For Quick Alerts
ALLOW NOTIFICATIONS  
For Daily Alerts

ಹುಡುಗಿಯರು ಮದುವೆಯ ವಿಷಯದಲ್ಲಿ ಏಕೆ ಹಿಂಜರಿಯುತ್ತಾರೆ?

|

ಮದುವೆ-ಪ್ರತಿಯೊಬ್ಬ ಯುವಕ, ಯುವತಿಯಲ್ಲಿ ರೋಮಾಂಚನ ಉಂಟುಮಾಡುವ ಪದ. ತನ್ನ ಜೀವನಸಂಗಾತಿಯೊಂದಿಗೆ ನವಜೀವನಕ್ಕಡಿಯಿಡುವ ತವಕ. ತನ್ನ ಮದುವೆಯ ಸಮಾರಂಭದಲ್ಲಿ ಯಾವ ಬಟ್ಟೆ ತೊಡಬೇಕು, ಯಾರು ಯಾರನ್ನು ಕರೆಯಬೇಕು, ಯಾವ ರೀತಿಯಾಗಿ ಶೃಂಗರಿಸಿಕೊಳ್ಳಬೇಕು, ಯಾವ ವಿನ್ಯಾಸದ ಮದರಂಗಿ ಹಚ್ಚಿಸಿಕೊಳ್ಳಬೇಕು ಇತ್ಯಾದಿಗಳ ಬಗ್ಗೆ ಮಾಡುವ ಕಲ್ಪನೆಯೇ ಅತಿ ಸುಂದರ.

ಆದರೆ ಮದುವೆಯ ಪ್ರಾಯಕ್ಕೆ ಬಂದು ನಿಂತಿರುವ ಇಂದಿನ ಕಾಲದ ಯುವತಿಯರು ವೈವಾಹಿಕ ಜೀವನದಿಂದ ದೂರ ಸರಿಯಲು ನಿರ್ಧರಿಸುತ್ತಿರುವುದು ವಿಪರ್ಯಾಸವೇ ಸರಿ.. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ಮದುವೆಯೇ ಅತ್ಯಂತ ದೊಡ್ಡ ಯೋಚನೆಯಾಗಿತ್ತು. ಅದರಲ್ಲೂ 20 ವರ್ಷ ದಾಟಿಬಿಟ್ಟರೆ, ಮುಗಿಯಿತು ಆ ಹೆಣ್ಣು ಮಗು ಮತ್ತು ಅವರ ಪೋಷಕರು ಆತಂಕಕ್ಕೆ ಈಡಾಗುತ್ತಿದ್ದರು.

ಇಂದಿಗು ಬಹುತೇಕ ಸಿನಿಮಾ ಮತ್ತು ಧಾರಾವಾಹಿಗಳು ನಮಗೆ ತೋರಿಸುವುದು ಇದನ್ನೇ , ಹೆಣ್ಣು ಮಕ್ಕಳ ಜನ್ಮದ ನಿಜವಾದ ಸಾರ್ಥಕ್ಯವೇ, "ಮದುವೆಯಾಗುವುದು". ಆದರೆ ಸತ್ಯಾಂಶ ಬೇರೆಯೇ ಇದೆ. ಹೆಣ್ಣು ಮಕ್ಕಳು ನಿಜವಾಗಿ ತಮ್ಮ ಮದುವೆ ಪ್ರಕ್ರಿಯೆಯನ್ನು ಮುಂದೂಡಲು ಬಯಸುತ್ತಾರೆ. ಮದುವೆ ಕುರಿತ೦ತೆ ನಿಮ್ಮಲ್ಲಿ ಯಾರೂ ಹೇಳಿರದ ಸತ್ಯಾಸತ್ಯತೆ!

Reasons Why Woman Are Scared Of Marriage

ಮದುವೆ ಎನ್ನುವುದು ಏಳೇಳು ಜನ್ಮಗಳ ಸಂಬಂಧ ಎಂದು ಹೇಳುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ, ಗಂಡು - ಹಣ್ಣು ಪರಸ್ಪರ ಹೊಂದಾಣಿಕೆ ಮಾಡಿ ನಡೆದರೆ ಮಾತ್ರ ಅದು ಜನ್ಮ ಜನ್ಮದ ಅನುಬಂಧವಾಗಿರುತ್ತದೆ. ಇದನ್ನು ನೀವು ಉದಾಸೀನ ಮಾಡಿದರೆ, ಅದರಿಂದ ನಿಮ್ಮ ಜೀವನ ಏರು-ಪೇರಾಗುವುದು ಸತ್ಯ.

ಇದಕ್ಕೆ ಕಾರಣ, ಮುಕ್ತವಾದ ಸಮಾಜ, ಆರ್ಥಿಕ ಸ್ವಾತಂತ್ರ್ಯ, ಇತ್ಯಾದಿಗಳು ಸೇರಿ ಯುವತಿಯರ ಮನೋಭಾವವನ್ನು ಬದಲಾಯಿಸಿವೆ ಎಂಬ ಮಾತು ಸತ್ಯವಲ್ಲ. ಬದಲಿಗೆ ಮದುವೆಗೆ ಸಂಬಂಧಿಸಿದ ಹಲವಾರು ಅಂಶಗಳು ಅವರನ್ನು ಈ ವಿಚಾರದಿಂದ ದೂರವಿಟ್ಟಿವೆ. ಇದನ್ನು ನೀವು ಒಪ್ಪುವಿರಲ್ಲವೆ? ಬನ್ನಿ ಹಾಗಾದರೆ ಯುವತಿಯರನ್ನು ಮದುವೆಯ ಕುರಿತಾಗಿ ಭಯಭೀತರನ್ನಾಗಿಸುವ ಆ ಅಂಶಗಳಾವುವು ಎಂಬುದನ್ನು ಕುರಿತು ತಿಳಿದುಕೊಂಡು ಬರೋಣ

ಸಂಸಾರದ ರಗಳೆ
"ಮದುವೆಯ ಶಿಷ್ಟಾಚಾರ"ವನ್ನು ನಿರ್ವಹಿಸುವುದು ಮದುವೆಯಾದ ನಂತರ ಭಾರತೀಯ ಹೆಂಗಸರ ಜೀವನದಲ್ಲಿ ನಿರೀಕ್ಷೆಗಳು ತುಂಬಿ ತುಳುಕುತ್ತವೆ. ಮಗು, ಅದರ ಲಾಲನೆ ಪಾಲನೆ, ಅವರ ವಿದ್ಯಾಭ್ಯಾಸಕ್ಕಾಗಿ ಉಳಿತಾಯ, ಇತ್ಯಾದಿ ಅಂಶಗಳು ಅವರ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ಆಗಲಿಂದ ಹೆಂಗಸರು " ನನ್ನ ಜೀವನ, ನನ್ನ ಆಯ್ಕೆ" ಎಂಬ ಮಂತ್ರವನ್ನು ಪಾಲಿಸಲು ಆರಂಭಿಸುತ್ತಾರೆ. ಈ ಕಾರಣಗಳು ಮದುವೆಯಾದ ಕೂಡಲೆ ಸಂಶಯಗಳಾಗಿ ಪರಿವರ್ತನೆಯಾಗಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತವೆ.

ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದೇ?
ವೃತ್ತಿಯ ಸಂದಿಗ್ಧತೆ ಮದುವೆಯಾದ ಕೂಡಲೆ ತಮ್ಮ ಆಕಾಂಕ್ಷೆಗಳು ಮತ್ತು ವೃತ್ತಿಯಲ್ಲಿನ ಯೋಜನೆಗಳು ಕೊನೆಗೊಳ್ಳುತ್ತವೆ ಎಂಬುದು ಬಹುತೇಕ ಹುಡುಗಿಯರ ಅಭಿಪ್ರಾಯವಾಗಿರುತ್ತದೆ. ಇದು ತಮ್ಮ ಸ್ವಂತ ಊರನ್ನು ಬಿಟ್ಟು ದೂರದಲ್ಲಿರುವ ವರನ ಜೊತೆಗೆ ಮದುವೆಯಾಗುವ ಹುಡುಗಿಯರ ಬಾಳಿನಲ್ಲಿ ಸತ್ಯವಾಗುತ್ತದೆ. ಏಕೆಂದರೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ತೊಡಗುವ ಈಕೆ, ಹೊಸ ಕೆಲಸ ಹುಡುಕಲು ತೊಡಗಿಸಿಕೊಳ್ಳುವುದು ಕಡಿಮೆ. ಅದೂ ಅಲ್ಲದೆ ಯಾರೇ ಆಗಲಿ ತಮ್ಮ ವೃತ್ತಿಯಲ್ಲಿ ತಡೆಯನ್ನು ಎದುರು ನೋಡುವುದಿಲ್ಲ. ಮದುವೆಯ ಬಳಿಕ ಏಕೆ ಇಷ್ಟೊಂದು ನೀರಸ ಮೌನ?

ಎಲ್ಲಿ ಸಂಬಂಧ ಮುರಿದು ಬೀಳುತ್ತದೆಯೋ ಎನ್ನುವ ಆತಂಕ
ಎಲ್ಲಾ ಅವಧಿಯಲ್ಲೂ, ಕಾಲಘಟ್ಟದಲ್ಲಿಯೂ ನಿಮ್ಮ ಸ೦ಗಾತಿಯನ್ನು ಪ್ರೀತಿಸುತ್ತಲೇ ಇರುವುದು ಅಸಾಧ್ಯ. ಜೀವನದ ಗತಿಯಲ್ಲಿ ಕನಿಷ್ಟಪಕ್ಷ ಒ೦ದು ಬಾರಿಯಾದರೂ ನೀವು ನಿಮ್ಮ ಸ೦ಗಾತಿಯನ್ನು ದ್ವೇಷಿಸುವ೦ತಾದೀತು ಹಾಗೂ ಈ ವಿಷಯವು ನಿಮ್ಮ ಸ೦ಗಾತಿಗೂ ಅನ್ವಯಿಸುತ್ತದೆ. ಅಷ್ಟಕ್ಕೂ ನಾವೆಲ್ಲರೂ ಮನುಷ್ಯರೇ ಅಲ್ಲವೇ..?! ಹಾಗಾಗಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಸಂಬಂಧದಲ್ಲಿ ಎಲ್ಲಿ ಮನಸ್ತಾಪ ಉಂಟಾಗಿ ಸಂಸಾರ ಜೀವನದಲ್ಲಿ ಎಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆಯೋ ಎನ್ನುವ ಭಯ ಅವರನ್ನು ಕಾಡುತ್ತಲೇ ಇರುತ್ತದೆ.

ಸಂವಹನ
ಸಂಬಂಧದಲ್ಲಿ ಸಂವಹನ ಪ್ರಕ್ರಿಯೆಯು ಪ್ರಮುಖ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಹುಡುಗಿಯರು ತಂದೆ ತಾಯಿ ಅಕ್ಕ ತಂಗಿ, ಅಣ್ಣ ತಮ್ಮಂದಿರೊಂದಿಗೆ ಮಾತನಾಡುವಾಗ ಮುಂದಾಗುವ ಪರಿಣಾಮಗಳನ್ನು ಪರಿಗಣಿಸುವುದಿಲ್ಲ. ಏಕೆಂದರೆ ಅವರಿಂದ ತಪ್ಪಾದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಮನೆಯ ಮಗಳಂತೆ ನೋಡಿಕೊಳ್ಳುತ್ತಾರೆ. ಆದರೆ ಪತಿ, ಅಥವಾ ಪತಿಯ ಮನೆಯವರೊಂದಿಗೆ ಸಂವಾಹನ ನಡೆಸುವುದು ಅಷ್ಟು ಸುಲಭದ ಮಾತಲ್ಲ, ಪ್ರತಿಯೊಂದು ಮಾತಿಗೂ ಮೊದಲು ಆಲೋಚಿಸಿ ಸಮರ್ಪಕ ಪದಗಳನ್ನು ಬಳಸಿ ಮಾತನಾಡಲು ತೊಡಗುವುದು ಅವರಿಗೆ ಹಿಂಸೆಯಾಗಿ ಕಾಡತೊಡಗುತ್ತದೆ.

ಸ್ವತಂತ್ರಕ್ಕೆ ಎಲ್ಲಿ ಅಡ್ಡಬರುತ್ತದೆಯೋ ಎನ್ನುವ ಭಯ
ಮದುವೆಗೂ ಮುನ್ನ ತಮ್ಮ ಜೀವನದಲ್ಲಿ ಬಿಂದಾಸ್ ಆಗಿರುತ್ತೀರಿ. ನಿಮಗೆ ಬೇಕಾದಲ್ಲಿ ಹೋಗುವ, ನಿಮಗಿಷ್ಟಬಂದಂತೆ ಕಾಲ ಕಳೆಯುವ ಸ್ವಾತಂತ್ರ್ಯ ನಿಮಗಿತ್ತು. ಮನಸ್ಸಾದೊಡನೆ ಚೀಲದಲ್ಲಿ ಕೆಲವು ಬಟ್ಟೆ ಹಾಕಿ ದೂರದ ತಂಪುತಾಣಕ್ಕೆ ಕೆಲವು ದಿನಗಳ ಮಟ್ಟಿಗೆ ಹೋಗಲೂ ಹವಣಿಸುತ್ತಿದ್ದಿರಿ. ಆದರೆ ಮದುವೆಯ ಬಳಿಕ ಈ ಸ್ವತಂತ್ರಕ್ಕೆ ಕಡಿವಾಣ ಬೀಳುತ್ತದೆ. ಯಾವುದೇ ಚಲನವಲನ ತಮ್ಮ ಪತಿಯ ಮತ್ತು ಅವರ ಮನೆಯವರ ಒಪ್ಪಿಗೆಯ ಮೂಲಕವೇ ನಡೆಯಬೇಕಾಗುತ್ತದೆ..

English summary

Reasons Why Woman Are Scared Of Marriage

Marriage is a social custom that has its own relevance and significance in the society and in the life of every individual. It would not be wrong, if it is said that marriage is the base of society as it propagates life on this planet of ours. It is true that a marriage brings two unknown people of opposite sexes together and allows them to share their remaining life together.
Story first published: Monday, July 20, 2015, 18:36 [IST]
X
Desktop Bottom Promotion