Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಸಂಗಾತಿ ಜತೆ ಬಾಂಧವ್ಯ ಬೆಸೆಯುವುದು ಹೇಗೆ?
ಜೀವನದಲ್ಲಿ ಸಂಬಂಧವೇ ಅತೀ ಮಹತ್ವದ್ದಾಗಿರುವುದು. ಅದು ಯಾವುದೇ ಆಗಿರಲಿ, ಸಂಬಂಧ ಜೀವನಕ್ಕೆ ಅತೀ ಅಗತ್ಯವಿರುವುದು. ಇಂತಹ ಸಂದರ್ಭದಲ್ಲಿ ಪ್ರೀತಿಯ ಸಂಬಂಧದಲ್ಲಿ ಇಬ್ಬರು ತೊಡಗಿಕೊಂಡ ವೇಳೆ ಅದು ಜೀವನದ ಕೊನೆಯ ತನಕ ಬರುವುದು. ಇಲ್ಲಿ ಪ್ರೀತಿ ಪ್ರೇಮ ಸಹಿತ ವೈವಾಹಿಕ ಸಂಬಂಧ ಕೂಡ ಸೇರಿದೆ. ಹುಡುಗ ಹಾಗೂ ಹುಡುಗಿ ಸಂಬಂಧದಲ್ಲಿ ತೊಡಗಿಕೊಂಡ ಆರಂಭದ ಕೆಲವು ತಿಂಗಳುಗಳು ಅತೀ ಮಹತ್ವದ್ದಾಗಿರುವುದು ಹಾಗೂ ಇದು ಅತೀ ಹೆಚ್ಚು ಆನಂದವನ್ನು ನೀಡುವುದು ಕೂಡ. ಇಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅತೀ ಅಗತ್ಯವಾಗಿರುವುದು.

ಇದರಿಂದ ಯಾವುದೇ ಸಂಬಂಧವಾಗಿರಲಿ, ಅಲ್ಲಿ ಆರಂಭಿಕ ದಿನಗಳು ಹೆಚ್ಚು ಮಹತ್ವ ಪಡೆಯುತ್ತದೆ. ಸಂಗಾತಿಯನ್ನು ಅರ್ಥ ಮಾಡಿಕೊಂಡು ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲು ಈ ಸಮಯವು ನೆರವಾಗುವುದು. ಪರಸ್ಪರ ಇಷ್ಟ ಹಾಗೂ ಬೇಕುಬೇಡಗಳನ್ನು ತಿಳಿಯಬಹುದಾಗಿದೆ. ಈ ಬಾಂಧವ್ಯವು ದೀರ್ಘಕಾಲದ ಸಂಬಂಧಕ್ಕೆ ನಾದಿಯಾಗುವುದು. ಸಂಗಾತಿ ಜತೆಗೆ ಬಾಂಧವ್ಯ ಗಟ್ಟಿಗೊಳಿಸಲು ಯಾವ ರೀತಿ ವರ್ತಿಸಬೇಕು ಎಂದು ನಿಮಗೆ ಗೊಂದಲವಾಗುತ್ತಲಿದ್ದರೆ ಆಗ ನೀವು ಇಲ್ಲಿ ಕೊಟ್ಟಿರುವಂತಹ ಕೆಲವೊಂದು ಸಲಹೆಗಳನ್ನು ಪಡೆದುಕೊಂಡು ಮುಂದುವರಿಯಬಹುದು.

ಹೆಚ್ಚು ಕೇಳುಗರಾಗಿ
ಆರಂಭದಲ್ಲಿ ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನೀವು ಹೆಚ್ಚು ಕೇಳುಗರಾಗಬೇಕು. ಇದರಿಂದಾಗಿ ನಿಮಗೆ ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗುವುದು. ಕೆಲವೊಂದು ಸಲ ಆರಂಭಿಕ ಹಂತದಲ್ಲಿ ನಿಮ್ಮ ಸಂಗಾತಿಯು ಏನಾದರೂ ಹೇಳಲು ಹಿಂಜರಿಯಬಹುದು. ಇದರಿಂದಾಗಿ ನೀವು ತುಂಬಾ ಎಚ್ಚರಿಕೆಯಿಂದ ಕೇಳಿ ಮತ್ತು ಅವರು ನಿಮ್ಮೊಂದಿಗೆ ಮಾತನಾಡಲು ಯಾವುದೇ ಹಿಂಜರಿಕೆ ಮಾಡದಂತೆ ಮಾಡಿ. ಸಂಗಾತಿಯು ಮಾತನಾಡುತ್ತಿರುವ ವೇಳೆ ನೀವು ಮಧ್ಯದಲ್ಲಿ ಮಾತನಾಡಲು ಹೋಗಬೇಡಿ. ಅವರು ಸಂಪೂರ್ಣವಾಗಿ ತಮ್ಮ ಭಾವನೆಗಳನ್ನು ವ್ಯಕ್ತ ಮಾಡಲಿ. ಇದರಿಂದ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ನಿಮಗೆ ನೆರವಾಗುವುದು.

ಸಂಗಾತಿ ಮುಖದಲ್ಲಿ ಯಾವಾಗಲೂ ನಗು ತರಲು ಪ್ರಯತ್ನಿಸಿ
ಸಂಗಾತಿಯ ಮುಖದಲ್ಲಿ ನಗು ತರಿಸುವುದಕ್ಕಿಂತ ದೊಡ್ಡ ವಿಚಾರ ಬೇರೊಂದಿಲ್ಲ. ಸಂಬಂಧದಲ್ಲಿ ಸಂಗಾತಿಯ ಮುಖದಲ್ಲಿ ನಗು ತರುವುದು ನೀವು ಮಾಡುವಂತಹ ದೊಡ್ಡ ಸಾಧನೆ. ನಿಮ್ಮ ಸಂಗಾತಿಯು ಯಾವಾಗಲೂ ನಗುತ್ತಿರುವಂತೆ ಮಾಡಲು ನೀವು ಪ್ರಯತ್ನಿಸುತ್ತಾ ಇರಿ. ಇದರಿಂದ ಸಂಗಾತಿ ಜತೆಗಿನ ಸಂಬಂಧವು ಮತ್ತಷ್ಟು ಬಲವಾಗುವುದು ಮತ್ತು ಪರಸ್ಪರರ ಜತೆಗೆ ನೀವಿಬ್ಬರು ತುಂಬಾ ಹೊಂದಾಣಿಕೆಯಿಂದ ಇರಬಹುದು.

ಬೇಕು ಬೇಡಗಳನ್ನು ಸರಿಯಾಗಿ ತಿಳಿಯಿರಿ
ಸಂಗಾತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮತ್ತೊಂದು ವಿಧಾನವೆಂದರೆ ನೀವು ಅವರ ಬೇಕು ಬೇಡಗಳನ್ನು ಸರಿಯಾಗಿ ತಿಳಿಯಬೇಕು. ಪ್ರತಿಯೊಂದು ಸಂದರ್ಭದಲ್ಲಿ ನೀವು ಅವರಿಗೆ ಏನು ಇಷ್ಟ ಮತ್ತು ಏನು ಇಷ್ಟವಿಲ್ಲ ಎಂದು ಕೇಳುತ್ತಾ ಇರಲು ಆಗಲ್ಲ. ಸಂಗಾತಿಯನ್ನು ನೀವು ತುಂಬಾ ಗಮನಿಸಬೇಕು ಮತ್ತು ಅವರಿಗೆ ಯಾವ ಆಹಾರ ಇಷ್ಟ, ಬಣ್ಣ ಇಷ್ಟ ಎಂದು ತಿಳಿಯಬೇಕು.

ಸಪ್ರೈಸ್ ನೀಡಿ
ಸಂಗಾತಿಯ ಮನಸ್ಸನ್ನು ಗೆಲ್ಲಲು ಸಪ್ರೈಸ್ ಗಿಂತ ಉತ್ತಮ ಸಾಧನ ಮತ್ತೊಂದಿಲ್ಲ. ಸಂಗಾತಿಯ ಮನಸ್ಸನ್ನು ಗೆಲ್ಲಲು ದೊಡ್ಡ ಮಟ್ಟದ ಹಣ ವ್ಯಯ ಮಾಡಬೇಕೆಂದಿಲ್ಲ.ಕೆಲವೊಂದು ಸಲ ಸಣ್ಣ ಸಣ್ಣ ಸಪ್ರೈಸ್ ಕೂಡ ದೊಡ್ಡ ಪ್ರಭಾವ ಬೀರುವುದು. ಅಡುಗೆ ಮಾಡುವುದು, ಸಣ್ಣ ಕವಿತೆ ಬರೆಯುವುದು, ಸಂಗಾತಿ ಕೆಲಸದಲ್ಲಿ ಜತೆ ನೀಡುವುದು ಇತ್ಯಾದಿಗಳು.

ಅಗತ್ಯತೆಗಳನ್ನು ತಿಳಿಯಿರಿ
ಹೂವುಗಳು ಹಾಗು ಚಾಕಲೇಟ್ ಗಳನ್ನು ಸಮಯಕ್ಕೆ ಸಮಯಕ್ಕೆ ನೀಡುತ್ತಲಿರುವುದು ನಿಮ್ಮ ಸಂಗಾತಿಯೊಂದಿಗೆ ಬಾಂಧವ್ಯ ಬೆಸೆಯಲು ಸರಿಯಾದ ವಿಧಾನವಲ್ಲ. ಸಂಗಾತಿಯ ಅಗತ್ಯತೆಗಳನ್ನು ಅರಿತುಕೊಂಡು ಅದಕ್ಕೆ ಸ್ಪಂದಿಸಬೇಕು. ದಿನಾಲೂ ನಿಮ್ಮ ಸಂಗಾತಿಯು ಯಾವೆಲ್ಲಾ ವಸ್ತುಗಳನ್ನು ಬಳಸುತ್ತಾರೆ ಎಂದು ತಿಳಿಯಿರಿ ಮತ್ತು ಅದಕ್ಕೆ ಅನುಗುಣವಾಗಿ ಅವರಿಗೆ ಇದನ್ನು ನೀಡುತ್ತಲಿರಿ. ಆಗ ನೀವು ಅವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದೀರಿ ಎಂದು ತಿಳಿಯುವುದು. ಸಣ್ಣ ವಿಚಾರದಲ್ಲೂ ನೀವು ಸಂಗಾತಿಯ ಬಗ್ಗೆ ಗಮನಹರಿಸಿದರೆ ಅವರಿಗೆ ತುಂಬಾ ಸಂತೋಷವಾಗುವುದು.



Click it and Unblock the Notifications
