For Quick Alerts
ALLOW NOTIFICATIONS  
For Daily Alerts

Stories of Strength: ದಾಲ್‌ ಸರೋವರದಲ್ಲೊಂದು ತೇಲುವ ಆ್ಯಂಬುಲೆನ್ಸ್: ಇದರ ಹಿಂದಿದೆ ಮಾನವೀಯ ಕತೆ

|

ಕೋವಿಡ್‌ 2ನೇ ಅಲೆಯಲ್ಲಿ ಕೊರೊನಾ ಸೋಂಕಿನ ತೀವ್ರ ಸ್ವರೂಪದಿಂದ ಆತಂಕದಲ್ಲಿರುವ ಜನರಿಗೆ Stories Of Strength ಮೂಲಕ ಧೈರ್ಯ ತುಂಬುವ ಪ್ರಯತ್ನವನ್ನು ಒನ್‌ಇಂಡಿಯಾ ಮಾಡುತ್ತಿದೆ.

ಕೊರೊನಾ ಪಾಸಿಟಿವ್‌ನಿಂದ ಚೇತರಿಸಿಕೊಂಡವರು ತಾವು ಕೊರೊನಾವನ್ನು ಗೆದ್ದ ಅನುಭವ ಹೇಳುವ ಮೂಲಕ ಅಥವಾ ಕೊರೊನಾ ಸೋಂಕಿನ ಸಂದರ್ಭದಲ್ಲಿ ಜನರಿಗೆ ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಈ ಭೂಮಿಯಲ್ಲಿ ಇನ್ನೂ ಜೀವಂತವಾಗಿದೆ ಎಂದು ಸಾಬೀತು ಮಾಡುತ್ತಿರುವ ಪುಣ್ಯ ವ್ಯಕ್ತಿಗಳನ್ನು ಪರಿಚಯಿಸುವುದೇ Stories Of Strengthನ ಮೂಲ ಉದ್ದೇಶವಾಗಿದೆ.

ನಾವು ಇಲ್ಲಿ ತಾರೀಖ್ ಪಟ್ಲೂ ಎಂಬ ವ್ಯಕ್ತಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಭಾರತದ ಮೊದಲ ತೇಲುವಆ್ಯಂಬುಲೆನ್ಸ್‌ನ ಮಾಲೀಕ. ದಾಲ್‌ ಸರೋವರ ಹಾಗೂ ಕಾಶ್ಮೀರ ನಡುವೆ ಓಡಾಡುತ್ತಿರುವ ಈ ಆ್ಯಂಬುಲೆನ್ಸ್ ಅನೇಕ ರೋಗಿಗಳ ಜೀವ ರಕ್ಷಕವಾಗಿದೆ.

ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ತಾರೀಖ್‌ ಪಟ್ಲೂ

ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ತಾರೀಖ್‌ ಪಟ್ಲೂ

ಕಾಶ್ಮೀರದಿಂದ ಲೇಕ್ ಸರೋರವರದ ಕಡೆಗೆ, ಲೇಕ್‌ ಸರೋವರದಿಂದ ಕಾಶ್ಮೀರದ ಕಡೆಗೆ ನಿತ್ಯ ಚಲಿಸುವ ಈಆ್ಯಂಬುಲೆನ್ಸ್ ನಿತ್ಯ ಜನರಿಗೆ ಕೋವಿಡ್‌ 19 ಸಂದರ್ಭದಲ್ಲಿ ಯಾವೆಲ್ಲಾ ಮುನ್ನೆಚ್ಚರಿಕೆವಹಿಸಬೇಕೆಂದು ಹೇಳುತ್ತಿದೆ. ಹೌದು ತಾರೀಖ್‌ ಪಟ್ಲೂ ತನ್ನ ಬೋಟ್‌ ಚಲಾಯಿಸುತ್ತಾ ಅಲ್ಲಿ ನೆಲೆಸಿರುವ ಜನರಲ್ಲಿ ಕೋವಿಡ್‌ 19 ಎದುರಿಸಲು ಯಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕೆಂದು ಕೂಗಿ ಹೇಳುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.

ಸೋಂಕಿತರಿಗೆ ಆಶಾಕಿರಣವಾಗಿರುವಆ್ಯಂಬುಲೆನ್ಸ್ ಬೋಟ್

ಸೋಂಕಿತರಿಗೆ ಆಶಾಕಿರಣವಾಗಿರುವಆ್ಯಂಬುಲೆನ್ಸ್ ಬೋಟ್

ಬೇರೆ ಸಾರಿಗೆ ಸೌಕರ್ಯವಿಲ್ಲದೆ ಕಂಗೆಟ್ಟಿದ್ದ ಇಲ್ಲಿಯ ಜನರಿಗೆ ಈ ಬೋಟ್‌ ಒಂದು ವರದಾನವಾಗಿದೆ. ಪಟ್ಲೂ ಸೋಂಕಿತರನ್ನು ತನ್ನ ಆ್ಯಂಬುಲೆನ್ಸ್ ಬೋಟ್‌ನಲ್ಲಿ ಕೊಂಡೊಯ್ಯುವುದು, ಕರೆದುಕೊಂಡು ಬರುವುದು ಮಾಡುತ್ತಿದ್ದಾರೆ. ಸೋಂಕಿತರನ್ನು ಕೊಂಡೊಯ್ಯಲು ಎಲ್ಲಾ ವ್ಯವಸ್ಥೆ ಈ ಬೋಟ್‌ನಲ್ಲಿದೆ. ಸ್ಟ್ರೆಚ್ಚರ್ ಇದೆ, ಆಕ್ಸಿ ಮೀಟರ್, ಗ್ಲುಕೋಮೀಟರ್‌ ವ್ಯವಸ್ಥೆ ಈ ಬೋಟ್‌ನಲ್ಲಿದೆ. ಸದ್ಯದಲ್ಲಿಯೇ ಆಕ್ಸಿಜನ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಪಟ್ಲೂ ತಿಳಿಸಿದ್ದಾರೆ.

 ಸ್ವಂತ ಖರ್ಚಿನಲ್ಲಿಯೇ ಬೋಟ್‌ ಅನ್ನುಆ್ಯಂಬುಲೆನ್ಸ್ ಮಾಡಿರುವ ಪಟ್ಲೂ

ಸ್ವಂತ ಖರ್ಚಿನಲ್ಲಿಯೇ ಬೋಟ್‌ ಅನ್ನುಆ್ಯಂಬುಲೆನ್ಸ್ ಮಾಡಿರುವ ಪಟ್ಲೂ

ಪಟ್ಲೂ ತನ್ನ ಬೋಟ್‌ ಅನ್ನು ಸ್ವಂತ ಖರ್ಚಿನಲ್ಲಿ ಆ್ಯಂಬುಲೆನ್ಸ್ಆಗಿ ಮಾರ್ಪಡಿಸಿದ್ದಾರೆ. ಇಲ್ಲಿಯ ಆಡಳಿತ ವ್ಯವಸ್ಥೆ ಕೂಡ ಈ ಕುರಿತು ಹೆಚ್ಚು ಚಿಂತೆ ಮಾಡದೇ ಇದ್ದಾಗ ಪಟ್ಲೂ ಜನರ ರಕ್ಷಣೆಗೋಸ್ಕರ ಮುಂದೆ ಬಂದಿದ್ದಾರೆ. ಆ ಮೂಲಕ ಮಾನವೀಯ ಕೆಲಸದಲ್ಲಿ ತೊಡಗಿದ್ದಾರೆ.

ಬೋಟ್‌ ಆ್ಯಂಬುಲೆನ್ಸ್ ಆದ ಹಿಂದಿರುವ ಕತೆ

ಬೋಟ್‌ ಆ್ಯಂಬುಲೆನ್ಸ್ ಆದ ಹಿಂದಿರುವ ಕತೆ

ಆಗಸ್ಟ್‌ನಲ್ಲಿ ಪಟ್ಲುಗೂ ಸೋಂಕು ತಗುಲಿತ್ತು, ಆ ಸಂದರ್ಭದಲ್ಲಿ ಅವರ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಆಗ ತಾವು ಅನುಭವಿಸಿದ ಕಷ್ಟ ಬೇರೆಯವರಿಗೆ ಬರಬಾರದು ಎಂದು ಭಾವಿಸಿರುವ ಪಟ್ಲೂ ಇದೀಗ ತಮ್ಮ ಬೋಟ್‌ ಅನ್ನುಆ್ಯಂಬುಲೆನ್ಸ್‌ ಆಗಿ ಮಾರ್ಪಡಿಸಿದ್ದರೆ, ಇವರ ಕಾರ್ಯಕ್ಕೆ ನಮ್ಮದೊಂದು ಹ್ಯಾಟ್ಸಾಪ್...

English summary

Stories of Strength: Dal Lake Gets Floating Ambulance To Aid Covid-19 Patients

Stories of Strength: Dal Lake gets floating ambulance to aid Covid-19 patients
Story first published: Thursday, June 3, 2021, 10:30 [IST]
X