For Quick Alerts
ALLOW NOTIFICATIONS  
For Daily Alerts

ಸಂಬಂಧದಲ್ಲಿ ನೀವೆಂದು ಈ ರೀತಿಯ ತಪ್ಪುಗಳನ್ನು ಮಾಡಬೇಡಿ..

|

ಸಂಬಂಧ ಎನ್ನುವುದು ಒಂದು ಸುಂದರವಾದ ಅನುಬಂಧ. ಅದರಲ್ಲಿ ಸಂತೋಷ ಎನ್ನುವುದು ಸುಲಭವಾಗಿ ಬರುವುದಿಲ್ಲ. ಸಂಗಾತಿಗಳ ನಡುವೆ ಸಮರ್ಪಣೆ, ನಂಬಿಕೆ, ತಿಳುವಳಿಕೆ, ವಿಶ್ವಾಸ, ತಾಳ್ಮೆ, ಪ್ರೀತಿ ಇರಬೇಕು. ಆಗಲೇ ಬದುಕಿನಲ್ಲಿ ಸುಂದರವಾದ ಜೀವನ ಹಾಗೂ ತೃಪ್ತಿಯ ಭಾವನೆ ಹೊಂದಲು ಸಾಧ್ಯ. ಆದರೆ ಅದು ಅಷ್ಟೊಂದು ಸುಲಭದ ಮಾತಲ್ಲ. ನಿಮ್ಮ ಮಧುರವಾದ ಬಂಧವನ್ನು ಹಾಳು ಮಾಡಲು ಎಲ್ಲಾ ಕಡೆಗಳಿಂದಲೂ ಪರಿಸ್ಥಿತಿಗಳು ನಿರ್ಮಾಣ ಆಗುತ್ತವೆ. ಆದರೆ ಇದೆಲ್ಲವನ್ನು ಮೆಟ್ಟಿ ನಡೆದಾಗ ಮಾತ್ರ ಸುಂದರ ಜೀವನ ನಿಮ್ಮದಾಗುತ್ತದೆ.

ಸಾಮಾನ್ಯವಾಗಿ ದಂಪತಿಗಳ ನಡುವೆ ಸ್ವಲ್ಪ ಹೊಂದಾಣಿಕೆ ಮತ್ತು ನಂಬಿಕೆ ಮೂಡುತ್ತಿದೆ ಎಂದಾಗ ಪರಸ್ಪರ ಸ್ವಾರ್ಥ ಗುಣವನ್ನು ತೋರಿಸಲು ಪ್ರಯತ್ನಿಸುತ್ತಾರೆ. ನಾನು ಎನ್ನುವ ಸ್ವಭಾವವನ್ನು ವ್ಯಕ್ತ ಪಡಿಸುತ್ತಾರೆ. ತಜ್ಞರು ಹೇಳುವ ಪ್ರಕಾರ ಮನುಷ್ಯನ ಸಂಬಂಧಗಳು ಆರಂಭದಲ್ಲಿ ಜೇನುತುಪ್ಪದಂತೆ ಇರುತ್ತದೆ. ನಂತರ ನಿಧಾನವಾಗಿ ಅದು ಕಹಿಯಾಗಿದೆ ಅನ್ನಿಸುತ್ತದೆ. ಎಷ್ಟೇ ಅರ್ಥ ಮಾಡಿಕೊಂಡು ಬದುಕುತ್ತಿದ್ದೇವೆ ಎಂದುಕೊಂಡಿದ್ದರೂ ಕೆಲವು ತರ್ಕಗಳು, ಕಾದಾಟ, ಅಳು, ದುಃಖ, ಪ್ರೀತಿಯ ಸಮಸ್ಯೆ, ಸಮತೋಲನ ಕಳೆದುಕೊಳ್ಳುವುದು ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ.

ಸಾಮಾನ್ಯವಾಗಿ ಸಂಬಂಧದಲ್ಲಿ ಸಮಸ್ಯೆಗಳು ಅನೇಕ ಕಾರಣಗಳಿಂದ ಹುಟ್ಟಿಕೊಳ್ಳುತ್ತವೆ. ಹಾಗಾದ್ರೆ ಬನ್ನಿ ಸಂಬಂಧದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲು ಕಾರಣಗಳೇನು ಎಂಬುದನ್ನು ತಿಳಿದುಕೊಳ್ಳೋಣ.

​ಸಂಗಾತಿಯನ್ನು ಲಘುವಾಗಿ ಪರಿಗಣಿಸುವುದು:

​ಸಂಗಾತಿಯನ್ನು ಲಘುವಾಗಿ ಪರಿಗಣಿಸುವುದು:

ಸಂಬಂಧದ ಮೊದಮೊದಲು ಎಲ್ಲವೂ ಚೆನ್ನಾಗಿರುತ್ತದೆ. ಸಂಗಾತಿಯ ಬಗ್ಗೆ ಆರಂಭದಲ್ಲಿ ಇರುವಷ್ಟು ಕಾಳಜಿ, ಕುತೂಹಲ, ಪ್ರೀತಿ ಎಲ್ಲವೂ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತವೆ. ಸಂಗಾತಿ ಎನ್ನುವ ಗೌರವವು ಕಡಿಮೆಯಾಗುವುದು. ಸಂಗಾತಿ ಯಾವಾಗಲೂ ನಿಮ್ಮೊಂದಿಗೆ ಇರುತ್ತಾಳೆ, ಯಾವಾಗಲೂ ಒಂದೇ ರೀತಿ ಎನ್ನುವಂತಹ ಲಘುವಾದ ಭಾವನೆಯನ್ನು ತಂದುಕೊಳ್ಳಬಾರದು. ಅದು ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆ ಹಾಗೂ ಬೇಸರವನ್ನು ಮೂಡಿಸುವುದು. ಸಂಗಾತಿಯ ನಡುವೆ ಯಾವಾಗ ಪ್ರೀತಿ ಗೌರವ ಹಾಗೂ ಕಾಳಜಿಯ ಭಾವನೆ ಕಡಿಮೆ ಆಗುತ್ತದೋ ಆಗ ಪರಸ್ಪರ ಬೇಸರ ಮತ್ತು ನಿರಾಸೆಯ ಭಾವನೆ ಮೂಡುವುದು. ದಂಪತಿಗಳು ಅಥವಾ ಸಂಗಾತಿಗಳು ಎಂದಿಗೂ ನಿಮ್ಮವರ ಬಗ್ಗೆ ನಿಷ್ಕಾಳಜಿ ತೋರದಿರಿ ಹಾಗೂ ಅವರನ್ನು ಲಘುವಾಗಿ ಪರಿಗಣಿಸದಿರಿ. ನಿಮ್ಮ ಬದುಕಿಗೆ ಅವರೇ ಪ್ರೀತಿಯ ದೀಪ ಹಾಗೂ ಬದುಕಿನ ಆಸ್ತಿ ಎನ್ನುವುದನ್ನು ನೆನಪಿನಲ್ಲಿ ಇಡಿ. ಆಗ ಎಲ್ಲವೂ ಸುಖಮಯವಾಗಿರುತ್ತದೆ.

​ನಂಬಿಕೆ ಕಳೆದುಕೊಳ್ಳುವುದು:

​ನಂಬಿಕೆ ಕಳೆದುಕೊಳ್ಳುವುದು:

ಸಂಬಂಧದಲ್ಲಿ ನಂಬಿಕೆ ಎನ್ನುವುದು ತುಂಬಾ ಮುಖ್ಯ. ರಿಲೇಷನ್ ಶಿಪ್ ನಿಂತಿರುವುದೋ ನಂಬಿಕೆ ಮೇಲೆ ಅಂದ್ರೆ ತಪ್ಪಾಗಲ್ಲ. ಸಂಬಂಧವನ್ನು ಅಥವಾ ದಾಂಪತ್ಯವನ್ನು ಪ್ರಾರಂಭಿಸುವಾಗ ಪರಸ್ಪರ ಇಬ್ಬರೂ ಅಗಾಧವಾದ ನಂಬಿಕೆ ಹಾಗೂ ಪ್ರೀತಿಯನ್ನು ಹೊಂದಿರುತ್ತಾರೆ. ತಮ್ಮ ಸಂಗಾತಿ ಶ್ರೇಷ್ಠ ಮತ್ತು ಪಾವಿತ್ರತೆಯನ್ನು ಕಾಪಾಡಿಕೊಂಡಿರುತ್ತಾರೆ ಎನ್ನುವ ನಂಬಿಕೆ ಇರುತ್ತದೆ. ಆ ನಂಬಿಕೆಯೇ ನಿಮ್ಮ ಜೀವನದಲ್ಲಿ ಬರುವ ಕಷ್ಟು ದುಃಖಗಳನ್ನು ಮೀರಿ ನಡೆಯಲು ಶಕ್ತಿ ನೀಡುವುದು. ಹಾಗಾಗಿ ಸಂಬಂಧದಲ್ಲಿ ರಹಸ್ಯವನ್ನು ಕಾಯ್ದುಕೊಳ್ಳುವುದು ಅಥವಾ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಳ್ಳುವುದು, ಅದು ಮೂರನೇ ವ್ಯಕ್ತಿಯಿಂದ ತಿಳಿದು ಬಂದಾಗ ಬೇಸರ ಉಂಟಾಗುವುದು. ಜೊತೆಗೆ ಸಂಗಾತಿಗೆ ದ್ರೋಹ ಮಾಡಿದ್ದಾರೆ ಎನ್ನುವ ಸತ್ಯ ಬದುಕಿನ ಆಸೆ ಹಾಗೂ ಸಂತೋಷವನ್ನು ಕಸಿದುಕೊಳ್ಳುವುದು. ಜೊತೆಗೆ ಸಂಗಾತಿಯ ಬಗ್ಗೆ ಯಾವುದೇ ನಂಬಿಕೆ ಹಾಗೂ ಭರವಸೆಗಳು ಉಳಿದುಕೊಳ್ಳುವುದಿಲ್ಲ. ಏನೇ ಮಾಡಿದರೂ ಅದರ ಹಿಂದೆ ಯಾವುದೋ ಒಂದು ಹುಸಿ ಸಂಗತಿ ಇದೆ ಎಂದೇ ಭಾವಿಸುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ನಂಬಿಕೆ ಕಳೆದುಕೊಳ್ಳುವಂತಹ ಕೆಲಸಕ್ಕೆ ಕೈ ಹಾಕಬೇಡಿ.

​ಸಂಶಯ ಪಡುವುದು:

​ಸಂಶಯ ಪಡುವುದು:

ಇದೊಂದು ಸಂಬಂಧ ಹಾಳುಮಾಡುವಂತಹ ಅತೀ ದೊಡ್ಡ ಅಂಶವಾಗಿದೆ. ಸಂಬಂಧದಲ್ಲಿ ನಿರಂತರವಾಗಿ ಸಂಗಾತಿಯ ಬಗ್ಗೆ ಸಂಶಯವನ್ನು ಹೊಂದಿದ್ದರೆ ಅದು ಸಂಬಂಧವನ್ನು ಹಾಳು ಮಾಡುವುದು. ಸಂಗಾತಿಯ ಪ್ರತಿಯೊಂದು ಕೆಲಸದ ಬಗ್ಗೆ ಸಂಶಯ ಪಡುವುದು ಹಾಗೂ ಪ್ರಶ್ನೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರೆ ಆಗ ಸಂಬಂಧದಲ್ಲಿ ಬೇಸರ ಹಾಗೂ ವಿಶ್ವಾಸ ಕಳೆದು ಹೋಗುತ್ತದೆ. ಪ್ರೀತಿಯ ಜೀವನ ತಲೆನೋವಾಗಿರುವಂತೆ ಪರಿಣಮಿಸುವುದು. ಒಮ್ಮೆ ಈ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದರೆ ಅದನ್ನು ಅಳಿಸುವುದು ಅಥವಾ ಸುಧಾರಿಸಿಕೊಳ್ಳುವುದು ವ್ಯಕ್ತಿಗೆ ಅತ್ಯಂತ ಕಷ್ಟದ ಸಂಗತಿಯಾಗಿರುತ್ತದೆ. ಆದಷ್ಟು ಇಂತಹ ಪ್ರವೃತ್ತಿಯನ್ನು ಬಿಟ್ಟರೆ ಸಂಬಂಧ ಸದಾ ಕಾಲ ಖುಷಿಯಲ್ಲಿ ಇರುವುದು. ಆದ್ದರಿಂದ ನಿಮ್ಮ ಸಂಗಾತಿ ನಿಮ್ಮ ಮೇಲೆ ಸಂಶಯ ಬರುವಂತೆ ಯಾವತ್ತಿಗೂ ನಡೆದುಕೊಳ್ಳಬೇಡಿ. ಆಗ ಸಂಸಾರ ಚೆನ್ನಾಗಿ ಇರುತ್ತದೆ.

​ಸಂಗಾತಿಗೆ ಗೌರವ ನೀಡದೆ ಇರುವುದು:

​ಸಂಗಾತಿಗೆ ಗೌರವ ನೀಡದೆ ಇರುವುದು:

ಪ್ರತಿಯೊಬ್ಬರಿಗೂ ತಮ್ಮ ತಮ್ಮದೇ ಗೌರವ ಸ್ವಾಭಿಮಾನ ಹೊಂದಿರುತ್ತಾರೆ. ಆದರೆ ಅದಕ್ಕೆ ಪೆಟ್ಟು ಬೀಳುವಂಥಹ ಕಾರ್ಯಕ್ಕೆ ಯಾವುದೇ ಗಂಡು -ಹೆಣ್ಣ್ಪಾಗಲಿ ಮುಂದಾಗಬಾರದು. ಇದು ನಿಮ್ಮ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬ ಸಂಗಾತಿಯ ನಡುವೆಯೂ ಲೈಂಗಿಕತೆಯ ಆಧಾರದ ಮೇಲೆ ಸಂಬಂಧವು ಗಟ್ಟಿಯಾಗಿರುತ್ತದೆ. ಅದರ ಆಧಾರದ ಮೇಲೆಯೇ ಸಂಗಾತಿ ಮೊದಲ ಆದ್ಯತೆಯನ್ನು ನನಗೆ ನೀಡಬೇಕು ಎನ್ನುವ ಭಾವನೆ ಇರುತ್ತದೆ. ಈ ಭಾವನೆಗಳಿಗೆ ನೋವು ಉಂಟಾದರೆ ಅಥವಾ ವಿಫಲರಾಗಿದ್ದರೆ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚುತ್ತವೆ. ಪರಸ್ಪರ ದ್ವೇಷ, ಅಸಹಕಾರ, ಪ್ರೀತಿಯ ಕೊರತೆಗೆ ಕಾರಣವಾಗುವುದು. ಇಂತಹ ಸ್ಥಿತಿಗಳು ಎದುರಾದಾಗ ಪರಸ್ಪರ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಅಥವಾ ಭಾವನೆಗಳನ್ನು ವ್ಯಕ್ತಪಡಿಸಿಕೊಳ್ಳುವುದರ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದು.

​ಸದಾ ಕಾಲ ತಪ್ಪಾದ ಮಾತುಕತೆಗಳು:

​ಸದಾ ಕಾಲ ತಪ್ಪಾದ ಮಾತುಕತೆಗಳು:

ಅದೆಷ್ಟೋ ಸಂಬಂಧಗಳು ಮುರಿದುಬೀಳುವುದೇ ಈ ಒಂದು ಕಾರಣದಿಂದ. ಸಂಬಂಧವನ್ನು ಕಾಯ್ದುಕೊಳ್ಳುವ ಏಕೈಕ ಕೀಲಿ ಕೈ ಸಂವಹನ. ಆದರೆ ಅಸಮರ್ಪಕ ಮಾತುಕತೆಗಳು ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗುತ್ತದೆ. ಸಂಗಾತಿಗಳು ಪರಸ್ಪರ ತಮ್ಮ ಮನಸ್ಸಿನ ಮಾತನ್ನು ಪರಸ್ಪರ ಹೇಳಿಕೊಂಡಾಗ ಮಾತ್ರ ಇಬ್ಬರೂ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಾಧ್ಯ. ಪ್ರೀತಿಯ ಜೀವನ ನಡೆಯಲು ಆಸ್ಪದ ದೊರೆಯುವುದು. ಅದೇ ಮನಸ್ಸಿನ ಮಾತನ್ನು ಹೇಳಿಕೊಳ್ಳದೆ, ಯಾವುದೋ ಒಂದು ವಿಷಯವನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುತ್ತಿರುವುದು, ಅದರಿಂದಾಗಿಯೇ ಚುಚ್ಚು ಮಾತುಗಳನ್ನು ಸಂಗಾತಿಗೆ ಹೇಳುವುದನ್ನು ಮಾಡಬಾರದು. ಪದೇ ಪದೇ ಉಂಟಾಗುವ ಮಾತಿನ ಇರಿತವು ಸಂಬಂಧವನ್ನು ಹಾಳು ಮಾಡುವುದು. ಜೊತೆಗೆ ಪರಸ್ಪರ ಪ್ರೀತಿಯ ಭಾವನೆಯನ್ನು ತಗ್ಗಿಸುವುದು. ಆದ್ದರಿಂದ ಮಾತನಾಡುವಾಗಲು ಬಹಳ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ.

English summary

Most Common Relationship Problems, According To Therapists

Many couple face lot of relationship problems, so here we are told Most Common Relationship Problems, According to Therapists,have a look
Story first published: Wednesday, December 30, 2020, 10:55 [IST]
X
Desktop Bottom Promotion