For Quick Alerts
ALLOW NOTIFICATIONS  
For Daily Alerts

ವಿಚ್ಛೇದನ ನಂತರದ ಜೀವನ, ಆ ದೇವರಿಗೇ ಪ್ರೀತಿ...

By
|

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದೆ. ಏಕೆಂದರೆ ಮದುವೆಯಾಗುವ ಜೋಡಿ ಜೀವನಪರ್ಯಂತ ಒಬ್ಬರಿಗೊಬ್ಬರು ಜೊತೆ ನೀಡಬೇಕಾಗುವುದರಿಂದ ಪ್ರತಿಯೊಬ್ಬರು ತಮ್ಮ ಮನಸ್ಸಿನ ಕನಸಿನ ರಾಜಕುಮಾರ/ರಾಜಕುಮಾರಿಯನ್ನೇ ಬಯಸುತ್ತಾರೆ. ಆದರೆ ಯಾರಿಗೂ ಈ ಎಲ್ಲಾ ಗುಣಗಳಿರುವ ರಾಜಕುಮಾರ ಖಂಡಿತಾ ಸಿಗುವುದಿಲ್ಲ. ಎಲ್ಲಾ ಗುಣಗಳಿರಲೇಬೇಕೆಂದು ಹಠ ಹಿಡಿದು ಕಠಿಣ ತಪಸ್ಸಿನ ಬಳಿಕ ದ್ರೌಪದಿಗೂ ಈ ಗುಣಗಳು ಐವರು ಪತಿಯರಿಂದ ದೊರಕುವಂತಾಯಿತು. ಅಂತಹದ್ದಿರುವಾಗ ಹುಲುಮಾನವರಾದ ನಮಗೆ ಎಲ್ಲಾ ಗುಣಗಳಿರುವ ವ್ಯಕ್ತಿ ಜೀವನಸಂಗಾತಿಯಾಗಿ ದೊರಕುವರೇ? ಖಂಡಿತವಾಗಿಯೂ ಇಲ್ಲ.

ಬದಲಿಗೆ ನಮ್ಮ ಸಂಗಾತಿಯ ನೈಜ್ಯ ವ್ಯಕ್ತಿತ್ವವನ್ನು ಒಪ್ಪಿಕೊಂಡು ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಜೀವನ ಸ್ವರ್ಗವಾಗುತ್ತದೆ. ನೀವು ಬಯಸುವ ಈ ಸಂಗತಿಗಳೆಲ್ಲಾ ನೀವು ಮದುವೆಯಾಗುವವರಲ್ಲಿದೆ ಎಂದು ಸುಳ್ಳು ಹೇಳಿ ನಂಬಿಸುವುದೇ 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂಬ ಗಾದೆಯಂತೆ ಹಿರಿಯರು ಕಂಡುಕೊಂಡ ಉಪಾಯ. ಆದರೆ ಇಂದಿನ ಸಮಾಜದಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗುತ್ತಿದೆ, ಸಣ್ಣ-ಪುಟ್ಟ ವಿಷಯಗಳೇ ಸಂಸಾರದಲ್ಲಿ ರಂಪ ರಾಮಾಯಣವೇ ಆಗಿ, ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಷಯಗಳು, ಊರು ತುಂಬಾ ಹರಡುತ್ತಿದೆ, ಕೊನೆಗೆ ಯಾವುದೇ ದಾರಿ ಕಾಣದೇ, ವಿಚ್ಚೇದನ ಹಂತಕ್ಕೆ ಬಂದು ನಿಲ್ಲುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ....

ವಿಚ್ಛೇದನವನ್ನು ಅತ್ಯಂತ ಕಡೆಯ ಮತ್ತು ಅತ್ಯಂತ ಅನಿವಾರ್ಯವಾದ ನಿರ್ಧಾರವನ್ನಾಗಿ ಪಡೆದುಕೊಳ್ಳಬೇಕೇ ವಿನಃ ಜೊತೆ ಮುಂದುವರೆಯಲು ಒಂದು ಸಕಾರಣವಿದ್ದರೂ ಇದನ್ನು ಅಲ್ಲಗಳೆಯಬಾರದು ಎಂದು ಎಲ್ಲಾ ಧರ್ಮಗಳೂ, ಭಾರತೀಯ ಸಂವಿಧಾನವೂ ತಿಳಿಸುತ್ತದೆ. ಅಂತೆಯೇ ವಿಚ್ಛೇದನವನ್ನು ನ್ಯಾಯಾಲಯ ಒಮ್ಮೆಲೇ ನೀಡುವುದಿಲ್ಲ. ಅರ್ಜಿ ಹಾಕಿದ ಬಳಿಕ ಕೊಂಚ ಕಾಲಾವಕಾಶ ನೀಡಿ ಸಂಧಾನಕ್ಕೆ ಪ್ರಯತ್ನಿಸುತ್ತದೆ. ಅದಕ್ಕೂ ಹೊರತಾಗಿ ಸಂಧಾನವಾಗದಿದ್ದಲ್ಲಿ ಮಾತ್ರ ವಿಚ್ಛೇದನ ನೀಡಲಾಗುತ್ತದೆ. ಆದರೆ ವಿಚ್ಛೇದನದ ಬಳಿಕ ಯಾವ ರೀತಿಯಾದ ಟೀಕೆ ಮತ್ತು ತೊಂದರೆಗಳು ಎದುರಾಗುತ್ತವೆ ಎಂಬ ಬಗ್ಗೆ ಎಲ್ಲರಿಗೂ ಅರಿವಿರುವುದಿಲ್ಲ, ಬನ್ನಿ ವಿಚ್ಛೇದನದ ಬಳಿಕ ಜೀವನದಲ್ಲಿ ಏನೆಲ್ಲಾ ನಡೆದುಹೋಗುತ್ತದೆ ಎಂಬುದನ್ನು ನೀವೇ ಓದಿ..

ಟೀಕಾಸ್ತ್ರಗಳ ಪ್ರಹಾರ..!

ಟೀಕಾಸ್ತ್ರಗಳ ಪ್ರಹಾರ..!

ವಿಚ್ಚೇದನದ ಬಳಿಕವಂತೂ, ಮಾನಸಿಕವಾಗಿ ವ್ಯಕ್ತಿಯನ್ನು ಇನ್ನಷ್ಟು ಕುಗ್ಗಿಸಿಬಿಡುತ್ತದೆ. ಸಮಾಜದ ಗೊಡವೆಯೇ ಬೇಡ ಎಂದು ಮನೆಯಲ್ಲಿಯೇ ಕುಳಿತಿದ್ದರೂ ಮನೆಯ ಕಿಟಕಿಯಿಂದ ಬರುವ ಟೀಕಾಸ್ತ್ರಗಳೇ ಮಾನಸಿಕವಾಗಿ ಕುಗ್ಗಿಸಲು ಸಮರ್ಥವಾಗಿರುತ್ತವೆ!

 ಸಿಹಿನೆನಪುಗಳು

ಸಿಹಿನೆನಪುಗಳು

ತನ್ನ ಸಂಗಾತಿಯೊಂದಿಗೆ ಕಳೆದ ಎಲ್ಲಾ ಸಿಹಿ ನೆನಪುಗಳು ಏಕಾಏಕಿ ಸ್ತಬ್ಧಗೊಳ್ಳುತ್ತವೆ. ಈಗ ಉಳಿದಿರುವುದು ಹಿಂದಿನ ಸುಂದರ ನೆನಪುಗಳು ಮಾತ್ರ. ವಿಚ್ಛೇದನದ ಬಳಿಕ ಹಿಂದಿನ ನೆನಪುಗಳನ್ನು ಕೆದಕುವ ಯಾವುದೇ ವಸ್ತು ಅಥವಾ ಪ್ರಸಂಗ ಎದುರಾದರೆ ಅದು ಭಾವನಾತ್ಮಕವಾಗಿ ವ್ಯಕ್ತಿಯನ್ನು ಹಿಂಡಿ ಹಾಕಬಹುದು.

ಎಲ್ಲರೂ ಉಲ್ಟಾ ಹೊಡೆಯುತ್ತಾರೆ..!

ಎಲ್ಲರೂ ಉಲ್ಟಾ ಹೊಡೆಯುತ್ತಾರೆ..!

ನಿಮ್ಮ ಮನೆಯವರು ಮತ್ತು ಸ್ನೇಹಿತರು ನಿಮ್ಮೊಂದಿಗೆ ವ್ಯವಹರಿಸಿದ್ದ ರೀತಿಯಲ್ಲಿಯೇ ವಿಚ್ಛೇದನದ ಬಳಿಕವೂ ವ್ಯವಹರಿಸುತ್ತಾರೆ ಎಂದು ಸರ್ವಥಾ ಭಾವಿಸುವಂತಿಲ್ಲ. ಏಕೆಂದರೆ ವಿಚ್ಛೇದನದ ಬಳಿಕ ಅವರಿಗೂ ನಿಮ್ಮಂತೆಯೇ ಸಂದಿಗ್ಧತೆ ಎದುರಾಗಿರುತ್ತದೆ. ಅವರೂ ಸಹಾ ನಿಮ್ಮಿಬ್ಬರಲ್ಲಿ ಒಬ್ಬರ ಪರವಾಗಿಯೇ ಮಾತನಾಡಬೇಕಾಗುತ್ತದೆ. ಅಥವಾ ಇಬ್ಬರಲ್ಲೊಬ್ಬರ ಜೊತೆ ಮಾತನಾಡುವಾಗ ಇನ್ನೊಬ್ಬರ ಬಗ್ಗೆ ಕೇಳಲಾಗದೇ ಇರಿಸು ಮುರಿಸು ಅನುಭವಿಸುತ್ತಾರೆ. ಅನಾಚೂನವಾಗಿ ಯಾವುದೋ ಮಾತು ತಮ್ಮಿಂದ ವಿಚ್ಛೇದಿತರ ನೋವನ್ನು ಇನ್ನಷ್ಟು ಹೆಚ್ಚಿಸುವುದು ಕಂಡುಬಂದರೆ ದುಃಖಿತರಾಗುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಲ್ಲರೂ ಉಲ್ಟಾ ಹೊಡೆಯುತ್ತಾರೆ..!

ಎಲ್ಲರೂ ಉಲ್ಟಾ ಹೊಡೆಯುತ್ತಾರೆ..!

ಇವರೊಂದಿಗೆ ಯಾವುದು ಮಾತನಾಡಬೇಕು, ಯಾವ ವಿಷಯ ಮಾತನಾಡಬಾರದು ಎಂಬ ದ್ವಂದ್ವದಲ್ಲಿ ಹೆಚ್ಚಿನವರು ವಿಚ್ಛೇದಿತರನ್ನು ಭೇಟಿಯಾಗುವುದನ್ನು ತಪ್ಪಿಸಿಕೊಳ್ಳುವುದೇ ಉತ್ತಮ ಎಂದು ಭಾವಿಸುತ್ತಾರೆ. ಮನೆಯವರಂತೂ ಸಮಾಜದ ಟೀಕೆಗಳಿಗೆ ತುತ್ತಾಗಿ ಅದಕ್ಕೆ ತಮ್ಮ ಮಕ್ಕಳೇ ಕಾರಣ ಎಂಬ ಸತ್ಯವನ್ನು ಮಕ್ಕಳ ಎದುರಿಗೇ ಹೇಳಲಾರದೇ ನೋವನ್ನು ನುಂಗುತ್ತಲೇ ಇರಬೇಕಾಗುತ್ತದೆ.

ವಿಚ್ಛೇದನಕ್ಕೆ ಪ್ರಮುಖ ಕಾರಣ..?

ವಿಚ್ಛೇದನಕ್ಕೆ ಪ್ರಮುಖ ಕಾರಣ..?

ಸಮೀಕ್ಷೆ ನಡೆಸಿದವರಿಗೆ ಹೆಚ್ಚಿನ ವಿಚ್ಛೇದನಗಳಿಗೆ ವಿಶ್ವಾಸಘಾತುಕತನವೇ ಪ್ರಮುಖ ಕಾರಣವಾಗಿ ಕಂಡುಬಂದಿದೆ. ಏಕೆಂದರೆ ಪತಿ ಪತ್ನಿಯರ ಸಂಬಂಧದಲ್ಲಿ ಪರಸ್ಪರ ವಿಶ್ವಾಸ ಅತ್ಯಂತ ಅಗತ್ಯವಾಗಿದ್ದು ಯಾವುದೋ ತಪ್ಪು ಅಭಿಪ್ರಾಯದಿಂದ ಇಬ್ಬರಲ್ಲೊಬ್ಬರು ತಮ್ಮ ಸಂಗಾತಿಯಲ್ಲಿ ಕೊಂಚವೂ ವಿಶ್ವಾಸ ಕಳೆದುಕೊಂಡರೆ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಈ ಬಿರುಕು ದೊಡ್ಡದಾಗಿ ಭರವಸೆಯ ಅಣೆಕಟ್ಟು ಒಡೆಯಲು ಹೆಚ್ಚಿನ ಸಮಯ ಬೇಕಾಗಿಲ್ಲ. ಬಿರುಕು ಮೂಡಲು ಇಬ್ಬರಲ್ಲಿ ಕನಿಷ್ಟ ಒಬ್ಬರಲ್ಲಿಯಾದರೂ ಇರುವ ಅಹಂಭಾವ ಇನ್ನೊಂದು ಮುಖ್ಯ ಕಾರಣವಾಗಿದೆ.

English summary

Divorce Mistakes that Will Ruin your Life

If you're headed for divorce, here are some things to always keep in mind. ... With those basics in mind, here are the five seemingly harmless mistakes most of the couples are doing have a look
X
Desktop Bottom Promotion