For Quick Alerts
ALLOW NOTIFICATIONS  
For Daily Alerts

ನಿಮ್ಮನ್ನು ಬಿಟ್ಟು ಹೋದ ಮಾಜಿ ಸಂಗಾತಿಯನ್ನು ನಿಮ್ಮ ಮದುವೆಗೆ ಕರೆಯಬಹುದಾ..!?

|

ಕೆಲವರ ಜೀವನದಲ್ಲಿ ತಾವು ಪ್ರೀತಿಸಿದ ಸಂಗಾತಿಯೇ ಜೀವನದ ಸಂಗಾತಿಯಾಗಿಯೂ ಕೈಹಿಡಿಯಬಹುದು. ಇನ್ನು ಕೆಲವರ ಜೀವನದಲ್ಲಿ ಎಷ್ಟೋ ಕಾಲ ಜೊತೆಯಾಗಿದ್ದ ಗೆಳೆಯ ಅಥವಾ ಗೆಳತಿಯು ದೂರವಾಗಿ ಮತ್ತಾರೋ ಜೀವನದಲ್ಲಿ ಬರಬಹುದು. ಏನೇ ಆದರೂ ವಿವಾಹ ಎನ್ನುವುದು ಮಾತ್ರ ಬಹುತೇಕರ ಜೀವನದ ಅವಿಭಾಜ್ಯ ನಂಟು ಎಂಬುದು ನಿಜ.

Should you invite an ex-partner to your wedding?

ನೀವು ಸಹ ವಿವಾಹವಾಗುತ್ತಿರುವಿರಾ? ನೀವೂ ವಿವಾಹವಾಗುತ್ತಿದ್ದಲ್ಲಿ ಅದು ಜೀವನದ ಅತಿ ಸಂತೋಷ ಹಾಗೂ ಸಂಭ್ರಮದ ಕ್ಷಣವಾಗಿರುತ್ತದೆ. ವಿವಾಹ ಸಮಾರಂಭದಲ್ಲಿ ನೆರೆದಿರುವ ಬಂಧು ಮಿತ್ರರೆಲ್ಲ ನಿಮಗೆ ಶುಭ ಕೋರುತ್ತಿರುತ್ತಾರೆ. ಅಂಥ ಒಂದು ಘಳಿಗೆಯಲ್ಲಿ ನಿಮ್ಮ ಜೀವನದಲ್ಲಿ ಹಿಂದೆ ಯಾವತ್ತೋ ಜೊತೆಯಾಗಿ ಬಿಟ್ಟುಹೋದ ಸಂಗಾತಿ ಬಂದು ಶುಭ ಕೋರಿದರೆ ಹೇಗಿರುತ್ತದೆ ಎಂಬುದನ್ನು ಒಂದು ಕ್ಷಣ ಕಲ್ಪಿಸಿಕೊಳ್ಳಿ. ನೀವಾಗಿಯೇ ಆ ಹಳೆಯ ಸಂಗಾತಿಯನ್ನು ನಿಮ್ಮ ಮದುವೆಗೆ ಕರೆದಿರುವಿರಿ ಎಂದೇ ಇಟ್ಟುಕೊಳ್ಳೋಣ. ಆದರೆ ಬಿಟ್ಟುಹೋದ ಸಂಗಾತಿಯನ್ನು ಮದುವೆಗೆ ಕರೆಯುವುದು ಎಷ್ಟು ಸರಿಯಾದ ನಿರ್ಧಾರ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ದೂರವಾದ ಗೆಳೆಯ ಅಥವಾ ಗೆಳತಿಯನ್ನು ನಿಮ್ಮ ಮದುವೆಗೆ ಆಹ್ವಾನಿಸುವುದು ಹಾಗೂ ಅದರ ನಂತರ ಉದ್ಭವಿಸಬಹುದಾದ ಎಲ್ಲ ಘಟನೆಗಳಿಗೆ ನೀವೆ ಜವಾಬ್ದಾರಿಯಾಗಿರುತ್ತೀರಿ ಎಂಬುದು ಗೊತ್ತಿರಲಿ. ಇಂಥ ಒಂದು ನಿರ್ಧಾರ ಕೈಗೊಳ್ಳುವ ಮುನ್ನ ಯಾವೆಲ್ಲ ಅಂಶಗಳ ಬಗ್ಗೆ ಗಮನಹರಿಸಬೇಕಾಗುತ್ತದೆ ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಈ ವಿಷಯಗಳ ಬಗ್ಗೆ ಗಮನವಿರಲಿ

ಈ ವಿಷಯಗಳ ಬಗ್ಗೆ ಗಮನವಿರಲಿ

ಮೊತ್ತ ಮೊದಲಿಗೆ ನೀವು ನಿಮ್ಮ ಹಳೆಯ ಸಂಗಾತಿಯನ್ನು ನಿಮ್ಮ ಮದುವೆಗೆ ಆಹ್ವಾನಿಸಲು ಬಯಸುತ್ತಿರುವುದಾದರೂ ಏಕೆ ಎಂಬ ಬಗ್ಗೆ ತಿಳಿದುಕೊಳ್ಳಿ. ನೀವು ಕೇವಲ ಗೆಳೆಯರು ಮಾತ್ರವಾಗಿದ್ದು ನಿಮ್ಮಿಬ್ಬರ ಮಧ್ಯೆ ಯಾವುದೇ ಪ್ರೀತಿ, ಪ್ರಣಯದ ಸಂಬಂಧಗಳು ಇರಲಿಲ್ಲವೆ? ಹಳೆಯ ಸಂಗಾತಿಯ ಬಗ್ಗೆ ಈಗಲೂ ಮನಸ್ಸಿನ ಯಾವುದೋ ಮೂಲೆಯಲ್ಲೊಂದು ಹಿತವಾದ ಭಾವನೆ ಅಡಗಿದೆಯೆ? ಅಥವಾ ನಿಮ್ಮ ಮದುವೆಗೆ ಆಹ್ವಾನಿಸಿ ಹಳೆಯ ಸಂಗಾತಿಯ ಹೊಟ್ಟೆ ಉರಿಸುವುದು ನಿಮ್ಮ ಉದ್ದೇಶವಾಗಿದೆಯಾ? ಈ ಎಲ್ಲ ಅಂಶಗಳ ಬಗ್ಗೆ ನಿಧಾನವಾಗಿ ವಿಚಾರ ಮಾಡಿ. ನಂತರವೇ ಆತ ಅಥವಾ ಆಕೆಯನ್ನು ಆಹ್ವಾನಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಿ.

Most Read: ಸೆಕ್ಸ್ ಸಲಹೆಗಳು: ಇದು ಯಾವುದೂ ಕೆಲಸಕ್ಕೆ ಬಾರದ ಸಂಗತಿಗಳು!

ದೂರವಾದ ಸಂಗಾತಿಯ ಪ್ರತಿಕ್ರಿಯೆ ಹೇಗಿರಬಹುದು?

ದೂರವಾದ ಸಂಗಾತಿಯ ಪ್ರತಿಕ್ರಿಯೆ ಹೇಗಿರಬಹುದು?

ದೂರವಾದ ಸಂಗಾತಿಯನ್ನು ನಿಮ್ಮ ಮದುವೆಗೆ ಆಹ್ವಾನಿಸುವ ಮುನ್ನ ಆತ ಅಥವಾ ಆಕೆಯ ಭಾವನೆಗಳ ಬಗ್ಗೆಯೂ ಚಿಂತಿಸಬೇಕಾಗುತ್ತದೆ. ನಿಮ್ಮ ಮದುವೆಯ ವಿಷಯ ತಿಳಿಸಿದಾಗ ಆ ಸಂಗಾತಿಗೆ ಆಘಾತವಾಗಬಹುದಾ ಅಥವಾ ಆ ಹಳೆಯ ಸಂಗಾತಿಯು ಅದನ್ನು ಯಾವುದೇ ಆಘಾತವಿಲ್ಲದೆ ಸ್ವೀಕರಿಸಬಹುದಾ ಎಂಬುದರ ಬಗ್ಗೆ ಕೊಂಚ ವಿಚಾರ ಮಾಡಿ. ಆದರೆ ಹಳೆಯ ಗಾಯಗಳು ಇನ್ನೂ ಮಾಯದೆ ಇದ್ದ ಸಂದರ್ಭದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಅವನ್ನು ಕೆದಕುವುದು ಜಾಣತನವಲ್ಲ. ಇದರಿಂದ ಪರಿಸ್ಥಿತಿಗಳು ಬಿಗಡಾಯಿಸಿ ಇನ್ನೇನೋ ಆಗುವ ಸಾಧ್ಯತೆಗಳಿರುತ್ತವೆ. ನೀವೇನೋ ಹಳೆಯ ಸಂಬಂಧದ ನಂಟಿನಿಂದ ಮಾನಸಿಕವಾಗಿ ಆಚೆ ಬಂದಿರಬಹುದು. ಆದರೆ ಇದೇ ಮಾತನ್ನು ಆ ಸಂಗಾತಿಯ ಬಗ್ಗೆ ಹೇಳುವಂತಿಲ್ಲ. ದೂರವಾಗಿರುವ ಸಂಗಾತಿಯು ಮತ್ತೆ ಯಾವತ್ತಾದರೂ ನೀವು ಬರುತ್ತೀರಿ ಎಂಬ ಆಸೆಯಲ್ಲಿ ಇರಬಹುದಲ್ಲವೆ?

ನಿಮ್ಮ ಈಗಿನ ಸಂಗಾತಿಯೊಂದಿಗೆ ಚರ್ಚಿಸಿ

ನಿಮ್ಮ ಈಗಿನ ಸಂಗಾತಿಯೊಂದಿಗೆ ಚರ್ಚಿಸಿ

ಹಳೆಯ ಸಂಗಾತಿಯೊಂದಿಗೆ ಕೇವಲ ಗೆಳೆತನದ ಸಂಬಂಧದ ಹೊರತಾಗಿ ಮತ್ತೇನೂ ಇರಲಿಲ್ಲ ಎಂಬುದು ನಿಮಗೆ ಖಚಿತವಾದಲ್ಲಿ ಆತ ಅಥವಾ ಆಕೆಯನ್ನು ಮದುವೆಗೆ ಆಹ್ವಾನಿಸುವ ಬಗ್ಗೆ ನಿಮ್ಮ ಭಾವಿ ಪತಿ ಅಥವಾ ಪತ್ನಿಯೊಂದಿಗೆ ಚರ್ಚಿಸುವುದು ಸೂಕ್ತ. ನಿಮ್ಮ ಮದುವೆಗೆ ಯಾಕೆ ಹಳೆಯ ಗೆಳೆಯ ಅಥವಾ ಗೆಳತಿಯನ್ನು ನೀವು ಆಹ್ವಾನಿಸಲು ಬಯಸುತ್ತಿರುವಿರಿ ಎಂಬುದನ್ನು ತಾರ್ಕಿಕವಾಗಿ ವಿವರಿಸಿ. ಭಾವಿ ಪತ್ನಿ ಅಥವಾ ಪತಿಯ ನಿರ್ಧಾರಕ್ಕೆ ಬದ್ಧವಾಗಿರಿ.

'ಬೇಡ' ಎಂಬ ಪದವನ್ನು ಒಪ್ಪಿಕೊಳ್ಳಲು ತಯಾರಾಗಿರಿ

'ಬೇಡ' ಎಂಬ ಪದವನ್ನು ಒಪ್ಪಿಕೊಳ್ಳಲು ತಯಾರಾಗಿರಿ

ದೂರವಾದ ಸಂಗಾತಿಯನ್ನು ಮದುವೆಗೆ ಆಹ್ವಾನಿಸುವ ವಿಷಯದಿಂದ ಭಾವಿ ಪತಿ ಅಥವಾ ಪತ್ನಿಗೆ ಕಿರಿಕಿರಿಯಾಗುತ್ತಿದೆ ಎಂದೆನಿಸಿದಲ್ಲಿ ನಿಮ್ಮ ನಿರ್ಧಾರದಿಂದ ದೂರ ಸರಿಯುವುದೇ ಸೂಕ್ತ. ಆಕೆ 'ಬೇಡ' ಎಂದು ನೇರವಾಗಿ ಹೇಳದಿದ್ದರೂ ಭಾವನೆಗಳನ್ನು ಅರ್ಥ ಮಾಡಿಕೊಂಡು ಮುಂದುವರೆಯಿರಿ. ಮದುವೆಯಾಗುವ ಶುಭ ದಿನ ನಿಮ್ಮ ಹೊಸ ಬಾಳಿನ ಪ್ರಥಮ ದಿನವಾಗಿರುತ್ತದೆ. ಅದೇ ದಿನದಂದು ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುವಂತೆ ಮಾಡುವುದು ಮೂರ್ಖತನವಲ್ಲದೆ ಬೇರೇನೂ ಅಲ್ಲ.

Most Read: ಸೆಕ್ಸ್‌ಗೆ ಮುಂದಾಗುವ ಮುನ್ನ ಇರಲಿ ಜಾಗೃತಿ ; ಮಗಳಿಗೆ ತಾಯಿಯ ಭಾವುಕ ಪತ್ರ

ನಿಮ್ಮ ಕುಟುಂಬದವರು ಏನೆನ್ನಬಹುದು?

ನಿಮ್ಮ ಕುಟುಂಬದವರು ಏನೆನ್ನಬಹುದು?

ವಾಸ್ತವದಲ್ಲಿ ನಿಮ್ಮ ನಿರ್ಧಾರದಿಂದ ಯಾರಿಗೂ ನೋವಾಗಬಾರದು. ನಿಮ್ಮ ಕುಟುಂಬ ಸದಸ್ಯರಿಗೆ ಸಹ ಹಳೆಯ ಸಂಗಾತಿಯನ್ನು ಮದುವೆಗೆ ಕರೆಯುವ ನಿರ್ಧಾರ ಒಪ್ಪಿಗೆಯಾಗಬೇಕು. ಈಗ ದೂರವಾಗಿರುವ ಸಂಗಾತಿಯ ಬಗ್ಗೆ ನಿಮ್ಮ ತಾಯಿಗೆ ಅಸಾಧ್ಯ ಕೋಪವಿರಬಹುದು ಅಥವಾ ಆತ/ಆಕೆ ನಿಮ್ಮ ತಂದೆಗೆ ಇಷ್ಟವಾಗಿಲ್ಲದಿರಬಹುದು. ಪರಿಸ್ಥಿತಿ ಹೀಗಿದ್ದಲ್ಲಿ ವಿನಾಕಾರಣ ತೊಂದರೆಯನ್ನು ಆಹ್ವಾನಿಸುವುದು ಬೇಡ.

ಇಂಥ ಸಂದರ್ಭಗಳಿಗೆ ಸಿದ್ಧವಾಗಿರಿ

ಇಂಥ ಸಂದರ್ಭಗಳಿಗೆ ಸಿದ್ಧವಾಗಿರಿ

ಈಗ ನೀವು ನಿಮ್ಮ ಹಳೆಯ ಸಂಗಾತಿಯನ್ನು ವಿವಾಹಕ್ಕೆ ಆಹ್ವಾನಿಸುವ ನಿರ್ಧಾರ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಆದರೆ ಈಗ ನಿಮ್ಮ ಭಾವಿ ಪತಿ/ಪತ್ನಿ ಸಹ ತನ್ನ ಹಳೆಯ ಸಂಗಾತಿಯನ್ನು ಮದುವೆಗೆ ಆಹ್ವಾನಿಸುತ್ತೇನೆ ಎಂದರೆ ಏನು ಮಾಡುವಿರಿ? ಆದಕ್ಕೆ ನೀವು ಖುಷಿಯಿಂದ ಒಪ್ಪಿಗೆ ನೀಡಬಹುದಾ? ಇಂಥದೊಂದು ಸಂದರ್ಭ ಎದುರಾದಲ್ಲಿ ಯಾವುದೇ ಕಾರಣಕ್ಕೂ ವಿಪರೀತವಾಗಿ ಪ್ರತಿಕ್ರಿಯಿಸದೆ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

Most Read: ನಿಮ್ಮ ಇಂತಹ ತಪ್ಪುಗಳಿಂದಲೇ ಹುಡುಗಿಯ ಮನಸ್ಸು ಮೂಡ್ ಆಫ್ ಆಗುವುದು!

ಏನೇ ಮಾಡಿದರೂ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಿ

ಏನೇ ಮಾಡಿದರೂ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಿ

ನಿಮ್ಮ ಹಳೆಯ ಸಂಗಾತಿಯೊಂದಿಗೆ ಕೇವಲ ಗೆಳೆತನದ ಸಂಬಂಧ ಮಾತ್ರವಿದ್ದು ಅದರಲ್ಲಿ ಪ್ರಣಯದ ಲವಲೇಶವೂ ಇರದಿದ್ದರೆ ಮಾತ್ರ ಆ ಸಂಗಾತಿಯನ್ನು ನಿಮ್ಮ ಮದುವೆಗೆ ಆಹ್ವಾನಿಸಬಹುದು. ಒಂದೊಮ್ಮೆ ಆತ ಅಥವಾ ಆಕೆಯೊಂದಿಗೆ ಗಾಢ ಪ್ರೀತಿ ಪ್ರಣಯದ ಸಂಬಂಧವಿದ್ದು ಮಿಲನದ ಹಂತಕ್ಕೆ ಹೋಗಿದ್ದರೆ ಆ ಸಂಗಾತಿಯನ್ನು ನಿಮ್ಮ ಮದುವೆಗೆ ಆಹ್ವಾನಿಸುವುದು ಅಪಾಯಕ್ಕೆ ದಾರಿ ಮಾಡಿದಂತೆ. ಇನ್ನು ದೂರವಾದ ಸಂಗಾತಿಯು ಈಗ ನಿಮ್ಮ ಜೀವನದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಪಡೆದೇ ಇಲ್ಲ ಎಂದಾದರೆ ಆತ/ ಆಕೆಯನ್ನು ದೂರವಿಟ್ಟೇ ನೀವು ಮದುವೆಯಾಗಬಹುದು ಅಲ್ಲವೆ? ಸುಮ್ಮನೆ ಹಳೆಯ ವಿಷಯಗಳನ್ನು ಮತ್ತೆ ಕೆದಕಿ ಬೇಡವಾದದ್ದನ್ನು ಆಹ್ವಾನಿಸುವುದು ಜಾಣತನವಾಗಲಾರದು.

English summary

Should you invite an ex-partner to your wedding?

When you imagine yourself greeting your guests at your wedding, would you be surprised if your ex-partner turns out to be one of them? Well, the decision of inviting your ex-lover to the most important day of your life needs to be taken carefully. You are the only one who needs to take the call of whether to invite him or not. Here are a few things you must think about before coming down to any conclusion.
X
Desktop Bottom Promotion