For Quick Alerts
ALLOW NOTIFICATIONS  
For Daily Alerts

ಚಾಣಕ್ಯ ಪ್ರಕಾರ ನಾವು ಎಂಥವರನ್ನು ಮದುವೆಯಾದರೆ ಖುಷಿಯಾಗಿರುತ್ತೇವೆ ಗೊತ್ತಾ?

|

ಚಾಣಿಕ್ಯ ಆ ಕಾಲದ ಮಹಾನ್‌ ಮೇಧಾವಿ, ಅರ್ಥಶಾಸ್ತ್ರಜ್ಞ. ಇವರು ಅರ್ಥಶಾಸ್ತ್ರದ ವಿಷಯವನ್ನಷ್ಟೇ ಹೇಳಲಿಲ್ಲ, ಬದಲಿಗೆ ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ಸಂಬಂಧಿಸು ಹಲವಾರು ನೀತಿ ಪಾಠಗಳನ್ನು ಹೇಳಿದ್ದಾರೆ. ಸಂಸಾರ, ವೃತ್ತಿ ಜೀವನ, ಆಧ್ಯಾತ್ಮ ಹೀಗೆ ನಮ್ಮ ಬದುಕಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದ ಬಗೆಯೂ ಚಾಣಿಕ್ಯ ಹೇಳಿದ್ದಾರೆ, ಅವರು ಹೇಳಿರುವ ವಿಷಯಗಳು ಇಂದಿಗೂ ಪ್ರಸ್ತುತವಾಗಿದೆ, ಅವರು ನಮಗಾಗಿಯೇ ಹೇಳಿದಂತೆ ಅನಿಸುವುದು.

ನಾವು ಯೌವನ ಪ್ರಾಯಕ್ಕೆ ಬಂದಾಗ ಮದುವೆ ಬಗ್ಗೆ ಯೋಚಿಸುತ್ತೇವೆ, ಬದುಕಿನಲ್ಲಿ ಒಬ್ಬ ಸಂಗಾತಿ ಬೇಕೆನಿಸುವುದು. ಸಂಗಾತಿಯ ಆಯ್ಕೆ ಸರಿಯಾಗಿದ್ದರೆ ಸಂಸಾರ ಆನಂದ ಸಾಗರ, ಇಲ್ಲದಿದ್ದರೆ ಅಲ್ಲಿಂದ ಬದುಕಿನ ನರಕ ಶುರುವಾಗುವುದು. ಆದ್ದರಿಂದ ಮನೆಯವರು ಒಪ್ಪಿದ್ದಾರೆ ಅಥವಾ ತುಂಬಾ ಆಸ್ತಿ ಇದೆ ಹೀಗೆ ಯಾವುದೋ-ಯಾವುದೋ ಕಾರಣ ಹುಡುಕಿ ಮದುವೆಯಾದರೆ ಆ ಸಂಸಾರದಲ್ಲಿ ನೆಮ್ಮದಿ ಖಂಡಿತ ಸಿಗಲ್ಲ.

ಆದ್ದರಿಂದ ಪ್ರತಿಯೊಬ್ಬರಿಗೂ ತಮಗೆ ಎಂಥ ಸಂಗತಿ ಬೇಕು ತಿಳಿದಿರಬೇಕು. ಏಕೆಂದರೆ ನಾವು ಮದುವೆಯಾಗುವ ವ್ಯಕ್ತಿ ನಮಗೆ ಮಾತ್ರ ಹೊಂದಿಕೊಂಡರೆ ಸಾಲದು, ನಮ್ಮ ಕುಟುಂಬ, ಆಚಾರ, ವಿಚಾರಗಳು, ನಾವು ಪಾಲಿಸಿಕೊಂಡು ಬರುವ ಧರ್ಮ ಎಲ್ಲಕ್ಕೂ ಹೊಂದಿಕೊಳ್ಳುವವರಾಗಿರಬೇಕು. ಇಲ್ಲದಿದ್ದರೆ ಮಿಸ್‌ ಅಂಡರ್‌ಸ್ಟ್ಯಾಂಡಿಂಗ್ ಅಂತ ಶುರುವಾಗಿ ಮದುವೆ ಖುಷಿಯೇ ಮಿಸ್‌ ಆಗಬಹುದು.

ನೀವು ಬಾಳ ಸಂಗಾತಿಯ ಆಯ್ಕೆ ಮಾಡುವಾಗ ಚಾಣಿಕ್ಯ ಹೇಳಿರುವ ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ವೈವಾಹಿಕ ಜೀವನ ಸೂಪರ್ ಆಗಿರುತ್ತೆ.

ಮದುವೆ ಜೀವನದಲ್ಲಿ ಎಫರ್ಟ್ ಮುಖ್ಯ

ಮದುವೆ ಜೀವನದಲ್ಲಿ ಎಫರ್ಟ್ ಮುಖ್ಯ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂದು ಹೇಳಲಾಗುವುದು, ಇದ್ರು ಇರಬಹುದು ಆದರೆ ಈ ಭೂಮಿ ಮೇಲೆ ವೈವಾಹಿಕ ಜೀವನದಲ್ಲಿ ಖುಷಿಯಾಗಿರಬೇಕೆಂದರೆ ಪ್ರಯತ್ನ ತುಂಬಾ ಮುಖ್ಯ. ಅದನ್ನೇ ಚಾಣಕ್ಯ ಹೇಳಿರುವುದು. ಒಂದು ಸಂಸಾರದಲ್ಲಿ ಹೊಂದಾಣಿಕೆ ಎಂಬುವುದು ತುಂಬಾನೇ ಮುಖ್ಯವಾಗಿರುತ್ತೆ.

ಹೊಂದಿಕೊಂಡು ಹೋಗುವ ವಿಚಾರದಲ್ಲಿ ಲವ್‌ ಮ್ಯಾರೇಜ್‌, ಅರೇಂಜ್‌ ಮ್ಯಾರೇಜ್‌ ಎರಡರಲ್ಲೂ ಅದರದ್ದೇ ಪ್ಲಸ್‌-ಮೈನಸ್‌ಗಳಿವೆ. ಅರೇಂಜ್‌ ಮ್ಯಾರೇಜ್‌ ಆದರೆ ನಮ್ಮ ಧರ್ಮ, ಆಚಾರ-ವಿಚಾರಗಳ ಬಗ್ಗೆ ಗೊತ್ತಿರುತ್ತೆ ಹೊಂದಿಕೊಂಡು ಹೋಗುವುದು ಸುಲಭ ಎಂದು ಹೇಳುತ್ತಾರೆ. ಲವ್‌ ಮ್ಯಾರೇಜ್‌ ಸಪೋರ್ಟ್ ಮಾಡುವವರು ಲವ್‌ ಮ್ಯಾರೇಜ್‌ನಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡಿರುತ್ತಾರೆ ಆದರೆ ಲವ್‌ ಮ್ಯಾರೇಜ್‌ ಒಳ್ಳೆಯದು ಎಂದು ಹೇಳುತ್ತಾರೆ. ಲವ್‌ ಮ್ಯಾರೇಜ್‌ ಆದವರು ಎಲ್ಲರೂ ಖುಷಿಯಾಗಿಲ್ಲ, ಅದೇ ಎಲ್ಲಾ ಅರೇಂಜ್‌ ಮ್ಯಾರೇಜ್‌ ಸಕ್ಸಸ್ ಆಗಿಲ್ಲ.

ಮದುವೆ ಪ್ರೀತಿಸಿಯಾದರೂ ಆಗಿ ಅಥವಾ ಮನೆಯವರು ತೋರಿಸಿದವರನ್ನೇ ಆಗಿ ಅದು ನಿಮ್ಮಿಷ್ಟ, ನೀವು ಸಕ್ಸಸ್‌ಫುಲ್‌ ಮ್ಯಾರೇಜ್‌ ಫರ್ಮುಲಾ ತಿಳಿಯ ಬಯಸುವುದಾದರೆ ಅದು ಹೊಂದಾಣಿಕೆ. ಚಾಣಕ್ಯ ಕೂಡ ಸಂಸಾರದಲ್ಲಿ ಹೊಂದಣಿಕೆ ಮುಖ್ಯ ಎಂದು ಹೇಳಿದ್ದಾರೆ. ಯಾರು ಈ ರೀತಿ ಹೊಂದಾಣಿಕೆಗೆ ಸಿದ್ಧರಿರುತ್ತಾರೋ ಅವರನ್ನು ಮದುವೆಯಾಗಬೇಕು.

ಪತ್ನಿಯನ್ನು ಹಗಲಿನಲ್ಲಿ ಸಮೀಸುವುದೇ ಗೃಹಸ್ಥನ ಕರ್ತವ್ಯ: ಚಾಣಕ್ಯ

ಪತ್ನಿಯನ್ನು ಹಗಲಿನಲ್ಲಿ ಸಮೀಸುವುದೇ ಗೃಹಸ್ಥನ ಕರ್ತವ್ಯ: ಚಾಣಕ್ಯ

ಗಂಡ-ಹೆಂಡತಿ ಸಂಬಂಧ ಹೇಗಿರಬೇಕು? ಅದಕ್ಕೆ ಚಾಣಕ್ಯ ಹೇಳುತ್ತಾರೆ ಪತ್ನಿಯನ್ನು ಹಗಲಿನಲ್ಲಿ ಸಮೀಪಿಸುವುದೇ ಒಬ್ಬ ಗೃಹಸ್ಥನ ಕರ್ತವ್ಯ. ಅಂದರೆ ಈ ಮಾತಿನ ಅರ್ಥ

ಗಂಡ ಹೆಂಡತಿ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಗಂಡ-ಹೆಂಡತಿ ಸಂಬಂಧ ಲೈಂಗಿಕತೆ ಎಂಬುವುದು ತುಂಬಾ ಮುಖ್ಯವಾಗುತ್ತೆ. ಗಂಡ-ಹೆಂಡತಿ ಸಂಬಂಧ ಮತ್ತಷ್ಟು ಗಟ್ಟಿಯಾಗಿಸುವುದೇ ಲೈಂಗಿಕತೆ. ಆದರೆ ಈ ಕುರಿತು ಮಾತನಾಡಿದರೆ ಎಲ್ಲಿ ತಪ್ಪಾಗುತ್ತೆ ಎಂಬ ಭಯ, ಹಿಂಜರಿಕೆಯಲ್ಲಿ ಮಾತನಾಡದೆ ಎಷ್ಟೋ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರುತ್ತಿವೆ.

ವೈವಾಹಿಕ ಜೀವನ, ಸಂತಾನೋತ್ಪತ್ತಿ

ವೈವಾಹಿಕ ಜೀವನ, ಸಂತಾನೋತ್ಪತ್ತಿ

ಸೆಕ್ಸ್‌ ಎಂಬುವುದು ಇಬ್ಬರು ವ್ಯಕ್ತಿಗಳ ಖಾಸಗಿ ವಿಷಯವಾಗಿದೆ. ವೈವಾಹಿಕ ಜೀವನದಲ್ಲಿ ಲೈಂಗಿಕತೆ ಎಂಬುವುದು ದೈಹಿಕ ಆಸೆ ಮಾತ್ರವಲ್ಲ, ವಂಶೋದ್ಧಾರಕರನ್ನು(ಮಕ್ಕಳನ್ನು) ಪಡೆಯುವುದೂ ಆಗಿರುತ್ತೆ. ಉತ್ತಮ ಮಕ್ಕಳನ್ನು ಪಡೆಯಲು ಯಾವ ಸಮಯದಲ್ಲಿ ಪ್ರಯತ್ನಿಸಬೇಕು ಎಂಬುವುದರ ಬಗ್ಗೆಯೂ ಭಾರತೀಯ ಗ್ರಂಥದಲ್ಲಿ ಹೇಳಲಾಗಿದೆ.

ಆದ್ದರಿಂದ ಸೆಕ್ಸ್ ವಿಷಯದಲ್ಲಿ ಹಿಂಜರಿಕೆ ಬೇಡ, ಗಂಡ-ಹೆಂಡತಿ ಪರಸ್ಪರ ದೇಹ ಹಾಗೂ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಂಡರೆ ಗಂಡ-ಹೆಂಡತಿ ಸಂಬಂಧ ಬಲವಾಗುವುದು. ನಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಕ್ಕರೆ ವೈವಾಹಿಕ ಜೀವನ ಖುಷಿಯಾಗಿರುತ್ತೆ.

English summary

Chanakya Niti :To Whom we Should we Get Married? Who Will Be Right Partner For Us?

Chanakya Niti: If you want blissfull married life, who must know whom you should married, read on...
Story first published: Thursday, November 3, 2022, 13:23 [IST]
X
Desktop Bottom Promotion