For Quick Alerts
ALLOW NOTIFICATIONS  
For Daily Alerts

ಕೊರೊನಾ ಸಮಯದಲ್ಲಿ ಸಂಬಂಧ ಗಟ್ಟಿಯಾಗಲು ನಮ್ಮ ವರ್ತನೆ ಹೇಗಿರಬೇಕು?

|

ಈ ಕೊರೊನಾವೈರಸ್‌ ಒಂದು ದೇಶದ ಚಿತ್ರಣ, ಆರ್ಥಿಕ ಸ್ಥಿತಿಯನ್ನಷ್ಟೇ ಬದಲಾಯಿಸಿಲ್ಲ, ಸಂಬಂಧಗಳು, ಮನಸ್ಸು ಎಲ್ಲವನ್ನೂ ಬದಲಾಯಿಸಿದೆ.

ಎಷ್ಟೋ ಕುಟುಂಬದಲ್ಲಿ ಕೊರೊನಾದಿಂದಾಗಿ ಬರುವ ಆದಾಯ ನಿಂತು ಹೋಗಿದೆ, ತುಂಬಾ ಬೇಕಾದವರ ಉಸಿರು ನಿಂತು ಹೋಗಿದೆ, ಇನ್ನು ಕೆಲವು ಕುಟುಂಬದಲ್ಲಿ ಕೂಡಿಟ್ಟ ಹಣವೆಲ್ಲಾ ಆಸ್ಪತ್ರೆಗೆ ಖರ್ಚಾಗಿ ಮುಂದೇನು ಎಂಬ ಪ್ರಶ್ನೆ ಮೂಡಿದೆ, ಇನ್ನು ಕೆಲವರು ತಮ್ಮ ಮನೆಯಲ್ಲಿಯಲ್ಲಿ ಯಾರಿಗಾದರೂ ಕೊರೊನಾ ಸೋಂಕು ತಗುಲಿದರೆ ಅವರೊಂದಿಗೆ ವಿಚಿತ್ರವಾಗಿ ವರ್ತಿಸಿ ಮನುಷ್ಯತ್ವವನ್ನೇ ಕಳೆದುಕೊಂಡಿದ್ದಾರೆ.

ಇನ್ನು ಕೆಲವರು ಏನೇ ಬರಲಿ ಒಟ್ಟಾಗಿ ಇರುತ್ತೇವೆ ಎಂದು ಇಡೀ ಕುಟುಂಬ ಒಟ್ಟಾಗಿದೆ... ಸದಾ ಬ್ಯುಸಿ ಎಂದು ಅರ್ಧ ತಾಸು ಫೋನಿಗೆ ಸಿಗದ ಮಕ್ಕಳು ವರ್ಕ್‌ ಫ್ರಂ ಹೋಂನಿಂದಾಗಿ ಮನೆಯಲ್ಲಿರುವುದರಿಂದ ಹಿರಿ ಜೀವಗಳ ಮನಸ್ಸಿಗೆ ಖುಷಿಯಾಗಿದೆ... ಲಾಕ್‌ ಡೌನ್‌ ಕಾರಣದಿಂದ ಪರಸ್ಪರ ಕಾಣಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ ಪ್ರೇಮಿಗಳು ಹೀಗೆ ಒಬ್ಬೊಬ್ಬರದ್ದು ಒಂದೊಂದು ಕತೆ...

ಆದರೆ ಈ ಸಮಯದಲ್ಲಿ ನಾವೆಲ್ಲಾ ಒಂದು ಅರ್ಥ ಮಾಡಿಕೊಳ್ಳಬೇಕು.. ಈ ಕೊರೊನಾ ಇಂದು ಇದೆ, ಮುಂದೆ ಸಂಪೂರ್ಣ ಇಲ್ಲವಾಗುವುದು ಎಂಬ ಭರವಸೆಯೂ... ಸದ್ಯ ನಾವೆಲ್ಲಾ ಧನಾತ್ಮಕವಾಗಿ ಚಿಂತಿಸಬೇಕು, ಏನೇ ಬರಲಿ ಸಂಬಂಧ ದರ್ಬಲವಾಗಲು ಬಿಡಬಾರದು. ಅಲ್ಲದೆ ಯಾರ ಆತ್ಮವಿಶ್ವಾಸ ಕುಗ್ಗಲು ಬಿಡಬಾರದು.. ಅದಕ್ಕಾಗಿ ನಾವು ಮಾಡಬೇಕಾಗಿರುವುದು ಏನು ಎಂದು ನೋಡುವುದಾದರೆ:

 ಸಮಯ ಕೊಡಿ

ಸಮಯ ಕೊಡಿ

ಸಮಯವಿಲ್ಲ ಎಂದು ಹೇಳಿ ಒಂದು ಕಾಲಿನಲ್ಲಿ ಓಡುತ್ತಿದ್ದ ಕಾಲವಲ್ಲ ಇದು, ನಿಮ್ಮ ಪ್ರೀತಿ ಪಾತ್ರರಿಗೆ ಸಮಯ ಕೊಡಿ. ಇದು ಅವರ ಆತ್ಮವಿಶ್ವಾಸ ಹೆಚ್ಚಿಸುವುದು ಅಲ್ಲದೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸುವುದು.

ಬೆರೆಯಿರಿ

ಬೆರೆಯಿರಿ

ಮೊಬೈಲ್‌ ಬಂದ ಮೇಲೆ ಒಂದೇ ಮನೆಯಲ್ಲಿ ಇದ್ದರೂ ಎಲ್ಲರೂ ಮೊಬೈಲ್‌ನಲ್ಲಿ ಕಳೆಯುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದಾರೆ, ಎಲ್ಲೋ ನಡೆದ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ತಿಳಿಯ ಬಯಸುತ್ತಾರೆ, ಆದರೆ ಮನೆಯವರ ಮನಸ್ಸು ಅರಿಯಲು ಪ್ರಯತ್ನಿಸುವುದೇ ಇಲ್ಲ. ಇನ್ನು ವರ್ಕ್‌ ಫ್ರಂ ಹೋಂ ಮಾಡುತ್ತಿರುವವರು ಸದಾ ಕೆಲಸ ಅಂತ ಕೂರುವ ಬದಲು ಆಫೀಸ್‌ ಸಮಯದಲ್ಲಿ ಅಷ್ಟೇ ಕೆಲಸ ಮಾಡಿ.. ಉಳಿದ ಸಮಯ ಮನೆಯವರೊಂದಿಗೆ ಕಳೆಯಿರಿ.

ಇತರರ ಮಾತನ್ನು ಆಲಿಸಿ

ಇತರರ ಮಾತನ್ನು ಆಲಿಸಿ

ಬೇರೆಯವರ ಭಾವನೆಗಳಿಗೆ ಬೆಲೆ ಕೊಡಿ, ಅವರ ಮಾತನ್ನು ಆಲಿಸಿ ಇದರಿಂದ ಅವರ ಮನಸ್ಸು ಅರಿಯಲು ಸಾಧ್ಯವಾಗುತ್ತದೆ. ನಿಮ್ ಮನಸ್ಸಿನಲ್ಲಿ ಇರುವುದನ್ನು ಅವರೊಂದಿಗೆ ಹಂಚಿಕೊಳ್ಳಿ. ಇನ್ನು ಸಮಸ್ಯೆಗಳನ್ನು ಜೊತೆಯಾಗಿ ಎದುರಿಸಿ. ಮನೆಯಲ್ಲಿ ಯಾರಿಗಾದರೂ ಹುಷಾರು ಇಲ್ಲದಿದ್ದರೆ ಅವರಿಗೆ ಆತ್ಮವಿಶ್ವಾಸ, ಧೈರ್ಯ ತುಂಬಿ, ಪ್ರೀತಿಯಿಂದ ಕಾಣಿ.

 ಬೇಡದ ಸಂಬಂಧ ಗುರುತಿಸಿ

ಬೇಡದ ಸಂಬಂಧ ಗುರುತಿಸಿ

ಸುಖದಲ್ಲಿ ಎಲ್ಲರೂ ಜೊತೆಗಿರುತ್ತಾರೆ, ಕಷ್ಟ ಬಂದಾಗ ಯಾರು ಜೊತೆಗಿರುತ್ತಾರೆ, ಯಾರು ನಮ್ಮೊಂದಿಗೆ ಇಷ್ಟು ಸಮಯ ನಟಿಸುತ್ತಿದ್ದರು ಎಂದು ತಿಳಿಯುವುದು. ಸ್ವಾರ್ಥ ಸಂಬಂಧವನ್ನು ಸಾರಸಗಟವಾಗಿ ತಿರಸ್ಕರಿಸಿ. ನಮ್ಮ ಜೊತೆ ಇರುವವರಿಗೆ ಮೊದಲ ಪ್ರಾಶಸ್ತ್ಯ ನೀಡೋಣ.

ಕುಟುಂಬ, ಸ್ನೇಹ ಮತ್ತಷ್ಟು ಬಲ ಪಡಿಸೋಣ

ಕುಟುಂಬ, ಸ್ನೇಹ ಮತ್ತಷ್ಟು ಬಲ ಪಡಿಸೋಣ

ಈ ಸಮಯದಲ್ಲಿ ಪೋಷಕರಿಗೆ ಮಕ್ಕಳು ಹೇಗೆ ನೋಡಿಕೊಳ್ಳುತ್ತಾರೆ, ಸೊಸೆಯನ್ನು ಅತ್ತೆ, ಅತ್ತೆಯನ್ನು ಸೊಸೆ ಹೇಗೆ ನೋಡಿಕೊಳ್ಳುತ್ತಾಳೆ ಎಂಬುವುದೆಲ್ಲಾ ತಿಳಿಯುತ್ತದೆ. ಇದರ ಮೇಲೆ ನಮ್ಮ ಬದುಕಿನಲ್ಲಿ ಅವರ ಸ್ಥಾನ ನಿರ್ಧಾರವಾಗುವುದು.

ಈ ಸಮಯದಲ್ಲಿ ಕುಟುಂಬವನ್ನು ಆದಷ್ಟೂ ಒಗ್ಗೂಡಿಸಲು ಪ್ರಯತ್ನಿಸಿ, ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿ. ಮನೆಯವರೊಂದಿಗೆ ಉತ್ತಮ ಸಮಯ ಕಳೆಯಲು ಪ್ರಯತ್ನಿಸಿ. ಇವೆಲ್ಲಾ ನಿಮ್ಮ ಸಂಬಂಧವನ್ನು ಮತ್ತಷ್ಟು ಮಧುರವಾಗಿಸುವುದು ಹಾಗೂ ಎಲ್ಲಾ ಸವಾಲುಗಳನ್ನು ಎದುರಿಸಿ ಮೇಲೇಳಲು ನಿಮ್ಮನ್ನು ಪ್ರೇರೇಪಿಸುವುದು.

English summary

Nurturing Our Relationships During The Coronavirus Pandemic

Nurturing our relationships during the coronavirus pandemic, read on.. .
Story first published: Thursday, May 27, 2021, 21:45 [IST]
X
Desktop Bottom Promotion