For Quick Alerts
ALLOW NOTIFICATIONS  
For Daily Alerts

ಸೆಕ್ಸ್ಟಿಂಗ್ ಮಾಡಿದರೆ ಕಾದಿದೆ ಅಪಾಯ ಜೋಕೆ!

|

ಅವರಿಬ್ಬರು ಪ್ರೇಮಿಗಳು, ಇಬ್ಬರ ನಡುವೆ ದಿನದಲ್ಲಿ ನೂರಾರು ವಾಟ್ಸಾಪ್ ಚಾಟ್‌ಗಳು ನಡೆಯುತ್ತಿರುತ್ತವೆ, ಚಾಟ್‌ ಮಾಡುತ್ತಾ ಇಬ್ಬರು ಮತ್ತಷ್ಟು ರೊಮ್ಯಾಂಟಿಕ್ ಆಗಿ ಮೆಸೇಜ್ ಕಳುಹಿಸಲು ಶುರು ಮಾಡುತ್ತಾರೆ, ಈ ಮೆಸೇಜ್‌ಗಳಲ್ಲಿಯೇ ಹಾಟ್‌-ಹಾಟ್‌ ಮಾತುಗಳನ್ನಾಡುತ್ತಾರೆ. ಇಬ್ಬರ ನಗ್ನ ಅಥವಾ ಅರೆ ನಗ್ನ ಫೋಟೊ ಅಥವಾ ವೀಡಿಯೋಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ.

ಈ ರೀತಿಯ ಮೆಸೇಜ್‌ಗಳನ್ನೇ ಸೆಕ್ಸ್ಟಿಂಗ್ ಅಂತಾರೆ. ಈ ರೀತಿಯ ಸೆಕ್ಸ್ಟಿಂಗ್ ಗೀಳು ಹೆಚ್ಚಾಗುತ್ತಿದೆ. ಆದರೆ ಈ ರೀತಿಯ ಸೆಕ್ಸ್ಟಿಂಗ್ ಎಷ್ಟೊಂದು ಅಪಾಯಕಾರಿ ಎಂದು ಆ ಕ್ಷಣಕ್ಕೆ ಯೋಚನೆ ಮಾಡದೆ ಕಳುಹಿಸಿ ಬಿಡುತ್ತಾರೆ.

ಇನ್ನು ಕೆಲಸದ ನಿಮಿತ್ತ ದೂರ-ದೂರವಿರುವ ದಂಪತಿಗಳ ನಡುವೆ ಈ ಸೆಕ್ಸ್ಟಿಂಗ್ ತಮ್ಮ ಸಂಬಂಧವನ್ನು ಮತ್ತಷ್ಟು ಬೆಸೆಯುವಂತೆ ಮಾಡಿದರೂ ಯಾರು ಸೆಕ್ಸ್ಟಿಂಗ್ ಮಾಡುತ್ತಾರೋ ಅವರು ಸ್ವಲ್ಪ ಎಚ್ಚರಿಕೆಯಿಂದ ಇರುವುದೇ ಒಳ್ಳೆಯದು.

ಏಕೆಂದರೆ ತಮ್ಮಿಬ್ಬರ ನಡುವೆ ಮಾತ್ರ ಇರಬೇಕಾದ ಬಿಸಿ-ಬಿಸಿ ದೃಶ್ಯಗಳು ಹಾಗೂ ಫೋಟೊಗಳು ಬೇರೆ ಕಡೆ ಶೇರ್‌ ಆಗಿರುವುದು ತಿಳಿದು ಮನನೊಂದು, ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿರುವ ಎಷ್ಟೋ ಘಟನೆಗಳನ್ನು ನೋಡಿದ್ದೇವೆ.

ಸಂಬಂಧವನ್ನು ಮತ್ತಷ್ಟು ಸ್ಪೈಸಿ ಮಾಡಲು ನೀವು ಕಳುಹಿಸುವ ಸೆಕ್ಸ್ಟಿಂಗ್ ನಿಮಗೆ ಹೇಗೆ ಅಪಾಯವನ್ನು ತರಬಹುದು ನೋಡಿ.

ಇದರಿಂದ ಮುಂದೆ ಅವಮಾನ ಎದುರಿಸಬೇಕಾಗುವುದು

ಇದರಿಂದ ಮುಂದೆ ಅವಮಾನ ಎದುರಿಸಬೇಕಾಗುವುದು

ನೀವು ಅ ವ್ಯಕ್ತಿಯನ್ನು ತುಂಬಾ ಪ್ರೀತಿಸುತ್ತಿದ್ದು ಆ ನಂಬಿಕೆಯಲ್ಲಿ ಹಾಟ್‌ ಫೋಟೋಗಳನ್ನು ಕಳುಹಿಸಿರುತ್ತೀರಿ. ಮುಂದೆ ಒಂದು ವೇಳೆ ನಿಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯ ಉಂಟಾದರೆ ಆ ವ್ಯಕ್ತಿ ಸೆಕ್ಸ್ಟಿಂಗ್ ತೋರಿಸಿ ನಿಮ್ಮನ್ನು ಬ್ಲ್ಯಾಕ್‌ಮೇಲ್‌ ಮಾಡಬಹುದು, ಇಲ್ಲಾ ಆ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಅಪ್ಲೋಡ್‌ ಮಾಡುವುದು, ಫ್ರೆಂಡ್ಸ್ ಗುಂಪಿಗೆ ಶೇರ್ ಮಾಡುವ ಅಪಾಯವಿದೆ.

ಆದ್ದರಿಂದ ನಿಮ್ಮ ನಗ್ನ ಫೋಟೋಗಳನ್ನು ನೀವು ನಂಬಿದ ವ್ಯಕ್ತಿಗೆ ಕಳುಹಿಸುವುದು ಅಪಾಯವನ್ನು ಆಹ್ವಾನ ಮಾಡಿದಂತೆ.

ನಿಮ್ಮ ನಂಬಿಕೆಗೆ ದ್ರೋಹ ಬಗೆಯಲ್ಲ ಎಂದು ಯಾರನ್ನೂ ನಂಬುವ ಆಗಿಲ್ಲ. ನಿಮ್ಮ ತಪ್ಪಿನಿಂದಲೇ ನೀವು ಅವಮಾನಕ್ಕೆ ಒಳಗಾಗುವುದಕ್ಕಿಂತ ಮುಂಜಾಗ್ರತೆ ಎಂಬಂತೆ ಇವುಗಳಿಂದ ದೂರವಿರಿ.

ಸ್ನೇಹಿತರು, ಮನೆಯವರು ದೂರವಾಗಬಹುದು

ಸ್ನೇಹಿತರು, ಮನೆಯವರು ದೂರವಾಗಬಹುದು

ನಿಮ್ಮ ನಗ್ನ ವೀಡಿಯೋ ಅಥವಾ ಫೋಟೋ ವೈರಲ್‌ ಆದರೆ ನಿಮ್ಮ ಸ್ನೇಹಿತರು ಹಾಗೂ ಮನೆಯವರು ಈ ಒಂದು ಕಾರಣಕ್ಕೆ ನಿಮ್ಮಿಂದ ದೂರವಾಗುತ್ತಾರೆ. ನೀವು ಯಾವುದೇ ತಪ್ಪು ಮಾಡದಿದ್ದರು, ನೀವು ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಆ ವ್ಯಕ್ತಿಗಾಗಿ ಹೀಗೆ ಮಾಡಿದರೂ ನಿಮ್ಮ ಪರವಾಗಿ ಯಾರೂ ನಿಲ್ಲಲು ಸಿದ್ಧವಾಗಿರುವುದಿಲ್ಲ. ಎಲ್ಲರೂ ನೀವು ನಡೆತ ಕೆಟ್ಟವರೆಂದೇ ಭಾವಿಸುತ್ತಾರೆ. ನಿಮ್ಮಿಂದಾಗಿ ನಿಮ್ಮ ಪೋಷಕರ ಮರ್ಯಾದೆ ಕೂಡ ಹಾಳಾಗುವುದು. ನಂಬಿ ಪ್ರೀತಿಸಿದ ವ್ಯಕ್ತಿಯೂ ಇಲ್ಲದೆ, ಮನೆಯವರು, ಸ್ನೇಹಿತರು ಇಲ್ಲದೆ ಒಂಟಿಯಾಗಬೇಕಾದೀತು.

ನಿಮ್ಮನ್ನು ಕಾಲೆಳೆಯುವ ಸಾಧ್ಯತೆ ಇರುತ್ತದೆ

ನಿಮ್ಮನ್ನು ಕಾಲೆಳೆಯುವ ಸಾಧ್ಯತೆ ಇರುತ್ತದೆ

ಒಮ್ಮೆ ನಮ್ಮ ಕುರಿತು ಏನಾದರೂ ತಪ್ಪು ಸಂದೇಶ ಸಮಾಜಕ್ಕೆ ರವಾನೆಯಾದರೆ ಅದೊಂದೇ ಕಾರಣ ಹೇಳಿ ಸಮಾಜ ನಿಂದಿಸುತ್ತದೆ. ಕೆಲವರು ನಿಮ್ಮನ್ನು ಈ ಕಾರಣ ಹೇಳಿ ಅಶ್ಲೀಲ ಮೆಸೇಜ್ ಕಳುಹಿಸುವುದು, ಲೈಂಗಿಕ ದುರ್ಬಳಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ನೀವು ಕಳುಹಿಸಿದ ವ್ಯಕ್ತಿಯಿಂದಲೇ ಫೋಟೋ ಅಥವಾ ವೀಡಿಯೋ ವೈರಲ್‌ ಆಗಬೇಕಾಗಿಲ್ಲ, ಒಂದು ವೇಳೆ ಆ ಮೊಬೈಲ್ ಕಳೆದು ಹೋದರೆ,ಕದ್ದು ಹೋದರೆ ಇಲ್ಲಾ ಅವರ ಸ್ನೇಹಿತರು ಅವರ ಅರಿವಿಗೆ ಬರದಂತೆ ತಮಗೆ ಕಳುಹಿಸಿಕೊಂಡು ಅದನ್ನು ನೆಟ್‌ನಲ್ಲಿ ಅಪ್ಲೋಡ್‌ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಸೆಕ್ಸ್ಟಿಂಗ್ ಮೆಸೇಜ್‌ಗಳಿಂದ ದೂರವಿರುವುದೇ ಒಳ್ಳೆಯದು.

ನೀವು ಪಶ್ಚಾತಾಪ ಪಡುವಂತೆ ಮಾಡುವುದು

ನೀವು ಪಶ್ಚಾತಾಪ ಪಡುವಂತೆ ಮಾಡುವುದು

ಒಂದು ವೇಳೆ ಕಳುಹಿಸಿದ ಸೆಕ್ಸ್ಟಿಂಗ್ ಫೋಟೋ ಅಥವಾ ವೀಡಿಯೋ ವೈರಲ್ ಆದರೆ ಸುತ್ತಲಿನ ಸಮಾಜ ಆ ಕ್ಷಣ ನಿಂದಿಸುವುದಲ್ಲ, ಜೀವನ ಪರ್ಯಾಂತ ನಿಮ್ಮನ್ನು ಕಾಡುವುದು. ನೀವು ಆ ಸ್ಥಳ ಬಿಟ್ಟು ಬೇರೆ ಕಡೆ ಹೋದರೂ ನಿಮ್ಮನ್ನು ಯಾರಾದರೂ ಗುರುತಿಸಿದರೆ ಕಾಟ ತಪ್ಪಿದ್ದಲ್ಲ. ಎಲ್ಲೂ ಮಾನ-ಮರ್ಯಾದೆಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಆತ್ಮವಿಶ್ವಾಸವನ್ನು ಕೊಂದು ಹಾಕುತ್ತದೆ. ನೀವು ಸೆಕ್ಸ್ಟಿಂಗ್ ಮಾಡಿದ್ದಕ್ಕೆ ಪಶ್ಚಾತಾಪದಿಂದ ಕೊರಗಿ-ಕೊರಗಿ ಸಾಯುವಂತೆ ಮಾಡುವುದು.

ಕಾನೂನುಕ್ರಮ ಎದುರಿಸಬೇಕಾಗುತ್ತದೆ

ಕಾನೂನುಕ್ರಮ ಎದುರಿಸಬೇಕಾಗುತ್ತದೆ

ನಗ್ನ ಅಥವಾ ಅಶ್ಲೀಲ ಫೋಟೋ ಹಾಗೂ ವೀಡಿಯೋಗಳು ಶೇರ್‌ ಆಗುವುದರಿಂದ ಕಾನೂನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನೀವು ಆ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್‌ ಮಾಡದಿದ್ದರೂ ಕೂಡ ಯಾರಾದರೂ ನಿಮ್ಮ ವಿರುದ್ಧ ಕೇಸ್‌ ಹಾಕಿದರೆ ನೀವು ಕಾನೂನಿಗೆ ಉತ್ತರ ನೀಡಬೇಕಾಗುವುದು.

ಅಲ್ಲಿದೆ ಈ ರೀತಿಯ ಸೆಕ್ಸ್ಟಿಂಗ್ ಸಂಬಂಧವನ್ನು ಹಾಳು ಮಾಡುತ್ತದೆ, ಸೆಕ್ಸ್ಟಿಂಗ್ ಶೇರ್‌ ಮಾಡಿದ ವ್ಯಕ್ತಿಯೊಂದಿಗೆ ಸಂಬಂಧವನ್ನು ಮುರಿದು ನೀವು ಮುಂದೊಂದು ಉತ್ತಮ ಸಂಬಂಧಕ್ಕೆ ಬಯಸಿದರೆ ಈ ಹಳೆ ಕೆಟ್ಟ ಕನಸು ನಿಮ್ಮನ್ನು ಜೀವನದುದ್ದಕ್ಕೂ ಕಾಡುವುದು.

English summary

How Sexting Can Affect Your Life

Sexting may spice up relationship but But everything comes with a price and so does sexting. You might not realise but sexting can affect your life in a manner that can even lead to misunderstandings and breakups.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X