For Quick Alerts
ALLOW NOTIFICATIONS  
For Daily Alerts

ಈ ಬಾರಿಯ ಪ್ರೇಮಿಗಳ ದಿನ ನಿಜಕ್ಕೂ ಈ 3 ರಾಶಿಗಳವರಿಗೆ ಪ್ರೀತಿಯ ಸುದಿನ !!!

|

ಫೆಬ್ರವರಿ ತಿಂಗಳು ಬಂತು ಎಂದರೆ ಪ್ರೇಮಿಗಳಿಗೆ ಹಬ್ಬವೋ ಹಬ್ಬ . ವರ್ಷವಿಡೀ ಹಿರಿಯರ ಜೊತೆ ಸಾಂಸ್ಕೃತಿಕ ಹಬ್ಬಗಳನ್ನೇ ಆಚರಿಸುವ ಯುವ ಪೀಳಿಗೆ ನಮಗಾಗಿ ಒಂದು ಖುಷಿಯಿಂದ ಸಂಭ್ರಮಿಸಿ ಆಚರಿಸುವ ದಿನ ಇಲ್ಲವೇ ಎಂದುಕೊಳ್ಳುತ್ತಿರುವಾಗಲೇ ಹುಟ್ಟಿಕೊಂಡಿದ್ದು ಈ ಪ್ರೇಮಿಗಳ ಹಬ್ಬ. ಅದೇ ಫೆಬ್ರವರಿ 14! ಯುವಜೋಡಿಗಳು ಮತ್ತು ಜೋಡಿಗಳಾಗುವವರು ಖುಷಿಯ ತುತ್ತತುದಿಯಲ್ಲಿ ಉತ್ಸಾಹದಿಂದ ರೆಕ್ಕೆ ಕಟ್ಟಿಕೊಂಡು ಹಾರಾಡಲೆಂದೇ ಪಾಶ್ಚಿಮಾತ್ಯ ದೇಶಗಳಿಂದ ಹಾರಿಬಂದ ಸಂಸ್ಕೃತಿ...ಮುಂದೆ ಓದಿ..

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ವರ್ಷಕ್ಕೊಮ್ಮೆಯೇ ಬರುವ ಈ ಹಬ್ಬಕ್ಕೆ ನಮ್ಮ ಯುವಪ್ರೇಮಿಗಳ ತಯಾರಿ ಸಾಮಾನ್ಯವಾಗಿರುತ್ತದೆಯೇ ? ಅದಕ್ಕಾಗಿ ತಿಂಗಳಿಂದಲೇ ಯೋಜನೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿರುತ್ತಾರೆ.ಇನ್ನು ಹಬ್ಬದ ಆಚರಣೆಗೆ ಒಂಟಿಯಾಗಿರುವವರು ಜೋಡಿಯಾಗಿರುವವರು ಎನ್ನದೆ ಎಲ್ಲಾ ಬಗೆಯ ಯುವಜನತೆ ಪಾಲ್ಗೊಳ್ಳುತ್ತಾರೆ.ಈ ಎಲ್ಲಾ ಸಿದ್ಧತೆಗಳ ನಡುವೆಯೇ ಪ್ರೇಮಿಗಳ ದಿನಾಚರಣೆ ಪ್ರೇಮಿಗಳಿಗೆ ಒಂದು ನೆನಪಿನಲ್ಲಿಟ್ಟುಕೊಳ್ಳುವಂಥ ದಿನವಾಗಿರುತ್ತದೆ. ಏಕೆಂದರೆ ಆ ದಿನವೇ ಹಾಗೆ.ಇಲ್ಲದಿರುವ ಪ್ರೀತಿಯನ್ನು ಹುಟ್ಟುಹಾಕುತ್ತದೆ ಮತ್ತು ಇಬ್ಬರ ಮಧ್ಯೆ ಇರುವ ಪ್ರೀತಿಯನ್ನು ದುಪ್ಪಟ್ಟುಗೊಳ್ಳುವಂತೆ ಮಾಡುತ್ತದೆ. ಮನುಷ್ಯ ಏನೇ ಹಬ್ಬ ಹರಿದಿನ ಆಚರಣೆ ಮಾಡಿದರೂ , ಸಂತೋಷ ದುಃಖದ ಕ್ಷಣಗಳನ್ನು ಅನುಭವಿಸಿದರೂ ಅವನ ಆ ದಿನದ ದಿನಚರಿ ಆತನ ಜಾತಕದ ಜ್ಯೋತಿಷ್ಯದ ಮೇಲೆ ಅವಲಂಬಿತವಾಗಿರುತ್ತದೆ.ಗಂಡು ಹೆಣ್ಣು ಇಬ್ಬರನ್ನು ಬೆಸೆಯಲು ಜ್ಯೋತಿಷ್ಯ ಶಾಸ್ತ್ರ ಸಹಾಯ ಮಾಡುತ್ತದೆ ಎಂದಾದರೆ ಪ್ರೇಮಿಗಳ ದಿನಾಚರಣೆಗೂ ಜ್ಯೋತಿಷ್ಯಕ್ಕೂಸಂಬಂಧವಿದೆಯಲ್ಲವೇ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗೆ ಅನುಗುಣವಾಗಿ ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14 ರಂದು ಯಾವ ರೀತಿ ಇರಲಿದೆ ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ತಿಳಿಸಲಾಗಿದೆ. ಅದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ನಿಮ್ಮ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಮುಂದುವರೆಯಿರಿ.

ವೃಷಭ ರಾಶಿ

ವೃಷಭ ರಾಶಿ

ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿಗೆ ಫೆಬ್ರವರಿ 14 ಬಹಳ ಅನುಕೂಲಕರ ಎಂದು ಸೂಚಿಸಲ್ಪಡುತ್ತದೆ. ನೀವು ನಿಮ್ಮ ಪ್ರೀತಿಯನ್ನು ಅತ್ಯಂತ ಸಂತೋಷದಿಂದ ನಿಮ್ಮ ಪ್ರಿಯತಮ/ ಪ್ರೇಯಸಿಯ ಬಳಿ ಹೇಳಿಕೊಳ್ಳಲು ಇದು ಹೇಳಿ ಮಾಡಿಸಿದ ದಿನವೆಂದು ತೋರುತ್ತಿದೆ .ಎಲ್ಲರಿಗೂ ತಿಳಿದಿರುವ ಹಾಗೆ ವೃಷಭ ರಾಶಿಯವರಾದ ನೀವು ಯಾವಾಗಲು ಪ್ರೇಮ ಪ್ರಣಯ ಎಂಬ ಕಲ್ಪನೆಯಲ್ಲೇ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುತ್ತೀರಿ. ನಿಮ್ಮ ಭವಿಷ್ಯವಾಣಿಯಂತೆ ನೀವು ಈ ದಿನ ಪ್ರೀತಿಯನ್ನು ತೋರಿಸಿ ಕೊಳ್ಳಲು ಬಹಳ ಉತ್ಸುಕರಾಗಿರುತ್ತೀರಿ ಮತ್ತು ನಿಮ್ಮ ಗ್ರಹಗತಿಗಳು ನಿಮ್ಮ ಪರವಾಗಿಯೇ ಕೆಲಸ ಮಾಡುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

Most Read: ನಿಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಜೀವನದಲ್ಲಿ ಎರಡು ಬಗೆಯ ಬದಲಾವಣೆಗಳು ಆಗಲಿದೆಯಂತೆ

ವೃಷಭ ರಾಶಿ

ವೃಷಭ ರಾಶಿ

ನಿಮ್ಮ ಪ್ರೇಮಿಯ ಜೊತೆ ಬಹಳ ಆನಂದದ ಕ್ಷಣಗಳನ್ನು ಅನುಭವಿಸುತ್ತೀರಿ . ಇನ್ನೂ ಹೇಳಬೇಕೆಂದರೆ ನೀವಿಬ್ಬರೂ ನಿಮ್ಮ ಕಲ್ಪನೆಗಳ ಮತ್ತು ಆಯ್ಕೆಗಳ ಅನುಗುಣವಾಗಿ ಪ್ರಣಯ ಪಕ್ಷಿಗಳಂತೆ ಹಾರಾಡುತ್ತೀರಿ. ನಿಮ್ಮ ಪ್ರೇಮಿಯ ಹೃದಯ ಗೆಲ್ಲಲು ಅವರಿಗೆ ಇಷ್ಟವಾಗುವ ಹಾಗೆ ನಿಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುವ ಪ್ರೀತಿಯನ್ನು ತೋರಿಸಲು ಇದು ಸಕಾಲ. ಏಕೆಂದರೆ ಮಂಗಳ ಗ್ರಹ ನಿಮ್ಮ ರಾಶಿ ಚಕ್ರಕ್ಕೆ ಪ್ರವೇಶ ಮಾಡಿರುವುದರಿಂದ ಪ್ರೇಮಿಗಳ ದಿನ ನಿಮಗೆ ಶುಭದಿನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಧನು ರಾಶಿ

ಧನು ರಾಶಿ

ತಮ್ಮ ಹೃದಯದಲ್ಲಿರುವ ಪ್ರೀತಿಯನ್ನು ತುಂಬು ಹೃದಯದಿಂದ ತಮ್ಮನ್ನು ಪ್ರೀತಿಸುವವರಿಗೆ ಮಾತ್ರವೇ ಧಾರೆಯೆರೆದು ಕೊಡುವವರು ಯಾರಾದರೂ ಇದ್ದರೆ ಅದು ಧನು ರಾಶಿಯವರು ಮಾತ್ರ. ನಿಮ್ಮ ರಾಶಿ ಭವಿಷ್ಯದ ಪ್ರಕಾರ ನಿಮಗೆ ಫೆಬ್ರವರಿ 14 ವರದಾನವಾಗಿದೆ . ಚಂದ್ರನು ನಿಮ್ಮ ರಾಶಿ ಚಕ್ರದ 7 ನೇ ಮನೆಯ ಮೇಲೆ ನೇರ ಪ್ರಭಾವ ಬೀರಲಿದ್ದಾನೆ .

ಧನು ರಾಶಿ

ಧನು ರಾಶಿ

7 ನೇ ಮನೆಯು ಜಾತಕದ ಕುಂಡಲಿಯಲ್ಲಿ ಪ್ರೀತಿ , ಮದುವೆ ಮತ್ತು ನಿಮ್ಮ ಪ್ರೇಮಿಯ ಜೊತೆಗಿನ ಅವಿನಾಭಾವದ ಸಂಬಂಧದ ಸಂಕೇತವಾಗಿದೆ.ಆದ್ದರಿಂದ ಪ್ರೀತಿಯ ವಿಷಯದಲ್ಲಿ ನೀವು ಅಂದುಕೊಂಡಂತೆಯೇ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಂದ್ರ ಗ್ರಹದ ಬೆಂಬಲದ ಜೊತೆಗೆ ನಿಮಗೆ ಗುರುವಿನ ಅನುಗ್ರಹ ಕೂಡ ಇದೆ. ಗುರುವಿನ ಅನುಗ್ರಹ ಸಿಕ್ಕಿದರೆ ಸಾಕು ಅದೃಷ್ಟ ಖುಲಾಯಿಸಿದಂತೆಯೇ. ಗುರು ಗ್ರಹವೇ ಹಾಗೆ. ಅದರ ಬೆಂಬಲ ಸಿಕ್ಕಿದರೆ ಎಲ್ಲ ದಿನಗಳೂ ಒಳ್ಳೆಯ ದಿನಗಳೇ.

Most Read: ವಿದೇಶದಲ್ಲಿ ನೌಕರಿ ಮಾಡುವ ಇಚ್ಛೆಯೆ? ಜ್ಯೋತಿಷ್ಯದ ಈ ನಿಯಮಗಳನ್ನು ಪಾಲಿಸಿ..

 ಮಕರ ರಾಶಿ

ಮಕರ ರಾಶಿ

ಮಕರ ರಾಶಿಯವರು ಎಂದರೆ ಯಾವಾಗಲೂ ಕೆಲಸ ಶ್ರಮ ಎಂಬ ಪದಗಳ ಜೊತೆಗೆ ಕಷ್ಟಪಟ್ಟು ದುಡಿದು ತಮ್ಮ ಜೀವನ ರೂಪಿಸಿಕೊಳ್ಳುವವರು ಎಂದರ್ಥ.ಅಂಥವರೂ ಪ್ರೀತಿ ಪ್ರೇಮದಲ್ಲಿ ಬೀಳುವುದು ಎಂದರೆ ಸಾಮಾನ್ಯವೇ ? ಹೌದು ಈ ವರ್ಷ ಅದು ನಿಜ .ಅದಕ್ಕೆ ಕಾರಣ ಶುಕ್ರ ಗ್ರಹದ ಪ್ರಭಾವ.ನಿಮ್ಮ ರಾಶಿಗೆ ಶುಕ್ರನ ಪ್ರವೇಶದಿಂದ ನಿಮ್ಮಲ್ಲಾಗುವ ಬದಲಾವಣೆಗಳಿಂದ ಫೆಬ್ರವರಿ 14 ರ ಪ್ರೇಮಿಗಳ ದಿನ ನಿಜಕ್ಕೂ ನಿಮಗೆ ಒಂದು ವಿಶೇಷ ದಿನವಾಗಿ ಪರಿಣಮಿಸಲಿದೆ.

 ಮಕರ ರಾಶಿ

ಮಕರ ರಾಶಿ

ನಿಮ್ಮ ಹೃದಯದ ಪಿಸುಮಾತನ್ನು ಕೇಳುವ ಸಮಯ .ನಿಮ್ಮ ಬಚ್ಚಿಟ್ಟಿರುವ ಪ್ರೀತಿಯನ್ನು ನಿಮ್ಮ ಪ್ರೇಮಿಯ ಜೊತೆಗೆ ತೋರಿಸುವ ಸಮಯ.ಮತ್ತೇಕೆ ತಡ? ಬಂದಿರುವ ಒಳ್ಳೆಯ ಸಮಯದ ಜೊತೆ ನಿಮ್ಮ ಬಾಳ ಸಂಗಾತಿಯೂ ನಿಮ್ಮವರಾಗಲಿ ಮತ್ತು ನಿಮಗೆ ಶುಭವಾಗಲಿ ಎಂದು ಹಾರೈಸುವ ಆಶಯ ನಮ್ಮದು.

English summary

Valentine's Day Would Be A Day Of Love For These Zodiacs

Valentine's Day is here and we are sure you all have started digging deep for plans that you are going to come up with on this day of love. Irrespective of whether you are single or already mingled up, the excitement for the day is obviously high. Well, however the Valentine's day plans are going to be for you, the day itself will put you in 'love forever' and a 'soul partner' mood for sure. And astrology is not going to let you go unplanned for the day.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more