For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರೇಮಿಗೆ ನೀಡಲು ಬೆಸ್ಟ್‌ ಇನ್ನೋವೇಟಿವ್ ಗಿಫ್ಟ್ ಐಡಿಯಾಗಳು ಇಲ್ಲಿವೆ

|

ಪ್ರೀತಿ ಅಂದರೆ ಹಾಗೇ, ಎಲ್ಲರನ್ನೂ, ಎಲ್ಲವನ್ನೂ ತನ್ನತ್ತ ಸೆಳೆಯುತ್ತದೆ. ಈ ಜಗತ್ತಿನ ಪ್ರತಿ ವ್ಯಕ್ತಿಗೂ ಒಂದಲ್ಲ ಒಂದು ಘಳಿಗೆಯಲ್ಲಿ ಪ್ರೀತಿ ಆಗಿರುವುದು ಅಂತೂ ಸತ್ಯ. ಅಂತಹ ಪ್ರೀತಿಯ ಆಚರಣೆಗೆ ಒಂದು ದಿನ ಮೀಸಲಿರುವುದು ಎಲ್ಲರಿಗೂ ಗೊತ್ತೇ ಇದೆ. ಅದೇ ಪ್ರೇಮಿಗಳ ದಿನಾಚರಣೆ. ಫೆಬ್ರವರಿ ೧4ರಂದು ಪ್ರೇಮಿಗಳ ದಿನಾರಣೆಯಾದರೂ, ಫೆಬ್ರವರಿ 7ರಿಂದ ಪ್ರೀತಿಗೆ ಸಂಬಂಧಿಸಿದಂತೆ ವಿಭಿನ್ನ ದಿನಗಳನ್ನು ತಮ್ಮ ಪ್ರೀತಿಗೆ ಮೀಸಲಿಡುತ್ತಾರೆ. ಈ ದಿನಾಚರಣೆಯ ಸರದಿಯು ರೋಸ್ ಡೇ ಯೊಂದಿಗೆ ಆರಂಭವಾಗುತ್ತದೆ.

ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯನ್ನು ಹೊಂದಿದ್ದರೆ ಮತ್ತು ಅವನ ಅಥವಾ ಅವಳ ಬಗ್ಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸಿದರೆ, ಗುಲಾಬಿಗಳು ಉತ್ತಮ ಮಾರ್ಗವಾಗಿದೆ. ರೋಸ್ ಡೇನೊಂದಿಗೆ ನಿಮ್ಮ ಪ್ರೀತಿಯನ್ನು ಆಚರಿಸಿ. ನೀವು ನಿಮ್ಮ ಪ್ರೀತಿಯನ್ನು ಕಡುಗೆಂಪು, ಕೆಂಪು ಗುಲಾಬಿಗಳೊಂದಿಗೆ ಹೇಳಿಕೊಳ್ಳಬಹುದು. ಇದು ಚಾಕೊಲೇಟ್ಗಳೊಂದಿಗಿನ ಒಂದೇ ಗುಲಾಬಿ ಅಥವಾ ಸುಂದರವಾಗಿ ಅಲಂಕರಿಸಿದ ಗುಲಾಬಿ ಪುಷ್ಪಗುಚ್ಛ ಆಗಿರಲಿ, ನಿಮ್ಮ ಪ್ರೀತಿಯನ್ನು ಎರಡೂ ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತದೆ. ಇದೇ ರೀತಿಯ ಅಂದರೆ ರೋಸ್ ಡೇ ಯಂದು ನೀವು ಇಷ್ಟಪಡುವ ಜೀವಕ್ಕೆ ನೀಡಬಹುದಾದ ಉಡುಗೊರೆಗಳನ್ನು ಹೇಳಲಾಗಿದೆ.

ರೋಸ್ ಡೇಯಂದು ಗುಲಾಬಿಯ ಉಡುಗೊರೆಗಳನ್ನು ನೀಡಲು ಇನ್ನೋವೇಟಿವ್ ಪ್ಲಾನ್ ಗಳು:

ರೆಡ್ ರೋಸ್ ಡೇ ಸ್ಪೆಷಲ್ ಬೊಕ್ಕೆ ನೀಡಿ:

ರೆಡ್ ರೋಸ್ ಡೇ ಸ್ಪೆಷಲ್ ಬೊಕ್ಕೆ ನೀಡಿ:

ಕೆಂಪು ಗುಲಾಬಿ ಪ್ರೀತಿಯ ಸಂಕೇತ ಎಂಬುದು ಹೊಸ ವಿಷಯವೇನಲ್ಲ. ಇಂಥಹ ಪ್ರೀತಿ ಸೂಚಕವನ್ನು ರೋಸ್ ಡೇಯಂದು ನೀಡಿದರೆ, ಆ ಮಾತಿಗೊಂದು ಅರ್ಥಬರುತ್ತದೆ. ಕೆಂಪು ಕಾಗದದ ಪ್ಯಾಕಿಂಗ್ ನಲ್ಲಿ ಕೆಂಪು ಗುಲಾಬಿಗಳ ಗುಂಪನ್ನು ಒಟ್ಟುಗೂಡಿಸಿ ಮತ್ತು ಆಕೆಂಪು ರಿಬ್ಬನ್‌ನೊಂದಿಗೆ ಕಟ್ಟಿರುವ ಗುಚ್ಛವನ್ನು ನೀಡಿ. ಇದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸೂಕ್ತವಾದ ಕೊಡುಗೆಯಾಗಿದೆ. ನಿಮ್ಮ ಪ್ರೀತಿಪಾತ್ರರಿಗೆ ತಾಜಾ, ಸುಂದರವಾದ ಗುಲಾಬಿಗಳ ನೀಡಿ. ಇದರಿಂದ ನಿಮ್ಮ ಪ್ರೀತಿಪಾತ್ರರು ಖುಶಿಯಾಗುವುದರಲ್ಲಿ ಎರಡು ಮಾತಿಲ್ಲ, ಹೂವನ್ನು ಇಷ್ಟ ಪಡದ ವ್ಯಕ್ತಿಗಳಿರಲು ಸಾದ್ಯವೇ? ಇನ್ಯಾಕೆ ತಡ, ಈಗಲೇ ಹೋಗಿ ನಿಮ್ಗೆ ಸೂಕ್ತವೆನಿಸುವ ಹೂಗುಚ್ಛಗಳನ್ನು ಆಯ್ಕೆ ಮಾಡಿ, ನಾಳೆ ಸರ್ಪೈಸ್ ನೀಡಲು ರೆಡಿಯಾಗಿ.

ಹಾರ್ಟ್ ಶೇಪ್ ನ ಹೂಗುಚ್ಛ:

ಹಾರ್ಟ್ ಶೇಪ್ ನ ಹೂಗುಚ್ಛ:

ಗುಲಾಬಿ ದಿನವು ನೆನಪುಗಳನ್ನು ಸೃಷ್ಟಿ ಮಾಡುವ, ಆ ನೆನಪುಗಳು ಹೆಚ್ಚು ಕಾಲ ಉಳಿಯುವಂತಹ ದಿನವಾಗಿದೆ. ಹೃದಯದ ಆಕಾರದ ಹೂಗುಚ್ಛವು ಸದಾ ಕಾಲ ನೆನಪಿನಲ್ಲಿರುವ ನೆನೆಪುಗಳನ್ನು ನಿಮಗೆ ನೀಡುವಲ್ಲಿ ಸಹಾಯ ಮಾಡುತ್ತದೆ. 17 ಕೆಂಪು ಗುಲಾಬಿಗಳು, ಸುವಾಸನೆಯ ಹಸಿರು ಎಲೆಗಳು ನಿಮ್ಮ ಸಂಗಾತಿಯನ್ನು ಬೆರಗುಗೊಳಿಸುತ್ತದೆ. ಇಂತಹ ಗುಲಾಬಿಯ ಗುಚ್ಛವನ್ನು ನೀಡಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಇದು ನಿಮಗೊಂದು ರೋಸ್ ಡೇ ಯ ಪರಿಪೂರ್ಣತೆಯನ್ನು ನೀಡುತ್ತದೆ. ಹೃದಯದ ಆಕಾರದ ಪುಷ್ಪಗುಚ್ಛವನ್ನು ನಿಮ್ಮ ಕಾರಿನ ಹಿಂಭಾಗದ ಗಾಜಿನ ಮೇಲೆ ಇರಿಸಿ, ಅಥವಾ ಅದನ್ನು ಗೋಡೆಯ ಮೇಲೆ ನೇತುಹಾಕಿ ಮತ್ತು ವಾರ ಪೂರ್ತಿ ಪ್ರೀತಿಯ ನೆನಪುಗಳನ್ನು ಮಾಡಿ.

ಸಾಫ್ಟ್ ಟಾಯ್ ರೋಸ್ ಪುಷ್ಪಗುಚ್ಛ:

ಸಾಫ್ಟ್ ಟಾಯ್ ರೋಸ್ ಪುಷ್ಪಗುಚ್ಛ:

ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಅತ್ಯಂತ ಹಳೆಯ ತಂತ್ರವೆಂದರೆ ಗುಲಾಬಿ + ಮೃದು, ಸಣ್ಣ ಆಟಿಕೆ ಕಾಂಬೊ.ಇದು ಒಂದು ಪದವನ್ನು ಸಹ ಹೇಳದೆ ಲಕ್ಷಾಂತರ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಒಂದು ಸುಂದರವಾದ ಮಾರ್ಗವಾಗಿದೆ. ಗುಲಾಬಿಗಳ ಗುಚ್ಛದ ಮಧ್ಯೆ ಹುದುಗಿರುವ ಮೃದು ಆಟಿಕೆ, ನಿಮ್ಮ ಪ್ರೀತಿಪಾತ್ರರಿಗೆ ಸ್ನೇಹಶೀಲ, ಸಂತಸ ಹಾಗೂ ವಿಶೇಷವೆನಿಸುತ್ತದೆ. ಈ ಮೃದು ಆಟಿಕೆಯು ನೀವು ಸುತ್ತಲೂ ಇಲ್ಲದಿದ್ದಾಗ ಆಕೆಗೆ ಜೊತೆಯಾಗಿರುತ್ತದೆ, ನಿಮ್ಮ ಇರುವಿಕೆಯನ್ನು ಆಕೆಗೆ ನೀಡುತ್ತದೆ. ಹಾಗಾದರೆ ಇನ್ನೇಕೆ ತಡ, ಈ ಮೃದುವಾದ ಆಟಿಕೆ ಗುಲಾಬಿ ಪುಷ್ಪಗುಚ್ಛವನ್ನು ಆಕೆಗೆ ನೀಡಿ. ಮತ್ತು ಅವಳ ಮುಖದಲ್ಲಿ ಸ್ವಲ್ಪ ಪ್ರಕಾಶಮಾನವಾದ ಕಿರುನಗೆ ಮೂಡಿಸಿ.

ಚಾಕೊಲೇಟ್ ಗುಲಾಬಿ ಗುಚ್ಛ:

ಚಾಕೊಲೇಟ್ ಗುಲಾಬಿ ಗುಚ್ಛ:

ಎಷ್ಟೇ ಹಳೆಯದಾಗಿದ್ದರೂ, ಚಾಕೊಲೇಟ್ ಎಂದಿಗೂ ಫ್ಯಾಷನ್ ನಿಂದ ಹೊರಗುಳಿಯುವುದಿಲ್ಲ. ಇದು ಯಾವಾಗಲೂ ನಿಮ್ಮ ಪ್ರೀತಿಪಾತ್ರರನ್ನು ಸೆಳೆಯಲು ಇರುವ ಸುಲಭ ಮಾರ್ಗವಾಗಿದೆ. ಆದ್ದರಿಂದ, ಚಾಕೊಲೇಟ್ ಗಾಗಿ ಹಂಬಲಿಸುವ ನಿಮ್ಮ ಹುಡುಗಿಗೆ, 6 ಕೆಂಪು ಗುಲಾಬಿಗಳು ಮತ್ತು ಚಾಕೋಲೇಟ್ ತುಂಬಿರುವ ಗುಲಾಬಿಯ ಹೂಗುಚ್ಛವನ್ನು ನೀಡಿ, ಈ ದಿನವನ್ನು ಸಿಹಿ ನೀಡಿ, ವಿಶೇಷಗೊಳಿಸಿ. ಇದು ಆಕೆಗೆ ಒಂಥರಾ ಡಬಲ್ ಬೊನಾನ್ಜಾ ಪಡೆದ ಖುಷಿ. ಇದರಿಂದ ಅವಳ ಮುಖ ಮತ್ತಷ್ಟು ನಗುವಿನಿಂದ ಕೂಡಿರುತ್ತದೆ.

English summary

Rose Day Gift Ideas For Him/Her

Here we told about Rose day gift ideas for him/her, have a look
X
Desktop Bottom Promotion