For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬ ಸೊಸೆ ಅತ್ತೆಗೆ ಹೇಳಬಯಸುವ ಮನದಾಳದ ಮಾತುಗಳಿವು

|

ಅತ್ತೆ-ಸೊಸೆ ಸಂಬಂಧ ಎಂಬುವುದು ಎರಡು ಧ್ರುವಗಳಂತೆ. ಅತ್ತೆ ಸೊಸೆಗೆ ಅಮ್ಮನ ಸ್ಥಾನದಲ್ಲಿದ್ದರೆ, ಸೊಸೆ ಅತ್ತೆ ಮಗಳ ಸ್ಥಾನದಲ್ಲಿರುತ್ತಾಳೆ. ಆದರೆ ಅತ್ತೆಗೆ ಸೊಸೆ ಮಗಳ ಸ್ಥಾನವಷ್ಟೇ ಮಗಳಾಗಲ್ಲ, ಸೊಸೆಗೆ ಅತ್ತೆ ಅಮ್ಮ ಸ್ಥಾನದಲ್ಲಿರುತ್ತಾರೆ ಆದರೆ ಅಮ್ಮನಾಗುವುದಿಲ್ಲ. ಅತ್ತೆ-ಸೊಸೆ ಎಷ್ಟೇ ಚೆನ್ನಾಗಿದ್ದರೂ ಇಬ್ಬರಿಗೂ ಕೆಲವೊಂದು ಕುಂದು ಕೊರತೆಗಳು ಕಾಣಿಸುತ್ತಲೇ ಇರುತ್ತವೆ, ಅವೇ ಅಸಮಧಾನಕ್ಕೆ ಕಾರಣವಾಗಿರುತ್ತದೆ.

daughter in law - mother in law relationship

ಮಗ ಮದುವೆಯಾಗುವ ಮುನ್ನ 'ನನ್ನ ಮಗನಿಗೆ ಒಳ್ಳೆಯ ಹೆಣ್ಣು ಸಿಗಲಿ ಎಂದು ಪ್ರಾರ್ಥಿಸುವ ಅಮ್ಮ, ಕಂಡ-ಕಂಡವರಲ್ಲಿ ನನ್ನ ಮಗ ಇಷ್ಟು ಓದಿದ್ದಾನೆ, ಈ ಕೆಲಸದಲ್ಲಿ ಇದ್ದಾನೆ, ನನ್ನ ಮಗ ಅಂತ ಹೇಳ್ತಿಲ್ಲ ಒಳ್ಳೆಯ ಹುಡುಗ, ನಿಮ್ಮ ಕಡೆ ಒಳ್ಳೆಯ ಹುಡುಗಿಯಿದ್ದರೆ ಹೇಳಿ' ಎಂದು ಹೇಳುತ್ತಾಳೆ.

ಹುಡುಗಿಯನ್ನು ತಾಯಿಯೇ ಒಪ್ಪಿ ಮಗನಿಗೆ ತಂದರೂ ಮಗ ಮದುವೆಯಾಗಿ ಸ್ವಲ್ಪ ದಿನಗಳಲ್ಲಿ ಮೆಲ್ಲನೆ ಅಸಮಧಾನ ಶುರುವಾಗುವುದು. ಇವಳಿಗೂ ಅಷ್ಟೇ ಹೊಸ ಪರಿಸರ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗುವುದು, ಸಣ್ಣ-ಪುಟ್ಟ ತಪ್ಪುಗಳು ಇವಳ ಕೈಯಿಂದಲೂ ಆಗುವುದು. ಆದರೆ ಎಲ್ಲದಕ್ಕೂ ಟೀಕಿಸದೆ ತಪ್ಪಾದಾಗ ತಿಳಿ ಹೇಳಿ, ಒಳ್ಳೆಯದು ಅನಿಸಿದ್ದನ್ನು ಹೊಗಳಿದರೆ ಯಾವ ಸಮಸ್ಯೆಯೂ ಇರಲ್ಲ.

ಅತ್ತೆ-ಸೊಸೆ ಜಗಳ ಎಂಬುವುದು ಬಡವರು-ಶ್ರೀಮಂತರು ಎಂಬ ಬೇಧವಿಲ್ಲದೆ ಎಲ್ಲ ಮನೆಗಳಲ್ಲಿ ಇದ್ದೇ ಇರುತ್ತದೆ.

ನಾವಿಲ್ಲಿ ಪ್ರತಿಯೊಬ್ಬ ಸೊಸೆಯು ಅತ್ತೆಗೆ ಹೇಳ ಬಯಸುವ ಮನದಾಳದ ಮಾತುಗಳ ಬಗ್ಗೆ ಹೇಳಿದ್ದೇವೆ:

 ನಿಮ್ಮ ಸೊಸೆಯೂ ಯಶಸ್ಸು ಪಡೆಯಲಿ ಎಂದು ಪ್ರಾರ್ಥಿಸಿ

ನಿಮ್ಮ ಸೊಸೆಯೂ ಯಶಸ್ಸು ಪಡೆಯಲಿ ಎಂದು ಪ್ರಾರ್ಥಿಸಿ

ಮಗನಿಗೆ ಒಳ್ಳೆಯದು ಆಗಬೇಕೆಂದು ಮನಸಾರೆ ಪ್ರಾರ್ಥಿಸುವ ನೀವು ನನಗೂ ಒಳಿತಾಗಲಿ ಎಂದು ಏಕೆ ಬಯಸುವುದಿಲ್ಲ? ನನ್ನನ್ನು ಟೀಕಿಸುತ್ತಲೇ ಇರುವ ಬದಲಿಗೆ ಸೊಸೆಯನ್ನು ಮಗಳಂತೆ ಕಾಣಿ.

ದೂಷಿಸುವುದು ನಿಲ್ಲಿಸೋಣ

ದೂಷಿಸುವುದು ನಿಲ್ಲಿಸೋಣ

ಒಂದು ಕುಟುಂಬ ಅಂದ ಮೇಲೆ ಅಲ್ಲಿ ಅನೇಕ ವ್ಯಕ್ತಿತ್ವದ ಜನರು ಒಟ್ಟಾಗಿ ಬದುಕುವ ಸ್ಥಳವಾಗಿರುತ್ತದೆ. ನಿಮಗೆ 2 ಮಕ್ಕಳಿದ್ದರೆ ಇಬ್ಬರ ಗುಣ ಒಂದೇ ರೀತಿ ಇರುವುದಿಲ್ಲ. ಅವರ ಸ್ವಭಾವ ಹೇಗಿದೆಯೋ ಹಾಗೆ ಸ್ವೀಕರಿಸಲು ಸಾಧ್ಯವಾಗುವುದು, ಅದೇ ಸೊಸೆಯ ಸ್ವಭಾವ ಮಾತ್ರ ಸ್ವೀಕರಿಸಲು ಏಕೆ ಸಾಧ್ಯವಿಲ್ಲ. ನನ್ನಿಂದ ತಪ್ಪಾಗಬಹುದು, ಆದರೆ ತಪ್ಪು ಮಾತ್ರ ಆಗುವುದು ಅಲ್ಲ ಅಲ್ವಾ? ನನ್ನ ಒಳಿತನ್ನೂ ಪ್ರಶಂಸೆ ಮಾಡಬಹುದಲ್ವಾ?

ನಾನು ಕೇಳಿದಾಗ ಮಾತ್ರ ಸಲಹೆ ನೀಡಿ

ನಾನು ಕೇಳಿದಾಗ ಮಾತ್ರ ಸಲಹೆ ನೀಡಿ

ಗಂಡ-ಹೆಂಡತಿ ನಡುವೆ ಏನೋ ಮಾತುಕತೆ ನಡೆಯುತ್ತಿರುತ್ತದೆ, ನಮ್ಮಿಬ್ಬರ ನಡುವೆ ಮೂಗು ತೂರಿಸುವುದು ಏಕೆ. ನಾವಿಬ್ಬರು ಈಗ ಜಗಳವಾಡಿದರೆ ಸ್ವಲ್ಪ ಹೊತ್ತಿಗೆ ಸರಿ ಹೋಗುತ್ತೇವೆ, ನೀವು ನಡುವೆ ಬಂದು ಚಿಕ್ಕ ವಿಷಯವನ್ನು ದೊಡ್ಡದು ಮಾಡುವುದು ಏಕೆ?

ನಾನು ನಿಮಗಿಂತ ಭಿನ್ನವಾಗಿರಬಹುದು, ನನ್ನನ್ನು ನಾನಾಗಿ ಸ್ವೀಕರಿಸಿ

ನಾನು ನಿಮಗಿಂತ ಭಿನ್ನವಾಗಿರಬಹುದು, ನನ್ನನ್ನು ನಾನಾಗಿ ಸ್ವೀಕರಿಸಿ

ನಾನು ನಿಮ್ಮಷ್ಟು ಚೆನ್ನಾಗಿ ಅಡುಗೆ ಮಾಡದೇ ಇರಬಹುದು, ನಿಮ್ಮಂತೆ ಕಷ್ಟ ಗೊತ್ತಿಲ್ಲದೆ ಇರಬಹುದು, ನಿಮ್ಮಷ್ಟು ಪರ್ಫೆಕ್ಟ್ ಅಲ್ಲದೇ ಇರಬಹುದು, ಆದರೆ ನನ್ನನ್ನು ನಾನು ಹೇಗೆ ಇರುವೆನೋ ಹಾಗೆ ಸ್ವೀಕರಿಸಿ. ನಾನು ಯಾವತ್ತೂ ಹೀಗೇ ಇರುವುದಿಲ್ಲ, ನನ್ನ ನೀವು ನಿಧಾನಕ್ಕೆ ನಿಮ್ಮಷ್ಟು ಪರ್ಫೆಕ್ಟ್ ಮಾಡಬಹುದು ಅಲ್ವಾ? ಮತ್ಯಾಕೆ ಈ ಟೀಕೆ?

ನನ್ನ ಮೇಲೆ ತುಂಬಾ ನಿರೀಕ್ಷೆಗಳು ಬೇಡ

ನನ್ನ ಮೇಲೆ ತುಂಬಾ ನಿರೀಕ್ಷೆಗಳು ಬೇಡ

ನೀನು ಹಬ್ಬಕ್ಕೆ ಬರುವುದಿಲ್ವಾ? ಹಾಗೆ ಮಾಡುವುದಿಲ್ವಾ? ಹೀಗೆ ಮಾಡಿದಿಲ್ವಾ? ಎಂದು ಕೇಳಬೇಡಿ. ನಾನು ನೀವು ಬಯಸಿದಂತೆ ಇರಬೇಕು ಎಂಬ ತುಂಬಾ ನಿರೀಕ್ಷೆ ಬೇಡ, ನನ್ನನ್ನು ನಾನಾಗಿರಲು ಬಿಡಿ.

 ನಿಮ್ಮ ಮಗನ ತಪ್ಪುಗಳಿಗೆ ನಾನು ಹೊಣೆಯಲ್ಲ

ನಿಮ್ಮ ಮಗನ ತಪ್ಪುಗಳಿಗೆ ನಾನು ಹೊಣೆಯಲ್ಲ

ನನ್ನ ಮಗ ಮದುವೆಯಾದ ಮೇಲೆ ಬದಲಾವಣೆಯಾದ ಎಂಬ ನಿಮ್ಮ ಆರೋಪಗಳಿಗೆ ನಾನು ಹೊಣೆಯಲ್ಲ. ನಿಮ್ಮ ಮಗನಲ್ಲಿ ಕಾಣುತ್ತಿರುವ ಪ್ರತಿಯೊಂದು ಬದಲಾವಣೆಗೆ ನಾನು ಕಾರಣಕರ್ತಳಲ್ಲ.

English summary

Things That Daughter In Law Wants to Tell Mother In Law in kannada

Things That Daughter In Law Wants to Tell Mother In Law in kannada, Read on...
Story first published: Friday, November 26, 2021, 20:44 [IST]
X
Desktop Bottom Promotion