ಕೂದಲು ಸೊಂಪಾಗಿ ಕಾಣಲು ಈ ಹೇರ್ ಪ್ಯಾಕ್

By:
Subscribe to Boldsky

Fruit Hair Mask For Lustrous Hair
ಕೂದಲು ದಪ್ಪವಾಗಿ ಕಾಣಲು ಕಂಡೀಷನರ್ ಅಥವಾ ಶ್ಯಾಂಪೂ ಬಳಸುವ ಬದಲು ಅದಕ್ಕೆ ಫ್ರೂಟ್ ಹೇರ್ ಪ್ಯಾಕ್ ಬಳಸಿ, ಆಗ ಕೂದಲು ದಪ್ಪವಾಗಿ ಕಾಣುವುದರ ಜೊತೆಗೆ, ಕೂದಲಿನ ಆರೋಗ್ಯ ಕೂಡ ಹೆಚ್ಚುವುದು. ಕೂದಲಿಗೆ ಫ್ರೂಟ್ ಪ್ಯಾಕ್ (ಹಣ್ಣುಗಳಿಂದ ಕೂದಲಿನ ಆರೈಕೆ) ಮಾಡಲು ಸ್ಪಾಗಳಿಗೆ ಹೋಗಬೇಕಾದ ಅಗತ್ಯವಿಲ್ಲ, ಮನೆಯಲ್ಲಿಯೇ ಮಾಡಬಹುದು.

ಈ ಫ್ರೂಟ್ ಹೇರ್ ಪ್ಯಾಕ್ ಅನ್ನು ಅನೇಕ ಬಗೆಯಲ್ಲಿ ಮಾಡಬಹುದಾಗಿದ್ದು ಈ ಕೆಳಗಿನ ವಿಧಾನಗಳಲ್ಲಿ ಯಾವುದು ನಿಮಗೆ ಸೂಕ್ತ ಅನಿಸುತ್ತದೆಯೋ ಅದನ್ನು ಮಾಡಿದರೆ ಕೂದಲು ದಪ್ಪವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.

ಸೂಚನೆ: ಈ ಹೇರ್ ಪ್ಯಾಕ್ ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಮಾಡಬಹುದು.

1. ಬಾಳೆ ಹಣ್ಣು ಮತ್ತು ಮೊಸರಿನ ಪ್ಯಾಕ್: ಬಾಳೆ ಹಣ್ಣನ್ನು ಚೆನ್ನಾಗಿ ಹಿಸುಕಿ ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಮೊಸರು ಮತ್ತು ಒಂದು ಚಮಚ ನಿಂಬೆರಸ ಹಾಕಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣವನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆಸ್ನಾನ ಮಾಡಬೇಕು. ಮೃದುವಾದ ಶ್ಯಾಂಪೂ ಬಳಸಿ ತಲೆ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು ಮೃದುವಾಗುವದು ಮತ್ತು ದಪ್ಪವಾಗಿ, ಆಕರ್ಷಕವಾಗಿ ಕಾಣುತ್ತದೆ.

2.ಸೀಬೆಕಾಯಿ ಮತ್ತು ಜೇನಿನ ಪ್ಯಾಕ್: ಸೀಬೆಕಾಯಿಯಲ್ಲಿ ವಿಟಮಿನ್ ಎ ಅಧಿಕವಿದೆ. ಹಣ್ಣಾದ ಸೀಬೆಕಾಯಿಯನ್ನು ಚೆನ್ನಾಗಿ ಹಿಸುಕಿ ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಒಂದು ಚಮಚ ಜೇನು ಹಾಕಿ ತಲೆಗೆ ಹಚ್ಚಿ ಅರ್ಧ ಗಂಟೆಕಾಲ ಇಟ್ಟು ನಂತರ ತಲೆ ತೊಳೆದರೆ ಕೂದಲಿನ ಸೌಂದರ್ಯ ಹೆಚ್ಚುವುದು.

3. ಪಪ್ಪಾಯಿ ಹಣ್ಣಿನ ಪ್ಯಾಕ್: ಪಪ್ಪಾಯಿ ಹಣ್ಣು ಕೂದಲಿಗೆ ಮತ್ತು ತ್ವಚೆಗೆ ಒಳ್ಳೆಯದು. ಪಪ್ಪಾಯಿ ಹಣ್ಣಿಗೆ 2 ಚಮಚ ಹಾಲು,
ಚಮಚ ಮೊಸರು, ಜೇನು ಮತ್ತು ಅರ್ಧ ಚಮಚ ನಿಂಬೆ ರಸ ಹಾಕಿ ಮಿಶ್ರಣ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತಲೆ ತೊಳೆಯಬೇಕು.

4. ಸ್ಟ್ರಾಬರಿ ಮತ್ತು ನಿಂಬೆರಸ: ತಲೆಹೊಟ್ಟಿನ ಸಮಸ್ಯೆ ಇದ್ದರೆ ಈ ಫ್ರೂಟ್ ಪ್ಯಾಕ್ ಬಳಸುವುದು ಒಳ್ಳೆಯದು. ಸ್ಟ್ರಾಬರಿ ಹಣ್ಣಿಗೆ ಒಂದು ಚಮಚ ಜೇನು, ಒಂದು ಚಮಚ ನಿಂಬೆ ರಸ ಮಿಶ್ರಣ ಮಾಡಿ ತಲೆಗೆ ಹಚ್ಚಿ 15 ನಿಮಿಷದ ಬಳಿಕ ತಲೆ ತೊಳೆಯಬೇಕು. ಈ ರೀತಿ ವಾರಕೊಮ್ಮೆ ಮಾಡಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

Story first published: Wednesday, September 12, 2012, 11:59 [IST]
English summary

Fruit Hair Mask For Lustrous Hair | Tips For Beauty | ಕೂದಲು ಮಂದವಾಗಿ ಮತ್ತು ಆಕರ್ಷಕವಾಗಿ ಕಾಣಿಸಲು ಫ್ರೂಟ್ ಹೇರ್ ಪ್ಯಾಕ್ | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Hair fall, hair damage, split ends, low hair growth etc are common hair problems that are heard. you can try these fruit hair masks to get a shiny, strong and lustrous hair naturally!
Please Wait while comments are loading...
Subscribe Newsletter