For Quick Alerts
ALLOW NOTIFICATIONS  
For Daily Alerts

ಹೆಜ್ಜೆಗೆ ಜೊತೆಯಾದವನಿಗೆ ಹೆಚ್ಚೇನು ಹೇಳಲಿ..!?

By ಕ್ಷಮಾ ಭಾರದ್ವಾಜ್
|

ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಕನ್ನಡ ಬೋಲ್ಡ್‌ ಸ್ಕೈ ಪ್ರೇಮ ಲೇಖನಗಳನ್ನು ಆಹ್ವಾನಿಸಿತ್ತು. ಅದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಆಯ್ದ ಪ್ರೇಮ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ಇಲ್ಲಿ ಕ್ಷಮಾ ಭಾರದ್ವಾಜ್ ಬರೆದ ಪ್ರೇಮ ಲೇಖನ ನೀಡಲಾಗಿದೆ.

ನೀ ನನ್ನನ್ನ ಇಷ್ಟೊಂದು ಆವರಿಸಿಕೊಳ್ಳುತ್ತಿ ಎಂದು ನನಗೆ ಗೊತ್ತಿರಲಿಲ್ಲ ಗೆಳೆಯಾ. ಜೀವನ ಪೂರ್ತಿ ಜೊತೆಯಲೇ ಇರುತ್ತೀನಿ ಅಂತಾ ಅಂದು ಪಿಸು ಮಾತಲಿ ನುಡಿದ ಆ ದಿನವನ್ನು ಮರೆಯೋದುಂಟಾ..!!??

ಜೊತೆಯಾಗಿ ಬಾಳೋ ಕನಸು ಕಂಡ ದಿನಕ್ಕೆ ಎರಡು ವರುಷ ಅಂದ್ರೆ ನಂಬೋಕೇ ಆಗ್ತಿಲ್ಲ. ಬದುಕು ಬಲು ಭಾರ ಅನಿಸಿದಾಗ ದೇವರು ಕೊಟ್ಟ ದುಬಾರಿ ಉಡುಗೊರೆ ನೀನು. ಕೂಡಿಟ್ಟ ಹಣ ಖಾಲಿಯಾಗಬಹುದು. ಆದ್ರೆ, ಹೃದಯ ತುಂಬಿ ನೀ ಕೊಟ್ಟ ಪ್ರೀತಿ ಅಕ್ಷಯ ಪಾತ್ರೆಯಂತೆ ವೃದ್ಧಿಸ್ತಾ ಇದೆ. ಬರಡು ಇಳೆಗೆ ಮಳೆಯ ಸ್ಪರ್ಷವಾದಾಗ ಆಗೋ ರೋಮಾಂಚನದಂತೆ ಆ ಮೊದಲ ನೋಟ, ಸ್ನಿಗ್ಧ ನಗು ಈ ಕ್ಷಣಕ್ಕೂ ಅಚ್ಚೊತ್ತಿದೆ.

ಪ್ರೇಮ ಬರಹ

ಪ್ರೇಮ ಬರಹ

ಮಂದ ಬೆಳಕಲ್ಲಿ ನಿನ್ನ ಕಣ್ತುಂಬಿಕೊಂಡ ಮೊದಲ ಭೇಟಿ, ಗಂಟೆಗಟ್ಟಲೆ ಆಡಿದ ಮಾತು, ಮಳೆಯಲಿ ಕೈ ಕೈ ಹಿಡಿದು ಓಡಿದ ಆ ರಾತ್ರಿ, ಮತ್ತೆ ಹೋಗಬೇಕನ್ನೋ ನೆನಪೇ ಇಲ್ಲದೆ ಹರಟಿದ ಹಿತವಾದ ಘಳಿಗೆಗಳು, ಕುಗ್ಗಿ ಹೋದಾಗ ಬೆಚ್ಚಗೆಯ ಅಪ್ಪುಗೆಯಲ್ಲಿ ನೀ ಹೇಳಿದ ಸಾಂತ್ವನ, ಆಗೊಮ್ಮೆ ಈಗೊಮ್ಮೆ ಮುನಿಸು, ಮತ್ತೆ ವಿರಹ, ಮಗದೊಮ್ಮೆ ಪ್ರೇಮ ಬರಹ, ದೂರಾಗೋ ಮಾತಾಡಿ ಮತ್ತೆ ಪ್ರೇಮಖೈದಿ ಆಗಿಬಿಡುತ್ತಿದ್ದೆ.

ಪ್ರೇಮ ಬರಹ

ಪ್ರೇಮ ಬರಹ

ನೆನಪು ಮಾಡಿಕೊಂಡಷ್ಟೂ ಮತ್ತೂ ಬೇಕೆನಿಸುವ ನಿನ್ನ ಸನಿಹ, ತಪ್ಪು-ಸರಿಗಳ ಪರಾಮರ್ಶೆ, ಜೊತೆಗೊಂದಿಷ್ಟು ಹು‍ಚ್ಚು ಸಾಹಸ..ಕಳೆದೇ ಹೋಗಿ ಬಿಡೋಣ ಅಂತಾ ಜೊತೆಗೇ ಸುತ್ತಿದ ಸ್ಥಳಗಳು..ವಾಹ್..Life is beautiful. ಎರಡು ವರ್ಷ ಕ್ಷಣಗಳ ರೀತಿ ಕಳೆದು ಹೋಯ್ತಲ್ಲಾ. ನಿನ್ನ ಜೊತೆ ಇಟ್ಟ ಪ್ರತಿಯೊಂದು ಹೆಜ್ಜೆಯನ್ನೂ ಕಣ್ ಮು‍ಚ್ಚಿ ಇಟ್ಟಿದ್ದೀನಿ.

ಪ್ರೇಮ ಬರಹ

ಪ್ರೇಮ ಬರಹ

ಇಷ್ಟ-ಕಷ್ಟ, ನೋವು-ನಲಿವು, ಸಂಕಟ-ಸಂತಸಗಳನ್ನ ಸಾಧ್ಯವಾದಷ್ಟು ಅರಿಯೋ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಯಾವತ್ತೂ ನಿನ್ನ ಜೊತೆಯಾಗಿರ್ತೀನಿ ಅನ್ನೋ ಪ್ರಮಾಣ ಮಾಡ್ತಿದ್ದೀನಿ ಗೆಳೆಯಾ. ನಿನ್ನ ತ್ಯಾಗ, ತಾಳ್ಮೆ, ಮಗುವಿನಂತೆ ನನ್ನ ನೋಡಿಕೊಂಡ ರೀತಿ, ಭರಪೂರ ಬೆಂಬಲ,ಯಾವುದರ ಋಣವನ್ನೂ ತೀರಿಸೋಕೆ ಸಾಧ್ಯಾನೇ ಇಲ್ಲ ಬಿಡು. ನಿನ್ನ ನಿಷ್ಕಲ್ಮಶ ಪ್ರೀತಿಯಲ್ಲಿ ಜೀವನಪೂರ್ತಿ ಬಂಧಿಯಾಗಿರ್ಬೇಕು ಅನ್ನೋದು ನನ್ನಾಸೆ.

ಶಾಶ್ವತ ಪ್ರೇಮ ಖೈದಿ..!!

ಶಾಶ್ವತ ಪ್ರೇಮ ಖೈದಿ..!!

ನಮ್ಮ ಪ್ರೀತಿಗೆ ಸಾಕ್ಷಿಯಾಗಿ ದೇವತೆ ಮಡಿಲಲ್ಲಿ‌ ಬಂದು ಕೂತಿದ್ದಾಳೆ. ನಮ್ಮಿಬ್ಬರ ಪಿಸುಮಾತಿಗೆ ದನಿಯಾಗಿದ್ದ ಕನಸಿನ ಗೂಡಿನ ತುಂಬಾ ಈಗ ಅವಳದ್ದೇ ಕಲರವ. ನಮ್ಮಿಬ್ಬರ ಹೆಜ್ಜೆಯ ನಡುವೆ ಅವಳಿಡೋ ಪುಟಾಣಿ ಪಾದ ಪದಗಳಲ್ಲಿ ವರ್ಣಿಸಲಾಗದ ಖುಶಿ ಕೊಟ್ಟಿದೆ. ಜೀವನಪೂರ್ತಿ ಈ ಸಂಭ್ರಮವನ್ನು ಜತನದಿಂದ ಕಟ್ಟಿಕೊಟ್ಟ ನೀನು ನನ್ನ ಪಾಲಿಗೆ ನಿಜವಾದ ದೇವತಾ ಮನುಷ್ಯ..

ಇಂತಿ

ಶಾಶ್ವತ ಪ್ರೇಮ ಖೈದಿ..!!

English summary

Love story of Kshama Bhardwaj Famous TV News Anchor

Famous Kannada news anchor kshama bhardwaj shared her love story with kannada boldsky.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X