For Quick Alerts
ALLOW NOTIFICATIONS  
For Daily Alerts

ಇನ್ನೂ ಮಾಜಿ ಲವರ್‌ನೊಂದಿಗೆ ಸಂಪರ್ಕವಿಟ್ಟುಕೊಳ್ಳುವುದು ದೊಡ್ಡ ತಪ್ಪು

|

ಜೀವನದ ಯೌವನದ ಹಂತದಲ್ಲಿ ಪ್ರೀತಿ, ಪ್ರೇಮ, ಪ್ರಣಯದಲ್ಲಿ ಬಿದ್ದು ಅದರ ಖುಷಿ, ದುಃಖ ನೋವುಗಳನ್ನು ಅನೇಕರು ಅನುಭವಿಸಿರುತ್ತಾರೆ. ಕೆಲವರು ಪ್ರೀತಿಸಿದ ಸಂಗಾತಿಯನ್ನೇ ಬಾಳ ಸಂಗಾತಿಯಾಗಿಯೂ ಮಾಡಿಕೊಳ್ಳುತ್ತಾರೆ. ಆದರೆ ಈ ಅದೃಷ್ಟ ಎಲ್ಲರಿಗೂ ಇರುವುದಿಲ್ಲ. ಒಂದು ಹಂತದಲ್ಲಿ ಜೀವಕ್ಕೆ ಜೀವವಾಗಿದ್ದ ಗೆಳೆಯ ಅಥವಾ ಗೆಳತಿ ಅದಾವುದೋ ಕಾರಣದಿಂದ ದೂರವಾಗಿ ಮಧುರ ಸಂಬಂಧವೊಂದು ಮುರಿದು ಬೀಳುವುದು ಸಾಮಾನ್ಯ. ಆದರೆ ಹೀಗೆ ಸಂಬಂಧಗಳು ಮುಗಿದು ಹೋದ ಕೆಲ ದಿನಗಳ ನಂತರ ಮತ್ತೆ ಹಳೆಯ ಗೆಳತಿ ಅಥವಾ ಗೆಳೆಯನೊಂದಿಗೆ ಸಂಬಂಧವಿಟ್ಟುಕೊಳ್ಳುವುದು ಎಷ್ಟು ಸೂಕ್ತ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ಹಳೆಯ ಲವರ್‌ನೊಂದಿಗೆ ಮತ್ತೆ ಸಂಬಂಧವಿಟ್ಟುಕೊಳ್ಳುವುದು ಸರಿಯಾ ಅಥವಾ ತಪ್ಪಾ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ನೀವೂ ನೋಡಿ.

ಬ್ರೇಕ್ ಅಪ್ ನಂತರದ ಜೀವನ

ಬ್ರೇಕ್ ಅಪ್ ನಂತರದ ಜೀವನ

ಜೀವನದಲ್ಲಿ ಪ್ರೀತಿಸಿದ ಸಂಗಾತಿಯು ದೂರವಾದಾಗ ಆ ಹಂತವು ವ್ಯಕ್ತಿಯೊಬ್ಬನ ಜೀವನದಲ್ಲಿನ ಅತಿ ನೋವಿನ ಕಾಲಘಟ್ಟವಾಗಿರುತ್ತದೆ. ಪ್ರತಿದಿನ ಪ್ರತಿಕ್ಷಣ ದೂರವಾದ ಆ ಗೆಳೆಯ ಅಥವಾ ಗೆಳತಿಯ ಬಗ್ಗೆ ಯಾವುದಾದರೊಂದು ನೆನಪು ಕಾಡಿಸುತ್ತಲೇ ಇರುತ್ತವೆ. ಹಳೆಯ ಪ್ರೀತಿಯನ್ನು ಮರೆಯಬೇಕೆಂದು ಪ್ರಯತ್ನಿಸಿದರೂ ಅದು ಸುಲಭವಾಗಿ ಸಾಧ್ಯವಾಗದು. ಯಾಕೆ ನಮ್ಮ ಸಂಬಂಧ ಮುರಿದು ಬಿದ್ದಿತು ಹಾಗೂ ಅದಕ್ಕೆ ಕಾರಣವಾದ ಅಂಶಗಳಾದರೂ ಯಾವುವು ಎಂಬ ಬಗ್ಗೆ ಸತತವಾಗಿ ಮನಸ್ಸು ಚಿಂತಿಸಲಾರಂಭಿಸುತ್ತದೆ. ಹೇಗೋ ಒಟ್ಟಾರೆಯಾಗಿ ದಿನಗಳೆದಂತೆ ನೋವು ಮಾಯವಾಗುತ್ತದೆ. ಆದರೆ ಹೀಗೆ ಸಂಬಂಧವೊಂದು ದೂರವಾದ ಕೆಲದಿನಗಳ ನಂತರ ಕೆಲವರು ಮತ್ತೆ ಹಳೆಯ ಗೆಳೆಯ ಅಥವಾ ಗೆಳೆಯನೊಂದಿಗೆ ಸಂಬಂಧ ಬೆಳೆಸಲು ಹಾತೊರೆಯತೊಡಗುತ್ತಾರೆ. ಅದಕ್ಕೆ ಗೆಳೆತನದ ಹೆಸರನ್ನು ಸಹ ಇಟ್ಟುಕೊಳ್ಳುತ್ತಾರೆ. ಆದರೆ ಈ ರೀತಿಯ ಗೆಳೆತನದ ಸಂಬಂಧದಿಂದ ಮನಸ್ಸಿಗಾದ ಗಾಯ ಮಾಯ್ದು ಜೀವನದಲ್ಲಿ ನೆಮ್ಮದಿ ಮೂಡಬಲ್ಲದೆ? ಆದರೆ ಈ ಪ್ರಶ್ನೆಗೆ 'ಇಲ್ಲ'ಎಂಬುದೇ ಉತ್ತರವಾಗಿದೆ. ಮಾಜಿ ಗೆಳೆಯ ಅಥವಾ ಗೆಳೆಯನೊಂದಿಗೆ ಎಲ್ಲ ರೀತಿಯಿಂದಲೂ ದೂರವಿರುವುದೇ ಲೇಸು ಏಕೆಂಬುದನ್ನು ಇಲ್ಲಿ ತಿಳಿಸಿದ್ದೇವೆ.

ವಾಸ್ತವವನ್ನು ಧೈರ್ಯದಿಂದ ಎದುರಿಸಿ

ವಾಸ್ತವವನ್ನು ಧೈರ್ಯದಿಂದ ಎದುರಿಸಿ

ಕಡಿದು ಬಿದ್ದ ಸಂಬಂಧದಿಂದಾದ ಆಘಾತದಿಂದ ಒಂದೆರಡು ದಿನಗಳಲ್ಲಿ ಹೊರಬರುವುದು ಸಾಧ್ಯವಿಲ್ಲ ಎಂಬುದು ಸತ್ಯ. ಇನ್ನು ನನ್ನ ಜೀವನದಲ್ಲಿ ಆತ/ಆಕೆ ಇಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲು ದಿನಗಳು ಮಾತ್ರವಲ್ಲ ತಿಂಗಳುಗಳೇ ಬೇಕಾಗುತ್ತವೆ. ಸಹಜವಾಗಿಯೇ ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಕೆಲ ಸಮಯದ ನಂತರ ಎಲ್ಲವನ್ನೂ ಮರೆತು ಪುನಃ ಸಾಮಾನ್ಯ ಜೀವನಕ್ಕೆ ನೀವು ಮರಳುವಿರಿ. ಆದರೆ ಹಳೆಯ ಸಂಗಾತಿಯ ಬಗ್ಗೆ ಚಿಂತಿಸುತ್ತಲೇ ಇದ್ದು ಏನೂ ಆಗಿಯೇ ಇಲ್ಲ ಎಂಬಂತೆ ಆ ನೆನಪಿನಿಂದ ಹೊರಬರಲು ಸಾಧ್ಯ ಎಂದು ನಿಮಗನಿಸುತ್ತದೆಯೆ?

Most Read: ಗಂಡ-ಹೆಂಡತಿ ಮಲಗುವ ಭಂಗಿ 'ಸೆಕ್ಸ್ ಜೀವನ' ದ ಬಗ್ಗೆ ಬಿಚ್ಚಿಡುತ್ತದೆಯಂತೆ!!

ನಿಮ್ಮ ಭಾವನೆಗಳ ತಾಕಲಾಟ ನಿಲ್ಲಲು ಸಮಯ ನೀಡಿ

ನಿಮ್ಮ ಭಾವನೆಗಳ ತಾಕಲಾಟ ನಿಲ್ಲಲು ಸಮಯ ನೀಡಿ

ಪ್ರೀತಿಯ ಸಂಗಾತಿಯು ದೂರವಾದಾಗ ನಿಮಗಾಗುವ ನೋವು ನಿಮಗೆ ಮಾತ್ರ ತಿಳಿಯಬಲ್ಲದು. ಭೇಟಿಗಳು ಸಂಪೂರ್ಣ ನಿಂತು ಹೋಗಿ ಶೂನ್ಯ ಆವರಿಸಿ ದಂತಾಗುವುದನ್ನು ಅನುಭವಿಸಬೇಕಾಗುತ್ತದೆ. ಸಿಟ್ಟು, ಹತಾಶೆ, ದುಃಖ ಅಥವಾ ಉದ್ವೇಗ ಹೀಗೆ ಹಲವಾರು ಭಾವನೆಗಳು ಏಕಕಾಲಕ್ಕೆ ಉಮ್ಮಳಿಸಿ ಬರುತ್ತವೆ. ಆದರೆ ಈ ಎಲ್ಲ ಭಾವನೆಗಳನ್ನು ನೀವು ಸೂಕ್ತವಾಗಿ ನಿಭಾಯಿಸಬೇಕಾಗುತ್ತದೆ. ಇದಾವುದೂ ಶಾಶ್ವತವಲ್ಲ ಎಂಬುದನ್ನು ಅರಿಯಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಹಿಂದಿನ ಸಂಗಾತಿಯೊಂದಿಗೆ ಮತ್ತೆ ಗೆಳೆತನ ಬೆಳೆಸುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುವುದೇ ವಿನಃ ಕಡಿಮೆಯಾಗದು. ಹೀಗಾಗಿ ಇಂಥ ದುಸ್ಸಾಹಸಕ್ಕೆ ಮುಂದಾಗದಿರುವುದೇ ಲೇಸು.

ನೀವು ಮತ್ತೆ ಹಳೆಯ ಸಂಗಾತಿಯೊಂದಿಗೆ ಸಂಪರ್ಕ ಇಟ್ಟುಕೊಂಡರೆ ಹೀಗಾಗುತ್ತದೆ

ನೀವು ಮತ್ತೆ ಹಳೆಯ ಸಂಗಾತಿಯೊಂದಿಗೆ ಸಂಪರ್ಕ ಇಟ್ಟುಕೊಂಡರೆ ಹೀಗಾಗುತ್ತದೆ

ನಿಮ್ಮ ಪ್ರೀತಿಯ ಸಂಬಂಧ ಕಡಿದು ಬಿದ್ದ ತಕ್ಷಣ ನೀವು ಆತ ಅಥವಾ ಆಕೆಯೊಂದಿಗೆ ಫ್ರೆಂಡ್ ಆಗಿ ಇರಲು ಬಯಸುತ್ತೀರಿ ಎಂದುಕೊಳ್ಳೋಣ. ಆದರೆ ಹೀಗೆ ಮಾಡಿದಾಗ ನಿಮ್ಮ ಬಹುತೇಕ ಎಲ್ಲ ಮಾತುಕತೆಗಳು ಹಿಂದೆ ಕಳೆದ ಮಧುರ ನೆನಪುಗಳ ಕಡೆಯೇ ವಾಲುತ್ತವೆ ಎಂಬುದು ಅಕ್ಷರಶಃ ಸತ್ಯ. ಇದರ ಮೇಲೆ ಹಳೆಯ ಸಂಗಾತಿಯು ಈಗ ತನ್ನ ಹೊಸ ಸಂಗಾತಿಯೊಂದಿಗೆ ಖುಷಿಯಾಗಿರುವುದನ್ನು ತಿಳಿದರೆ ನಿಮಗೆ ಮಾನಸಿಕ ಕ್ಷೆಭೆ ಉಂಟಾಗಿ ಇರುವ ನೆಮ್ಮದಿಯೂ ಹೊರಟು ಹೋಗುತ್ತದೆ. ಹಳೆಯ ಸಂಗಾತಿಯು ಈಗ ಹೊಸ ಸಂಗಾತಿಯೊಂದಿಗೆ ಖುಷಿಯಾಗಿದ್ದು ನಿಮ್ಮೊಂದಿಗೆ ಫ್ರೆಂಡ್ ಮಾತ್ರ ಆಗಿರುವುದು ನಿಮಗೆ ಖುಷಿ ಕೊಡಬಲ್ಲದೆ ಎಂಬುದನ್ನು ಒಂದು ಸಲ ವಿಚಾರ ಮಾಡಿ ನೋಡಿ.

ಬ್ರೇಕ್ ಅಪ್ ಯಾಕೆ ಆಯಿತು ಎಂಬುದು ನೆನಪಿರಲಿ

ಬ್ರೇಕ್ ಅಪ್ ಯಾಕೆ ಆಯಿತು ಎಂಬುದು ನೆನಪಿರಲಿ

ಸಂಬಂಧ ಮುಗಿದ ನಂತರ ಮತ್ತೆ ಫ್ರೆಂಡ್ ಆಗಿ ಇರುವುದರಿಂದ ಸಂಬಂಧಗಳು ಪುನಃ ಚಿಗುರಬಹುದು ಎಂಬ ಭ್ರಮೆಗಳು ಕೆಲವೊಮ್ಮೆ ಮೂಡಬಹುದು. ಆದರೆ ಮತ್ತೊಮ್ಮೆ ನಿಮ್ಮ ಭಾವನೆಗಳೊಂದಿಗೆ ನೀವೇ ಚೆಲ್ಲಾಟವಾಡಿ ಮನಸ್ಸಿನಲ್ಲಿನ ಗೊಂದಲ ಹೆಚ್ಚು ಮಾಡಿಕೊಳ್ಳುವುದು ಎಷ್ಟು ಸರಿ ಎಂಬ ಬಗ್ಗೆ ವಿಚಾರ ಮಾಡಿ. ಯಾವುದೋ ಒಂದು ನಿರ್ದಿಷ್ಟ ಕಾರಣದಿಂದಲೇ ನೀವಿಬ್ಬರೂ ದೂರವಾಗಿ ಇನ್ನಾದರೂ ಚೆನ್ನಾಗಿರೋಣ ಎಂದು ಬಯಸಿದ್ದೀರಲ್ಲವೆ? ಸಂಬಂಧ ಕಡಿದುಕೊಳ್ಳಲು ಕಾರಣವೇನಾಗಿತ್ತು ಎಂಬುದು ಸದಾ ನೆನಪಿರಲಿ.

ಹೊಸ ಜೀವನ ಆರಂಭಿಸಿ

ಹೊಸ ಜೀವನ ಆರಂಭಿಸಿ

ಒಂದು ಸಂಬಂಧ ಮುರಿದು ಬಿದ್ದ ತಕ್ಷಣ ನಿಮ್ಮ ಜೀವನ ಮುಗಿದು ಹೋಯಿತು ಎಂದರ್ಥವಲ್ಲ. ಜೀವನವೆಂಬುದು ಪ್ರತಿಕ್ಷಣ ಹೊಸದೇನನ್ನಾದರೂ ಹೊತ್ತು ತರುತ್ತಲೇ ಇರುತ್ತದೆ. ಹಳೆಯ ಸಂಗಾತಿಯ ಬಗ್ಗೆ ಕೊರಗುವ ಬದಲು ನಿಮ್ಮ ಜೀವನವನ್ನು ಹೊಸದಾಗಿ, ಹೊಸ ಆಲೋಚನೆಗಳೊಂದಿಗೆ ಮತ್ತೆ ಆರಂಭಿಸಿ. ಮೊದಲು ನಿಮ್ಮನ್ನು ನೀವು ಪ್ರೀತಿಸಲಾರಂಭಿಸಿ. ಇನ್ನೊಬ್ಬರೊಂದಿಗೆ ಪ್ರೀತಿಯಲ್ಲಿ ಬೀಳುವ ಮೊದಲು ನಿಮ್ಮ ಖುಷಿ ನಿಮ್ಮ ಕೈಲಿರುವಂತೆ ನೋಡಿಕೊಳ್ಳಿ.

Most Read: ನಿಮ್ಮನ್ನು ಬಿಟ್ಟು ಹೋದ ಮಾಜಿ ಸಂಗಾತಿಯನ್ನು ನಿಮ್ಮ ಮದುವೆಗೆ ಕರೆಯಬಹುದಾ..!?

ಹೀಗಿದ್ದರೆ ಮಾತ್ರ ನೀವು ಫ್ರೆಂಡ್ಸ್ ಆಗಿರಬಹುದು..

ಹೀಗಿದ್ದರೆ ಮಾತ್ರ ನೀವು ಫ್ರೆಂಡ್ಸ್ ಆಗಿರಬಹುದು..

ನೀವಿಬ್ಬರೂ ಹಳೆಯದೆಲ್ಲವನ್ನೂ ಸಂಪೂರ್ಣವಾಗಿ ಮರೆತು ಮುಂದೆ ಬಂದಿರುವಿರಾದರೆ ಮಾತ್ರ ಮತ್ತೆ ಫ್ರೆಂಡ್ಸ್ ಆಗಿರಬಹುದು. ಇಬ್ಬರೂ ಒಬ್ಬರಿಗೊಬ್ಬರು ಒಂದಿಷ್ಟೂ ಭಾವನೆಗಳನ್ನು ಹೊಂದಿರಕೂಡದು. ಹಾಗೆಯೇ ಮಾಜಿ ಆತ ಆಥವಾ ಆಕೆ ಇನ್ನೊಬ್ಬರೊಂದಿಗೆ ಸುತ್ತಾಡುವಾಗಲೂ ನಿಮಗೆ ಏನೂ ಅನ್ನಿಸಕೂಡದು. ಕೆಲವೇ ದಿನಗಳಲ್ಲಿ ಇಂಥ ಒಂದು ಮನಸ್ಥಿತಿಯನ್ನು ತಲುಪುವುದು ಕಷ್ಟಕರ. ಹೀಗಾಗಿ ಈಗ ನೀವೇನಾಗಿರುವಿರಿ ಎಂಬುದರ ಮೇಲೆ ಗಮನಹರಿಸಿ ಜೀವನವನ್ನು ಸುಖಮಯವನ್ನಾಗಿ ಮಾಡಿಕೊಳ್ಳುವುದೇ ಸರಿಯಾದ ಮಾರ್ಗವಾಗಿದೆ.

English summary

Staying is touch with your ex-lover can be a big mistake

Dealing with your life after a bad break up is one of the hardest battles you fight with yourself. Every day, something or another, reminds you of your ex-partner and dealing with this nostalgia is not easy. We all analyse what went wrong in the relationship and how we could have done things differently, isn’t it? Well, this all is a part of moving on from your past but amidst all this, many of us give in to the temptation of staying in touch with our ex-lover. Does this so-called friendship help one to heal and make peace with the situation? The
X
Desktop Bottom Promotion