Just In
Don't Miss
- News
ಹುಲಿ ಹಾವಳಿ ತಡೆಯದಿದ್ದರೆ ರೈತರಿಂದ ಕೊಡಗು ಬಂದ್ ಎಚ್ಚರಿಕೆ
- Sports
ಅಂಪೈರ್ ವಿರುದ್ಧ ಅಸಮಾಧಾನ, ಮ್ಯಾಚ್ ರೆಫರೀಗೆ ದೂರಿತ್ತ ಇಂಗ್ಲೆಂಡ್
- Automobiles
ಹೊಸ ಸಫಾರಿ ಕಾರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Movies
ಜೈಲಿನಿಂದ ಹೊರಬಂದ ಬಳಿಕ ಹೊಸ ಸಿನಿಮಾ ಕೈಗೆತ್ತಿಕೊಂಡ ರಾಗಿಣಿ
- Education
BMRCL Recruitment 2021: ಚೀಫ್ ಇಂಜಿನಿಯರ್, ಮ್ಯಾನೇಜರ್ ಮತ್ತು ಡಿಜಿಎಂ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಎಲ್ಪಿಜಿ ಸಿಲಿಂಡರ್ಗಳ ಬೆಲೆ ಮತ್ತೆ ಹೆಚ್ಚಳ: ತಿಂಗಳಲ್ಲಿ 3ನೇ ಬಾರಿ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದ ಸಂಬಂಧದ ವಿಚಾರಗಳು
ಸಾಮಾಜಿಕ ಜಾಲತಾಣವೆಂದರೆ ಅದು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತಾಗಿದೆ. ಅದರಲ್ಲೂ ಕೆಲವರು ತಮ್ಮ ದೈನಂದಿನ ಹಾಗೂ ಜೀವನದ ಪ್ರತಿಯೊಂದು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವರು. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವ ಚರ್ಚೆಯು ಆಗಾಗ ನಡೆಯುತ್ತಲಿರುತ್ತದೆ. ಯಾಕೆಂದರೆ ಕೆಲವೊಂದು ಸಲ ಸಂಬಂಧದ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಆಗ ಅದರಿಂದ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಇವೆ.
ಹೀಗಾಗಿ ಸಂಬಂಧದ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಇದು ಸಂಬಂಧವನ್ನು ಕೆಡಿಸುವುದು.ನೀವು ಆಯ್ಕೆ ಮಾಡುವಂತಹ ಫೋಟೊಗಳು, ಅದಕ್ಕೆ ನೀಡುವಂತಹ ಅಡಿಬರಹಗಳು ನೋಡುಗರ ಮೇಲೆ, ಸಂಗಾತಿ ತುಂಬಾ ಗಾಢವಾದ ಪರಿಣಾಮ ಬೀರುವುದು. ಕೆಲವು ಮಂದಿಗೆ ಸಾಮಾಜಿ ಜಾಲತಾಣ ಮತ್ತು ಅದರ ವರ್ತನೆ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಇದರಿಂದ ನಾವು ಇಲ್ಲಿ ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇವೆ. ಸಂಬಂಧದ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೀವು ಕಡೆಗಣಿಸಬೇಕಾದ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ನೀವು ಇದನ್ನು ತಿಳಿಯಲು ತಯಾರಾಗಿ...

ಆಕೆಯ ಅನುಮತಿ ಇಲ್ಲದೆ ಯಾವುದೇ ವೈಯಕ್ತಿವಲ್ಲ
ಫೋಟೋಗಳನ್ನು ಹಂಚಿಕೊಳ್ಳುವುದು ನಿಮ್ಮ ಪ್ರೀತಿ ಹಾಗೂ ಭಾವನೆಗಳನ್ನು ಹಂಚಿಕೊಳ್ಳಲು ಸರಿಯಾದ ವಿಧಾನವಾಗಿದೆ. ಆದರೆ ಯಾವ ಫೋಟೊ ಆಯ್ಕೆ ಮಾಡುತ್ತೀರಿ ಎಂದು ಎಚ್ಚರಿಕೆ ವಹಿಸಬೇಕು. ನೀವು ತುಂಬಾ ವೈಯಕ್ತಿಕವಾದ ಚಿತ್ರ ಬಳಸುತ್ತಿದ್ದಾರೆ ಆಗ ಸಂಗಾತಿ ಬಳಿ ಮೊದಲಿಗೆ ಅನುಮತಿ ಹೇಳಿ. ನೀವು ಪೋಸ್ಟ್ ಮಾಡಲಿರುವ ಫೋಟೊದ ಬಗ್ಗೆ ಸಂಗಾತಿಗೆ ಕೂಡ ನಿಮ್ಮಷ್ಟೇ ಸಂತೋಷವಿರಲಿ. ಏನಾದರೂ ಮಾಡುವ ಮೊದಲು ಅವರ ಸಲಹೆ ಪಡೆಯುತ್ತಿರುವ ಕಾರಣದಿಂದ ಸಂಗಾತಿಗೆ ಕೂಡ ತುಂಬಾ ವಿಶೇಷ ಭಾವನೆ ಆಗುವುದು. ಇದರಿಂದ ಭವಿಷ್ಯದಲ್ಲಿ ಕೂಡ ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು.
Most Read: ಎಷ್ಟೇ ಕಷ್ಟವಾದರೂ ಸರಿ, ಈ ಏಳು ಕಹಿ ಸತ್ಯಗಳನ್ನೆಂದೂ ನಿಮ್ಮ ಪತಿಗೆ ಹೇಳದಿರಿ!

ನೀವು ಉಡುಗೊರೆ ನೀಡುವ ಪ್ರತಿಯೊಂದು…
ನೀವು ಸಂಗಾತಿಗೆ ನೀಡುತ್ತಿರುವಂತಹ ಪ್ರತಿಯೊಂದು ಉಡುಗೊರೆಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರೆ ಇದು ನೀವು ಮಾಡುತ್ತಿರುವ ದೊಡ್ಡ ತಪ್ಪು. ಇದು ಸಂಬಂಧದ ಮೇಲೆ ಧನಾತ್ಮಕವಾದ ಪರಿಣಾಮ ಬೀರುವುದಿಲ್ಲ. ನೀವು ಉಡುಗೊರೆ ಕೊಡುತ್ತಲಿದ್ದರೆ ಆಗ ನೀವು ಪ್ರತಿಯೊಂದರ ಫೋಟೊ ಮತ್ತು ಪ್ರತಿಯೊಂದನ್ನು ಪೋಸ್ಟ್ ಮಾಡಬೇಡಿ. ಯಾಕೆಂದರೆ ಇದರಿಂದ ನಿಮ್ಮ ಸಂಗಾತಿಗೆ ನೀವು ಪ್ರೀತಿಯನ್ನು ಬೇರೆಯವರ ಮುಂದೆ ತೋರಿಸುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೀರಿ ಎನ್ನುವ ಭಾವನೆ ಮೂಡುವುದು.

ಸಣ್ಣ ಭಾವನೆಗಳನ್ನು ಕೂಡ
ಬೇರೆಯವರ ಮುಂದೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಕಾರಣದಿಂದ ಸಂಗಾತಿಯು ತುಂಬಾ ಒಳ್ಳೆಯ ಭಾವನೆ ಹೊಂದವರು. ಆದರೆ ಸಂಬಂಧದಲ್ಲಿ ಅನ್ಯೋನ್ಯತೆ ಎನ್ನುವುದು ತುಂಬಾ ಮುಖ್ಯ. ಸಂಬಂಧದ ಬಗ್ಗೆ ತೀರ ಸಣ್ಣ ವಿಚಾರಗಳನ್ನು ಹಂಚಿಕೊಳ್ಳ ಬಾರದು ಮತ್ತು ನಿಮ್ಮ ಪ್ರತಿಯೊಂದು ಭಾವನೆಗಳು ಸಾಮಾಜಿಕ ಜಾಲತಾಣಕ್ಕೆ ಹೋಗಬಾರದು. ಕೆಲವೊಂದು ವಿಚಾರಗಳು ನಿಮ್ಮ ಹಾಗೂ ಸಂಗಾತಿ ಮಧ್ಯೆ ಇರಬೇಖು. ನಿಮ್ಮ ಸಂಬಂಧದಲ್ಲಿ ಏನಾಗುತ್ತಿದೆ ಎನ್ನುವ ಪ್ರತಿಯೊಂದು ವಿಚಾರವು ಹೊರ ಜಗತ್ತಿಗೆ ಗೊತ್ತಾಗುವುದು ಬೇಡ.

ನಿಮ್ಮ ಬ್ರೇಕ್ ಅಪ್
ನೀವಿಬ್ಬರು ದೂರವಾಗಲು ಹಲವಾರು ಕಾರಣಗಳು ಇರಬಹುದು. ಇದು ತುಂಬಾ ಭಾವನಾತ್ಮಕ ಕ್ಷಣವಾಗಿರುವ ಕಾರಣದಿಂದ ಇದನ್ನು ತುಂಬಾ ವೈಯಕ್ತಿಕವಾಗಿ ಇಡಬೇಕು ಮತ್ತು ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹಂಚಿಕೊಳ್ಳದೆ ಇದ್ದರೆ ಒಳ್ಳೆಯದು. ಬ್ರೇಕ್ ಅಪ್ ನ್ನು ವೈಯಕ್ತಿಕವಾಗಿ ಇಟ್ಟುಬಿಡಿ ಮತ್ತು ಇದರ ವಿವರವನ್ನು ಪ್ರತಿಯೊಬ್ಬರ ಜತೆಗೆ ಹಂಚಿಕೊಳ್ಳಬೇಡಿ. ನಿಮಗೆ ಬೆಂಬಲ ಬೇಕು ಎಂದು ಅನಿಸುತ್ತಿದ್ದರೆ ಆಗ ನೀವು ಸ್ನೇಹಿತರೊಂದಿಗೆ ಮಾತನಾಡಿ, ಭಾವನಾತ್ಮಕ ನೆರವು ಪಡೆಯಹುದು.

ವಿಚಿತ್ರ ಫೋಟೋಗಳು
ಸಂಗಾತಿಯ ಚಿತ್ರವಿಚಿತ್ರ ಫೋಟೋಗಳನ್ನು ಹಂಚಿಕೊಳ್ಳುವುದು ತುಂಬಾ ತಮಾಷೆಯ ವಿಚಾರ. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ನಿಮ್ಮ ಸಂಗಾತಿಯ ಭಾವನೆಗಳಿಗೆ ಧಕ್ಕೆ ಉಂಟಾಗಬಹುದು. ಇದರಿಂದ ಮುಂದಿನ ಸಲ ನೀವು ಸಂಬಂಧದ ಬಗ್ಗೆ ಯಾವುದೇ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರೆ ಆಗ ಎಚ್ಚರಿಕೆ ವಹಿಸಿ.