For Quick Alerts
ALLOW NOTIFICATIONS  
For Daily Alerts

ಮದುವೆಯ ಈ ಬಂಧ - ಅನುರಾಗದ ಸಂಬಂಧ

By Manu
|

ಮದುವೆಯೆಂಬುದು ತಾಳ್ಮೆ, ವಿಶ್ವಾಸ ಮತ್ತು ನೆಮ್ಮದಿ ಎಂಬ ಕೇವಲ ಮೂರು ಗಂಟಿನಲ್ಲಿದ್ದು, ಇದನ್ನು ನಿಮ್ಮ ತಪ್ಪು ನಿರ್ಧಾರಗಳಿಂದ ಕಗ್ಗಂಟಾಗಿಸಿ ಮುಂದೊಮ್ಮೆ ಸಂಪೂರ್ಣವಾಗಿ ಬಿರುಕು ಮೂಡುವಂತೆ ಹೆಚ್ಚಿನವರು ಮಾಡಿಕೊಳ್ಳಿತ್ತಿದ್ದಾರೆ. ಮದುವೆಯ ಒಳ ಅರ್ಥ ತಿಳಿದವರು ನಿಜಕ್ಕೂ ಸಂತೋಷಶಾಲಿಗಳು. 'ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನ್ಮಗಳೂ ತೀರದ ಸಂಬಂಧ' - ಈ ಜನಪ್ರಿಯ ಅರ್ಥಗರ್ಭಿತ ಗೀತೆಯನ್ನು ಒಮ್ಮೆ ಮೆಲುಕು ಹಾಕಿ. ನಿಮಗೆ ಮದುವೆಯ ನಿಜವಾದ ಅರ್ಥ ತಿಳಿಯುತ್ತದೆ.

ದಂಪತಿಗಳು ಮದುವೆಯಾಗಿ ಕೆಲವು ವರ್ಷಗಳು ಕಳೆದಂತೆ ತಮ್ಮ ದಾಂಪತ್ಯದಲ್ಲಿ ಕೆಲವು ಬಿರುಕು ಮೂಡಿ ಅನರ್ಥಕ್ಕೆ ಕಾರಣವಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಒಬ್ಬರನ್ನೊಬ್ಬರು ಹೆಚ್ಚು ಸಲಿಗೆ ಹೊಂದಿ, ತಾವು ದಿನನಿತ್ಯ ನಿರ್ವಹಿಸುತ್ತಿದ್ದ ಜಾವಾಬ್ಡಾರಿಗಳಿಂದ ದೂರವಾಗಿ ಬಾಂಧವ್ಯದಿಂದ ನುಣುಚಿಕೊಳ್ಳುತ್ತಿರುವ ಗುಣವನ್ನು ಅಭ್ಯಾಸ ಮಾಡಿಕೊಂಡಿರುವುದಕ್ಕೆ.

Why married couples need to spend quality time together

ಹೌದು, ಒಟ್ಟಾಗಿದ್ದರೆ ದಾಂಪತ್ಯದಲ್ಲಿ ನಿಜವಾದ ಶಾಂತಿ, ನೆಮ್ಮದಿ ಮತ್ತು ಶಕ್ತಿಯನ್ನು ಹೊಂದಬಹುದು. ಒಬ್ಬರಿಗೊಬ್ಬರು ಅನ್ಯೂನ್ಯವಾಗಿ ಒಳ್ಳೆಯ ಸಮಯವನ್ನು ಒಟ್ಟಾಗಿ ಕಳೆಯುವುದು ದಾಂಪತ್ಯವು ಗಟ್ಟಿಯಾಗಿರಲು ನೇರ ಕಾರಣವಾಗುತ್ತದೆ.

ದಂಪತಿಗಳಿಗೆ ದಾಂಪತ್ಯದಲ್ಲಿ ಒಬ್ಬರಿಗೊಬ್ಬರು ಸಮಯ ನೀಡುವುದೇ ಒಂದು ದೊಡ್ಡ ಸವಾಲಾಗಿದೆ. ಈಗಿನ ಬಿಡುವಿಲ್ಲದ ಒತ್ತಡದ ಬದುಕಿನಲ್ಲಿ ವಿಶ್ವಾಸಗಳಿಗೆ ಜಾಗವೇ ಇಲ್ಲದಂತಾಗಿದೆ. ಒಬ್ಬರಿಗೊಬ್ಬರು ಚೆನ್ನಾಗಿ ಅರಿತು ಸಮಯ ಕಳೆಯುವುದು ಈಗೀಗ ತುಂಬಾ ಅಪರೂಪವಾಗಿದೆ. ಸಂತೋಷ ಮತ್ತು ಬಾಂಧವ್ಯ ಕೇವಲ ಒಂದು ರಾತ್ರಿಯ ಸುಖದಿಂದ ಸಾಧಿಸುವಂತದ್ದಲ್ಲ.

ಅದೊಂದು ನಿರಂತರ ಪ್ರಕ್ರಿಯೆ. ಇದು ನಿಮ್ಮ ತಾಳ್ಮೆ, ನಿಮ್ಮ ಕರ್ತವ್ಯ ಮತ್ತು ನೀವು ನೀಡುವ ಸಮಯದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಅರ್ಥಮಾಡಿಕೊಳ್ಳಬೇಕಾದ ಬಹಳ ಮುಖ್ಯವಾದ ಅಂಶವೇನೆಂದರೆ ನೀವು ಮದುವೆಯಾಗಿರುವುದಕ್ಕೆ ಮಾತ್ರ ಸಮಯ ನೀಡಬೇಕೆಂದು ತಿಳಿದುಕೊಳ್ಳುವುದು. ಇದೊಂದು ಶುದ್ಧ ತಪ್ಪು ಗ್ರಹಿಕೆ. ಇದರ ಮಧ್ಯೆ, ನಿಮ್ಮ ಮನೆಯಲ್ಲಿನ ಜವಾಬ್ದಾರಿಗಳು, ಆರ್ಥಿಕ ಪರಿಸ್ಥಿತಿ ಮತ್ತು ನೀವು ಕೂಡಿ ಬಾಳುತ್ತಿರುವುದರ ಸ್ವಾರಸ್ಯ ನಿಮ್ಮನ್ನು ಹೆಚ್ಚು ಸಂದಿಗ್ಧ ಪರಿಸ್ತಿತಿಗೆ ಎದುರಾಗಿಸುತ್ತದೆ.

ಒಂಟಿಯಾಗಿ ಸಂಗಾತಿಯೊಂದಿಗೆ ಸಮಯ ಕಳೆಯುವುದು ನಿಜಕ್ಕೂ ಸ್ವರ್ಗವೇ ನಿಮ್ಮ ಬಳಿ ಇದ್ದಂತೆ. ಇದರ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಬೇಕು. ಇತ್ತೀಚೆಗೆ ಸಂಗಾತಿಗಳು ಉಪಹಾರ ಕೇಂದ್ರಗಳಲ್ಲಿ ಎದುರೆದುರಾಗಿ ಕುಳಿತು ತಮ್ಮ ಮೊಬೈಲ್ ಗಳನ್ನು ನೋಡಿಕೊಂಡು ಮೌನವಾಗಿ ಕುಳಿತಿರುವುದನ್ನು ನೋಡಬಹುದು. (ಒಂದು ವೇಳೆ ಅತೀ ಮುಖ್ಯವಾಗಿರುವುದನ್ನು ಅವರಿಬ್ಬರು ನೋಡಿಕೊಳ್ಳುತ್ತಿರಬಹುದು, ನಿಮಗೆ ತಿಳಿಯಿತು ಅನ್ನಿಸುತ್ತೆ). ಆದ್ದರಿಂದ ಸಂಗಾತಿಗಳು ಅವರು ಒಟ್ಟಾಗಿ ಸೇರುವ ಸಮಯದ ಬಗ್ಗೆ ಹೆಚ್ಚು ಆಲೋಚಿಸಬೇಕು. ನಾವು ನೀಡಿರುವ ಅಂಶಗಳ ಕಡೆ ಒಮ್ಮೆ ಗಮನಹರಿಸಿ ನೀಡಿರುವ ಪ್ರಶ್ನೆಗಳನ್ನು ಮತ್ತು ಅಂಶಗಳನ್ನು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ಇದು ನಿಜಕ್ಕೂ ಪರಿಣಾಮಕಾರಿ.

ಯಾವಾಗ ಒಬ್ಬರಿಗೊಬ್ಬರು ಒಟ್ಟಾಗಿ ಕಾಲ ಕಳೆಯುವುದು? ಒಟ್ಟಾಗಿ ಆನಂದದಿಂದ ಕಳೆದಿರುವ ಸಮಯವನ್ನು ಮತ್ತೆ ಹೊಂದಲು ಸಾಧ್ಯವೇ?
ಸಾಮಾನ್ಯವಾಗಿ ಸಿಗುವ ಕಡಿಮೆ ಸಮಯದಲ್ಲಿ, ಹೊರಗೆ ಒಟ್ಟಾಗಿ ತೆರಳಿ ರಜಾ ದಿನಗಳನ್ನು ಆನಂದದಿಂದ ಕಳೆಯುವ ಸಮಯವನ್ನು ಒಮ್ಮೆ ಮೆಲುಕು ಹಾಕಿಕೊಳ್ಳಿ. ಈ ಪ್ರಕ್ರಿಯೆಯನ್ನು ಪುನರಾವರ್ತನೆಯಾಗುವಂತೆ ಮಾಡಲು ಸಿಗುವ ದಾರಿಗಳನ್ನು ಹುಡುಕಿ ಉತ್ತಮವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರೀತಿಯನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಿ. ಇದೇ ದಾಂಪತ್ಯದಲ್ಲಿನ ನಿಜವಾದ ಸ್ವಾರಸ್ಯ. ಇದನ್ನು ಅರಿತವನೇ ನಿಜವಾದ ಸುಖೀ ಪುರುಷ.

English summary

Why married couples need to spend quality time together

Married couples often complain about losing the spark in their relationship after a few years into their marriage. This is because they start taking each other for granted and no longer do special things that they used to. But spending quality time together is very important to keep your bond strong.
Story first published: Wednesday, January 13, 2016, 9:50 [IST]
X
Desktop Bottom Promotion