For Quick Alerts
ALLOW NOTIFICATIONS  
For Daily Alerts

ಗಂಡನನ್ನು ಎಷ್ಟೇ ಪ್ರೀತಿಸಿದರೂ, ಇಂತಹ ರಹಸ್ಯ ಮಾತ್ರ ಹೇಳಲ್ಲ!

By Super
|

ಹೊಸತಾಗಿ ಮದುವೆಯ ಬಂಧನಕ್ಕೆ ಒಳಗಾದಾಗ ತಮ್ಮ ತಮ್ಮ ಸಂಗಾತಿಗಳ ಉತ್ತಮ ಗುಣಗಳೇ ಕಣ್ಣಿಗೆ ಕಾಣುತ್ತದೆ. ತನ್ನ ಹೆಂಡತಿಗಾಗಿ ಏನನ್ನೂ ಬೇಕಾದರೂ ಮಾಡಬಲ್ಲೆ ಎಂಬ ಹುಮ್ಮಸ್ಸಿನಲ್ಲಿರುವ ಗಂಡ, ತನ್ನ ಗಂಡನಿಗಾಗಿ ಜಗತ್ತನ್ನೇ ತ್ಯಜಿಸಲು ಸಿದ್ಧಳಿರುವ ಹೆಂಡಿತಿ!, ಹೀಗೆ ಇಬ್ಬರೂ ತಮ್ಮದೇ ಪ್ರೇಮ ಲೋಕದಲ್ಲಿ ಮೈಮರೆತಿರುತ್ತಾರೆ! ಸುಖಾಸುಮ್ಮನೆ ಗಂಡನ ಪ್ರೀತಿಯ ಮೇಲೆ ಸಂಶಯ ಪಡಬೇಡಿ!

ಆದರೆ ಸಂಸಾರದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅಲ್ಲವೇ?, ಇಲ್ಲಿ ಏರುಪೇರು ಸಾಮಾನ್ಯ, ಅಂತೆಯ ಇವರ ನಡುವೆ ಇದ್ದ ಪ್ರೀತಿ, ಪ್ರೇಮ ಬರೀ ಸಿಹಿ ಇಲ್ಲದ ಚ್ಯೂಯಿಂಗ್ ಗಮ್ ಅಥವಾ ಈಗ ತಾನೇ ತೆರೆದ ಸೋಡಾ ಬಾಟಲಿನಂತೆ ಆಗಿಬಿಡುತ್ತದೆ. ಮೊದಮೊದಲು ಸಿಹಿಯಾಗಿ, ನೊರೆಯುಕ್ಕುತ್ತಿದ್ದುದು ಕ್ರಮೇಣ ಸಪ್ಪೆಯಾಗಿ, ನೊರೆಯಿಲ್ಲದ ನೀರಿನಂತೆ ಭಾಸವಾಗುತ್ತದೆ.

ಇದಕ್ಕೆ ಕಾರಣ ಹಲವಾರು ಇರಬಹುದು, ಸುಳ್ಳಿನ ಕಂತೆಗಳು, ಜೊತೆಗೆ ತಮ್ಮಲ್ಲಿಯೇ ಬಚ್ಚಿಟ್ಟುಕೊಂಡಿರುವ ರಹಸ್ಯ ವಿಷಗಳು ಕೂಡ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸುತ್ತದೆ! ಅಷ್ಟಕ್ಕೂ ಇಲ್ಲಿ ನಾವು ಹೇಳ ಹೊರಟಿರುವುದು ಹೆಂಡತಿಯ ಬಗ್ಗೆ! ಹೌದು ಹೆಂಡತಿಯರು ಕೂಡ ತಮ್ಮ ಗಂಡಂದಿರಿಂದ ಕೆಲವೊಂದು ವಿಷಯಗಳನ್ನು ಬಚ್ಚಿಡುತ್ತಾರೆ. ನೀವು ನಂಬಿದರು ಅಥವಾ ನಂಬದಿದ್ದರು ಇದು ಸತ್ಯ. ಆಕೆ ತನ್ನ ಗಂಡನನ್ನು ಎಷ್ಟು ಪ್ರೀತಿಸಿದರೂ ಸಹ ಆತನಿಗೆ ತಿಳಿಸದೆ ಒಂದು ಅಥವಾ ಎರಡು ವಿಷಯಗಳನ್ನು ತನ್ನ ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿರುತ್ತಾಳೆ. ಗಂಡನ ಲೇಟ್ ನೈಟ್ ಡ್ಯೂಟಿಯ ವಿಚಾರದಲ್ಲಿ ಎಚ್ಚರ ತಪ್ಪದಿರಿ

ಸಾಮಾನ್ಯವಾಗಿ ಆಕೆ ತನ್ನನ್ನು ತಾನು ಪರೀಕ್ಷೆಗೆ ಒಳಪಡಿಸಿಕೊಳ್ಳಲು, ಅಥವಾ ತನಗೆ ಸಂಭವಿಸುವ ಮುಜುಗರ, ಅವಮಾನ ಅಥವಾ ಇನ್ಯಾವುದೋ ಭೀತಿಯಿಂದ ಇದನ್ನು ಮುಚ್ಚಿಟ್ಟಿರಬಹುದು. ಹೀಗೆ ಅನೇಕ ಕಾರಣಗಳು ಇದರ ಹಿಂದೆ ಇರುತ್ತವೆ. ಅದು ಏನೇ ಇರಲಿ ಆಕೆಯೇ ನಿಮ್ಮ ಮುಂದೆ ಮನಸ್ಸು ಬಿಚ್ಚಿ ಹೇಳುವವರೆಗೆ ಅವಳ ಪಾಡಿಗೆ ಆಕೆಯಯನ್ನು ಬಿಟ್ಟುಬಿಡಿ. ಒಂದೊಮ್ಮೆ ಆಕೆ ಇದನ್ನು ನಿಮ್ಮ ಹೇಳದಿದ್ದರೆ, ಆಗಲೂ ಸಹ ಆಕೆಯನ್ನು ಹಿಂದೆ ಹೇಗೆ ಪ್ರೀತಿಸುತ್ತಿದ್ದಿರೋ, ಹಾಗೆಯೇ ಪ್ರೀತಿಸಿ. ಏಕೆಂದರೆ ಈ ರಹಸ್ಯಗಳು ನಿಮ್ಮ ಭವಿಷ್ಯವನ್ನೇನು ಬದಲಾಯಿಸುವುದಿಲ್ಲ.

ಬೆಡ್‌ರೂಮ್ ಆಧ್ಯತೆಗಳು

ಬೆಡ್‌ರೂಮ್ ಆಧ್ಯತೆಗಳು

ಬಹುತೇಕ ಹೆಂಗಸರು ಬೆಡ್‌ರೂಮಿನಲ್ಲಿ ಗಂಡನ ಜೊತೆಗೆ ಲವಲವಿಕೆಯಿಂದ ಇದ್ದರೂ ಸಹ, ತಮಗೆ ಏನು ಬೇಕು ಎಂದು ಕೆಲವು ವಿಚಾರಗಳಲ್ಲಿ ಹೇಳುವುದಿಲ್ಲ. ಇದನ್ನು ಹೇಳಿದರೆ ಅವರಿಗೆ "ಸೋತೆವು" ಎಂಬ ಭಾವನೆ ಬರುತ್ತದೆಯಂತೆ. ಕೇಳದಿದ್ದರೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

ಲೌಕಿಕ ಇಚ್ಛೆಗಳು

ಲೌಕಿಕ ಇಚ್ಛೆಗಳು

ಮಹಿಳೆಯರು ಲೌಕಿಕ ಇಚ್ಛೆಗಳ ವಿಷಯವನ್ನು ಇಷ್ಟಪಡುವುದಿಲ್ಲ. ಐಷಾರಾಮಿ, ಹಣ ಮುಂತಾದ ವಿಷಯಗಳ ಕುರಿತು ಅವರಿಗೆ ಅಷ್ಟೇನು ಆಸಕ್ತಿ ಇರುವುದಿಲ್ಲ. ಇದು ಕೆಲವು ಹೆಂಗಸರಿಗೆ ಅನ್ವಯವಾಗುವುದಿಲ್ಲ ಬಿಡಿ.

ತಮ್ಮ

ತಮ್ಮ "ಮಾಜಿ ಪ್ರಿಯಕರನ" ಬಗ್ಗೆ ಪ್ರೀತಿ

ದೈಹಿಕವಾಗಿ ಇಲ್ಲದಿದ್ದರೂ, ಆಕೆ ಮಾನಸಿಕವಾಗಿ ತಮ್ಮ ಮಾಜಿ ಪ್ರಿಯಕರನ ಬಗ್ಗೆ ಭಾವನಾತ್ಮಕವಾಗಿ ಇನ್ನೂ ಪ್ರೀತಿಯನ್ನು ಇರಿಸಿಕೊಂಡಿರುತ್ತಾಳೆ. ಆದರೆ ಆಕೆ ಇದನ್ನು ನಿಮ್ಮ ಮುಂದೆ ಹೇಳಿಕೊಳ್ಳುವುದಿಲ್ಲ.

ಆರೋಗ್ಯ ಸಮಸ್ಯೆಗಳು

ಆರೋಗ್ಯ ಸಮಸ್ಯೆಗಳು

ಇದು ಅತಿ ಎನಿಸಿದರು ಸತ್ಯ. ಆರೋಗ್ಯ ಸಮಸ್ಯೆಗಳನ್ನು ಸಹ ಗಂಡನಿಂದ ಮುಚ್ಚಿಡುವ ಹೆಂಡತಿಯರು ಇರುತ್ತಾರೆ. ಗಂಡ ಎಲ್ಲಿ ತನ್ನ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾನೋ ಎನ್ನುವ ಅಧಿಕ ಕಾಳಜಿ ಇದರಲ್ಲಿರುತ್ತದೆ. ಅದೂ ಈ ಸಮಸ್ಯೆ ವಿಕೋಪಕ್ಕೆ ಹೋಗುವವರೆಗೂ ಅವರು ಇದನ್ನು ಹೇಳಿಕೊಳ್ಳುವುದಿಲ್ಲ. ಅಲ್ಲಿಯವರೆಗೆ ಈಕೆ ಸಮಸ್ಯೆಯ ವಿರುದ್ಧ ಹೋರಾಡುತ್ತಲೆ ಇರುತ್ತಾಳೆ.

ಮನಸ್ತಾಪಗಳು

ಮನಸ್ತಾಪಗಳು

ನಿಮ್ಮ ಮತ್ತು ನಿಮ್ಮ ಹೆಂಡತಿಯ ನಡುವೆ ಹಲವಾರು ಮನಸ್ತಾಪಗಳು ಇರಬಹುದು. ಅದನ್ನು ಆಕೆ ನಿಮ್ಮ ಮುಂದೆ ಹೇಳಿಕೊಳ್ಳುವುದಿಲ್ಲ. ಏಕೆಂದರೆ ಇದನ್ನು ಹೇಳಿಕೊಂಡರೆ ಎಲ್ಲಿ ತಾನು 'ಸ್ವಾರ್ಥಿ' ಯಾಗುತ್ತೇನೆಯೋ ಎಂಬ ಭಯ ಆಕೆಯನ್ನು ಕಾಡುತ್ತದೆ. ಆದರೆ ಮನಸ್ಸಿನ ಒಳಗೆ ಆಕೆ ನಿಮ್ಮ ನಿರ್ಧಾರಗಳನ್ನು ತಿರಸ್ಕರಿಸುತ್ತಾಳೆ. ಉದಾ: ನೀವು ನಿಮ್ಮ ಪೋಷಕರ ಜೊತೆಯಲ್ಲಿಯೇ ಜೀವಿಸಲು, ಒಳ್ಳೆಯ ವಿದೇಶದ ಕೆಲಸವನ್ನು ಕೈಬಿಟ್ಟಿರಬಹುದು, ಅದನ್ನು ಆಕೆ ಒಪ್ಪುತ್ತಾಳೆ. ಹಾಗೆಂದು ಆಕೆ ಇದನ್ನು ಒಪ್ಪಿರುತ್ತಾಳೆ ಎಂದರ್ಥವಲ್ಲ"

ಹಣಕಾಸು ವಿಚಾರ

ಹಣಕಾಸು ವಿಚಾರ

ಕೆಲವು ಮಹಿಳೆಯರು ತಮ್ಮ ಹಣಕಾಸು ವಿಚಾರಗಳ ಕುರಿತು ಯಾವುದೇ ಕಾರಣಕ್ಕು ಗುಟ್ಟು ಬಿಟ್ಟುಕೊಡುವುದಿಲ್ಲ. ಯಾವಾಗ ಗಂಡ ಹಣವಿಲ್ಲದೆ ಬಂದು ಮನೆಯಲ್ಲಿ ಕೂರುತ್ತಾನೋ, ಆಗ ಆಕೆ ತನ್ನ ಬಳಿ ಇರುವ ಉಳಿತಾಯದ ಹಣವನ್ನು ನೀಡುತ್ತಾಳೆ.

English summary

Things Women Hide From Husbands

Let us admit it. There are some things women hide from husbands. And yes, women are mysterious and men can't crack their secrets. Even if a woman loves a man completely, she is not going to reveal all her sides. She would at least keep a secret or two and she has her own reasons to justify here behaviour. Now, let us talk about some secrets of women.
Story first published: Saturday, July 25, 2015, 17:18 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X