For Quick Alerts
ALLOW NOTIFICATIONS  
For Daily Alerts

'ಟೇಕನ್ ಫಾರ್ ಗ್ರಾಂಟೆಡ್' ಆಗದಿರಲು ಹೀಗೆ ಮಾಡಿ

|

ಹಗುರವಾಗಿ ಪರಿಗಣಿತವಾಗುವುದು ಅಥವಾ ಜನರ ಮಧ್ಯೆ ಬೆಲೆ ಕಳೆದುಕೊಳ್ಳುವುದನ್ನು ಸಾಮಾನ್ಯವಾಗಿ 'ಟೇಕನ್ ಫಾರ್ ಗ್ರಾಂಟೆಡ್' ಎಂದು ಹೇಳುವುದನ್ನು ನಾವೆಲ್ಲ ಕೇಳಿದ್ದೇವೆ. ಇಂಥ ಒಂದು ಅನುಭವ ಸಾಕಷ್ಟು ಬಾರಿ ಅನೇಕರಿಗೆ ಆಗಿರುತ್ತದೆ.

ಸಕಾರಣವಾಗಿ ಅಥವಾ ಕಾರಣವೇ ಇಲ್ಲದೆ ಕೆಲ ಬಾರಿ ನಾವು 'ಟೇಕನ್ ಫಾರ್ ಗ್ರಾಂಟೆಡ್'ಆಗುವುದುಂಟು. ಈ ರೀತಿ ಹಗುರವಾಗಿ ಪರಿಗಣಿತವಾಗದಿರಲು ಏನು ಮಾಡಬೇಕು ಎಂಬುದರ ಬಗ್ಗೆ ಕೆಲವು ಮಹತ್ವದ ವಿಷಯಗಳನ್ನು ಇಲ್ಲಿ ತಿಳಿಸಲಾಗಿದೆ.

ಸಂಗಾತಿಯು ನಿಮ್ಮನ್ನು ’ಟೇಕನ್ ಫಾರ್ ಗ್ರಾಂಟೆಡ್’ಮಾಡದಿರಲಿ

ಸಂಗಾತಿಯು ನಿಮ್ಮನ್ನು ’ಟೇಕನ್ ಫಾರ್ ಗ್ರಾಂಟೆಡ್’ಮಾಡದಿರಲಿ

ಅನೇಕ ಬಾರಿ ಸಂಬಂಧಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಹಲವಾರು ರೀತಿಯ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಎದುರಿನ ವ್ಯಕ್ತಿಯು ಅದಕ್ಕೆ ಅರ್ಹನಾಗಿರದಿದ್ದರೂ ಸಂಬಂಧ ಉಳಿದರೆ ಸಾಕೆಂದು ಇಂಥ ಹೊಂದಾಣಿಕೆ ಮಾಡಿಕೊಂಡಿರುತ್ತೇವೆ. ಅದರಲ್ಲೂ ಸಂಗಾತಿಗಳಿಬ್ಬರ ಸಂಬಂಧದಲ್ಲಿ ಈ ಹೊಂದಾಣಿಕೆ ಹೆಚ್ಚಾಗಿ ಕಂಡು ಬರುತ್ತದೆ. ವ್ಯಕ್ತಿಯೊಬ್ಬ ತನ್ನೆಲ್ಲ ಅವಶ್ಯಕತೆಗಳನ್ನು ಬದಿಗಿಟ್ಟು ಸಂಗಾತಿಯ ಅವಶ್ಯಕತೆಗಳಿಗೆ ಪ್ರಾಮುಖ್ಯತೆ ನೀಡುವುದು ಸಹಜ. ಆದರೆ ಬರ ಬರುತ್ತ ಈ ಹೊಂದಾಣಿಕೆ ಎಂಬುದು ಕೃತಜ್ಞತೆಯೇ ಇಲ್ಲದ ಒಂದು ರೀತಿಯ ’ಥ್ಯಾಂಕ್‌ಲೆಸ್’ ಕೆಲಸವಾಗಿ ಬಿಡುವುದು ಖೇದಕರ. ಸಂಬಂಧದ ಒಂದಿಲ್ಲೊಂದು ಹಂತದಲ್ಲಿ ಸಂಗಾತಿಯು ನಮ್ಮನ್ನು ’ಟೇಕನ್ ಫಾರ್ ಗ್ರಾಂಟೆಡ್’ ಆಗಿ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಾಗ ಆಗುವ ನೋವು ಅಷ್ಟಿಷ್ಟಲ್ಲ. ಇದೊಂದು ಅಪಾಯದ ಮುನ್ಸೂಚನೆಯಾದರೂ ಈ ಒಂದು ಸಮಸ್ಯೆಯನ್ನು ಕೆಲವು ವಿಧಾನಗಳ ಮೂಲಕ ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಇಂಥ ’ಟೇಕನ್ ಫಾರ್ ಗ್ರಾಂಟೆಡ್’ ಪರಿಸ್ಥಿತಿಯಲ್ಲಿ ನೀವೂ ಸಿಲುಕಿದ್ದರೆ ಇಲ್ಲಿ ನೀಡಲಾದ ಟಿಪ್ಸ್ ಅನುಸರಿಸಿ ಅದರಿಂದ ಮುಕ್ತವಾಗಬಹುದು.

'ಟೇಕನ್ ಫಾರ್ ಗ್ರಾಂಟೆಡ್’ಎಂದು ಅನಿಸುವುದು ಯಾವಾಗ?

'ಟೇಕನ್ ಫಾರ್ ಗ್ರಾಂಟೆಡ್’ಎಂದು ಅನಿಸುವುದು ಯಾವಾಗ?

ನಿಮ್ಮ ಸಂಗಾತಿಯೊಂದಿಗೆ ಇದರ ಬಗ್ಗೆ ಮಾತುಕತೆಗೆ ಮುಂದಾಗುವ ಮೊದಲು ಯಾವ ಕಾರಣಗಳಿಂದಾಗಿ ನಿಮಗೆ ’ಟೇಕನ್ ಫಾರ್ ಗ್ರಾಂಟೆಡ್’ಅನಿಸುತ್ತಿದೆ ಎಂಬ ಬಗ್ಗೆ ಕೂಲಂಕುಷವಾಗಿ ವಿಚಾರ ಮಾಡಿ. ನಿಮ್ಮ ಸದುದ್ದೇಶದ ಕೆಲಸಗಳನ್ನು ಸಂಗಾತಿಯು ಯಾವ ಕಾರಣ ಹಾಗೂ ಸಂದರ್ಭಗಳಲ್ಲಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಗಮನಿಸಿ. ನಿಮ್ಮ ಸಂಗಾತಿ ಏನು ಹೇಳಿದರೆ ನಿಮಗೆ ಖುಷಿಯಾಗುತ್ತದೆ? ಎಲ್ಲ ಕೆಲಸಗಳನ್ನೂ ನೀವೇ ಮಾಡಬೇಕೆಂದು ಆತ/ಅವಳು ಬಯಸುತ್ತಿದ್ದು, ಅದಕ್ಕೆ ಕನಿಷ್ಠ ಒಂದು ಥ್ಯಾಂಕ್ಸ್ ಸಹ ಹೇಳಲು ಸಿದ್ಧವಿಲ್ಲವೆ? ಈ ವಿಷಯಗಳ ಬಗ್ಗೆ ಅರಿತುಕೊಂಡಲ್ಲಿ ಸಂಗಾತಿಯೊಂದಿಗೆ ಸಮಸ್ಯೆಯ ಬಗ್ಗೆ ಹೆಚ್ಚು ಅರ್ಥಪೂರ್ಣವಾಗಿ ಚರ್ಚಿಸಲು ಸಾಧ್ಯ.

ಮಾತನಾಡುವುದೇ ಲೇಸು

ಮಾತನಾಡುವುದೇ ಲೇಸು

ನಿಮ್ಮ ಭಾವನೆಗಳ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದಲ್ಲಿ ಹಾಗೂ ಪರಿಸ್ಥಿತಿಯ ಸುಧಾರಣೆಗೆ ಏನು ಮಾಡಬಹುದು ಎಂಬುದರ ಬಗ್ಗೆ ತಿಳುವಳಿಕೆ ಮೂಡಿದಾಗ ತಡ ಮಾಡದೆ ಎದುರು ಬದುರಾಗಿ ಮಾತನಾಡುವುದೇ ಸರಿಯಾದ ಮಾರ್ಗ. ನಿಮ್ಮಲ್ಲಿ ಯಾವ ರೀತಿಯಾಗಿ ’ಟೇಕನ್ ಫಾರ್ ಗ್ರಾಂಟೆಡ್’ಭಾವನೆ ಮೂಡುತ್ತಿದೆ ಹಾಗೂ ಇದರಿಂದ ಸಂಬಂಧದ ಮೇಲೆ ಹೇಗೆ ದುಷ್ಪರಿಣಾಮ ವಾಗುತ್ತಿದೆ ಎಂಬುದನ್ನು ವಿವರಿಸಿ. ನೇರವಾಗಿ ಸರಳ ಮಾತುಗಳಲ್ಲಿ ಸಮಸ್ಯೆಯನ್ನು ಬಿಚ್ಚಿಟ್ಟಾಗ ಸಂಗಾತಿಗೆ ಎಲ್ಲವೂ ಅರ್ಥವಾಗ ಬಹುದು. ಆದರೆ ಯಾವುದೇ ಕಾರಣಕ್ಕೂ ದೂಷಣೆಗೆ ಮುಂದಾಗುವುದು ಬೇಡ. ಏನೇ ಆದರೂ ಸೌಹಾರ್ದತೆಯಿಂದ ಮಾತಾಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬೇಕಾಗುತ್ತದೆ.

ಮೊದಲು ನಿಮ್ಮ ವರ್ತನೆಯನ್ನು ನೋಡಿಕೊಳ್ಳಿ

ಮೊದಲು ನಿಮ್ಮ ವರ್ತನೆಯನ್ನು ನೋಡಿಕೊಳ್ಳಿ

ಸಂಗಾತಿಯು ನಿಮ್ಮನ್ನು ’ಟೇಕನ್ ಫಾರ್ ಗ್ರಾಂಟೆಡ್’ಮಾಡಿದ್ದಾರೆ ಎನಿಸಿರಬಹುದು. ಆದರೆ ಸಂಗಾತಿಯೆಡೆಗೆ ನಿಮ್ಮ ವರ್ತನೆ ಹೇಗಿದೆ ಎಂಬ ಬಗ್ಗೆ ಮೊದಲು ವಿಚಾರ ಮಾಡಿ. ನಿಮಗೇನಾದರೂ ಹೆಚ್ಚಿನ ಸಹಾಯ ಸಿಕ್ಕಾಗ ಸಂಗಾತಿಗೊಂದು ಥ್ಯಾಂಕ್ಸ್ ಹೇಳಿರುವಿರಾ? ನಿಮಗಾಗಿ ಏನಾದರೂ ಮಾಡಿದಾಗ ಸಂಗಾತಿಯ ಪ್ರಯತ್ನವನ್ನು ಶ್ಲಾಘಿಸಿದ್ದೀರಾ? ಹೀಗಾಗಿ ಮೊದಲು ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳುವುದು ಸೂಕ್ತ. ನಿಮ್ಮ ವರ್ತನೆಯನ್ನು ಸರಿ ಮಾಡಿ ಕೊಂಡ ನಂತರವಷ್ಟೆ ಸಂಗಾತಿಯಿಂದ ಉತ್ತಮ ಪ್ರತಿಕ್ರಿಯೆ ಬಯಸಿದರೆ ಅದಕ್ಕೊಂದು ಅರ್ಥವಿರುತ್ತದೆ.

ನಿಮ್ಮ ಪ್ರಯತ್ನಗಳನ್ನು ನೀವು ಮೊದಲು ಮೆಚ್ಚಿಕೊಳ್ಳಿ

ನಿಮ್ಮ ಪ್ರಯತ್ನಗಳನ್ನು ನೀವು ಮೊದಲು ಮೆಚ್ಚಿಕೊಳ್ಳಿ

ಯಾರಾದರೂ ನಮ್ಮ ಕೆಲಸವನ್ನು ಶ್ಲಾಘಿಸಿದಾಗ ಅದನ್ನು ಮುಕ್ತವಾಗಿ ಸ್ವೀಕರಿಸಿ ಥ್ಯಾಂಕ್ಸ್ ಹೇಳಲು ಬಹಳಷ್ಟು ಜನ ನಾಚಿಕೊಳ್ಳುತ್ತಾರೆ. ಇದು ನಮ್ಮನ್ನು ತಪ್ಪು ದಿಕ್ಕಿನತ್ತ ಕರೆದೊಯ್ಯುತ್ತದೆ. ಹೀಗಾಗಿ ನಿಮ್ಮ ಕೆಲಸಗಳನ್ನು ಸಂಗಾತಿಯು ಶ್ಲಾಘಿಸಿದಾಗ ಅದನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿ ಹಾಗೂ ಥ್ಯಾಂಕ್ಸ್ ಎನ್ನಲು ಹಿಂಜರಿಯಬೇಡಿ. ನಿಮ್ಮ ಸಂಗಾತಿಗಾಗಿ ಏನಾದರೂ ವಿಶೇಷವಾಗಿರುವುದನ್ನು ಮಾಡಿದಾಗ ಆಕೆ/ಆತ ನಿಮಗೆ ಥ್ಯಾಂಕ್ಸ್ ಹೇಳಲು ಮರೆತರೆ ನಿಮಗೆ ನೀವೇ ಥ್ಯಾಂಕ್ಸ್ ತಿಳಿಸಿ. ನಿಮ್ಮ ಸಂದೇಶ ಇನ್ನೊಂದು ಬದಿಗೆ ತಲುಪುವುದು ಖಂಡಿತ.

ನಿಮ್ಮ ಮೇಲೆ ನೀವು ಗಮನ ಕೇಂದ್ರೀಕರಿಸಿ

ನಿಮ್ಮ ಮೇಲೆ ನೀವು ಗಮನ ಕೇಂದ್ರೀಕರಿಸಿ

ಸಂತೋಷ ಎಂಬುದು ಎಲ್ಲಿಯೋ ಹುಡುಕುವ ವಸ್ತುವಲ್ಲ. ಅದು ನಮ್ಮೊಳಗಿನಿಂದಲೇ ಬರಬೇಕು. ನಿಮ್ಮ ಸಂಗಾತಿಯ ಬಗ್ಗೆ ಕಾಳಜಿ ವಹಿಸುವುದು, ಸಮಯ ನೀಡುವುದು ಎಂದರೆ ನಿಮ್ಮನ್ನು ನೀವು ನಿರ್ಲಕ್ಷಿಸಬೇಕು ಎಂದರ್ಥವಲ್ಲ. ನಿಮ್ಮ ಭವಿಷ್ಯದ ಬಗ್ಗೆ ಗಮನವಿಟ್ಟು, ಸಾಮಾಜಿಕವಾಗಿ ಬೆಳೆಯುತ್ತ ಅದೇ ಸಮಯಕ್ಕೆ ನಿಮಗೆ ಖುಷಿ ನೀಡುವ ಕೆಲಸಗಳನ್ನು ಮಾಡುತ್ತಲೇ ಇರಿ. ಹೀಗೆ ಮಾಡಿದಲ್ಲಿ ಮೊದಲು ನಿಮ್ಮಷ್ಟಕ್ಕೆ ನೀವು ಖುಷಿಯಾಗಿರಲು ಸಾಧ್ಯವಾಗುತ್ತದೆ. ಆಗ ಬಾಹ್ಯ ವಿಷಯಗಳಿಂದ ಡಿಸ್ಟರ್ಬ್ ಆಗುವುದು ಕಡಿಮೆಯಾಗುತ್ತದೆ. ಇದರಿಂದ ಸಹಜವಾಗಿಯೇ ನಿಮ್ಮ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.

'ಇಲ್ಲ' ಎನ್ನಲು ಹಿಂಜರಿಕೆ ಬೇಡ

'ಇಲ್ಲ' ಎನ್ನಲು ಹಿಂಜರಿಕೆ ಬೇಡ

ಕೆಲವೊಮ್ಮೆ ಸ್ವಾರ್ಥಿ ಎನಿಸಿದರೂ ಸಂದರ್ಭಕ್ಕೆ ತಕ್ಕಂತೆ 'ಇಲ್ಲ' ಎಂದು ಹೇಳಲು ಹಿಂಜರಿಕೆ ಬೇಕಿಲ್ಲ. ನೀವು ನಿಮ್ಮ ಸಂಗಾತಿಯನ್ನು ಅಗಾಧವಾಗಿ ಪ್ರೀತಿಸುವಿರಿ ಎಂದ ಮಾತ್ರಕ್ಕೆ ಆತ/ಆಕೆ ಹೇಳಿದ್ದಕ್ಕೆಲ್ಲ 'ಯೆಸ್'ಎನ್ನಬೇಕಿಲ್ಲ. ನಿಜ ಹೇಳಬೇಕೆಂದರೆ 'ಇಲ್ಲ' ಎನ್ನುವುದೇ ಸೂಕ್ತ ಎಂಬ ಸಂದರ್ಭದಲ್ಲಿ ಅದನ್ನು ಹೇಳುವುದೇ ಸರಿ. ಇದರಿಂದ ನಿಮ್ಮ ಸಂಗಾತಿಯು ತನ್ನ ವರ್ತನೆಯನ್ನು ತಿದ್ದಿಕೊಳ್ಳಲು ಸಹಕಾರಿಯಾಗುವುದು.

ಸಂಗಾತಿಯು ಹೇಳುವವರೆಗೆ ತಾಳ್ಮೆಯಿಂದಿರಿ

ಸಂಗಾತಿಯು ಹೇಳುವವರೆಗೆ ತಾಳ್ಮೆಯಿಂದಿರಿ

ಏನೂ ಕೇಳದಿದ್ದರೂ ನಾವಾಗಿಯೇ ಕೆಲ ವಿಷಯಗಳನ್ನು ಮುಂದಾಗಿ ಮಾಡುವುದರಿಂದ ಸಹ 'ಟೇಕನ್ ಫಾರ್ ಗ್ರಾಂಟೆಡ್' ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಸಂಗಾತಿಯು ಕೇಳುವ ಮೊದಲೇ ಎಲ್ಲ ಸಹಾಯ ಮಾಡಲು ಮುಂದಾಗುವವರಲ್ಲಿ ನೀವೂ ಒಬ್ಬರಾ? ಹಾಗಾದರೆ ನಿಮ್ಮ ನಿರೀಕ್ಷೆಗಳು ಸಫಲವಾಗವು. ಈ ರೀತಿ ಮಾಡುವುದನ್ನು ಬಿಟ್ಟು ಬಿಡಿ. ಯಾವಾಗ ಸಂಗಾತಿಯು ತಾನಾಗಿಯೇ ಕೇಳಿದಾಗ ನೀವು ಸಹಾಯ ಮಾಡುವಿರೋ ಆಗ ನಿಮ್ಮ ನಿರೀಕ್ಷೆಯಂತೆ ಮುಂದಿನದೆಲ್ಲ ನಡೆಯಬಹುದು.

English summary

ways to stop being taken for granted in a relationship

Sometimes,we tend to invest way too much in a relationship and adjust to situations and people more than what is required. We start placing our partner’s needs before our own and after one point of time, anything we do becomes a thankless job. Many of us feel that we are taken for granted by our partner at some stage or another in our relationship.
X
Desktop Bottom Promotion