For Quick Alerts
ALLOW NOTIFICATIONS  
For Daily Alerts

ಗಂಡನ ಪ್ರೀತಿ ಇತ್ತೀಚೆಗೆ ಮರೀಚಿಕೆಯಾಗುತ್ತಿದೆಯೇ?

|

ಮದುವೆಯಾಗಿ ಕೆಲವು ವರ್ಷಗಳು ಕಳೆದ ನಂತರ ಗಂಡನು ಹೆಂಡತಿಯ ಕಡೆಗೆ ಮೊದಲಿನಷ್ಟು ಪ್ರೀತಿಯನ್ನು ತೋರದೆ ಇರಬಹುದು. ಆಗ ನೀವು ಆತನ ಕೆಲಸದ ಒತ್ತಡವನ್ನು ನಿಂದಿಸಬಹುದು. ಆದರೆ ಇದೆಲ್ಲದರ ನಡುವೆಯು ನೀವು ಆತನನ್ನು ನಿಮ್ಮತ್ತ ಆಕರ್ಷಿಸಿಕೊಳ್ಳಲು ಸಾಧ್ಯವಿಲ್ಲವೇ? ಅಯ್ಯೋ ದೇವರೆ ನನಗೆ ಎಂತಹ ಗಂಡ ಸಿಕ್ಕಿ ಬಿಟ್ಟ!

ಅಮೇರಿಕಾದ ಪ್ರಸಿದ್ಧ ಲೇಖಕ ಮಿಗ್ನಾನ್ ಮೆಕ್‌ಲಾಫ್‌ಲಿನ್ ಒಮ್ಮೆ ಹೇಳಿದರು " ಒಂದು ಯಶಸ್ವಿ ಮದುವೆಯು ಒಬ್ಬ ವ್ಯಕ್ತಿಯ ಜೊತೆಗೆ ಹಲವಾರು ಬಾರಿ ಪ್ರೀತಿಗೆ ಬೀಳುವ ಅಗತ್ಯವನ್ನು ಹೊಂದಿದೆ" ಎಂದು. ಹಾಗಾಗಿ ನಿಮ್ಮ ಗಂಡ ಮತ್ತೆ ನಿಮ್ಮೊಂದಿಗೆ ಪ್ರೀತಿಗೆ ಬೀಳುವಂತೆ ಮಾಡುವ ಜವಾಬ್ದಾರಿ ಈಗ ಹೆಂಗಸರ ಮೇಲೆ ಇರುತ್ತದೆ. ಬನ್ನಿ ಅಚ್ಚರಿಗೊಳ್ಳಬೇಡಿ, ಅದು ಹೇಗೆ ಎಂದು ನಾವು ನಿಮಗೆ ಹೇಳುತ್ತೇವೆ.

ಆತನಿಗಾಗಿ ಅಲಂಕರಿಸಿಕೊಳ್ಳಿ

ಆತನಿಗಾಗಿ ಅಲಂಕರಿಸಿಕೊಳ್ಳಿ

ಇತ್ತೀಚೆಗೆ ನೀವು ಆತನನ್ನು ಮೆಚ್ಚಿಸುವುದನ್ನು ನಿಲ್ಲಿಸಿ ಬಿಟ್ಟಿದ್ದೀರಿ. ಬನ್ನಿ ಆತನಿಗೆ ಇಷ್ಟವಾಗುವಂತೆ ಮೊದಲು ಡ್ರೆಸ್ ಆಗಿ. ಆತನಿಗೆ ಸರ್ಪ್ರೈಸ್ ನೀಡುವಂತಹ ಬಟ್ಟೆಯನ್ನು ಧರಿಸಿ, ಆತನ ಮೆಚ್ಚಿನ ಬಟ್ಟೆ, ಸುವಾಸನೆ ಬೀರುವ ಸೆಂಟ್‌ಗಳು ಇರಲಿ, ಆಗ ನೋಡಿ ಆತ ನಿಮ್ಮನ್ನು ನೋಡಿ ಮತ್ತೆ ನಿಮ್ಮತ್ತ ಆಕರ್ಷಿತನಾಗುತ್ತಾನೆ.

ಆತನೊಂದಿಗೆ ಪಾಲ್ಗೊಳ್ಳಿ

ಆತನೊಂದಿಗೆ ಪಾಲ್ಗೊಳ್ಳಿ

ನಿಮ್ಮವರು ಯಾವ ಆಟ -ಚಟುವಟಿಕೆ ಇಷ್ಟಪಡುತ್ತಾರೋ, ಅದರಲ್ಲಿ ನೀವು ಸಹ ಪಾಲ್ಗೊಳ್ಳಿ. ಕ್ರೀಡೆ ಅಥವಾ ವ್ಯಾಯಾಮದಲ್ಲಿ ಪಾಲ್ಗೊಳ್ಳುವುದರಿಂದ ಮೆದುಳಿನಲ್ಲಿರುವ ಡೊಪಮೈನ್ ಉದ್ಧೀಪನಗೊಳ್ಳುತ್ತದೆ. ಇದರಿಂದಾಗಿ ಲೈಂಗಿಕ ಆಸಕ್ತಿ ಹೆಚ್ಚುತ್ತದೆ. ಆತನ ಜೊತೆಗೆ ಸ್ಪೋರ್ಟ್ಸ್ ಕ್ಲಬ್‌ಗೆ ಹೋಗಿ, ಇದರಿಂದಾಗಿ ನೀವು ಆತನ ಜೊತೆಗೆ ಹೆಚ್ಚು ಸಮಯ ಕಳೆಯಬಹುದು. ಜಿಮ್, ವಾಕ್, ಜಾಗ್ ಆದರೂ ಪರವಾಗಿಲ್ಲ ಒಟ್ಟಿಗೆ ಹೋಗಿ.

ಹೆಚ್ಚು ಸಮಯವನ್ನು ರಚನಾತ್ಮಕವಾಗಿ ಕಳೆಯಿರಿ

ಹೆಚ್ಚು ಸಮಯವನ್ನು ರಚನಾತ್ಮಕವಾಗಿ ಕಳೆಯಿರಿ

ಹೆಚ್ಚಿನ ಕೆಲಸಗಳು ನಿಮ್ಮಿಬ್ಬರನ್ನು ಒಟ್ಟಿಗೆ ಕಾಲ ಕಳೆಯಲು ಬಿಡುವುದಿಲ್ಲ. ಹಾಗಾಗಿ ಸಿಕ್ಕ ಅಲ್ಪ ಸ್ವಲ್ಪ ಸಮಯವನ್ನು ರಚನಾತ್ಮಕವಾಗಿ ಕಳೆಯಿರಿ. ಒಂದು ರೊಮ್ಯಾಂಟಿಕ್ ವಾಕ್ ಮಾಡಿ ಅಥವಾ ಇಬ್ಬರೂ ಒಬ್ಬರಿಗೊಬ್ಬರು ಅಪ್ಪಿಕೊಂಡು ನಕ್ಷತ್ರ ನೋಡುತ್ತ ಕೂತುಕೊಳ್ಳಿ. ಅವಕಾಶ ಸಿಕ್ಕರೆ ಒಂದು ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಹೋಗಿ. ಇದರಿಂದ ನಿಮ್ಮ ದಾಂಪತ್ಯ ಮತ್ತಷ್ಟು ಸಿಹಿಯಾಗುತ್ತದೆ.

ಆತನಿಗೆ ಒಂದು ಸರ್ಪ್ರೈಸ್ ಗಿಫ್ಟ್ ನೀಡಿ

ಆತನಿಗೆ ಒಂದು ಸರ್ಪ್ರೈಸ್ ಗಿಫ್ಟ್ ನೀಡಿ

ಇತ್ತೀಚೆಗೆ ನಿಮ್ಮ ಗಂಡ ಯಾವ ವಸ್ತುವನ್ನು ಕೊಳ್ಳಬೇಕು ಎಂದುಕೊಂಡಿದ್ದನೋ, ಅದನ್ನು ಕೊಂಡು ಕೊಂಡು ಆತನಿಗೆ ಸರ್ಪ್ರೈಸ್ ಗಿಫ್ಟ್ ನೀಡಿ. ಅಥವಾ ಆತನ ನೆಚ್ಚಿನ ಚಲನಚಿತ್ರ, ಕಾರ್ಯಕ್ರಮ ಮುಂತಾದ ಕಡೆಗೆ ಹೋಗಲು ಟಿಕೆಟ್ ಖರೀದಿಸಿ. ಸಿಡಿ ಅಥವಾ ಪುಸ್ತಕವನ್ನು ಸಹ ಖರೀದಿಸಿ ನೀಡಬಹುದು. ಒಟ್ಟಿನಲ್ಲಿ ಆತನಿಗೆ ಖುಷಿಯಾಗುವಂತಹ ಉಡುಗೊರೆ ನೀಡಿ.

ನಿಮ್ಮ ಸಮಸ್ಯೆಗಳಿಗೆ ಏಕಾಂತದಲ್ಲಿ ಪರಿಹಾರವನ್ನು ಹುಡುಕಿಕೊಳ್ಳಿ

ನಿಮ್ಮ ಸಮಸ್ಯೆಗಳಿಗೆ ಏಕಾಂತದಲ್ಲಿ ಪರಿಹಾರವನ್ನು ಹುಡುಕಿಕೊಳ್ಳಿ

ಒಂದು ವೇಳೆ ನಿಮ್ಮ ಸಂಬಂಧದಲ್ಲಿ ಕೆಲವೊಂದು ಸಮಸ್ಯೆಗಳು ಇದ್ದಲ್ಲಿ, ಅದನ್ನು ನೀವು ಏಕಾಂತದಲ್ಲಿದ್ದಾಗ ಮಾತನಾಡಿ ಪರಿಹರಿಸಿಕೊಳ್ಳಿ. ಜಗಳವಾಡಲು ಹೋಗಬೇಡಿ. ಇದು ನಿಮ್ಮ ವ್ಯಕ್ತಿತ್ವಕ್ಕಷ್ಟೇ ಅಲ್ಲ, ಸಂಬಂಧಕ್ಕೂ ಸಹ ತೀರಾ ಅಗತ್ಯ.

ಆತನ ಬಳಿ ಅಭಿಪ್ರಾಯ ಕೇಳಿ

ಆತನ ಬಳಿ ಅಭಿಪ್ರಾಯ ಕೇಳಿ

ಉಡುಗೆ-ತೊಡುಗೆ ಧರಿಸುವಾಗ ಅಥವಾ ಕೊಳ್ಳುವಾಗ, ಮನೆಯ ವ್ಯವಹಾರದಲ್ಲಿ ಆತನ ಸಲಹೆ ಕೇಳಿ. ಇದರಿಂದ ನಿಮ್ಮ ಅಭಿಪ್ರಾಯವನ್ನು ಸ್ವಲ್ಪ ಮಾರ್ಪಾಡು ಮಾಡಿಕೊಳ್ಳಬಹುದು. ಆದರೆ ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಜೊತೆಗೆ ನಿಮ್ಮಲ್ಲಿ ಸಂವಹನ ಸುಧಾರಿಸುತ್ತದೆ.

ಕಾಳಜಿ ತೋರಿಸಿ

ಕಾಳಜಿ ತೋರಿಸಿ

ಹೆಂಡತಿ ತನ್ನತ್ತ ಕಾಳಜಿ ತೋರಿಸಬೇಕು ಎಂದು ಪ್ರತಿ ಗಂಡನು ಬಯಸುತ್ತಾನೆ. ಆದ್ದರಿಂದ ಆತನ ಕುರಿತು ಕಾಳಜಿ ತೋರಿಸಿ. ಲಂಚ್ ಬಾಕ್ಸ್‌ನಲ್ಲಿ ಒಂದು ಸಣ್ಣ ಪ್ರೇಮ ಪತ್ರ ಇಟ್ಟು ಕಳುಹಿಸಿ. ಆತ ಕಚೇರಿಯಿಂದ ಬಂದಾಗ ಒಂದು ಅಪ್ಪಿಗೆ ಮತ್ತು ಮುತ್ತು ನೀಡಿ. ಇಂತಹ ಸಣ್ಣ ಸಣ್ಣ ಸಂಗತಿಗಳು ಮತ್ತೆ ಪ್ರೀತಿ ನಿಮ್ಮ ಮಧ್ಯೆ ಹರಿಯುವಂತೆ ಮಾಡುತ್ತದೆ.

English summary

Romantic Tricks Make Your Husband Fall In Love With You Again

After a few years of marriage, a lot of you might feel that your husband is not showing as much interest in you as he did in the initial years. While you might be blaming his busy schedule, this might even happen because you stopped working hard to get his attention. Surprised? Well, then here are some smart tricks to make that happen.
Story first published: Monday, May 18, 2015, 9:30 [IST]
X
Desktop Bottom Promotion