For Quick Alerts
ALLOW NOTIFICATIONS  
For Daily Alerts

ಸಂಬಂಧಗಳಲ್ಲಿ ನಿರೀಕ್ಷೆಗಳನ್ನು ಕಡಿಮೆ ಮಾಡುವ ವಿಧಾನಗಳು

|

ಸಂಬಂಧಗಳು ಇಂದಿನ ದಿನಗಳಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಪ್ರತಿಯೊಬ್ಬರು ಅವರವರ ಜೀವನದಲ್ಲೇ ವ್ಯಸ್ತರಾಗಿ ಸಂಬಂಧಗಳಿಗೆ ಸಮಯ ಕೊಡದಂತೆ ಆಗಿರುವರು. ಹೀಗಾಗಿ ಸಂಬಂಧಗಳು ಹಳಸುತ್ತಿರುವುದು ಕಂಡುಬರುತ್ತಿದೆ. ಯಾರಿಗೂ ಇಂದಿನ ದಿನಗಳಲ್ಲಿ ಬೇರೆಯವರ ಕಡೆ ಗಮನಹರಿಸಲು ಪುರುಸೊತ್ತೇ ಇಲ್ಲವೆನ್ನುವಂತಾಗಿದೆ, ಅಷ್ಟು ವೇಗವಾಗಿದೆ ನಮ್ಮ ಜೀವನ. ಕೇವಲ ಸಾಮಾಜಿಕ ಜಾಲತಾಣಗಳು, ಮೊಬೈಲ್ ಗೇಮ್ ಹೀಗೆ ಸಾಗುತ್ತಿದೆ. ಹೀಗಾದರೆ ಮುಂದೊಂದು ದಿನ ಹೀಗಿರುವಂತಹ ಮಾನಸಿಕ ಆಸ್ಪತ್ರೆಗಳ ಸಂಖ್ಯೆಯನ್ನು ಖಂಡಿತವಾಗಿಯೂ ಹೆಚ್ಚಿಸಬೇಕಾಗಿ ಬರಬಹುದು ಎಂದರೆ ಅತಿಶಯೋಕ್ತಿಯಾಗಲಾರದು.

Relationship Expectations

ಸಂಬಂಧವೆಂದರೆ ಪ್ರೀತಿ, ಪರಸ್ಪರ ಕಾಳಜಿ ಮತ್ತು ಸಂತೋಷವಾಗಿ ಇರುವುದು. ಆದರೆ ಇಂದು ಅದು ತುಂಬಾ ಕ್ಲಿಷ್ಟವಾಗುತ್ತಲೇ ಇದೆ. ಜನರು ತಮ್ಮದೇ ಆದ ಭಾವನೆ, ನಡವಳಿಕೆ, ನಂಬಿಕೆ, ಭೀತಿ, ಕನಸು ಹಾಗೂ ದೃಷ್ಟಿಕೋನಗಳನ್ನು ಹೊಂದಿದ್ದಾರೆ. ನಿರೀಕ್ಷೆಗಳು ಬಂದಾಗ ಅವರು ತಮ್ಮ ಭಾವನೆಗಳನ್ನು ಬೇರೆಯವರ ತಲೆ ಮೇಲೆ ಹಾಕಿಬಿಡುವರು. ನಾವು ಯಾವ ರೀತಿ ಕಾಳಜಿ ವಹಿಸುತ್ತೇವೆಯೋ ಅದೇ ರೀತಿಯಾಗಿ ಬೇರೆಯವರು ಕೂಡ ನಮ್ಮ ಬಗ್ಗೆ ಕಾಳಜಿ ವಹಿಸಬೇಕು ಎಂದು ನಿರೀಕ್ಷೆ ಮಾಡುವುದು ತಪ್ಪು. ನಿಜವಾದ ಬೇಡಿಕೆಗಳು ಕೆಲವು ಮಾತ್ರ, ಆದರೆ ನಿರೀಕ್ಷೆಗಳಿಗೆ ಮಿತಿಯಿಲ್ಲ.

ಸಂಬಂಧದಲ್ಲಿನ ನಿರೀಕ್ಷೆಗಳನ್ನು ತಗ್ಗಿಸಲು ಕೆಲವು ಹೆಜ್ಜೆಗಳು

ಸಂಬಂಧದಲ್ಲಿನ ನಿರೀಕ್ಷೆಗಳನ್ನು ತಗ್ಗಿಸಲು ಕೆಲವು ಹೆಜ್ಜೆಗಳು

ನಿರೀಕ್ಷೆಯ ಬಗ್ಗೆ ಇರುವಂತಹ ತುಂಬಾ ಜನಪ್ರಿಯ ಮಾತು ಹೀಗಿದೆ: ಯಾವಾಗ ನೀವು ಬೇರೆಯವರು ಪರಿಪೂರ್ಣವಾಗಿ ಇರಬೇಕೆಂದು ಬಯಸುವುದನ್ನು ನಿಲ್ಲಿಸುತ್ತೀರೋ, ಆಗ ಅವರನ್ನು ಅವರಾಗಿಯೇ ಸ್ವೀಕರಿಸುತ್ತೀರಿ. ಆರೋಗ್ಯಕರ ಸಂಬಂಧದಲ್ಲಿ ಯಾವಾಗಲೂ ಕೆಲವೊಂದು ನಿರೀಕ್ಷೆಗಳು ಇರುವುದು ಸಹಜ. ಇದು ಗೌರವ ಅಥವಾ ಪ್ರೀತಿ ಆಗಿರಬಹುದು. ಆದರೆ ಕೆಲವೊಂದು ಸಲ ಸಂಬಂಧದಲ್ಲಿ ನಾವು ನಿರೀಕ್ಷೆ ಮಾಡದೆ ಇರುವಂತದ್ದು ನಡೆಯಬಹುದು.

ಇದರಿಂದ ನಮಗೆ ತುಂಬಾ ನೋವಾಗಬಹುದು. ವ್ಯಕ್ತಿಯೊಬ್ಬನ ನಡವಳಿಕೆಯು ನಿಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲದೆ ಇರುವಾಗ ನೀವು ಅವರ ನಡವಳಿಕೆ ಬದಲಾವಣೆ ಮಾಡಲು ಪ್ರಯತ್ನಿಸುತ್ತೀರಿ. ಇದರಿಂದ ಹತಾಶೆ ಮತ್ತು ಸಂಬಂಧಕ್ಕೆ ಹಾನಿ ಉಂಟಾಗುವುದು. ವಾಸ್ತವಿಕವಾಗಿ ಇದ್ದರೆ ಆಗ ಯಾವುದೇ ನಿರೀಕ್ಷೆಗಳು ತಪ್ಪು ಎಂದು ಹೇಳಲಾಗದು. ಸಂಬಂಧದಿಂದ ಏನು ಬೇಕು ಅವರು ತಿಳಿಯಬೇಕು. ಸಂಬಂಧವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು. ಇದನ್ನು ವಾಸ್ತವಿಕ ವಿಧಾನದಿಂದ ಮಾಡಬೇಕು.

ಅರ್ಥ ಮಾಡಿಕೊಳ್ಳುವುದು

ಅರ್ಥ ಮಾಡಿಕೊಳ್ಳುವುದು

ಯಾರಾದರೂ ನಿಮ್ಮನ್ನು ಅವರದ್ದೇ ಆಗಿರುವ ರೀತಿಯಲ್ಲಿ ಪ್ರೀತಿ ಮಾಡುತ್ತಿರಬಹುದು ಮತ್ತು ಅದನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಸಾಧ್ಯವಾಗದೆ ಇರಬಹುದು. ಇದರರ್ಥ ಅವರು ಪ್ರಯತ್ನಿಸುತ್ತಿಲ್ಲವೆಂದಲ್ಲ, ಅವರ ನಡವಳಿಕೆ ಅರ್ಥ ಮಾಡಿಕೊಳ್ಳುವುದನ್ನು ನೀವು ಬದಲಾಯಿಸಿಕೊಳ್ಳಬೇಕು. ಜನರು ಪರಸ್ಪರರನ್ನು ಅರ್ಥ ಮಾಡಿಕೊಂಡರೆ ಆಗ ಕಾರಣವಿಲ್ಲದೆ ನಿರೀಕ್ಷೆಗಳಿಗೆ ಯಾವುದೇ ಜಾಗವಿರದು. ಸಂಬಂಧದಿಂದ ಏನು ಬೇಕಾಗಿದೆ ಎಂದು ನೀವು ಪ್ರಾಮಾಣಿಕವಾಗಿ ತಿಳಿಯಿರಿ. ವಾಸ್ತವವಾಗಿ ಕೆಲವೊಂದು ಕೆಲಸಗಳನ್ನು ಮಾಡಲು ಆರಂಭಿಸಿ.

ಪರಿಪೂರ್ಣತೆಯು ಅಪರಿಪೂರ್ಣ

ಪರಿಪೂರ್ಣತೆಯು ಅಪರಿಪೂರ್ಣ

ನಿರೀಕ್ಷೆಯನ್ನು ವಾಸ್ತವದೊಂದಿಗೆ ಸಮತೋಲನದಲ್ಲಿ ಇಡಬಹುದು. ನಿಮ್ಮ ನಿರೀಕ್ಷೆಗಳು ಎಷ್ಟೇ ವಾಸ್ತವಿಕವಗಿದ್ದರೂ ಅದನ್ನು ಈಡೇರಿಸಲು ಕೆಲವೊಂದು ಸಂದರ್ಭದಲ್ಲಿ ಸಾಧ್ಯವಾಗದೆ ಇರಬಹುದು. ಇದರಿಂದ ನಿಮಗೆ ತುಂಬಾ ಹತಾಶೆ ಆಗಬಹುದು. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ರೀತಿಯಲ್ಲಿ ಪರಿಪೂರ್ಣನಾಗಿ ಇರುತ್ತಾನೆ. ತಪ್ಪುಗಳನ್ನು ಮಾಡುವುದು ಕೂಡ ಸಹಜ. ಯಾರು ಕೂಡ ಇಲ್ಲಿ ಪರಿಪೂರ್ಣರಲ್ಲ. ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡಾಗ ಜೀವನದಲ್ಲಿ ಯಾವಾಗಲೂ ಸಂತೋಷವಾಗಿ ಇರಬಹುದು.

ಎಚ್ಚರಿಕೆಯಿಂದ ಗಮನಹರಿಸುವುದು

ಎಚ್ಚರಿಕೆಯಿಂದ ಗಮನಹರಿಸುವುದು

ಬೇರೆ ವ್ಯಕ್ತಿಯಿಂದ ಕೆಲವು ನಡವಳಿಕೆಗಳ ನಿರೀಕ್ಷೆಯನ್ನು ನೀವು ನಿಲ್ಲಿಸಿದ ವೇಳೆ ಆಗ ನಿಮಗೆ ವಿಷಯವು ಸ್ಪಷ್ಟವಾಗುವುದು. ನೀವು ಅವರಿಂದ ಏನು ನಿರೀಕ್ಷೆ ಮಾಡುತ್ತಿದ್ದೀರೋ ಅದಕ್ಕಿಂತ ನಿಮಗೇನು ಬೇಕೋ ಅದು ಸಿಗುವುದು ಎಂದು ನಿಮಗೆ ಈಗ ಅರಿವಿಗೆ ಬರುವುದು.

ಮಾನದಂಡಗಳು ಮತ್ತು ಸಂಬಂಧದ ನಿರೀಕ್ಷೆಗಳು

ಮಾನದಂಡಗಳು ಮತ್ತು ಸಂಬಂಧದ ನಿರೀಕ್ಷೆಗಳು

ಮಾನದಂಡಗಳು ಎಂದರೆ ಅದು ಗುಣಗಳು, ನೈತಿಕತೆ ಅಥವಾ ನೀವು ಒಬ್ಬ ವ್ಯಕ್ತಿಯಿಂದ ಏನು ನಿರೀಕ್ಷೆ ಮಾಡುತ್ತೀರೋ ಆ ಹವ್ಯಾಸಗಳು. ಈ ಹಂತದಲ್ಲಿ ಗುಣಮಟ್ಟವು ಉನ್ನತ ಮಟ್ಟದಲ್ಲಿ ಇರಬಹುದು. ಆದರೆ ನಿರೀಕ್ಷೆಗಳು ಯಾವಾಗಲೂ ವಾಸ್ತವಿಕವಾಗಿರಬೇಕು.

ಬೇರೆಯವರ ಸ್ಥಾನದಲ್ಲಿ ನೀವು ನಿಂತು ನೋಡಿ

ಬೇರೆಯವರ ಸ್ಥಾನದಲ್ಲಿ ನೀವು ನಿಂತು ನೋಡಿ

ನೀವು ತುಂಬಾ ಮುಕ್ತವಾಗಿ ಬೇರೆಯವರ ನಿರೀಕ್ಷೆಯಂತೆ ಬದುಕಬಲ್ಲೀರಿ ಎಂದಾದರೆ ಆಗ ಪ್ರತಿಯೊಬ್ಬರು ಹಾಗೆ ಇರಬೇಕು ಎಂದೇನಿಲ್ಲ. ಆದರೆ ನೀವು ಬೇರೆ ವ್ಯಕ್ತಿಯ ಪರಿಸ್ಥಿತಿ ಮತ್ತು ಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಆಗ ಆರೋಗ್ಯಕಾರಿ ಸಂಬಂಧದಲ್ಲಿ ನಿಮ್ಮ ನಿರೀಕ್ಷೆಗಳು ತುಂಬಾ ಕಡಿಮೆ ಆಗುವುದು.

ಜಗಳವು ನೆರವಾಗುವುದು

ಜಗಳವು ನೆರವಾಗುವುದು

ಇದನ್ನು ನೋಡಿ ನೀವು ಪ್ರತಿದಿನವೂ ಬೇರೆಯವರ ಜತೆಗೆ ಜಗಳ ಮಾಡಬೇಕು ಎಂದು ತಿಳಿಯಬೇಡಿ. ಆದರೆ ಇದನ್ನು ತುಂಬಾ ಸುರಕ್ಷಿತ ಮತ್ತು ಗೌರವಪೂರ್ಣವಾಗಿ ಮಾಡಿದರೆ ಆಗ ಸಂಬಂಧದಲ್ಲಿ ಜಗಳವು ಆರೋಗ್ಯಕಾರಿ ಆಗಿರುವುದು. ಬೇರ ವ್ಯಕ್ತಿಯ ನಿರೀಕ್ಷೆಯನ್ನು ನೀವು ಅರ್ಥ ಮಾಡಿಕೊಳ್ಳಿ. ನೀವು ತುಂಬಾ ಶಾಂತ ರೀತಿಯಲ್ಲಿ ಚರ್ಚೆ ಮಾಡಿಕೊಂಡು ಯಾವುದೇ ಜಗಳ ಕೊನೆಗೊಳಿಸಬಹುದು. ಆಲೋಚನೆಗಳನ್ನು ಹೊರಗಿಟ್ಟರೆ ಆಗ ಖಂಡಿತವಾಗಿಯೂ ನೀವು ಅನಗತ್ಯವಾಗಿ ನಿರೀಕ್ಷೆ ಮಾಡುವುದು ತಪ್ಪುವುದು.

English summary

Steps to Reduce Relationship Expectations

Relationships are meant for happiness and love but people make them complicated. People have their own emotions, behaviors, actions, beliefs, fears, dreams, and perspectives. Expectations arise when they try to force these emotions on the other people. We cannot expect other people to treat us as we would treat them. True needs are few but expectations are limitless.
X
Desktop Bottom Promotion