.

English summary

Does Menstrual Cycle Affect Breastfeeding

Pregnancy itself is a time of confusions and doubts. Once the pregnancy and delivery is over, the next thing that will keep you anxious will be your menstrual cycle. You might have heard that the menstrual cycle affects breastfeeding. Every woman is unique and so is their menstrual cycle.
Story first published: Saturday, December 21, 2013, 11:30 [IST]
X
Desktop Bottom Promotion