Just In
Don't Miss
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Movies
ರಿಷಿ ಕಪೂರ್ ಅರ್ಧಕ್ಕೆ ಬಿಟ್ಟು ಹೋದ ಪಾತ್ರ ಮುಂದುವರಿಸಲಿದ್ದಾರೆ ಪರೇಶ್ ರಾವಲ್
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಬಂಧದಲ್ಲಿ ಪ್ರೀತಿಗಿಂತ ಮಿಗಿಲಾದ ಅಂಶಗಳಿವು
ದಾಂಪತ್ಯ ಜೀವನದಲ್ಲಿ ಪ್ರೀತಿಯಿರಬೇಕು. ಪ್ರೀತಿಯಿಲ್ಲದ ದಾಂಪತ್ಯದಲ್ಲಿ ಸಾರವೇ ಇರುವುದಿಲ್ಲ. ನನ್ನ ಸಂಗಾತಿ ನನ್ನನ್ನು ತುಂಬಾ ಪ್ರೀತಿಸಬೇಕು ಎಂದು ಪ್ರತಿಯೊಬ್ಬರು ಬಯಸುತ್ತೇವೆ. ಅವರ ಪ್ರೀತಿ ಸ್ವಲ್ಪ ಕಡಿಮೆಯಾದರೂ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬರೀ ಪ್ರೀತಿಯೊಂದಿದ್ದರೆ ಸಾಕು, ಬೇರೇನು ಬೇಕಾಗಿಲ್ಲ ಎಂದು ಭಾವಿಸುತ್ತೇವೆ. ಆದರೆ ಸಂಬಂಧದಲ್ಲಿ ಪ್ರೀತಿಯೇ ದೊಡ್ಡದ್ದಲ್ಲ, ಅದಕ್ಕಿಂತ ಮಿಗಿಲಾದ ಹಲವಾರು ವಿಷಯಗಳಿವೆ ಎಂದು ನಾನು ಹೇಳಿದರೆ ನಿಮಗೆ ಅಚ್ಚರಿ ಅನಿಸಬಹುದು. ಪ್ರೀತಿಯನ್ನು ಮೀರಿದ್ದು ಏನಾದರೂ ಇದೆಯೇ ಎಂದು ಅನಿಸಬಹುದು.
ನೀವೇ ನೋಡಿ ಎಷ್ಟೋ ಕೌಟಂಬಿಕ ಕಲಹಗಳಲ್ಲಿ ಗಂಡ-ಹೆಂಡತಿ ತುಂಬಾ ಪ್ರೀತಿಸುತ್ತಾರೆ, ಆದರೂ ಅವರಲ್ಲಿ ಜಗಳ ತಪ್ಪಿರುವುದಿಲ್ಲ, ಅವರ ಜಗಳ ವಿಕೋಪಕ್ಕೆ ಹೋಗಿ ಅನಾಹುತ ಸಂಭವಿಸಿದ ಘಟನೆಗಳನ್ನು ನೋಡುತ್ತೇವೆ. ತನ್ನ ಸಂಗಾತಿ ಮೇಲಿದ್ದ ವಿಪರೀತ ಪ್ರೀತಿಯಿಂದಲೇ ಕೊಲೆ ಮಾಡಿದವರನ್ನು ನೋಡಿದ್ದೇವೆ, ಇತ್ತೀಚೆಗೆ ಒಂದು ಸುದ್ದಿ ಬಂದಿತ್ತು, ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದ ಆತ, ತನ್ನ ಹೆಂಡತಿ ನಟ ಹೃತಿಕ್ ರೋಷನ್ ಅಭಿಮಾನಿ ಎಂಬ ಕಾರಣಕ್ಕೆ ಹೊಟ್ಟೆಕಿಚ್ಚು ಪಟ್ಟು ಹೆಂಡತಿಯನ್ನು ಕೊಲೆ ಮಾಡಿದ್ದ, ಈಗ ಹೇಳಿ ಸಂಬಂಧದಲ್ಲಿ ಪ್ರೀತಿಯೊಂದಿದ್ದರೆ ಸಾಕೆ? ಇಲ್ಲ, ಪ್ರೀತಿಗಿಂತ ಮಿಗಿಲಾಗಿ ಈ ಅಂಶಗಳು ಬಹುಮುಖ್ಯವಾಗಿ ಬೇಕು, ಆಗ ಖುಷಿಯಾದ ಹಾಗೂ ನೆಮ್ಮದಿಯ ಸಂಸಾರವನ್ನು ಪ್ರೀತಿಯ ವ್ಯಕ್ತಿ ಜತೆ ಕಳೆಯಬಹುದು ನೋಡಿ.

1. ನಂಬಿಕೆ
ಸಂಬಂಧದಲ್ಲಿ ಬಹುಮುಖ್ಯವಾಗಿ ಬೇಕಾಗಿರುವುದು ನಂಬಿಕೆ, ನಂಬಿಕೆ ಇಲ್ಲದ ವ್ಯಕ್ತಿ ಜತೆ ಬದುಕುವುದೇ ಕಷ್ಟ. ಎಲ್ಲಿ ಸಂಶಯವಿರುತ್ತದೋ ಆ ಸಂಸಾರ ತುಂಬಾ ಕಾಲ ಬಾಳಲ್ಲ. ಆರೋಗ್ಯಕರ ಸಂಬಂಧಕ್ಕೆ ನಂಬಿಕೆ ತುಂಬಾ ಮುಖ್ಯ. ಆದ್ದರಿಂದ ಇಬ್ಬರು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತೀರೋ ಅಷ್ಟೇ ನಂಬಿಕೆ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಂಗಾತಿಗೆ ಸಂಶಯ ಬರುವಮತೆ ನಡೆದುಕೊಳ್ಳಬಾರದು. ಒಂದು ವೇಳೆ ಯಾವುದೋ ಕಾರಣಕ್ಕೆ ಅವರು ನಿಮ್ಮ ಮೇಲೆ ಅನುಮಾನಪಟ್ಟರೆ ಅವರ ಜತೆ ಈ ಕುರಿತು ಮಾತನಾಡಿ, ಸಂಶಯ ಹೋಗಲಾಡಿಸಿ. ಇಬ್ಬರು ಯಾವುದೇ ವಿಷಯವನ್ನು ಮುಚ್ಚಿಡಬಾರದು, ಮನಬಿಚ್ಚಿ ಮಾತನಾಡಬೇಕು, ತಮ್ಮ ಬಯಕೆಗಳನ್ನು ಹೇಳಿಕೊಳ್ಳಬೇಕು. ಇದರಿಂದ ನಂಬಿಕೆ ಮೂಡುವುದು.

2. ಪರಸ್ಪರ ಗೌರವ
ಸಂಸಾರ ಎಂದ ಮೇಲೆ ಅಲ್ಲಿ ಒಬ್ಬರನ್ನೊಬ್ಬರು ಗೌರವಿಸಬೇಕು. ಕೆಲವರು ಕೋಪ ಬಂದಾಗ ಸಂಗಾತಿ ಬಗ್ಗೆ ಮತ್ತೊಬ್ಬರ ಮುಂದೆ ತುಂಬಾ ಕೆಟ್ಟದಾಗಿ ಮಾತನಾಡುತ್ತಾರೆ, ಅವರ ಮಾತುಗಳಲ್ಲಿ ಗೌರವ ಎನ್ನುವುದೇ ಇರುವುದಿಲ್ಲ. ಯಾವ ಸಂಸಾರದಲ್ಲಿ ಪರಸ್ಪರ ಗೌರವ ಇರುವುದಿಲ್ಲ, ಆ ಸಂಬಂಧದಲ್ಲಿ ಪ್ರೀತಿ ಇರುವುದಿಲ್ಲ. ಪ್ರೀತಿಯಿದ್ದರೆ ತನ್ನ ಸಂಗಾತಿಗೆ ಅವಮಾನ ಮಾಡುವುದಿಲ್ಲ. ಸಂಬಂಧ ಎಂದ ಮೇಲೆ ಒಬ್ಬರು ಮಾತ್ರ ದರ್ಪ ತೋರುವುದಿಲ್ಲ, ಇಬ್ಬರ ಮಾತುಗಳಿಗೆ ಬೆಲೆಯಿರಬೇಕು, ಇಬ್ಬರ ಭಾವನೆಗಳನ್ನು ಗೌರವಿಸಬೇಕು. ಸಂಗಾತಿಯ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳುವುದಾಗಲಿ, ಮಾತನಾಡುವುದಾಗಲಿ ಮಾಡಬಾರದು.

3. ಸುರಕ್ಷಿತೆ
ಪ್ರತಿಯೊಬ್ಬರು ಇದನ್ನು ಬಯಸಿಯೇ ಬಯಸುತ್ತಾರೆ. ನಾವು ಒಬ್ಬರನ್ನು ಇಷ್ಟಪಡುತ್ತಿದ್ದೇವೆ ಎಂದಾದರೆ ನಮ್ಮ ಮುಂದಿನ ಬದುಕು ಅವರ ಜತೆ ಸುರಕ್ಷಿತವಾಗಿರಬೇಕೆಂದು ಬಯಸುತ್ತೇವೆ. ಬರೀ ಪ್ರೀತಿಯಿಂದ ಸುರಕ್ಷಿತೆಯ ಭಾವನೆ ತುಂಬಲು ಸಾಧ್ಯವಿಲ್ಲ. ತಾನುನ ಪ್ರೀತಿಸಿದವಳು ಸಿಗಲಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡುವ ಹುಚ್ಚು ಪ್ರೇಮಿಗಳನ್ನು ನೋಡುತ್ತೇವೆ. ಇನ್ನು ಕೆಲವರು ತುಂಬಾ ಪ್ರೀತಿಸುತ್ತಾರೆ, ಆದರೆ ಅದೇ ಪ್ರೀತಿ ಹೆಸರಿನಲ್ಲಿ ಹೊಡೆಯುವುದು, ಹಿಂಸೆ ಕೊಡುವುದು ಮಾಡುತ್ತಾರೆ. ನಾವು ಪ್ರೀತಿಸುವ ವ್ಯಕ್ತಿ ನಮ್ಮನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯಿದ್ದರೆ ಮಾತ್ರ ಅಂಥ ವ್ಯಕ್ತಿಗಳನ್ನು ಪ್ರೀತಿಸಬೇಕು. ಅವನು/ ಅವಳು ನನ್ನನ್ನು ತುಂಬಾ ಪ್ರೀತಿಸುತ್ತಿದ್ದಾರೆ ಎಂದು ಅವರು ಹೊಡೆದರೂ, ಬಡೆದರೂ ಸಹಿಸಿಕೊಂಡು ಇದ್ದರೆ ಇದರಿಂದ ಅಪಾಯ ತಪ್ಪಿದ್ದಲ್ಲ.

4. ಸಂತೋಷ
ಸಂತೋಷವನ್ನು ಏನು ಕೊಟ್ಟು ಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮಲ್ಲಿ ಇರಬೇಕು. ಇದ್ದುದ್ದರಲ್ಲಿ ಸಂತೋಷ ಕಾಣುವ ಮನುಸ್ಸು ಇರಬೇಕು. ಎಲ್ಲರು ಎಲ್ಲಾ ಸಮಯದಲ್ಲಿ ಸಂತೋಷವಾಗಿ ಇರಲು ಸಾಧ್ಯವಿಲ್ಲ. ಸಂಸಾರ ಎಂದ ಮೇಲೆ ಸಣ್ಣ ಪುಟ್ಟ ಜಗಳ ಬರುವುದು ಸಹಜ, ಆದರೆ ಅವುಗಳನ್ನು ಅಲ್ಲಿಗೇ ಬಿಟ್ಟು ನಂತರ ಖುಷಿ-ಖುಷಿಯಾಗಿ ಸಂಗಾತಿಯನ್ನು ಮಾತನಾಡಿಸಿ. ನಿಮಗೆ ಖುಷಿ ಕೊಡುವುದನ್ನು ಮಾಡಿ. ನಿಮ್ಮ ಸಂಗಾತಿಯ ಖುಷಿಯಾಗಿರಬೇಕೆಂದು, ನಿಮ್ಮ ಖುಷಿಯನ್ನು ಬದಗೊತ್ತಿ ಬದುಕುವುದರಲ್ಲಿ ಅರ್ಥವಿಲ್ಲ, ನಿಮಗೆ ಖುಷಿಯಾಗುವುದನ್ನು ನೀವು ಮಾಡಿ, ಅವರನ್ನು ಖುಷಿಯಾಗಿರಲು ಬಿಡಿ, ಇದರಿಂದ ಇಬ್ಬರು ಖುಷಿ-ಖುಷಿಯಾಗಿರುತ್ತೀರ. ಅವರಿಗೆ ಅವರ ಫ್ರೆಂಡ್ಸ್ ಜತೆ ಟ್ರಿಪ್ ಹೋಗಬೇಕು ಅನಿಸಿದಾಗ ಬಿಡಿ, ಆಗ ನಿನಗೆ ನನ್ನ ಮೇಲೆ ಪ್ರೀತಿ ಇಲ್ಲ ಅಂತೆಲ್ಲಾ ಗೊಣಗಬೆಡಿ, ಪ್ರೀತಿ ಬೇರೆ-ಖುಷಿ ಬೇರೆ. ಅವರು ಖುಷಿಯಾಗಿದ್ದರೆ ನಿಮ್ಮ ಮೇಲಿನ ಪ್ರೀತಿಯೂ ಹೆಚ್ಚಾಗುವುದು ನೆನಪಿರಲಿ.

5. ಒಬ್ಬರನ್ನೊಬ್ಬರು ಇಷ್ಟಪಡಿ
ಜತೆಯಾಗಿ ಸಂಸಾರ ನಡೆಸಲು ಮೊದಲಿಗೆ ಒಬ್ಬರನ್ನೊಬ್ಬರು ಇಷ್ಟಪಡಬೇಕು. ಒಬ್ಬರನ್ನೊಬ್ಬರು ಇಷ್ಟಪಟ್ಟರೆ ಆಗ ಅವರು ಮಾಡುವ ಸಣ್ಣ-ಪುಟ್ಟ ತಪ್ಪುಗಳು ದೊಡ್ಡದಾಗಿ ಕಾಣುವುದಿಲ್ಲ. ಆದರೆ ಇಷ್ಟನೇ ಇಲ್ಲದ ವ್ಯಕ್ತಿ ಜತೆ ಮಾತ್ರ ಬದುಕುವ ಸಾಹಸಕ್ಕೆ ಕೈ ಹಾಕಬೇಡಿ. ಪ್ರೀತಿಯಿಂದ ಅವರನ್ನು ಬದಲಾಯಿಸಬಹುದು ಎಂದು ನೀವು ಭಾವಿಸಿದರೆ ಅದು ಭ್ರಮೆ ಅಷ್ಟೇ, ವ್ಯಕ್ತಿಗೆ ನೀವು ಇಷ್ಟನೇ ಆಗದಿದ್ದ ಮೇಲೆ ನಿಮ್ಮನ್ನು ಪ್ರೀತಿಸಲು ಹೇಗೆ ಸಾಧ್ಯ. ಆದ್ದರಿಂದ ನಮ್ಮ ಸಂಗಾತಿಯನ್ನು ನಾವು ಇಷ್ಟಪಡಬೇಕು, ಆಗ ಅವರ ಜತೆಗಿನ ಬದುಕು ತುಂಬಾ ಸುಂದರ ಅನಿಸುವುದು.

ನೀವು ನೀವಾಗಿರಿ
ಮದುವೆಯ ಬಳಿಕ ನಿಮ್ಮೆಲ್ಲಾ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ಸಂಗಾತಿಯನ್ನು ಮೆಚ್ಚಿಸಲು ಪ್ರಯತ್ನಪಡುತ್ತಿದ್ದರೆ ನೀವು ತುಂಬಾ ಕಾಲ ಖುಷಿಯಾಗಿರಲು ಸಾಧ್ಯವಿಲ್ಲ. ಮೊದಲು ನೀವು ನೀವಾಗಿ ಇರಲು ಪ್ರಯತ್ನಿಸಿ, ಸಂಗಾತಿಗಾಗಿ ಕೆಲವೊಂದು ವಿಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕಾಗುತ್ತದೆ, ಹಾಗಂತ ಸಂಪೂರ್ಣ ಬದಲಾಗಲು ಪ್ರಯತ್ನಿಸಿದರೆ ಜೀವನ ತುಂಬಾ ಬೋರಾಗುವುದು. ನಿಮ್ಮ ಒಳ್ಳೆಯ ಹವ್ಯಾಸಗಳನ್ನು ಮುಂದುವರೆಸಿ, ನಿಮಗೆ ಮನಸ್ಸಿಗೆ ಖುಷಿ ಕೊಡುವುದನ್ನು ಮಾಡಿ. ಇದರಿಂದ ನೀವು ಸಂತೋಷವಾಗಿ ಇರುವಿರಿ. ನೀವು ಸಂತೋಷವಾಗಿರಲು ಕಾರಣವಾದ ಆ ವ್ಯಕ್ತಿಯನ್ನು ನೀವು ಮತ್ತಷ್ಟು ಪ್ರೀತಿಸುತ್ತೀರಿ.