For Quick Alerts
ALLOW NOTIFICATIONS  
For Daily Alerts

ನವವಿವಾಹಿತರ ನಡುವೆ ಭಾಂದವ್ಯ ಮೂಡಿಸುವ ಸಲಹೆಗಳಿವು

|

ಮದುವೆಯಾದ ಹೊಸತರಲ್ಲಿ ದಂಪತಿಗಳಲ್ಲಿ ಒತ್ತಡ ಸಹಜ. ತಮ್ಮ ಸಂಗಾತಿಗೆ, ಕುಟುಂಬಕ್ಕೆ ಹೊಂದಿಕೊಳ್ಳಬೇಕಾಗಿರುತ್ತದೆ. ಈ ಪ್ರಕ್ರಿಯೆಗೆ ಸಮಯ ಹಿಡಿದರೂ, ನವವಿವಾಹಿತರು ತಮ್ಮ ಸಂಗಾತಿಯನ್ನು ಬೇಗನೇ ಅರ್ಥಮಾಡಿಕೊಳ್ಳಲು ಕೆಲವು ವಿಧಾನಗಳನ್ನು ಅನುಸರಿಸಬಹುದು. ಈ ಸಲಹೆಗಳಿಂದ ದಂಪತಿಗಳ ನಡುವೆ ಭಾಂದವ್ಯ ಬೆಳೆಯಲು ಅವಕಾಶ ಸಿಗುತ್ತದೆ. ಪತಿ-ಪತ್ನಿ ನಡುವೆ ಬಂಧ ಬೆಳೆದರೆ, ಮುಂದೆ ಕುಟುಂಬಕ್ಕೆ ಹೊಂದಿಕೊಳ್ಳುವುದು ದೊಡ್ಡ ವಿಚಾರವೇನಲ್ಲ. ಅದ್ದರಿಂದ ಇಲ್ಲಿ ನಾವು ನವವಿವಾಹಿತರಿಗೆ ಉಪಯುಕ್ತವಾಗಬಹುದಾದ ಕೆಲವು ಸಲಹೆಗಳನ್ನು ನೀಡಿದ್ದೇವೆ.

ನವವಿವಾಹಿತರಿಗೆ ಉಪಯುಕ್ತವಾಗಬಹುದಾದ ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಪರಸ್ಪರ ತಿಳಿದುಕೊಳ್ಳಲು ಕಾಲಾವಕಾಶ ನೀಡಿ:

ಪರಸ್ಪರ ತಿಳಿದುಕೊಳ್ಳಲು ಕಾಲಾವಕಾಶ ನೀಡಿ:

ಒಬ್ಬ ವ್ಯಕ್ತಿಗೆ ಬೆಳೆಯಲು ಜಾಗವನ್ನು ನೀಡುವುದು ಒಂದು ಪ್ರಮುಖ ಅಂಶವಾಗಿದೆ. ಇದರಿಂದ ಇಬ್ಬರು ಪ್ರತ್ಯೇಕವಾಗಿ ಮತ್ತು ಜೋಡಿಯಾಗಿ ಬೆಳೆಯುತ್ತಾರೆ. ವಿಭಿನ್ನ ಆಸಕ್ತಿಯಿರುವ ವ್ಯಕ್ತಿಗಳು ಪತಿ-ಪತ್ನಿಯಾಗಿ ಜೊತೆಯಾದಾಗ, ಇಬ್ಬರು ಹಳೆಯ ಅಭ್ಯಾಸಗಳನ್ನು ಬಿಡಬೇಕಾಗಬಹುದು ಅಥವಾ ರಾಜಿ ಮಾಡಿಕೊಳ್ಳಬೇಕಾಗಬಹುದು. ಆದ್ದರಿಂದ ನವವಿವಾಹಿತ ದಂಪತಿಗಳಿಗೆ, ಪರಸ್ಪರರ ಹಾಗೂ ತಮ್ಮ ಸುತ್ತಮುತ್ತಲಿನ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡಬೇಕು.

ನಿಮಗೆ ಮುಖ್ಯವಾದ ವಿವಿಧ ವಿಷಯಗಳ ಬಗ್ಗೆ ಮಾತನಾಡಿ:

ನಿಮಗೆ ಮುಖ್ಯವಾದ ವಿವಿಧ ವಿಷಯಗಳ ಬಗ್ಗೆ ಮಾತನಾಡಿ:

ನಿಮಗೆ ಮತ್ತು ನೀವು ಮಹತ್ವ ನೀಡುವ ಜನರಿಗೆ ಮುಖ್ಯವಾಗುವ ವಿಷಯಗಳ ಕುರಿತು ಮಾತನಾಡುವುದು ವೈವಾಹಿಕ ಸಂಬಂಧದಲ್ಲಿ ಮುಖ್ಯವಾಗಿದೆ. ಇದು ಒಬ್ಬರಿಗೊಬ್ಬರು ಬಾಂಧವ್ಯಕ್ಕೆ ಬರಲು ಉತ್ತಮ ದಾರಿಯಾಗಿದೆ. ಆದ್ದರಿಂದ ಇಬ್ಬರಿಗೂ ಮುಖ್ಯವಾಗಿರುವ ವಿಷಯಗಳ ಬಗ್ಗೆ ಮಾತನಾಡಿ. ಯಾವುದಾದರೂ ವಿಚಾರಗಳಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿದ್ದರೂ ಸಹ, ಈ ದಾರಿಯಿಂದ ಕೆಲವು ವಿಷಯಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬರಿಗೊಬ್ಬರು ಪ್ರಬುದ್ಧರಾಗಿ ಮತ್ತು ತೃಪ್ತಿ ಹೊಂದಲು ಸಾಧ್ಯವಾಗುತ್ತದೆ.

ಚಟುವಟಿಕೆಗಳನ್ನು ಆಯೋಜಿಸಿ:

ಚಟುವಟಿಕೆಗಳನ್ನು ಆಯೋಜಿಸಿ:

ಬಾಂಡಿಂಗ್ ಎನ್ನುವುದು ವರ್ಷಗಳವರೆಗೆ ಅಭ್ಯಾಸ ಮಾಡಬೇಕಾದ ಚಟುವಟಿಕೆಯಾಗಿದೆ. ನಿಮ್ಮ ಸುತ್ತಲಿರುವ ಇತರ ವ್ಯಕ್ತಿಯ ನಿರಂತರ ಉಪಸ್ಥಿತಿಯೊಂದಿಗೆ ಪರಸ್ಪರ ತಿಳಿದುಕೊಳ್ಳಲು, ನೀವಿಬ್ಬರು ಈವೆಂಟ್‌ಗಳನ್ನು ಯೋಜಿಸಬೇಕು ಮತ್ತು ನಿಮ್ಮಿಬ್ಬರ ಆಸಕ್ತಿಯ ಚಟುವಟಿಕೆಗಳನ್ನು ಮಾಡಬೇಕು. ಈ ಚಟುವಟಿಕೆಗಳು ಇಬ್ಬರು ವ್ಯಕ್ತಿಗಳು ಉತ್ತಮ ಬಂಧಕ್ಕೆ ಸಹಾಯ ಮಾಡುತ್ತವೆ.

ಗಡಿಗಳನ್ನು ಹಾಕಬೇಡಿ:

ಗಡಿಗಳನ್ನು ಹಾಕಬೇಡಿ:

ನಿಮ್ಮ ಸಂಗಾತಿಯ ಮೇಲೆ ಗಡಿಗಳನ್ನು ಹಾಕುವುದರಿಂದ ವಿಶ್ವಾಸಾರ್ಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸಂಗಾತಿಯು ಸ್ವತಂತ್ರವಾಗಿರಲಿ, ಅವರ ಕೆಲಸವನ್ನು ಮಾಡಲಿ, ಆಗ, ಅವರು ನಿಮ್ಮ ಮೇಲೆ ಯಾವುದೇ ಗಡಿಗಳನ್ನು ಹಾಕುವುದಿಲ್ಲ. ಮದುವೆಯಾದ ಹೊಸತರಲ್ಲಿಯೇ ಗಡಿಗಳನ್ನು ಸೃಷ್ಟಿಸುವುದರಿಂದ, ನಿಮ್ಮ ನಡುವೆ ಅಂತರ ಹುಟ್ಟಿಕೊಳ್ಳಲು ಕಾರಣವಾಗಬಹುದು, ಆ ಅಂತರ ಸಮಯ ಕಳೆದಂತೆ ಹೆಚ್ಚುತ್ತಾ ಸಾಗಬಹುದು.

ಪರಸ್ಪರ ಮಾತನಾಡಿ:

ಪರಸ್ಪರ ಮಾತನಾಡಿ:

ಬಿಡುವಿಲ್ಲದ ವೇಳಾಪಟ್ಟಿಯಲ್ಲಿಯೂ ಸಹ, ದಂಪತಿಗಳು ಪರಸ್ಪರ ಮಾತನಾಡಬೇಕು. ನಿಮ್ಮ ಸಂಗಾತಿಯೊಂದಿಗೆ ಸಂವಾದ ನಡೆಸುವುದರಿಂದ ಸಾಕಷ್ಟು ಸಮಸ್ಯೆಗಳು ಬಗೆಹರಿಯುತ್ತವೆ. ಆದ್ದರಿಂದ ಸಂಗಾತಿಯೊಂದಿಗೆ ಸಮಯವನ್ನು ಕಳೆಯಿರಿ ಮತ್ತು ನೀವು ಹೇಗೆ ಭಾವಿಸುತ್ತೀರಿ ಎಂಬುದರ ಕುರಿತು ಪ್ರಾಮಾಣಿಕವಾಗಿರಿ. ನಿಮ್ಮ ಸಂಗಾತಿಯು ನಿಮ್ಮ ಉತ್ತಮ ಸ್ನೇಹಿತನಂತೆ. ಸಮಯದೊಂದಿಗೆ ಒಬ್ಬರನ್ನೊಬ್ಬರು ನಂಬಲು ಕಲಿಯಿರಿ ಮತ್ತು ಒಂದು ದಿನದಲ್ಲಿ ನಿಮ್ಮಿಬ್ಬರಿಗೆ ಕನಿಷ್ಠ 20 ನಿಮಿಷಗಳನ್ನು ನೀಡಿ.

English summary

Marriage Advice for Newlyweds in Kannada: Tips Every Newly Married Couple Must Know

Here we talking about Marriage Advice for Newlyweds in Kannada: Tips Every Newly Married Couple Must Know, read on
Story first published: Friday, December 24, 2021, 17:35 [IST]
X
Desktop Bottom Promotion