For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿಯರ ನಡುವೆ ಹೀಗೆಲ್ಲಾ ಆದರೆ, ಜೀವನ ಬಲು ಕಷ್ಟ!

By Lekhaka
|

ಸಂಬಂಧವೇ ಹಾಗೆ ಪೋಣಿಸಿಟ್ಟ ಮುತ್ತಿನ ಹಾರದಂತೆ. ಇದರಲ್ಲಿ ಒಂದು ಮುತ್ತು ಮುರಿದು ಹೋದರೂ ಅದು ಹಾರದ ಸೌಂದರ್ಯವನ್ನೇ ಕೆಡಿಸುವುದು. ಅದೇ ರೀತಿ ಸಂಬಂಧವು ನಂಬಿಕೆ, ಹೊಂದಾಣಿಕೆ ಮೇಲೆ ನಿಂತಿದೆ. ಪರಸ್ಪರರನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ ಸಂಬಂಧಗಳು ಉಳಿದು ಗಟ್ಟಿಯಾಗುವುದು. ಸಂಶಯವೆನ್ನುವ ಭೂತ ಸಂಬಂಧದ ಮಧ್ಯೆ ಬಂದು ಸಿಲುಕಿಕೊಂಡರೆ ಅದರಿಂದ ಬಿಡಿಸಿಕೊಳ್ಳುವುದು ಕಷ್ಟ. ಇಂತಹ ಸಂದರ್ಭದಲ್ಲಿ ನಂಬಿಕೆ ಅತೀ ಅಗತ್ಯ. ನಂಬಿಕೆಯಿಲ್ಲದೆ ಯಾವುದೇ ಸಂಬಂಧವಾದರೂ ಹೆಚ್ಚು ದಿನ ಬಾಳಿಕೆ ಬರದು.

ಕೆಲವೊಂದು ಸಲ ಸಂಬಂಧವು ನಿಮ್ಮನ್ನು ತುಂಬಾ ಬಳಲಿದಂತೆ ಮಾಡಿ ಸಂಪೂರ್ಣವಾಗಿ ಹಿಂಡಿ ಹಿಪ್ಪೆ ಮಾಡಿಬಿಡುವುದು. ಈ ವೇಳೆ ಯಾವುದೇ ಸಂಬಂಧದ ಮೇಲೆ ನಿಮಗೆ ನಂಬಿಕೆಯೇ ಇರಲ್ಲ ಮತ್ತು ಪ್ರೀತಿ ಎನ್ನುವ ಶಬ್ದ ಕೇಳಿದರೆ ಮೈಲು ದೂರ ಓಡುತ್ತೀರಿ. ಆರೋಗ್ಯಕರ ಸಂಬಂಧವೆಂದರೆ ಪರಸ್ಪರರ ಬಗ್ಗೆ ನಂಬಿಕೆ ಇರಿಸಿಕೊಂಡು ಒಬ್ಬರನೊಬ್ಬರು ಪ್ರಶಂಸಿಸುತ್ತಾ ಕಾಳಜಿ ವಹಿಸಿಕೊಳ್ಳಬೇಕು. ಈ ರೀತಿಯ ಯಾವುದೇ ಭಾವನೆಗಳು ನಿಮ್ಮಲ್ಲಿ ಇಲ್ಲವೆಂದಾದರೆ ಈ ಸಂಬಂಧದಿಂದ ದೂರ ಹೋಗುವುದೇ ಒಳ್ಳೆಯದು. ನೀವು ಈ ಹಂತದಲ್ಲಿ ಸಂಬಂಧವನ್ನು ಕೊನೆಗೊಳಿಸಲು ಈ ಕಾರಣಗಳನ್ನು ಪರಿಗಣಿಸಬೇಕು...

ಪರಸ್ಪರ ಜತೆಯಾಗಿ ಸಮಯ ಕಳೆಯದೇ ಇರುವುದು

ಪರಸ್ಪರ ಜತೆಯಾಗಿ ಸಮಯ ಕಳೆಯದೇ ಇರುವುದು

ಹಿಂದೆ ವಾರಾಂತ್ಯ ಬಂದರೆ ಸಾಕು ನೀವಿಬ್ಬರು ಜತೆಯಾಗಿ ಹೊರಗಡೆ ತಿರುಗಾಡಲು ಹೋಗಿ ಯಾವುದಾದರೂ ಸಿನಿಮಾ ನೋಡಿಕೊಂಡು, ರಾತ್ರಿ ಡಿಸ್ಕೋಗೆ ಹೋಗಿ ಅಲ್ಲೇ ಊಟ ಮಾಡಿ ಬರುತ್ತಾ ಇದ್ದೀರಿ. ಆದರೆ ಇಂದಿನ ದಿನಗಳಲ್ಲಿ ಆತ ತನ್ನ ಸ್ನೇಹಿತರು ಅಥವಾ ಮಹಿಳಾ ಸಹೋದ್ಯೋಗಿಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಾ ಇರಬಹುದು. ಆತ ಹೊರಗಡೆ ಹೋಗದೆ ಇರಲು ಕೆಲವೊಂದು ಕಾರಣಗಳನ್ನು ಹುಡುಕಬಹುದು. ಇಂತಹ ಸಮಯದಲ್ಲಿ ನೀವು ಸಂಬಂಧದಿಂದ ದೂರವಾಗುವುದು ಒಳ್ಳೆಯದು.

ಪದೇ ಪದೆ ಜಗಳ

ಪದೇ ಪದೆ ಜಗಳ

ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆಗಿರುವಂತಹ ಏರಿಳಿತಗಳು ಇದ್ದೇ ಇರುತ್ತದೆ. ಪ್ರತಿಯೊಬ್ಬ ದಂಪತಿ ಕೂಡ ಕೆಲವೊಂದು ಸಲ ಜಗಳವಾಡಿ, ವಾಗ್ವಾದ ಮಾಡುವರು. ಪ್ರೀತಿಯ ಸಂಬಂಧವೆಂದರೆ ಅದರಲ್ಲಿ ಹೊಟ್ಟೆಕಿಚ್ಚಿನಿಂದ ಹಿಡಿದು ಸಣ್ಣ ಜಗಳದ ಬಳಿಕದ ಆರೈಕೆಯು ಸೇರಿರುವುದು. ಆದರೆ ನೀವು ಹೋದ ಬಂದ ಕಡೆಯೆಲ್ಲಾ ಜಗಳವಾಡುತ್ತಾ ಇದ್ದರೆ ಆಗ ನೀವು ಇಂತಹ ಸಂಬಂಧದಿಂದ ದೂರವಾಗುವ ಕರೆಗಂಟೆಯಿದು. ಜಗಳವು ಒಳ್ಳೆಯ ರಜಾ ಪ್ರವಾಸವನ್ನು ಕೆಡಿಸಿದರೆ ಆಗ ನೀವು ದೂರವಾಗುವುದೇ ಒಳಿತು.

ದೂರುತ್ತಿರುವುದು

ದೂರುತ್ತಿರುವುದು

ನಿಮ್ಮ ಸಂಗಾತಿಯು ಹೋದ ಕಡೆಯೆಲ್ಲಾ ಅಂದರೆ ರಾತ್ರಿ ಪಾರ್ಟಿ ಮತ್ತು ಆತನ ಕೆಲಸದ ಜಾಗದಲ್ಲಿ ನಿಮ್ಮನ್ನು ದೂರುತ್ತಾ ಇದ್ದರೆ ಆಗ ನೀವು ಇದರ ಬಗ್ಗೆ ಏನಾದರೂ ಮಾಡಲೇಬೇಕು. ಆತನ ಸ್ನೇಹಿತರು ಅಥವಾ ಸಹೋದ್ಯೋಗಿಗಳು ಆತ ನಿಮ್ಮ ದೂರುತ್ತಿರುವ ಬಗ್ಗೆ ಹೇಳಿದ್ದರೆ ಆತ ನಿಮಗೋಸ್ಕರ ಇರುವವನಲ್ಲ. ಇದನ್ನು ಒಂದೆರಡು ಸಲ ನೀವು ಕಡೆಗಣಿಸಬಹುದು. ಆದರೆ ಪ್ರತೀ ಸಲ ಹೀಗೆ ಆದರೆ ನೀವು ಗುಡ್ ಬೈ ಹೇಳಬೇಕು.

ನೀವೇ ಎಲ್ಲಾ ಕೆಲಸಗಳನ್ನು ಮಾಡಬೇಕು

ನೀವೇ ಎಲ್ಲಾ ಕೆಲಸಗಳನ್ನು ಮಾಡಬೇಕು

ಸಂಬಂಧವು ಗಟ್ಟಿಯಾಗಬೇಕೆಂದರೆ ಆಗ ಪರಸ್ಪರ ಇಬ್ಬರು ಜತೆಯಾಗಿದ್ದುಕೊಂಡು ಕೆಲಸ ಮಾಡಬೇಕು. ಆದರೆ ನೀವು ಏಕಾಂಗಿಯಾಗಿ ಸಂಬಂಧದ ರಥವನ್ನು ಎಳೆಯುತ್ತಾ ಇದ್ದರೆ ಖಂಡಿತವಾಗಿಯೂ ಜೀವನದ ಒಂದು ಹಂತದಲ್ಲಿ ನೀವು ಆಯಾಸಗೊಳ್ಳುತ್ತೀರಿ. ಒಂದೇ ಬದಿಯಿಂದ ಪ್ರಯತ್ನ ನಡೆಯುತ್ತಿದ್ದರೆ ಸಂಬಂಧವು ಸ್ಥಿರವಾಗಿರಲ್ಲ ಎಂದು ನೀವು ಅರಿತುಕೊಳ್ಳಬೇಕು.

ನಂಬಿಕೆಯ ಕೊರತೆ

ನಂಬಿಕೆಯ ಕೊರತೆ

ಸಂಗಾತಿಯು ಯಾವಾಗಲೂ ನಿಮ್ಮ ಇಮೇಲ್, ಮೊಬೈಲ್ ಕರೆ, ಮೆಸೇಜ್ ಮತ್ತು ಸಾಮಾಜಿಕ ಜಾಲತಾಣದ ಬಗ್ಗೆ ಯಾವಾಗಲೂ ಗಮನಿಸುತ್ತಾ ಇದ್ದರೆ ನಿಮ್ಮ ಸಂಬಂಧದಲ್ಲಿ ನಂಬಿಕೆ ಇಲ್ಲವೆಂದು ತಿಳಿದುಕೊಳ್ಳಬೇಕು. ಪ್ರೀತಿಯೆಂದರೆ ಪರಸ್ಪರರ ಮೇಲೆ ನಂಬಿಕೆ ಇಟ್ಟುಕೊಳ್ಳುವುದು. ಆಕೆ/ಆತ ನಿಮ್ಮ ಮೇಲೆ ನಂಬಿಕೆ ಇಡದಿದ್ದರೆ ಆಗ ಪ್ರೀತಿ ಮೂಡಲು ಹೇಗೆ ಸಾಧ್ಯ? ಅರೋಗ್ಯಕರ ಸಂಬಂಧದ ಬುನಾದಿಯೇ ನಂಬಿಕೆ. ಅದು ಇಲ್ಲವಾದಲ್ಲಿ ಸಂಬಂಧವೇ ಇರಲ್ಲ.

ಪ್ರಶಂಸಿಸದೆ ಇರುವುದು

ಪ್ರಶಂಸಿಸದೆ ಇರುವುದು

ನೀವು ಧರಿಸುವ ಬಟ್ಟೆ, ಮಾಡಿದ ಅಡುಗೆ ಅಥವಾ ವೃತ್ತಿಯಲ್ಲಿ ನಿಮಗೆ ಸಿಕ್ಕಿರುವ ಭಡ್ತಿ ಬಗ್ಗೆ ಆತ/ ಆಕೆ ಯಾವಾಗಲೂ ಪ್ರಶಂಸೆ ಮಾಡುತ್ತಿದ್ದ. ಆತ ಪ್ರಶಂಸೆ ಮಾಡುತ್ತಿದ್ದ ಪದಗಳು ನಿಮಗೆ ಯಾವಾಗಲೂ ಪ್ರೇರಣೆಯಾಗಿರುತ್ತಿತ್ತು. ಸಂಗಾತಿಯನ್ನು ಪ್ರಶಂಸೆ ಮಾಡುವುದು ಆತ/ಆಕೆಯ ಮೇಲೆ ಪ್ರೀತಿ ತೋರಿಸಿದಂತೆ. ಪ್ರಶಂಸೆ ಮಾಡದೆ ಇರುವುದು ಸಂಗಾತಿಯು ನಿಮಗೆ ಬೆಂಬಲ ನೀಡುತ್ತಿಲ್ಲವೆಂದರ್ಥ. ಇದು ನಿಮಗೆ ತುಂಬಾ ಕೆಟ್ಟ ಅನುಭವವಾಗಬಹುದು. ಇದರ ಬಳಿಕ ನೀವು ದೂರ ಹೋಗುವುದೇ ಒಳಿತು.

English summary

Why He/She Is Just Not Meant For You & It's Time To Say Goodbye

Relationships are very hard to understand. They are like a dream, you think that sometimes you may have hard times in your relationship which may fade away just like when you open up your eyes in the morning after a bad dream. However, it is time for you to understand that all relationships are not like a bad dream which you can just forget and continue with your life. These relationships can make you feel exhausted and drain you out like anything. You may lose your self-confidence and you may even stop believing in love anymore.
Story first published: Saturday, November 18, 2017, 13:12 [IST]
X
Desktop Bottom Promotion