For Quick Alerts
ALLOW NOTIFICATIONS  
For Daily Alerts

ಆಗಷ್ಟೇ ಪರಿಚಯವಾದವಳಿಗೆ ತಾಳಿ ಕಟ್ತಿನಿ ಅಂದೆ...

By ರವಿ ಕೆಂಪೇಗೌಡ
|

ಆಸೆಗಳಲಿ ಅಕ್ಷತೆಯ ಕಲಸಿ!

ಕನಸುಗಳಲಿ ಕಂಕಣ ತೊಡಿಸಿ,

ಬರಮಾಡಿಕೊಂಡೆ ನನ್ನವಳನು ಹೃದಯದಲಿ ಪ್ರೇಮಲೋಕ ಸೃಷ್ಟಿಸಿ....

ವಿಜಯನಗರ ಬಸ್ ನಿಲ್ದಾಣದಲಿ ಮೊದಲ ಬಾರಿ ಆ ಹುಡುಗಿಯನು ಕಂಡಿದ್ದು, ನೋಡಲು ಎಣ್ಣೆಗೆಂಪು ಬಣ್ಣ ಮೊಗವೆನಿಸಿದರೂ ಅದೇ ಮುಖದಲಿ ಏನೋ ಆಕರ್ಷಣೆ ಇತ್ತು, ಬಹುಶಃ ನಗುವಿನ ಜೊತೆಗೆ ಗುಳಿಕೆನ್ನೆಯೂ ನನ್ನ ಅತಿಯಾಗಿ ಸೆಳೆದಿತ್ತು, ಅದೇ ವೇಳೆ ಅಲ್ಲಿಗೆ ಬಂದ ನನ್ನ ಕಾಲೇಜು ಸ್ನೇಹಿತೆಯೊಡನೆ ಆ ಹುಡುಗಿ ಆತ್ಮೀಯವಾಗಿ ಮಾತನಾಡುತ್ತಿದ್ದನ್ನು ಕಂಡ ಕ್ಷಣ ನನಗಂತೂ ನಿಂತಲ್ಲೇ ಲಡ್ಡು ಬಂದು ಬಾಯಿಗೆ ಬಿದ್ದಂತಹ ಅನುಭವ.

ಆದದ್ದಾಗಲಿ ಎಂದು ಹತ್ತಿರ ಹೋಗಿ ನನ್ನ ಸ್ನೇಹಿತೆಗೆ ಹಾಯ್ ಹೇಳಿ ಮಾತಾಡೋಕೆ ಶುರು ಮಾಡಿದೆ , ಆಗ ಅವಳು ಪಕ್ಕದಲ್ಲಿ ಇದ್ದ ಆ ಹುಡುಗಿಯನ್ನ ಪರಿಚಯ ಮಾಡಿಸಿದಳು, ಇವ್ಳು ನನ್ನ schoolmate ಆಶಾ, ಆ ಹುಡುಗಿಗೆ ಇವ್ರು ನನ್ನ college friend ರವಿ ,

ಇಬ್ರೂ ಪರಸ್ಪರ ಹಾಯ್ ಹೇಳಿದ್ದಾಯ್ತು, ಅದೇ ಟೈಮಿಗೆ ನಾನು ಆ ಹುಡ್ಗಿಗೆ ಯಾಕೋ ನಿಮ್ನ ಮದ್ವೆ ಆಗ್ಬೇಕು ಅನಿಸ್ತಿದೆ, ನೀವು ಹೂ ಅಂದ್ರೆ ಇವಾಗ್ಲೆ ತಾಳಿ ಕಟ್ತಿನಿ ಅಂದೆ, ತಕ್ಷಣ ಆ ಹುಡುಗಿ ಕೋಪ ಮಾಡ್ಕೊಂಡು ಅಲ್ಲಿಂದ ಹೊರಟು ಹೋದಳು.

ಅಯ್ಯೋ ಆತುರ ಪಟ್ನಲ್ಲ ಅನ್ಕೊಂಡೆ

ಅಯ್ಯೋ ಆತುರ ಪಟ್ನಲ್ಲ ಅನ್ಕೊಂಡೆ

ಅಲ್ಲೇ ಇದ್ದ ನನ್ನ ಸ್ನೇಹಿತೆ,ರವಿ ಬರೀ ತಮಾಷೆ ಮಾಡೋದೆ ಆಗೋಯ್ತು , ನೋಡಿ ಪಾಪ ಕೋಪ ಮಾಡ್ಕೊಂಡು ಹೋದ್ಲು, ಮೊದ್ಲೇ ತುಂಬಾ ಸೆನ್ಸಿಟೀವ್ ಹುಡ್ಗಿ, ಅಂತ ಹೇಳಿ ನನ್ನ ಸ್ನೇಹಿತೆಯೂ ಅಲ್ಲಿ ಹೊರಟಾಯ್ತು, ನಾನು ಮನ್ಸಲ್ಲಿ ಅಯ್ಯೋ ಆತುರ ಪಟ್ನಲ್ಲ ಅನ್ಕೊಂಡು ಬೇಸರದಲ್ಲಿ ಮನೆ ಸೇರಿದೆ, ಮನೇಲಿ ಕೂತ್ಕೊಂಡು ಆ ಹುಡ್ಗಿ ಬಗ್ಗೆನೇ ಯೋಚ್ನೆ ಮಾಡ್ತಿದ್ದೆ,ಅವಾಗ್ಲೆ ನಂಗೆ ಅರ್ಥ ಆಗೋಯ್ತು,ಹೌದು ನಂಗೆ ಆಶಾ ಅವ್ರ ಮೇಲೆ ಲವ್ ಆಗಿತ್ತು ಮೊದಲ ನೋಟಕೆ ನಾ ಸೋತಿದ್ದೆ.

ಈ ಹುಡ್ಗಿಗೆ ಇಷ್ಟೋಂದು ಗಾಂಚಲಿನಾ ಅನ್ಕೊಂಡೆ

ಈ ಹುಡ್ಗಿಗೆ ಇಷ್ಟೋಂದು ಗಾಂಚಲಿನಾ ಅನ್ಕೊಂಡೆ

ಇದೇ ಖುಷೀಲಿ ಫೇಸ್ಬುಕ್‌ನಲ್ಲಿ ಅರ್ಧ ಗಂಟೆಯೊಳಗೆ ಇಪ್ಪತ್ತು ಕವಿತೆ ಬರ್ದು ಹಾಕ್ದೆ, ಆಮೇಲೆ ಮನ್ಸಲ್ಲಿ ಅನಿಸ್ತು ಫೇಸ್ಬುಕ್ನಲ್ಲಿ ಇದ್ರೆ ರಿಕ್ವೆಸ್ಟ್ ಕಳ್ಸೋಣ ಅಂತ ಸುಮಾರು ಹೊತ್ತು ಹುಡುಕ್ದೆ, ಕೊನೇಗೂ ಅವರ ಪ್ರೊಫೈಲ್ ಸಿಕ್ತು, ಫ್ರೆಂಡ್ ರಿಕ್ವೆಸ್ಟ್ ಕಳಿಸ್ದೆ, ಮನ್ಸು ತಡೀಲಿಲ್ಲ sorry ಅಂತ ಒಂದು ಮೆಸೇಜ್ ಕೂಡ ಕಳಿಸ್ದೆ.

Request accept ಮಾಡೋಕೆ ಆ ಹುಡುಗಿ ಒಂದು ತಿಂಗ್ಳು ಟೈಮ್ ತೊಗೊಂಡು ಕೊನೇಗೂ accept ಮಾಡುದ್ರು ಒಂದೇ ಸರಿ ಹತ್ತಾರು ಮೆಸೇಜ್ sorry sorry ಅಂತ, ಉತ್ತರ ಬಂದಿದ್ದು its okay ಅಂತ ಒಂದೇ ಮೆಸೇಜಲ್ಲಿ,

ಓಹ್ ಈ ಹುಡ್ಗಿಗೆ ಇಷ್ಟೋಂದು ಗಾಂಚಲಿನಾ ಅನ್ಕೊಂಡು ನಾನೇ unfriend ಮಾಡಿ block listನಲ್ಲಿ ಹಾಕ್ದೆ.

ಫೇಸ್‌ಬುಕ್‌ನಲ್ಲಿ ಬ್ಲಾಕ್ ಮಾಡಿದೆ

ಫೇಸ್‌ಬುಕ್‌ನಲ್ಲಿ ಬ್ಲಾಕ್ ಮಾಡಿದೆ

ನಾನು block ಮಾಡಿದ್ದೇ ನಂಗೆ ಒಳ್ಳೇದಾಗಿತ್ತು , ಯಾಕಂದ್ರೆ ಆ ಹುಡುಗಿ ಅಂದ್ರೆ ನನ್ನ ಮನ್ಸು ಕದ್ದ ಹುಡುಗಿ ನನ್ ಸ್ನೇಹಿತೆ ಹತ್ರ ನಂಬರ್ ತೊಗೊಂಡು ಯಾಕ್ ನನ್ನ facebookನಲ್ಲಿ block ಮಾಡುದ್ರ ಅಂತ ಕೇಳಿದ್ಲು,

ನನ್ನಿಂದ ನಿಮ್ಗೆ ಯಾಕ್ ತೊಂದ್ರೆ ಅಂತ ಹೇಳಿ ಬೇಕಂತಲೇ call cut ಮಾಡ್ದೆ, ಸ್ವಲ್ಪ ಹೊತ್ತಲ್ಲೇ ನಾನೇ ಹಾಯ್ friends ಆಗೋಣ್ವಾ? ಅಂತ ಮೆಸೇಜ್ ಹಾಕ್ದೆ, ಆ ಕಡೆಯಿಂದ ಹೂ ಸರಿ ಅಂತ ಉತ್ತರ ಬಂತು,ಗೆಳೆತನದಿಂದ ಆರಂಭವಾದ ನಮ್ಮ ಹೊಸ ಭಾವನೆಗಳ ಪಯಣ ಆ ಹುಡುಗಿಯ ಒಳ್ಳೆ ಗುಣಗಳಿಗೆ ಮನಸು ಒಪ್ಪಿಸಿ ನಾನಂತೂ ಪೂರ್ತಿಯಾಗಿ ಆಕೆಯಲ್ಲಿ ಲೀನವಾಗುವಂತೆ ಆಯ್ತು.

ನನಗೆ ಕವಿತೆ ಬರೆಯುವ ಹವ್ಯಾಸ ನನ್ನ ಮನದರಸಿಗೆ ಕವಿತೆ ಓದುವ ಆಸಕ್ತಿ

ನನಗೆ ಕವಿತೆ ಬರೆಯುವ ಹವ್ಯಾಸ ನನ್ನ ಮನದರಸಿಗೆ ಕವಿತೆ ಓದುವ ಆಸಕ್ತಿ

ನನ್ನ ಮನದ ಭಾವನೆಗಳಿಗೆ ಅಕ್ಷರ ರೂಪ ನೀಡಿ ಅವುಗಳನೆಲ್ಲ ಅವಳಿಗೆ ಕವಿತೆಯ ಮೂಲಕ ತಲುಪಿಸಿ ಆಕೆಯ ಹೃದಯದಲ್ಲೊಂದು ಖಾಯಂ ಸ್ಥಾನ ಪಡೆಯಲು, ನನ್ನೆಡೆಗೆ ಸೆಳೆಯಲು ಪ್ರಯತ್ನಿಸುತ್ತಲೇ ಇದ್ದೆ ಹೀಗೇ ಎರಡ್ಮೂರು ವರುಷಗಳ ನಂತರ ನೇರವಾಗಿ ಭೇಟಿಯಾದಾಗ ಕೇಳ್ದೆ "ನಂಗೆ ನಿಮ್ನ ಮದ್ವೆ ಆಗಿ ಪ್ರತೀಕ್ಷಣ ಜೊತೆಯಾಗಿ ಬಾಳಬೇಕು ಅನಿಸಿದೆ ಪ್ಲೀಸ್ ಒಪ್ಕೊಳಿ ಅಂತ,ಅವ್ರ ಮನಸಲೂ ಅದೇ ಭಾವನೆಗಳು ಇತ್ತು,

ಇಬ್ಬರ ಭಾವನೆ ಆಲೋಚನೆ ಒಂದೇ ಆಗಿದ್ರಿಂದ ನಮ್ಮಿಬ್ಬರ ಮನಸುಗಳ ಮಿಲನ ಆಗೋಯ್ತು,ಈಗಂತೂ ನನ್ನ ಪ್ರತಿಕ್ಷಣದ ಖುಷಿಗೆ ನನ್ನ ಮನದರಸಿಯೇ ಕಾರಣ , ಅವಳು ಜೊತೆಗಿದ್ದರೆ ಬದುಕು ಹಸಿರು ತೋರಣ ಮನಸಿಗಂತೂ ಸಿಹಿ ಹೂರಣ,

ನನ್ನ ಬದುಕನ್ನ ಪ್ರತಿದಿನ ಸಂಭ್ರಮಿಸುವ ಹಬ್ಬವಾಗಿಸಿದ್ದಕ್ಕೆ ಥ್ಯಾಂಕ್ಯೂ ಆಶಾ ,ಲವ್ ಯೂ , Happy Valentine's day..😊

English summary

Love Story By Ravi Kempegowda

On valentines day special Ravi Kempegowda has shared love story with us. Read on.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X