For Quick Alerts
ALLOW NOTIFICATIONS  
For Daily Alerts

ಸಣ್ಣ-ಸಣ್ಣ ವಿಚಾರಕ್ಕೂ ಸಂಗಾತಿಯ ಮೇಲೆ ಕೋಪಗೊಳ್ಳುವವರು ಈ ವಿಧಾನಗಳಿಂದ ಕೋಪ ನಿಯಂತ್ರಿಸಿ

|

ಪ್ರೀತಿಯಲ್ಲಿ ಕೋಪ ಮಾಮೂಲಿ. ಹಾಗಂತ ಕೋಪ ಮಾಡಿಕೊಳ್ಳುವುದನ್ನೇ ರೂಢಿ ಮಾಡಿಕೊಳ್ಳಬಾರದು. ಕೋಪ ಬರುವುದು ಸಾಮಾನ್ಯ ಪ್ರಕ್ರಿಯೆಯಾದರೂ, ಅದನ್ನು ಸರಿಯಾಗಿ ನಿಬಾಯಿಸುವುದು ತುಂಬಾ ಮುಖ್ಯ. ಅದರಲ್ಲೂ ಸಂಬಂಧದಲ್ಲಿ ಕೋಪ ನಿಯಂತ್ರಣ ಮಾಡಲೇಬೇಕು, ಇಲ್ಲವಾದಲ್ಲಿ ಪ್ರೀತಿಗೆ ಕುತ್ತು. ಆದ್ದರಿಂದ ನಿಮ್ಮ ಗೆಳೆಯ ಅಥವಾ ಗೆಳತಿಯ ಮೇಲೆ ಕೋಪ ಬಂದಾಗ ಅದನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಇಲ್ಲಿ ಹೇಳಿದ್ದೇವೆ.

ಸಂಬಂಧದಲ್ಲಿ ಕೋಪವನ್ನು ಸರಿಯಾಗಿ ನಿಭಾಯಿಸುವ ಕೆಲವು ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ:

10 ಸೆಕೆಂಡುಗಳ ನಿಯಮ:

10 ಸೆಕೆಂಡುಗಳ ನಿಯಮ:

ನೀವು ಎಷ್ಟೇ ಆಕ್ರೋಶಗೊಂಡರೂ, ಕೋಪಗೊಂಡಿದ್ದರೂ, ಪ್ರತಿಕ್ರಿಯಿಸುವ ಅಥವಾ ನಿರ್ಧಾರ ತೆಗೆದುಕೊಳ್ಳುವ ಮೊದಲು ಯಾವಾಗಲೂ 10 ಸೆಕೆಂಡುಗಳ ಗ್ಯಾಪ್ ಕೊಡುವುದನ್ನು ಅಭ್ಯಾಸ ಮಾಡಲು ಪ್ರಯತ್ನಿಸಿ. ಏಕೆಂದರೆ ಕೋಪಗೊಂಡಾಗ ಯಾವುದೇ ಆಲೊಚನೆಗಳನ್ನು ಮಾಡಲು ಹೋಗುವುದಿಲ್ಲ. ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ತಪ್ಪೇ ಆಗಿರುವುದು ಜೊತೆಗೆ ಕೋಪದಲ್ಲಿ ಆಡಿದ ಮಾತು ಮತ್ತೊಬ್ಬರ ಮನಸ್ಸನ್ನು ಒಡೆಯಲೂ ಬಹುದು. ಮುಂದೆ ಅದು ಸಮಸ್ಯೆಯಾಗಿ ಕಾಡಬಹುದು, ಆದ್ದರಿಂದ ತಕ್ಷಣ ಪ್ರತಿಕ್ರಿಯಿಸುವ ಮೊದಲು ನೀವು ಕಣ್ಣುಗಳನ್ನು ಮುಚ್ಚಿ ಮತ್ತು 10 ರವರೆಗೆ ಎಣಿಸಿ. ಇದು ನಿಮ್ಮನ್ನು ಶಾಂತಗೊಳಿಸಲು ಮತ್ತು ನಿಮ್ಮ ಇಂದ್ರಿಯಗಳನ್ನು ಸಂಯೋಜಿಸಲು ಸಹಾಯ ಮಾಡುತ್ತದೆ. ಹತ್ತು ಸೆಕೆಂಡುಗಳ ನಂತರ ಮಾತನಾಡಲು ಮುಂದಾಗಿ. ಒಮ್ಮೆ ಮಾತನಾಡಿದ ಪದಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಆದರೆ ಈ ಅಭ್ಯಾಸದಿಂದ ನೀವು ಅಂತಹ ಸಂದರ್ಭಗಳು ಬರುವುದನ್ನು ತಡೆಯಬಹುದು!.

ಟೆನ್ಷನ್ ಕಡಿಮೆ ಮಾಡಲು ಹಾಸ್ಯವನ್ನು ಬಳಸಿ:

ಟೆನ್ಷನ್ ಕಡಿಮೆ ಮಾಡಲು ಹಾಸ್ಯವನ್ನು ಬಳಸಿ:

ಹೌದು, ಕೋಪ ಬಂದಾಗ ಇಬ್ಬರೂ ಸ್ಪೋಟವಾಗುವ ಬದಲು ಹಾಸ್ಯ ಮಾಡಿಕೊಳ್ಳಿ. ವಿಚಾರಗಳನ್ನು ಮೊದಲು ಹಾಸ್ಯದ ರೂಪದಲ್ಲಿ ಅಥವಾ ವ್ಯಂಗ್ಯ ರೂಪದ ಹಾಸ್ಯದಲ್ಲಿ ಹೇಳಿ. ಇದು ಇಬ್ಬರ ನಡುವಿನ ಕೋಪದ ತೀವ್ರತೆಯನ್ನ ಸ್ವಲ್ಪ ಪ್ರಮಾಣದಲ್ಲಿ ತಡೆಯುವುದು. ಒಬ್ಬರಿಗೊಬ್ಬರು ಸ್ಫೋಟಿಸುವ ಬದಲು, ನಿಮ್ಮಿಬ್ಬರ ನಡುವಿನ ಉದ್ವಿಗ್ನತೆಯನ್ನು ಬಿಡುಗಡೆ ಮಾಡಲು ಹಾಸ್ಯಗಳನ್ನು ಇಲ್ಲಿ ಬಳಸಿ. ಹಾಸ್ಯದ ಮೂಲಕ ಹೇಳಬೇಕಾದ ವಿಚಾರಗಳನ್ನು ತಿಳಿಸಿ, ನಿಮ್ಮ ಅನಿಸಿಕೆಗಳನ್ನು ಹೇಳಿ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಖಂಡಿತವಾಗಿಯೂ ತಡೆಯಬಹುದು.

ಸಮಸ್ಯೆಗಳನ್ನು ಒಪ್ಪಿಕೊಳ್ಳಿ:

ಸಮಸ್ಯೆಗಳನ್ನು ಒಪ್ಪಿಕೊಳ್ಳಿ:

ಕೆಲವರಿಗೆ ಕೋಪ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಕೋಪ ಬಂದಾಗ ತಕ್ಷಣ ಹೊರಹಾಕುತ್ತಾರೆ. ಅಂತಹವರು ತಮ್ಮ ಈ ಕೋಪ ನಿಯಂತ್ರಣದ ಸಮಸ್ಯೆಯನ್ನು ಒಪ್ಪಿಕೊಳ್ಳಬೇಕು. ಜೊತೆಗೆ ಇಬ್ಬರೂ ಕೂತು ಮಾತನಾಡಿ, ಇಂತಹ ಮಾನಸಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಅತಿಯಾಗಿ ಕೋಪಮಾಡಿಕೊಳ್ಳುವವರು ತನ್ನ ಸಂಗಾತಿ ಜೊತೆಗೆ ಈ ಕುರಿತು ಮೊದಲೇ ತಿಳಿಸುವುದು ಉತ್ತಮ. ಸಂದರ್ಭವನ್ನು ಒಪ್ಪಿಕೊಳ್ಳುವುದು ಸಮಸ್ಯೆಯ ಅರ್ಧ ಪರಿಹಾರವಾದಂತೆ. ಆದ್ದರಿಂದ ಉದ್ವೇಗಕ್ಕೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಇದ್ದಲ್ಲಿ ಒಪ್ಪಿಕೊಳ್ಳಿ.

ಧ್ಯಾನವನ್ನು ಅಭ್ಯಾಸ ಮಾಡಿ:

ಧ್ಯಾನವನ್ನು ಅಭ್ಯಾಸ ಮಾಡಿ:

ಉಸಿರಾಟದ ವ್ಯಾಯಾಮಗಳು, ವಿಶ್ರಾಂತಿ ವ್ಯಾಯಾಮಗಳು ಅಥವಾ ದೈನಂದಿನ ಸರಳ ಯೋಗ ನಿಮ್ಮ ಕೋಪದ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಬಹಳ ಸಹಾಯ ಮಾಡುತ್ತವೆ. ನಿಮ್ಮನ್ನು ದಿನಚರಿಯಲ್ಲಿ ತೊಡಗಿಸಿಕೊಳ್ಳುವ ಮೊದಲು ಬೆಳಿಗ್ಗೆ ಧ್ಯಾನ ಅಥವಾ ಯೋಗವನ್ನು ಅಭ್ಯಾಸ ಮಾಡಿ. ಇದು ನಿಮ್ಮ ಆಲೋಚನೆಗಳನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ, ಜೊತೆಗೆ ಸ್ವಯಂ-ಅರಿವು ಮೂಡಿಸುತ್ತದೆ.

English summary

Best Ways to Control Anger Issues in Your Relastionship in Kannada

Here we talking about Best Ways to Control Anger Issues in Your Relastionship in Kannada, read on
Story first published: Thursday, July 8, 2021, 17:50 [IST]
X
Desktop Bottom Promotion