ಹೊಸ ಅವತಾರಗಳಲ್ಲಿ ಐಶ್ವರ್ಯ ರೈ!

By:
Subscribe to Boldsky

ಸೌಂದರ್ಯದ ಖನಿ ಐಶ್ವರ್ಯ ರೈ ಬಚ್ಚನ್. ಹೆರಿಗೆಯ ನಂತರ ಸ್ವಲ್ಪ ದಪ್ಪಗಾಗುವುದು ಸಹಜ. ಐಶ್ವರ್ಯ ಕೂಡ ಸ್ವಲ್ಪ ದುಂಡಗೆ ಆದರು. ಆಗ ಕೆಲವೊಂದು ಮೀಡಿಯದವರು ಏನೋ ಆಗಬಾರದು ಆದಂತೆ ಆಡಿದ್ದನ್ನು ನೆನಪಿಸಿಕೊಳ್ಳಬಹುದು. ಸ್ವಲ್ಪ ದುಂಡಗೆ ಆದರೂ ಕೂಡ ಐಶ್ವರ್ಯಳ ಸೌಂದರ್ಯ ಕಡಿಮೆಯಾಗಲಿಲ್ಲ ಮತ್ತು ಐಶ್ವರ್ಯ ಜನರ ಮಾತಿಗೆ ಐಶ್ವರ್ಯ ತಲೆ ಕೆಡಿಸಲಿಲ್ಲ.

ನಂತರ ಕೇನ್ಸ್ ಚಿತ್ರೋತ್ಸವದಲ್ಲಿ ಭಾಗವಹಿಸಿದಾಗ ಅದರಲ್ಲಿ ಐಶ್ವರ್ಯಳ ಡ್ರೆಸ್ಸಿಂಗ್ ಮತ್ತು ಸೌಂದರ್ಯಕ್ಕೆ ಇಡೀ ವಿಶ್ವವೇ ಮೆಚ್ಚುಗೆಯನ್ನು ವ್ಯಕ್ತ ಪಡಿಸಿತು. ನಂತರ ಕಲ್ಯಾಣ ಜ್ಯೂವೆಲರಿಯ ಜಾಹೀರಾತ್ ನಲ್ಲಿ ಮಾಡಲ್ ಆಗಿ ಬಂದಳು. ಈ ಜಾಹೀರಾತ್ ನಲ್ಲಿ ಒಂದೊಂದು ಭಂಗಿಯಲ್ಲೂ ಐಶು ತುಂಬಾ ಮುದ್ದಾಗಿ ಕಂಡು ಬಂದಿದ್ದಾಳೆ.

ಎಷ್ಟೇ ಸೌಂದರ್ಯವಿದ್ದರೂ ಅದಕ್ಕೆ ಒಪ್ಪುವ ಡ್ರೆಸ್ಸಿಂಗ್ ಇದ್ದರೆ ಮಾತ್ರ ತುಂಬಾ ಆಕರ್ಷಕವಾಗಿ ಕಾಣಲು ಸಾಧ್ಯ. ಈ ಜಾಹೀರಾತಿಗೆ ಅವಳ ರೂಪ-ಲಾವಣ್ಯವನ್ನು ಎತ್ತಿ ಹಿಡಿದ ಮೇಕಪ್ ಹೇಗಿತ್ತು ಎಂದು ತಿಳಿಯಲು ಮುಂದೆ ಓದಿ.

ಮಧುಮಗಳಿನ ಅವತಾರ

ಕಿತ್ತಳೆ ಬಣ್ಣದ ಲೆಹಂಗಾ ಮತ್ತು ಕೆಂಪು ಬಣ್ಣದ ಮುಕ್ಕಾಲು ತೋಳಿನ ಬ್ಲೌಸ್ ನಲ್ಲಿ ಐಶ್ವರ್ಯ ಸೌಂದರ್ಯ ದೇವತೆಯಂತೆ ಕಾಣಿಸುತ್ತಾಳೆ. ಆಕರ್ಷಕ ವಿನ್ಯಾಸದ ಆಭರಣಗಳು, ಮುಖದಲ್ಲಿ ಸ್ವಲ್ಪ ನಾಚಿಕೆ, ಸಪೂರ ಮೈಕಟ್ಟಿನಲ್ಲಿ ಐಶ್ವರ್ಯಳನ್ನು ಒಮ್ಮೆ ನೋಡಿದವರಿಗೆ ಮತ್ತೊಮ್ಮೆ ನೋಡಬೇಕೆನಿಸುತ್ತದೆ. ಮದುವೆಗೆ ಚಿನ್ನ ತೆಗೆಯಲು ಬಂದ ಮಧುಮಗಳಿಗೆ ಐಶ್ವರ್ಯಳಂತೆ ಡ್ರೆಸ್ಸಿಂಗ್ ಮಾಡಬೇಕೆನಿಸಿದರೆ ಆಶ್ಚಯವಿಲ್ಲ.

ವಜ್ರದ ಹೊಳಪಿನಲ್ಲಿ ಹೊಳೆದ ಐಶ್ವರ್ಯ

ಈ ಚಿತ್ರದಲ್ಲಿ ಕೆಂಪು ಲೆಹಂಗಾ ಮತ್ತು ಕಪ್ಪು ಬ್ಲೌಸ್ ಗೆ ಬಿಳಿ ಬಣ್ಣದ ದುಪ್ಪಟ ಧರಿಸಿ, ಕುತ್ತಿಗೆಗೆ ವಜ್ರದ ನೆಕ್ಲೇಸ್ ಮತ್ತು ಕಿವಿಗೆ ವಜ್ರದ ಓಲೆ ಧರಿಸಿದ್ದು ಅವುಗಳಲ್ಲಿರುವ ಕೆಂಪು ಹರಳುಗಳು ಅವಳ ಸೌಂದರ್ಯದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.

ಸೌಂದರ್ಯ ದೇವತೆ

ದೇವತೆಯ ಅವತಾರದಲ್ಲಿ ದೇವತೆಗಳ ಚಿತ್ರದಲ್ಲಿ ಕಾಣುವಂತೆ ಐಶ್ವರ್ಯ ರೈಗೆ ಡ್ರೆಸ್ಸಿಂಗ್ ಮಾಡಲಾಗಿದೆ. ತಲೆಯಲ್ಲಿ ಕಿರೀಟ ಕೈಯಲ್ಲಿ ಬ್ರಹ್ಮ ಕಮಲ ಹಿಡಿದು ನಿಂತಿರುವ ಭಂಗಿಯಲ್ಲಿ ಸಾಕ್ಷಾತ್ ದೇವತೆ ನಿಂತಂತೆ ಕಾಣುತ್ತಾರೆ.

ಬ್ಲ್ಯಾಕ್ ಬ್ಯೂಟಿ:

ಕಪ್ಪು ಬಣ್ಣದ ಮೈಗೆ ಅಂಟಿದ ರೀತಿಯ ಬಟ್ಟೆಯಲ್ಲಿ ಚೇರ್ ನಲ್ಲಿ ಕೈಯಲ್ಲಿನ ಉಂಗುರವನ್ನು ಕಾಣುವಂತೆ ಕೂತಿರುವ ಫೋಟೊದಲ್ಲಿ ಮಾಡರ್ನ್ ಮತ್ತು ಹಾಟ್ ಲುಕ್ ನಿಂದ ಮಿಂಚಿದ್ದಾರೆ.

ಸಾಂಪ್ರದಾಯಕ ಉಡುಗೆ

ಕಲ್ಯಾಣ ಜ್ಯೂವೆಲರಿಯ ಬಿಡುಗಡೆಯ ಸಮಾರಂಭಕ್ಕೆ ಬರುವಾಗ ಐಶ್ವರ್ಯ ರೈ ಬಿಳಿ ಮತ್ತು ಚಿನ್ನದ ಬಣ್ಣದ ಲೆಹಂಗಾ ಧರಿಸಿ ,  ಸಾಂಪ್ರದಾಯಕವಾದ ಡ್ರೆಸ್ಸಿಂಗ್ ಮತ್ತು ತೆಳ್ಳನೆಯ ಮೈ ಕಟ್ಟಿನಲ್ಲಿ ಕಣ್ಣು ಕೋರೈಸುವ ಚೆಲುವಿನಿಂದ ಕಂಗೊಳಿಸುತ್ತಿದ್ದರು.

ಕಿತ್ತಳೆ ಮತ್ತು ಕೆಂಪು ಬಣ್ಣದ ಲೆಹಂಗಾ: ಕಿತ್ತಳೆ ಬಣ್ಣದ ಲೆಹಂಗಾ ಮತ್ತು ಕೆಂಪು ಬಣ್ಣದ ಮುಕ್ಕಾಲು ತೋಳಿನ ಬ್ಲೌಸ್ ನಲ್ಲಿ ಐಶ್ವರ್ಯ ಸೌಂದರ್ಯ ದೇವತೆಯಂತೆ ಕಾಣಿಸುತ್ತಾಳೆ. ಆಕರ್ಷಕ ವಿನ್ಯಾಸದ ಆಭರಣಗಳು, ಮುಖದಲ್ಲಿ ಸ್ವಲ್ಪ ನಾಚಿಕೆ, ಸಪೂರ ಮೈಕಟ್ಟಿನಲ್ಲಿ ಐಶ್ವರ್ಯಳನ್ನು ಒಮ್ಮೆ ನೋಡಿದವರಿಗೆ ಮತ್ತೊಮ್ಮೆ ನೋಡಬೇಕೆನಿಸುತ್ತದೆ. ಮದುವೆಗೆ ಚಿನ್ನ ತೆಗೆಯಲು ಬಂದ ಮಧುಮಗಳಿಗೆ ಐಶ್ವರ್ಯಳಂತೆ ಡ್ರೆಸ್ಸಿಂಗ್ ಮಾಡಬೇಕೆನಿಸಿದರೆ ಆಶ್ಚಯವಿಲ್ಲ.

ವಜ್ರದ ಹೊಳಪಿನಲ್ಲಿ ಹೊಳೆದ ಐಶ್ವರ್ಯ: ಈ ಚಿತ್ರದಲ್ಲಿ ಕೆಂಪು ಲೆಹಂಗಾ ಮತ್ತು ಕಪ್ಪು ಬ್ಲೌಸ್ ಗೆ ಬಿಳಿ ಬಣ್ಣದ ದುಪ್ಪಟ ಧರಿಸಿ, ಕುತ್ತಿಗೆಗೆ ವಜ್ರದ ನೆಕ್ಲೇಸ್ ಮತ್ತು ಕಿವಿಗೆ ವಜ್ರದ ಓಲೆ ಧರಿಸಿದ್ದು ಅವುಗಳಲ್ಲಿರುವ ಕೆಂಪು ಹರಳು ಅವಳ ಸೌಂದರ್ಯದ ಮೆರುಗನ್ನು ಹೆಚ್ಚಿಸಿದೆ.

ದೇವತೆ: ದೇವತೆಯ ಅವತಾರದಲ್ಲಿ ದೇವತೆಗಳ ಚಿತ್ರದಲ್ಲಿ ಕಾಣುವಂತೆ ಐಶ್ವರ್ಯ ರೈಗೆ ಡ್ರೆಸ್ಸಿಂಗ್ ಮಾಡಲಾಗಿದೆ. ತಲೆಯಲ್ಲಿ ಕಿರೀಟ ಕೈಯಲ್ಲಿ ಬ್ರಹ್ಮ ಕಮಲ ಹಿಡಿದು ನಿಂತಿರುವ ಭಂಗಿಯಲ್ಲಿ ಸಾಕ್ಷಾತ್ ದೇವತೆ ನಿಂತಂತೆ ಕಾಣುತ್ತಾರೆ.

ಬ್ಲ್ಯಾಕ್ ಬ್ಯೂಟಿ: ಕಪ್ಪು ಬಣ್ಣದ ಮೈಗೆ ಅಂಟಿದ ರೀತಿಯ ಬಟ್ಟೆಯಲ್ಲಿ ಚೇರ್ ನಲ್ಲಿ  ಕೈಯಲ್ಲಿನ ಉಂಗುರವನ್ನು ಕಾಣುವಂತೆ ಕೂತಿರುವ ಫೋಟೊದಲ್ಲಿ ಮಾಡರ್ನ್ ಮತ್ತು ಹಾಟ್ ಲುಕ್ ನಿಂದ ಮಿಂಚಿದ್ದಾರೆ.

ಬಿಳಿ ಮತ್ತು ಚಿನ್ನದ ಬಣ್ಣದ ಲೆಹಂಗಾ: ಕಲ್ಯಾಣ ಜ್ಯೂವೆಲರಿಯ ಬಿಡುಗಡೆಯ ಸಮಾರಂಭಕ್ಕೆ ಬರುವಾಗ ಐಶ್ವರ್ಯ ರೈ ಬಿಳಿ ಮತ್ತು ಚಿನ್ನದ ಬಣ್ಣದ ಲೆಹಂಗಾ ಧರಿಸಿ ತುಂಬಾ ಸಾಂಪ್ರದಾಯಕವಾಗಿ ಡ್ರೆಸ್ಸಿಂಗ್ ಮತ್ತು  ತೆಳ್ಳನೆಯ ಮೈ ಕಟ್ಟಿನಲ್ಲಿ ಕಣ್ಣು ಕೋರೈಸುವ ಚೆಲುವಿನಿಂದ ಕಂಗೊಳಿಸುತ್ತಿದ್ದರು.

Story first published: Friday, September 7, 2012, 16:31 [IST]
English summary

Aishwarya Rai's New Avatar | Dressing Style And Beauty | ಐಶ್ವರ್ಯ ರೈನ ಹೊಸ ಅವತಾರ | ಡ್ರೆಸ್ಸಿಂಗ್ ಶೈಲಿ ಮತ್ತು ಸೌಂದರ್ಯ

Aishwarya Rai Bachchan has recently done a photo shoot for a jewellery brand, Kalyan Jewellers. The diva has lost oodles of weight now and looked stunning in the all new avatar. Lets check out what she wore and how she looked in the print ad of Kalyan Jewellers.
Please Wait while comments are loading...
Subscribe Newsletter