For Quick Alerts
ALLOW NOTIFICATIONS  
For Daily Alerts

ಅಯ್ಯೋ ಈ ಗಂಡಸರ ಗೋಳು ಕೇಳುವವರು ಯಾರು?

By Deepu
|

'ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು' ಎಂಬ ಗಾದೆಯನ್ನು ನೀವು ಕೇಳಿರುತ್ತೀರಿ. ಮದುವೆ ಮಾಡುವುದೇ ಸಮಸ್ಯೆಯಾದರೆ, ಮದುವೆ ಮಾಡಿಕೊಂಡ ನಂತರ ಗಂಡ-ಹೆಂಡತಿ ಕೂಡಿ ಬಾಳುವುದು ಇದೆಯಲ್ಲ ಇದು ಭಾರೀ ತಿರುವುಗಳಿಂದ ಕೂಡಿದ ಯಾವುದೇ ರೋಚಕ ಕಾದಂಬರಿಗಿಂತ ಕಡಿಮೆಯಿಲ್ಲದ ಕಥೆಯಾಗಿ ಬಿಡುತ್ತದೆ. ಗಂಡ ಹೆಂಡತಿ ಇಬ್ಬರು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳಬೇಕು. ಇಬ್ಬರು ಬೇರೆ ಬೇರೆ ಕಡೆ ಹುಟ್ಟಿ ಬೆಳೆದಿರುತ್ತಾರೆ.

ಇಬ್ಬರ ಜೀವನ ಶೈಲಿ ಬೇರೆ, ಇಬ್ಬರ ಅಭಿರುಚಿಗಳು ಬೇರೆ ಬೇರೆಯಾದರೂ ಸರಿ ಒಟ್ಟಿಗೆ ಒಂದೇ ಮನೆಯಲ್ಲಿ ವಾಸ, ಒಂದೇ ಕೋಣೆಯಲ್ಲಿ ಒಟ್ಟಿಗೆ ಮಲಗಬೇಕು, ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುವ ಮುನ್ನ ಒಬ್ಬರ ಇಷ್ಟ ಕಷ್ಟಗಳನ್ನು ತಿಳಿದುಕೊಳ್ಳಬೇಕು. ಹೀಗೆ ನಾನಾ ವಿಚಾರಗಳನ್ನು ಇವರು ಕಲಿಯುತ್ತಾರೆ. ಇವರ ಜೀವನದಲ್ಲಿ ಏರು ಪೇರುಗಳು ಸಹ ಇರುತ್ತವೆ. ಎಲ್ಲಿ ಈ ಅನುಸರಿಸಿಕೊಳ್ಳುವಿಕೆ ಮತ್ತು ಏರು ಪೇರುಗಳನ್ನು ಅರ್ಥ ಮಾಡಿಕೊಳ್ಳುವುದು ತಪ್ಪಿ ಹೋಗುತ್ತದೆಯೋ, ಆಗ ಜೀವನದಲ್ಲಿ ದೂರು ಪುಸ್ತಕವೊಂದು ಇದ್ದಕ್ಕಿದ್ದಂತೆ ತೆರೆಯಲ್ಪಡುತ್ತದೆ.

ಗಂಡ ಹೆಂಡತಿಯ ಮೇಲೆ, ಹೆಂಡತಿ ಗಂಡನ ಮೇಲೆ, ಸೊಸೆ ಅತ್ತೆಯ ಮೇಲೆ, ಅತ್ತೆಯ ಮೇಲೆ ಸೊಸೆ ಹೀಗೆ ನಾನಾ ದೂರುಗಳು ವಿನಿಮಯವಾಗುತ್ತವೆ. ಇಂದು ನಾವು ಮದುವೆಯಾದ ಗಂಡಸು ತನ್ನ ಹೆಂಡತಿಯ ಕುರಿತಾಗಿ ಮಾಡುವ ಕೆಲವೊಂದು ದೂರುಗಳನ್ನು ನಿಮಗೆ ತಿಳಿಸುತ್ತಿದ್ದೇವೆ. ಆ ದೂರುಗಳು ಯಾವುವು ಎಂದು ತಿಳಿದುಕೊಳ್ಳಲು ಮುಂದೆ ಓದಿ. ಮುದ್ದಿನ ಪತ್ನಿಯಾಗಲು ಇರಲೇಬೇಕಾದ ಗುಣಗಳಿವು

List Of Complaints From Married Men

ವಿ.ಸೂ: ಈ ಅಂಕಣವನ್ನು ಸಾಮಾನ್ಯವಾಗಿ ಹಲವರಿಗೆ ತಿಳಿಯದ ವಿಚಾರವನ್ನು ತಿಳಿಸುವ ಉದ್ದೇಶದಿಂದ ಬರೆಯಲಾಗಿದೆ. ಇದು ಗಂಡಸರ-ಹೆಂಗಸರ ಭಾವನೆಗಳಿಗೆ ಧಕ್ಕೆಯುಂಟು ಮಾಡುವುದಿಲ್ಲ ಎಂದು ಭಾವಿಸುತ್ತೇವೆ. ಏಕೆಂದರೆ ಗಂಡಸರಿಗೆ ದೂರುಗಳು ಇದ್ದಂತೆ, ಹೆಂಗಸರಿಗು ಸಹ ಗಂಡಸರ ಮೇಲೆ ಹಲವಾರು ದೂರುಗಳು ಇರುತ್ತವೆ. ಬನ್ನಿ ಈ ದೂರುಗಳ ಬಗೆಗೆ ಮೊದಲು ತಿಳಿದುಕೊಳ್ಳೋಣ.

ಆಕೆ ನನ್ನನ್ನು ಹೊಗಳಬೇಕು ಎಂದು ನಾನು ಭಾವಿಸುತ್ತೇನೆ
ಪ್ರತಿ ಗಂಡನು ಹೆಂಡತಿಯ ಪಾಲಿಗೆ ಹೀರೋ ಆಗಬೇಕೆಂದು ಶ್ರಮಪಡುತ್ತಾನೆ. ಆದರೆ ಒಮ್ಮೊಮ್ಮೆ ಅವನು ಆಕೆಯ ಮುಂದೆ ಜೀರೋ ಆಗಿಬಿಡುತ್ತಾನೆ. ಹೆಂಡತಿಯು ಒಂದು ಬಾರಿ ಸಹ ಹೊಗಳದ ಗಂಡ, ಆ ಐಡೆಂಟಿಟಿ ಪಡೆಯಲು ಶ್ರಮಿಸಿ ಸೋತು ಹೋಗುತ್ತಾನೆ. ಸಲ್ಲದವರಿಗೆ ಬೇಡ, ಕನಿಷ್ಠ ಸಿಕ್ಕಾಪಟ್ಟೆ ಕಷ್ಟಪಡುವವರಿಗು ಸಹ ಕೆಲವು ಹೆಂಡತಿಯರು ಹೊಗಳುವುದಿಲ್ಲ. ಇದರ ಬಗ್ಗೆ ಗಂಡಸರಿಗೆ ಅಸಮಾಧಾನವಿರುತ್ತದೆ. ಆದ್ದರಿಂದ ಯೋಗ್ಯ ಸಂದರ್ಭಗಳಲ್ಲಿ ಹೆಂಡತಿಯಾದವಳು ಗಂಡನನ್ನು ಹೊಗಳಬೇಕು. ಅದು ಆತ ನಿಜವಾಗಿ ಸಾಧನೆ ಮಾಡಿದಾಗ!.

ಡೇಟ್ ಪ್ಲಾನ್ ಮಾಡುವುದು
ಎಲ್ಲಿ ಹೋಗಬೇಕು, ಯಾವಾಗ ಹೋಗಬೇಕು, ಎಲ್ಲಿ ತಿನ್ನಬೇಕು, ಯಾವ ಸಿನಿಮಾಗೆ ಹೋಗಬೇಕು ಎಂದು ಗಂಡಸೆ ತೀರ್ಮಾನ ತೆಗೆದುಕೊಳ್ಳುವಾಗ, ಅದರ ಕುರಿತು ದೂರು ಬರುತ್ತದೆ. ಯಾವಾಗಲು ನಿಮ್ಮ ಯಜಮಾನರೇ ಎಲ್ಲಾ ಕಡೆಗೆ ಕರೆದುಕೊಂಡು ಹೋಗುತ್ತಿದ್ದರೆ ಅವರಿಗೆ ಬೇಜಾರಾಗಲ್ವ ಮೇಡಮ್, ಅದಕ್ಕಾಗಿ ನೀವು ಸಹ ಅವರಿಗೆ ಇಷ್ಟವಾಗುವ ಕ್ರಿಕೆಟ್ ಆಟವೋ, ಯಾವುದೋ ಕಾರ್ಯಕ್ರಮದ್ದೋ, ಟಿಕೆಟ್ ತೆಗೆದುಕೊಂಡು ಅವರ ಜೊತೆಯಲ್ಲಿ ಹೋಗಿ ಬನ್ನಿ. ಇದರಿಂದ ಅವರಿಗೆ ಸಂತೋಷವಾಗುತ್ತದೆ. ಈ ದೂರನ್ನು ಇಲ್ಲವಾಗಿಸಿದರೆ ನಿಮಗೆ ತುಂಬಾ ಒಳ್ಳೆಯದು. ಬ್ರೇಕ್ ಅಪ್ ಶಾಕ್ ಗಂಡಸರಿಗೇ ಹೆಚ್ಚಾಗಿ ಕಾಡುತ್ತದೆಯಂತೆ!

ಮಾತು ಇರಲಿ, ವಿಚಾರಣೆ ಬೇಡ
ಮದುವೆಯೆಂಬುದು ಮಧುರಾತೀ ಮಧುರ ಬಾಂಧವ್ಯ. ಇದನ್ನು ಮತ್ತಷ್ಟು ರಂಗೇರಿಸುವುದು ಮಾತು ಕತೆಗಳು. ಮದುವೆಯಾಗಿ ಮಕ್ಕಳಾದ ಮೇಲೆ, ಮಾತುಕತೆಗಳು ಕಡಿಮೆಯಾಗಿಬಿಡುತ್ತವೆ. ಮಗು ನಿಮ್ಮ ದೈನಂದಿನ ಜೀವನದ ಬಹುಭಾಗವನ್ನು ಆವರಿಸಿಕೊಂಡು ಬಿಡುತ್ತದೆ. ಆಗ ನಿಮ್ಮಿಬ್ಬರ ನಡುವೆ ಮಾತುಕತೆಗಳು ಇರುವುದಿಲ್ಲ. ಇದು ಗಂಡಸನ್ನು ನೋಯಿಸುತ್ತದೆ. ಅವನಿಗೆ ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ಬಂದಾಗ ಬಾಗಿಲಲ್ಲಿ ನಗುತ್ತಾ ಬರಮಾಡಿಕೊಳ್ಳುವ ಒಂದು ಮುದ್ದು ಮುಖದ ಮಡದಿ ಬೇಕು, ಅದಕ್ಕಾಗಿಯೇ ಅವನು ನಿಮ್ಮನ್ನು ಇಷ್ಟಪಟ್ಟಿದ್ದು, ಅವನ ಜೊತೆಗೆ ಮಾತನಾಡಿ. ಏಕಿಷ್ಟು ಲೇಟ್? ಎಂದು ವಿಚಾರಣೆ ಮಾಡಬೇಡಿ ಅಂತಾ ನಮ್ಮ ಗಂಡಸರು ದೂರು ನೀಡುತ್ತಾರೆ!

ರೊಮ್ಯಾನ್ಸ್ ಇಲ್ಲ
ಮದುವೆಯಾಗಿ ದಿನಗಳು ಕಳೆಯುತ್ತಾ ಇದ್ದಲ್ಲಿ, ರೊಮ್ಯಾನ್ಸ್‌ಗೆ ಜಾಗವೇ ಇರುವುದಿಲ್ಲ. ದೈನಂದಿನ ಜೀವನದ ಅವಿಭಾಜ್ಯ ಅಂಗವೊಂದು ಮೂಲೆಗುಂಪಾಗಿ ಹೋಗುತ್ತದೆ. ಮಗು, ಕೆಲಸ, ಮನೆ, ಜವಾಬ್ದಾರಿಗಳು ಆವರಿಸಿಕೊಂಡಾಗ. ರೊಮ್ಯಾನ್ಸ್ ಮರೆತ ವಿಚಾರವಾಗುತ್ತದೆ. ಜೊತೆಗೆ ಹೆಂಡತಿಯ ಅಸಹಕಾರ ಇದಕ್ಕೆ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತದೆ. ಸ್ವಲ್ಪ ಮಸಾಲೆ ಬೇಡವೇ ಜೀವನಕ್ಕೆ ಎಂಬ ದೂರು ನಿಮ್ಮ ಮನೆಯಲ್ಲಿ ಬಾರದಂತೆ ನೋಡಿಕೊಳ್ಳಿ.

English summary

List Of Complaints From Married Men

Once we are married, life does change a lot. There are numerous new experiences that we go through. Be it emotional or physical, we learn a lot and grow together. It is a sudden growth that makes us realise many important things and values. In this article today, we are here to share a list of complaints married men usually have. Some reasons may be silly and some may be genuine. Read on to know about these complaints.
Story first published: Wednesday, January 27, 2016, 12:43 [IST]
X
Desktop Bottom Promotion