For Quick Alerts
ALLOW NOTIFICATIONS  
For Daily Alerts

ಪ್ಯಾರಾ ಆಟಗಾರನ ಮೇಲೆ ಮೂಡಿತು ಅನುರಾಗ

By ರೂಪಾಪ್ರಿಯ
|

ನನ್ನದು ಪಕ್ಕಾ ಅರೇಂಜ್ ಮ್ಯಾರೇಜ್. ನನ್ನ ಚಿಕ್ಕಪ್ಪ ನೋಡಿ ಮಾಡಿದ ಮದುವೆ ನಮ್ಮದು, ಆದರೆ ನಮ್ಮ ಮದುವೆಗೆ ಒಂದು ಚಿಕ್ಕ ಫ್ಲ್ಯಾಶ್‌ ಬ್ಯಾಕ್ ಇದೆ.

ನನ್ನ ಚಿಕ್ಕಪ್ಪ ಅಂತಾರಾಷ್ಟ್ರೀಯ ಪ್ಯಾರಾ ಆಟಗಾರ. ಇವರು ಪಂದ್ಯಾವಳಿಗೆ ಅಂತ ದೇಶ-ವಿದೇಶ ಹೋಗ್ತಾ ಇದ್ದರು, ಅಲ್ಲಿ ಪರಿಚಯವಾದವರು ಮಿ. ಗೋಪಿನಾಥ್. ಇವರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ಯಾರಾ ಆಟಗಾರ. ಇವರ ಮೇಲೆ ಚಿಕ್ಕಪ್ಪನಿಗೆ ಬಹಳ ಗೌರವವಿತ್ತು.

ಎರಡು ಮನಸ್ಸುಗಳ ಮಿಲನ

ಎರಡು ಮನಸ್ಸುಗಳ ಮಿಲನ

ನಾನು ಟೆನ್ನಿಸ್ ಸ್ಟೇಡಿಯಂಗೆ ಪ್ರತಿ ಶನಿವಾರ ಆಟಗಾರರಿಗೆ ಸಹಾಯ ಮಾಡಲು ಹೋಗ್ತಾ ಇದ್ದೆ. ಅಲ್ಲಿಗೆ ಗೋಪಿಯವರ ಕೋಚ್‌ ರಮೇಶ್‌ ಟೀಕಾರಂರವರು ಬರ್ತಾ ಇದ್ದರು.

ಇವರು ನನ್ನ ಸೇವಾ ಮನೋಭಾವ, ಗುಣ ನೋಡಿ ಗೋಪಿಯವರಿಗೆ ಈ ಹುಡ್ಗಿಯೇ ಸರಿ ಎಂದು ಭಾವಿಸಿ ಮದುವೆ ಪ್ರಪೋಸಲ್ ಮುಂದಿಟ್ಟರು. ಎರಡು ಮನಸ್ಸುಗಳು ಹೇಗೆ ಸೇರುತ್ತದೆ ಎನ್ನುವುದೇ ಜೀವನದ ಕೌತುಕ ಅಲ್ಲವೇ? ಎಲ್ಲೋ ಇದ್ದವರು, ಒಬ್ಬರಿಗೊಬ್ಬರು ಗೊತ್ತೇ ಇಲ್ಲದವರು ಜೊತೆ ಬಾಳಿನ ನೌಕೆ ನಡೆಸಲು ಮುಂದಾಗುತ್ತೇವೆ.

ಮದುವೆ ಮಾತುಕತೆ

ಮದುವೆ ಮಾತುಕತೆ

ನನ್ನ ಚಿಕ್ಕಪ್ಪನಿಗೆ ಗೋಪಿಯವರ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯ. ಈ ಹುಡುಗ ನಮ್ಮ ಹುಡುಗಿಗೆ ಸರಿಯಾದ ಜೋಡಿ ಎಂದು ಹೇಳಿ ಗೋಪಿಯವರನ್ನು ಭೇಟಿಯಾಗಿ ನನ್ನ ಬಗ್ಗೆ ಕೆಲವು ಮಾತುಗಳನ್ನು ಹೇಳಿದರು.

ಚಿಕ್ಕಪ್ಪ ನನ್ನ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ಅವರು ನನ್ನನ್ನು ನೋಡುವ ಮುಂಚೆಯೇ ಮದುವೆಗೆ ಓಕೆ ಅಂದ್ರು. ಚಿಕ್ಕಪ್ಪ ಮನೆಯಲ್ಲಿ ಅಮ್ಮನ ಹತ್ತಿರ ಗೋಪಿ ಬಗ್ಗೆ ಹೇಳಿದಾಗ ನಾನು ಹಿಂದೂ ಮುಂದು ಯೋಚಿಸದೆ ಸಮ್ಮತಿ ಸೂಚಿಸಿದೆ. ಇದೆ ನಮ್ಮ ಬಾಂಧವ್ಯಕ್ಕೆ ನಾಂದಿ ಹಾಡಿತು.

ಮೊದಲ ಕರೆ, ಭೇಟಿ

ಮೊದಲ ಕರೆ, ಭೇಟಿ

ಅವರ ಮೊದಲ ಕರೆ, ಮೊದಲ ಭೇಟಿ ಎಲ್ಲವೂ ನನ್ನ ಮನಸ್ಸಿನಲ್ಲಿ ಭದ್ರವಾಗಿ ಅಚ್ಚೊತ್ತಿದೆ. ಅವರಿಂದ ನನಗೆ ಮೊದಲ ಕರೆ ಬಂದಿದ್ದು 2012 ಸೆಪ್ಟೆಂಬರ್ 10ರಂದು, ಅವರು ಆಡಿದ ಒಂದೊಂದು ಮಾತುಗಳು ಈಗಲೂ ಕಿವಿಯಲ್ಲಿ ಗುನುಗುತ್ತಿದೆ.

ಆ ನಂತರ ಫೋನ್ ಮಾಡಿ ಮಾತನಾಡುತ್ತಿದ್ವಿ. ನಂತರ ಭೇಟಿಯಾಗಲು ನಿರ್ಧರಿಸಿದ್ವಿ. ಅವರನ್ನು ಮೊದಲು ಭೇಟಿಯಾಗಿದ್ದು ಅಕ್ಟೋಬರ್ 20, 2012ರಂದು. 2013 ಜನವರಿ 25ಕ್ಕೆ ನಾನು ಅವರ ಜೊತೆ ಮೊದಲ ಬಾರಿ ಹೊರಗಡೆ ಹೋಗಿದ್ದು, ನಾವಿಬ್ಬರು ಕುಟುಂಬದವರ ಜೊತೆ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಮಾಡಿ ಬಂದಿವಿ.2013 ಏಪ್ರಿಲ್‌ 24 ನಮ್ಮ ನಿಶ್ಚಿತಾರ್ಥ, 2013 ಸಪ್ಟೆಂಬರ್ 16ಕ್ಕೆ ನಮ್ಮ ವಿವಾಹವಾಯಿತು.

ನನ್ನ ಜೀವದ ಸ್ಪೂರ್ತಿ,

ನನ್ನ ಜೀವದ ಸ್ಪೂರ್ತಿ,

ನನ್ನ ಜೀವನದ ಪ್ರತಿಯೊಂದು ವಿಶೇಷ ದಿನವನ್ನು ನಾನು ಮರೆಯಲ್ಲ. ಏಕೆಂದರೆ ಗೋಪಿಯವರು ನನಗೆ ಅಷ್ಟೊಂದು ವಿಶೇಷವಾದ ವ್ಯಕ್ತಿ. ನಮ್ಮ ನಡುವೆ ಎಷ್ಟೇ ಮನಸ್ತಾಪ, ಕೋಪ ಇರಲಿ ಅದನ್ನು ಮೀರಿ ಪ್ರೀತಿ ಇರುವುದರಿಂದ ಜೀವನ ಸುಂದರವಾಗಿದೆ. ನಮ್ಮ ಪ್ರೀತಿಯ ಕುರುಹಾಗಿ ಮಗಳು ಬಂದಿದ್ದಾಳೆ. 6 ವಸಂತಗಳನ್ನು ಜೊತೆಯಾಗಿ ಕಳೆದಿದ್ದೇವೆ, ಇನ್ನು ಮುಂದೆಯೂ ಅದೇ ಪ್ರೀತಿ, ನಂಬಿಕೆಯಲ್ಲಿ ಮುನ್ನೆಡೆಯುತ್ತೇವೆ. ನಾನು ಕಂಡ ಕನಸುಗಳು ಅವರಿಂದ ನನಸ್ಸಾಗಿದೆ, ಅವರೇ ನನ್ನ ಜೀವದ ಸ್ಪೂರ್ತಿ, ಜೀವ....

English summary

Love Story By Roopapriya

On valentine day special Roopapriya has shared he love story with us, Read on
X