For Quick Alerts
ALLOW NOTIFICATIONS  
For Daily Alerts

ಈ ರಾಶಿಗಳಲ್ಲಿ ಹುಟ್ಟಿದವರು ಕೆಟ್ಟ ಹುಡುಗರನ್ನು ಪ್ರೀತಿಸುತ್ತಾರಂತೆ

|

ಪ್ರೀತಿ ಎಂಬುದು ಮಾಯೆ. ಪ್ರೀತಿ ಕುರುಡು ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಪ್ರೀತಿ ಹಾಗೂ ಯುದ್ಧದಲ್ಲಿ ಮಾಡಿದ್ದೆಲ್ಲವೂ ಸರಿ ಎಂಬ ಹಳೆಯ ಮಾತೊಂದು ನಿಮಗೆಲ್ಲ ಗೊತ್ತೆ ಇರಬಹುದು. ಆದರೂ ಪ್ರೀತಿಯಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದರ ಮಧ್ಯದ ರೇಖೆ ತುಂಬಾ ತೆಳುವಾಗಿದೆ. ಪ್ರೀತಿ ಎಂಬ ಮಾಯೆಯಲ್ಲಿ ಬಿದ್ದವರಿಗೆ ತಾವು ಏನು ಮಾಡುತ್ತಿದ್ದೇವೆ, ಇದೆಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ಗೊತ್ತೇ ಇರುವುದಿಲ್ಲ. ಇದನ್ನೆಲ್ಲ ನೋಡಿದರೆ ಪ್ರೀತಿ ಎಂಬುದು ಯಾವುದೇ ಯುದ್ಧಕ್ಕಿಂತ ಕಡಿಮೆ ಏನಲ್ಲ ಎಂಬುದು ಅರ್ಥವಾಗುತ್ತದೆ.

ಪ್ರೀತಿಯಲ್ಲಿನ ನಿಮ್ಮ ಆಯ್ಕೆ ನಿಮ್ಮ ಬಂಧುಬಳಗ ಹಾಗೂ ಆಪ್ತರೊಂದಿಗೆ ವೈಮನಸ್ಯ ತರಬಹುದು. ಇಂಥ ಭಿನ್ನಾಭಿಪ್ರಾಯಗಳು ಹಾಗೂ ವೈಮನಸ್ಯಗಳಿಗೆ ಸಾಕಷ್ಟು ಕಾರಣಗಳಿರಬಹುದು. ಆದರೆ ನೀವು ಪ್ರೀತಿಸಿದ 'ವ್ಯಕ್ತಿ ಸರಿಯಾಗಿಲ್ಲ' ಎಂಬ ಕಾರಣವೇ ಬಹುತೇಕ ಎಲ್ಲ ಸಮಸ್ಯೆಗಳ ಮೂಲವಾಗಿರುತ್ತದೆ. ಈ ಸರಿಯಾಗಿಲ್ಲ ಎನ್ನುವುದಕ್ಕೆ ಮಾನದಂಡಗಳು ಆಯಾ ವ್ಯಕ್ತಿಯಿಂದ ವ್ಯಕ್ತಿಯ ವಿಚಾರಕ್ಕೆ ತಕ್ಕಂತೆ ಬದಲಾಗುತ್ತವೆ. ಹೀಗಾಗಿ ಪ್ರೀತಿಯಲ್ಲಿ ಬಿದ್ದವರು ಇದಕ್ಕೆಲ್ಲ ಸೊಪ್ಪು ಹಾಕದೆ ತಮ್ಮ ರೋಮಾನ್ಸ್‌ನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುತ್ತಾರೆ. ಇನ್ನು 'ಒಳ್ಳೆಯ ವ್ಯಕ್ತಿ ಅಥವಾ ಕೆಟ್ಟ ವ್ಯಕ್ತಿ' ಎಂದು ನಿರ್ಧರಿಸುವವರು ಯಾರು? ಇದಕ್ಕೆ ಮಾನದಂಡಗಳೇನು? ನೋಡೋಣ ಬನ್ನಿ...

'ಕೆಟ್ಟ ಹುಡುಗ' ಎಂದರೆ ಯಾರು?

'ಕೆಟ್ಟ ಹುಡುಗ' ಎಂದರೆ ಯಾರು?

ನೀವು ಭಾರತೀಯ ಸಂಪ್ರದಾಯ ಹೆಚ್ಚಾಗಿ ಪಾಲಿಸುವ ಕುಟುಂಬವೊಂದರಲ್ಲಿ ಜನಿಸಿದ ಹುಡುಗಿಯಾಗಿದ್ದರೆ ಈ 'ಕೆಟ್ಟ ಹುಡುಗರು' ಯಾರು ಎಂಬುದು ನಿಮಗೆ ತಿಳಿದೇ ಇರುತ್ತದೆ. ನೀವು ಶಾಲೆಯಲ್ಲಿರುವಾಗ ಕೆಟ್ಟ ಹುಡುಗರೊಂದಿಗೆ ದೋಸ್ತಿ ಮಾಡದಂತೆ ಗದರಿಸುತ್ತಿದ್ದುದು ನಿಮಗೆ ನೆನಪಿರಬಹುದು. ಪೂರ್ವಗ್ರಹ ಪೀಡಿತರಾಗದೆ ಕೆಲ ಪುರಾವೆಗಳ ಆಧಾರದಲ್ಲಿ ಈ 'ಕೆಟ್ಟ ಹುಡುಗರು' ಎಂದರೆ ಯಾರು ಎಂಬುದನ್ನು ತಿಳಿಯಬಹುದು. ಅದೇನೇ ಇರಲಿ. ನೀವೂ ಅಂಥ ಕೆಟ್ಟ ಹುಡುಗರ ಸಹವಾಸಕ್ಕೆ ಬೇಗನೆ ಬರುವಿರಾದರೆ ನಿಮ್ಮ ಗ್ರಹಗತಿಯೂ ಅದಕ್ಕೆ ಕಾರಣವಾಗಿರುತ್ತದೆ ಎಂದರೆ ಆಶ್ಚರ್ಯಪಡಬೇಡಿ. ಕೆಲ ನಿರ್ದಿಷ್ಟ ರಾಶಿಯಲ್ಲಿ ಹುಟ್ಟಿದವರು ಬಹುಬೇಗನೆ ಈ ಕೆಟ್ಟ ಹುಡುಗರ ಸಾಂಗತ್ಯ ಮಾಡುತ್ತಾರೆ ಎನ್ನಲಾಗಿದೆ. ಹಾಗಾದರೆ ನಿಮ್ಮ ಜನ್ಮ ರಾಶಿ ಯಾವುದು ಎಂದು ತಿಳಿದುಕೊಂಡು ನೀವೂ ಅಂಥ ರಾಶಿಯಲ್ಲಿ ಹುಟ್ಟಿದವರಾ ಎಂದು ತಿಳಿಯುವ ಕುತೂಹಲವಿದ್ದರೆ ತಿಳಿದುಕೊಳ್ಳಿ.

ಮೇಷ ರಾಶಿ

ಮೇಷ ರಾಶಿ

ಮೇಷ ರಾಶಿಯಲ್ಲಿ ಹುಟ್ಟಿದವರು ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸುವ ಮನೋಭಾವದವರಾಗಿರುತ್ತಾರೆ. ಹೀಗಾಗಿ ಕೆಟ್ಟ ಹುಡುಗರು ಅವರ ಸವಾಲು ಸ್ವೀಕರಿಸುವ ಗುಣಕ್ಕೆ ಒಂದು ಚಾಲೆಂಜ್ ನೀಡಿಯೇ ತೀರುತ್ತಾರೆ. ಒಟ್ಟಾರೆಯಾಗಿ ಸಮಾಜದಲ್ಲಿ ಕೆಟ್ಟವನೆಂದು ಬಿಂಬಿತವಾದ ವ್ಯಕ್ತಿಯೆಡೆಗೆ ಈ ಮೇಷ ರಾಶಿಯವರು ಬಲು ಬೇಗನೆ ಆಕರ್ಷಿತರಾಗಿ ಅವರೊಡನೆ ಸಂಬಂಧ ಬೆಳೆಸುತ್ತಾರೆ. ಇಂಥ ಸಂಬಂಧ ಅಲ್ಪಕಾಲದ್ದಾಗಿರಬಹುದು ಅಥವಾ ಗಂಭೀರವಾಗಿ ದೀರ್ಘಕಾಲದ್ದಾಗಿರಬಹುದು ಎಂಬುದು ಬೇರೆ ಮಾತು.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಹುಟ್ಟಿದವರು ಒಂದೇ ರೀತಿಯ ಜೀವನ ಬದುಕಲು ಇಷ್ಟಪಡಲಾರರು. ಕೆಟ್ಟ ಹುಡುಗರ ವಿಚಿತ್ರ ನಡವಳಿಕೆ ಹಾಗೂ ಅವರ ತಿಕ್ಕಲು ಸ್ವಭಾವಗಳಿಂದಾಗಿ ಈ ಮಿಥುನ ರಾಶಿಯವರು ಅವರತ್ತ ಆಕರ್ಷಿತರಾಗುತ್ತಾರಂತೆ. ಮಿಥುನ ರಾಶಿಯವರು ಇಂಥ ಕೆಟ್ಟ ಹುಡುಗರ ಸಹವಾಸ ಮಾಡಿದರೂ ಅದು ಬೋರಾಯಿತೆನ್ನಿಸಿದಾಗ ಅಷ್ಟೇ ಬೇಗನೆ ಸಂಬಂಧ ಕಡಿದುಕೊಳ್ಳಲು ಸಹ ಹಿಂದೆ ಮುಂದೆ ನೋಡಲಾರರು. ಯಾವಾಗ ಹುಡುಗ ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾನೆ ಎಂಬುದು ಗಮನಕ್ಕೆ ಬರುವುದೋ ಆಗ ಮಿಥುನ ರಾಶಿಯವರು ಪ್ರೀತಿಯ ಆಟ ಮುಗಿಸಿ ಹೊರಟು ಬಿಡುತ್ತಾರೆ.

Most Read: ಮದುವೆಯಾಗುವ ವಿಚಾರವಿದ್ದರೆ ಇಂತಹ ಸಲಹೆಗಳಿಂದ ಜಾಗೃತರಾಗಿರಿ!

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ಬಲು ಬೇಗನೆ ಉತ್ತೇಜಿತರಾಗುವುದು ಈ ವೃಶ್ಚಿಕ ರಾಶಿಯವರ ಅತಿ ಪ್ರಮುಖ ಲಕ್ಷಣ ಎಂದು ಹೇಳಲಾಗುತ್ತದೆ. ಹೀಗಾಗಿ ಇವರು ಎಲ್ಲರೂ ಬೇಡವೆನ್ನುವ ಹುಡುಗನಲ್ಲಿ ಉತ್ತೇಜಿತರಾಗಿ ಆಕರ್ಷಿತರಾಗುವುದು ಸಹಜವಾಗಿದೆ. ಒಂದು ಹಂತದಲ್ಲಿ ತಾನು ಪ್ರೀತಿಸಿದ ಹುಡುಗ ತನಗೆ ಸಿಗುವುದಿಲ್ಲ ಎಂಬುದು ಖಚಿತವಾದರೆ ಈ ವೃಶ್ಚಿಕ ರಾಶಿಯವರು ಕೊನೆಗೆ ಆತನಿಂದ ತಮ್ಮ ಕಾಮತೃಷೆಯನ್ನಾದರೂ ತಣಿಸಿಕೊಳ್ಳಲು ಯತ್ನಿಸುತ್ತಾರಂತೆ. ಯಾವಾಗ ಬೇಕಾದರೂ ಸಂಬಂಧ ಕಡಿದುಕೊಳ್ಳಬಹುದಾದ ಹುಡುಗನೊಂದಿಗೆ ಪ್ರೀತಿ ಮಾಡುವುದಕ್ಕಿಂತ ಕ್ಷಣಿಕ ಸುಖ ಅನುಭವಿಸುವುದೇ ಇವರ ಗುರಿಯಾಗಿ ಬಿಡಬಹುದು.

ಧನು ರಾಶಿ

ಧನು ರಾಶಿ

ಧನು ರಾಶಿಯವರು ಧೈರ್ಯ ಹಾಗೂ ಸಾಹಸ ಮನೋಭಾವದವರು. ಅಂದ ಮೇಲೆ ತನ್ನನ್ನು ಚಾಲೆಂಜ್ ಮಾಡುವ ಹುಡುಗನೊಂದಿಗೆ ಇವರು ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನಲಾಗಿದೆ. ಇವರು ಯಾವಾಗಲೂ ಕೂಲ್ ಆಗಿರುವ ಹುಡುಗರೊಂದಿಗೆ ಇರಲು ಬಯಸುತ್ತಾರೆ. ಹೀಗಾಗಿ ಕೆಟ್ಟ ಹುಡುಗರು ಇವರಿಗೆ ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ.

ಕುಂಭ ರಾಶಿ

ಕುಂಭ ರಾಶಿ

ಕುಂಭ ರಾಶಿಯವರು ಅತಿ ಬುದ್ಧಿವಂತರಾಗಿದ್ದು ಇತರರಿಗಿಂತ ಭಿನ್ನವಾಗಿ ಆಲೋಚಿಸುವವರು. ಈ ಭಿನ್ನವಾಗಿ ಆಲೋಚಿಸುವ ಬುದ್ಧಿಯಿಂದಲೇ ಸಮಾಜದಲ್ಲಿ ಇತರರಿಗಿಂತ ಭಿನ್ನವಾಗಿರುವ ಹುಡುಗರ ಆಕರ್ಷಣೆಗೆ ಒಳಗಾಗುತ್ತಾರೆ. ಕೂದಲಿಗೆ ನೀಲಿ ಬಣ್ಣ ಹಾಕಿಕೊಂಡು ಕಿವಿಗೆ ಓಲೆ ಧರಿಸಿ ವಿಚಿತ್ರವಾಗಿ ಡ್ರೆಸ್ ಮಾಡಿದ ಹುಡುಗರು ಇವರ ಫಸ್ಟ್ ಚಾಯಿಸ್ ಆಗಿರುತ್ತದೆ. ಕುಂಭ ರಾಶಿಯವರು ತಮ್ಮ ಮೇಲೆ ಯಾರೂ ಅಧಿಕಾರ ನಡೆಸುವುದನ್ನು ಇಷ್ಟ ಪಡಲಾರರು. ಹೀಗಾಗಿಯೇ ತುಸು ಭಂಡ ಹುಡುಗರ ಮೇಲೆ ತಾವು ಅಧಿಕಾರ ನಡೆಸಲು ಇವರು ಇಷ್ಟ ಪಡುವವರಾಗಿರುತ್ತಾರೆ. ಕೆಟ್ಟ ಹುಡುಗ ಅಂತಲ್ಲ ಆದರೆ ಒಂದಿಷ್ಟು ಭಂಡ ಧೈರ್ಯದ ಹುಡುಗ ಇವರಿಗೆ ಪರ್ಫೆಕ್ಟ್ ಸಂಗಾತಿ ಆಗಬಲ್ಲ.

English summary

These Zodiac Signs Falling in love with bad boys

The line between what’s right and what’s not blurs when we fall in love. Blinded by the heady emotion of being in love, we sometimes forget where we are headed and strongly believe that ‘everything is fair in love and war’. Sometimes,it’s no less than a war because your choice might cause quite a furor among family members and friends. The reasons might be many but the most common being—the person you fell in love with may not be the right one, as per their opinion.
Story first published: Thursday, May 9, 2019, 15:11 [IST]
X
Desktop Bottom Promotion