For Quick Alerts
ALLOW NOTIFICATIONS  
For Daily Alerts

ನಿಮ್ಮ ಬಾಯ್ ಪ್ರೆಂಡ್ ಈ 7 ಚಿಹ್ನೆಗಳನ್ನು ಇಷ್ಟಪಡುತ್ತಾರೆ ಆದರೆ ಅದು ನಿಮ್ಮ ಮೇಲಿನ ಪ್ರೀತಿಯಲ್ಲ!

By Sushma Charhra
|

ಆತ ನನ್ನನ್ನು ಪ್ರೀತಿಸುತ್ತಾನೆ, ಆತ ನನ್ನನ್ನು ಪ್ರೀತಿಸುವುದಿಲ್ಲ! ಎಂದು ಗುಲಾಬಿ ಹೂವಿನ ಪಕಳೆಗಳನ್ನು ಕೀಳುತ್ತಾ ಕುಳಿತಿದ್ದೀರಾ? ನಿಮ್ಮ ಹುಡುಗ ಪ್ರೀತಿಯ ಬಗ್ಗೆ ನಿಮಗೆ ಗೊಂದಲವಿದೆಯೇ? ಆತ ಇನ್ನು ಐ ಲವ್ ಯು ಎಂದು ಹೇಳಿಲ್ಲವಾ? ಪ್ರೀತಿ ಇದೆಯೋ ಇಲ್ಲವೋ ಎಂಬ ಗೊಂದಲದಲ್ಲೇ ಸಂಬಂಧವನ್ನು ಮುಂದುವರಿಸುವುದಕ್ಕೆ ಸಾಧ್ಯವಾಗುತ್ತಿಲ್ಲವೇ?

boyfriend

ಪ್ರೀತಿಯಲ್ಲಿ ಕೇವಲ ಫ್ರೆಂಡ್ ಶಿಪ್ ಇರಬಹುದೇ ಎಂಬ ಗೊಂದಲವಿದೆಯೇ? ಹಾಗಾದ್ರೆ ಈ ಗೊಂದಲಕ್ಕೆ ಫುಲ್ ಸ್ಟಾಪ್ ಇಡುವುದು ಹೇಗೆ? ನಿಮ್ಮ ಪ್ರೀತಿಯ ಗೆಳೆಯ ನಿಮ್ಮನ್ನ ಪ್ರೀತಿಸುತ್ತಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಈ ಏಳು ಆತನ ಚಿಹ್ನೆಗಳು ನಿಮಗೆ ಸಹಾಯ ಮಾಡಬಹುದು. ಯಾವುದಕ್ಕೂ ಟ್ರೈ ಮಾಡಿ ನೋಡಿ.

ಕೇವಲ ವರ್ತಮಾನವನ್ನು ಮಾತ್ರ ಮಾತನಾಡುವುದು. ಭವಿಷ್ಯದ ಕನಸಿನ ಬಗ್ಗೆ ಚರ್ಚಿಸದೇ ಇರುವುದು

ಕೇವಲ ವರ್ತಮಾನವನ್ನು ಮಾತ್ರ ಮಾತನಾಡುವುದು. ಭವಿಷ್ಯದ ಕನಸಿನ ಬಗ್ಗೆ ಚರ್ಚಿಸದೇ ಇರುವುದು

ಯಾವುದೇ ವ್ಯಕ್ತಿಯ ಜೊತೆಗೆ ಪ್ರೀತಿಯಲ್ಲಿ ಮುಳುಗಿದರೆ ನೀವು ನಿಮ್ಮ ಜೀವನವನ್ನು ಅವರೊಂದಿಗೆ ಹಂಚಿಕೊಳ್ಳಲಿದ್ದೀರಿ. ಜೀವನಪೂರ್ತಿ ಅವರ ಜೊತೆಗೆ ಕಳೆಯಲಿದ್ದೀರಿ. ಆದರೆ ಯಾವಾಗ ಒಬ್ಬ ವ್ಯಕ್ತಿ ಈ ವಿಚಾರದಲ್ಲಿ ಸೀರಿಯಸ್ ಆಗಿ ಇರುವುದಿಲ್ಲವೇ ಆಗ ಆತ ಭವಿಷ್ಯದ ಬಗ್ಗೆ ಚಿಂತಿಸುವುದಿಲ್ಲ. ಅವರು ನಿಮ್ಮನ್ನ ಪ್ರೀತಿಸುತ್ತಾರೆ ಎಂಬುದಕ್ಕಾಗಿ ಕೇವಲ ವರ್ತಮಾನದಲ್ಲಿ ನಿಮ್ಮ ಜೊತೆಗಿರುತ್ತಾರೆ. ಭವಿಷ್ಯದ ಬಗ್ಗೆ ನಿಮ್ಮೊಂದಿಗೆ ಚರ್ಚಿಸುವುದಿಲ್ಲ. ಪ್ರೀತಿಸುವುದಾದರೆ ಭವಿಷ್ಯದ ಕನಸುಗಳನ್ನು ಹಂಚಿಕೊಳ್ಳುತ್ತಾರೆ. ಸಂಬಂಧದಲ್ಲಿ ಸಮಸ್ಯೆಯಾದರೆ ಪರಿಹರಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ ಜಗಳಗಳು ಒಂದು ಸಂಬಂಧದಲ್ಲಿ ಸಾಮಾನ್ಯವಾಗಿರುತ್ತದೆ. ಯಾವುದೇ ಸಮಸ್ಯೆ ಜೋಡಿಗಳಲ್ಲಿ ಬಂದರೆ ಅವರು ಕೂಡಲೇ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ನೀವು ಪ್ರೀತಿಸುತ್ತಿರಬಹುದು ಎಂದುಕೊಳ್ಳುವ ಹುಡುಗ ನಿಮ್ಮೊಡನೆ ಜಗಳವಾಡಿದಾಗ ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದಿಲ್ಲ. ಹೋದರೆ ಹೋಗಲಿ ಎಂಬಂತ ಮನಸ್ಥಿತಿಯಲ್ಲಿ ಇರುತ್ತಾರೆ ಮತ್ತು ಅವರಿಗೆ ಸಂಬಂಧವನ್ನು ಸರಿಪಡಿಸಿಕೊಳ್ಳುವ ಬಗ್ಗೆ ಗಂಭೀರತೆ ಇರುವುದಿಲ್ಲ.

Most Read: ಮದುವೆಯಾಗುವ ವಿಚಾರವಿದ್ದರೆ ಇಂತಹ ಸಲಹೆಗಳಿಂದ ಜಾಗೃತರಾಗಿರಿ!

ಮದುವೆಯ ಟಾಪಿಕ್ ಗಳನ್ನು ನಿರ್ಲಕ್ಷಿಸುತ್ತಾರೆ

ಮದುವೆಯ ಟಾಪಿಕ್ ಗಳನ್ನು ನಿರ್ಲಕ್ಷಿಸುತ್ತಾರೆ

ಬಹಳ ಸಮಯದಿಂದ ಯಾವುದೇ ಒಬ್ಬ ಹುಡುಗನ ಜೊತೆಗೆ ನೀವು ಉತ್ತಮ ಬಾಂಧವ್ಯದಲ್ಲಿದ್ದು ಅದಕ್ಕೆ ಮದುವೆಯ ಮುದ್ರೆ ಕೊಡಬೇಕು ಎಂದು ಇಚ್ಛಿಸುತ್ತಿದ್ದು ಆತನ ಅಭಿಪ್ರಾಯವೇನಿರಬಹುದು ಎಂದು ಆಲೋಚಿಸುವಾಗ ಮದುವೆಯ ಬಗ್ಗೆ ನಿಮ್ಮ ಹುಡುಗನ ಬಳಿ ಮಾತನಾಡಿದರೆ ಅವರು ಅದನ್ನು ನಿರ್ಲಕ್ಷಿಸುತ್ತಿದಾರೆಂದರೆ ಅವರಿಗೆ ನಿಮ್ಮ ಮೇಲೆ ಪ್ರೀತಿ ಇಲ್ಲದೇ ಇರುವ ಸಾಧ್ಯತೆ ಇದೆ.

ಭಾವನಾತ್ಮಕ ವಿಚಾರಗಳಲ್ಲಿ ದೂರ ಕಾಯ್ದುಕೊಳ್ಳುವಿಕೆ

ಭಾವನಾತ್ಮಕ ವಿಚಾರಗಳಲ್ಲಿ ದೂರ ಕಾಯ್ದುಕೊಳ್ಳುವಿಕೆ

ವರ್ಷಗಳಿಂದ ನೀವು ಒಟ್ಟಿಗೆ ಇದ್ದಿರಬಹುದು. ಆದರೆ ಭಾವನಾತ್ಮಕ ವಿಚಾರಗಳು ಬಂದಾಗ ನಿಮ್ಮಿಂದ ಆತ ಸ್ವಲ್ಪ ದೂರವೇ ಉಳಿಯಬಹುದು. ನಿಮ್ಮಿಬ್ಬರ ಮಧ್ಯೆ ಉತ್ತಮ ಕೆಮಿಸ್ಟ್ರಿ ಇರಬಹುದು ಮತ್ತು ಉತ್ತಮ ದೈಹಿಕ ಸಂಬಂಧವೂ ಇರಬಹುದು. ಆದರೆ ಆತನಿಗೆ ನೀವು ಯಾವಾಗ ಖುಷಿಯಾಗುತ್ತೀರಿ ಮತ್ತು ನೀವು ಯಾವ ವಿಚಾರದಲ್ಲಿ, ಯಾವ ಆಹಾರದಲ್ಲಿ ಕಂಫರ್ಟ್ ಆಗಿರುತ್ತೀರಿ ಎಂದು ತಿಳಿಯದೇ ಇರಬಹುದು. ಆಗ ನೀವು ಖಂಡಿತ ನಿಮ್ಮ ಬಗೆಗಿನ ಅವರ ಭಾವನೆಯ ಬಗ್ಗೆ ಪ್ರಶ್ನಿಸಬಹುದು.

ನಿರ್ಧಾರಗಳು ಯಾವಾಗಲೂ ಆತನದ್ದೇ ಆಗಿರುತ್ತದೆ

ನಿರ್ಧಾರಗಳು ಯಾವಾಗಲೂ ಆತನದ್ದೇ ಆಗಿರುತ್ತದೆ

ಆತನ ಅನುಕೂಲಕ್ಕೆ ತಕ್ಕಂತೆ ಯಾವಾಗಲೂ ನಿರ್ಧಾರಗಳನ್ನು ಆತ ತೆಗೆದುಕೊಳ್ಳುತ್ತಿದ್ದಾನೆಯೇ? ಊಟಕ್ಕೆ ಎಲ್ಲಿ ಹೋಗಬೇಕು, ಯಾವಾಗ ರಜೆ ತೆಗೆದುಕೊಳ್ಳಬೇಕು, ಯಾವಾಗ ಸ್ನೇಹಿತರನ್ನು ಭೇಟಿ ಮಾಡಬೇಕು ಇತ್ಯಾದಿ ಇತ್ಯಾದಿ ವಿಚಾರಗಳು ಯಾವಾಗಲೂ ಅವನು ಹೇಳಿದಂತೆಯೇ ಆಗಬೇಕು ಎನ್ನುತ್ತಾರೆಯೇ. ನಿಮ್ಮ ಸಮಯಕ್ಕೆ ಬೆಲೆಯೇ ನೀಡುವುದಿಲ್ಲ ಅಥವಾ ನಿಮ್ಮ ನಿರ್ಧಾರಗಳಿಗೆ ಬೆಲೆಯೇ ನೀಡುವುದಿಲ್ಲವಾದರೆ ಅಂತಹ ಗೆಳೆಯ ಖಂಡಿತ ನಿಮ್ಮನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.

Most Read: ಕತ್ತೆ ಹಾಲಿನ ಸೋಪ್ ಬಗ್ಗೆ ಕೇಳಿದ್ದೀರಾ? ಈ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು

ಸಾರಿಗೆ ಜಾಗವಿಲ್ಲ

ಸಾರಿಗೆ ಜಾಗವಿಲ್ಲ

ಮರೆತು ಹೋದ ಪ್ರಮುಖ ವಿಚಾರಗಳ ಬಗ್ಗೆ ಅವರು ಯಾವಾಗಲೂ ತಪ್ಪಾಯ್ತು ಎಂದು ಕೇಳುವುದಕ್ಕೆ ಇಚ್ಛಿಸುವುದಿಲ್ಲ. ಮರೆತು ಹೋಗುವುದು ಸಾಮಾನ್ಯವೇ.ಆದರೆ ಮರೆತ ಬಗ್ಗೆ ನೆನಪಾದ ಮೇಲೆ ಕ್ಷಮೆ ಕೇಳದೆ ಇರುವುದು ಅಪರಾಧ. ನಿಮ್ಮ ಹುಟ್ಟುಹಬ್ಬ, ನಿಮ್ಮನ್ನು ಮೊದಲು ಭೇಟಿ ಮಾಡಿದ ದಿನ ಇತ್ಯಾದಿಗಳನ್ನು ಮರೆತು ಬಿಡುವುದು. ಇದು ನಿಮಗೆ ಸಿಲ್ಲಿ ಅನ್ನಿಸುತ್ತಿರಬಹುದು. ಆದರೆ ಯಾವುದೇ ವ್ಯಕ್ತಿಯನ್ನು ನಾವು ಮನಸ್ಪೂರ್ತಿಯಾಗಿ ಪ್ರೀತಿಸುತ್ತೀರಾದರೆ ಖಂಡಿತ ಈ ಎಲ್ಲಾ ದಿನಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೀವಿ. ಇಂತಹವು ನಿಮ್ಮ ಸಂಬಂಧದಲ್ಲಿ ತಪ್ಪುತ್ತಿದ್ದರೆ ಖಂಡಿತ ನೀವು ಚಿಂತಿಸಬೇಕಾಗಿದೆ. ನೀವು ಯಾವಾಗಲೂ ಅವರ ಭಾವನೆಯ ಬಗ್ಗೆ ಪ್ರಶ್ನಿಸುವಂತಾಗುವುದು ಪ್ರತಿ ಸಂಬಂಧದಲ್ಲೂ ಅನುಮಾನ ಆಗಾಗ ಬರುತ್ತದೆ. ಒಮ್ಮೊಮ್ಮೆ ಯಾವುದೇ ವಿಚಾರದಲ್ಲಿ ಪ್ರಶ್ನೆಗಳು ಏಳುತ್ತದೆ. ಆದರೆ ಅದು ಯಾವಾಗಲೂ ನಡೆಯುತ್ತಿದ್ದರೆ, ಪ್ರತಿಯೊಂದು ಭಾವನೆಯೂ ನಿಮಗೆ ಆತನ ಬಳಿ ಪ್ರಶ್ನಿಸುವಂತಾದರೆ? ಖಂಡಿತ ನೀವು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ನಂಬಿಕೆ ಬಹಳ ಮುಖ್ಯ. ಈ ವಿಚಾರದಲ್ಲಿ ಪ್ರಶ್ನೆ ಮಾಡುವುದಕ್ಕೆ ನಿಮಗೂ ಧೈರ್ಯವಿರಬೇಕು.

English summary

signs your boyfriend likes you but isn’t really in love with you

He loves me, he loves me not—this perhaps is the biggest dilemma a girl faces when she has been in a relationship for long and the man is yet to make any serious commitment. A lot of time, we end up questioning the person we love and doubt his feelings. And then there is the nagging fear that there is no love.
X
Desktop Bottom Promotion