For Quick Alerts
ALLOW NOTIFICATIONS  
For Daily Alerts

ಸಂಗಾತಿಯೊಂದಿಗೆ ನಿಮ್ಮ ಮೊಬೈಲಿನ ಪಾಸ್‌ವರ್ಡ್‌ನ್ನು ಹಂಚಿಕೊಳ್ಳಬೇಕೇ? ಬೇಡವೇ?

|

ಈಕೆ ತನ್ನ ಪತಿಯೊಂದಿಗೆ ಮಾಡುವ ಜಗಳಗಳ ಕಾರಣಗಳಲ್ಲಿ ಈ ಕಾರಣ ಆಕೆಯನ್ನು ಅತಿ ಹೆಚ್ಚಾಗಿ ಕಾಡುತ್ತದೆ. ಅದೆಂದರೆ ಪತಿ ತನ್ನ ಮೊಬೈಲನ್ನು ಗುಪ್ತಪದದಿಂದ ರಕ್ಷಿಸಿದ್ದು ಈಕೆಗೆ ಸರ್ವಥಾ ತನ್ನ ಮೊಬೈಲನ್ನು ನೋಡಲು ಅನುವು ಮಾಡಿಕೊಡದೇ ಇರುವುದು. ವಿವಾಹದ ಬಳಿಕ ದಂಪತಿಗಳ ನಡುವೆ ಎಲ್ಲವೂ ಹಂಚಲ್ಪಡುತ್ತದೆ 'ನಿನ್ನದೆಲ್ಲವೂ ನನ್ನದು, ನನ್ನದೆಲ್ಲವೂ ನಿನ್ನದು' ಎಂಬ ಬದ್ದತೆಗೆ ಒಳಗಾಗಿದ್ದು ಇದರಲ್ಲಿ ಮೊಬೈಲ್ ಸಹಾ ಒಂದು ಎಂದು ಆಕೆ ಎಷ್ಟು ಪರಿಯಾಗಿ ವಿವರಿಸಿದರೂ ಆತ ಮಾತ್ರ ತನ್ನ ಮೊಂಡಾಟವನ್ನು ಬಿಡದೇ ಇಂತಹ ಮಾತುಗಳಿಗೆ ಯಾವುದೇ ಪ್ರತಿಕ್ರಿಯೆಯನ್ನಾಗಲೀ ಪ್ರಾಮುಖ್ಯತೆಯನ್ನಾಗಲೀ ನೀಡದೇ ಅಲಕ್ಷಿಸುತ್ತಿರುತ್ತಾನೆ. ಹೊರಗಿನಿಂದ ಸರಳವೆಂದು ಕಂಡುಬರುವ ಈ ಪರಿ ಒಳಗಿನಿಂದ ದಾಂಪತ್ಯವನ್ನು ಗೆದ್ದಲಿನಂತೆ ಶಿಥಿಲಗೊಳಿಸುತ್ತಿರುವುದು ಮಾತ್ರ ಅರಿವಿಗೆ ಬಾರದೇ ಇರುವ ಎಚ್ಚರಿಕೆಯಾಗಿದೆ ಹಾಗೂ ಹಲವು ದಂಪತಿಗಳು ಈ ವಿಷಯದಲ್ಲಿ ಪರಸ್ಪರ ಜಗಳವಾಡುತ್ತಲೇ ಇರುತ್ತಾರೆ.

ಈ ಪ್ರಶ್ನೆ ಪ್ರಮುಖ ವಿಷಯವೊಂದನ್ನು ಚರ್ಚಿಸಲು ಕರೆ ನೀಡುತ್ತದೆ. ವಿವಾಹದ ಬಳಿಕ ದಂಪತಿಗಳಿಬ್ಬರೂ ಪರಸ್ಪರ ತಮ್ಮ ಮೊಬೈಲುಗಳ ಗುಪ್ತಪದಗಳನ್ನೂ ಹಂಚಿಕೊಳ್ಳಬೇಕೇ? ವೈವಾಹಿಕ ಸಂಬಂಧ ತಜ್ಞರ ಪ್ರಕಾರ ಈ ಪ್ರಶ್ನೆಗೆ ನೇರವಾಗಿ ಉತ್ತರ ಹೇಳಲು ಸಾಧ್ಯವಿಲ್ಲ. ಏಕೆಂದರೆ ದಾಂಪತ್ಯ ಎಂದಾಕ್ಷಣ ಇದರಲ್ಲಿ ಅನ್ಯೋನ್ಯತೆ, ವಿಶ್ವಾಸ, ನಂಬಿಕೆಗಳೇ ಇವುಗಳ ಜೀವಾಳವಾಗಿದ್ದು ಪ್ರಾಮಾಣಿಕತೆಯೇ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

Should you share your phones password with your partner?

"ಯಾವಾಗ ತನ್ನ ಸಂಗಾತಿಯ ಮೊಬೈಲಿನ ಗುಪ್ತಪದ ತನಗೆ ಬೇಕು ಎಂಬ ಬೇಡಿಕೆ ಬಂತೋ, ಆಗಲೇ ಇದು ಏಕಾಗಿ ಬೇಕು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ ಹಾಗೂ ಇದಕ್ಕೆ ಮೊದಲಾಗಿ ತಾವೇ ಈ ಪ್ರಶ್ನೆಯನ್ನು ಉತ್ತರಿಸುವ ಪ್ರಯತ್ನ ಮಾಡಬೇಕು. ಒಂದು ವೇಳೆ ನೀವು ನಿಮ್ಮ ಸಂಗಾತಿಯನ್ನು ನಂಬದೇ ಇದ್ದು ಇದರ ಹಿಂದೇನೋ ಇರಬೇಕೆಂಬ ಅನುಮಾನವೇ ಈ ಗುಪ್ತಪದವನ್ನು ಪಡೆಯುವ ಹುನ್ನಾರವಾಗಿದ್ದರೆ ದಾಂಪತ್ಯದ ಮೂಲ ಅಡಿಪಾಯವೇ ಪ್ರಶ್ನಾರ್ಹವಾಗುತ್ತವೆ. ಆಗ ಈ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ" ಎಂದು ಸಲಹಾಕಾರ್ತಿ ಮನಃಶಾಸ್ತ್ರಜ್ಞರಾದ ಶ್ವೇತಾ ಸಿಂಗ್ ವಿವರಿಸುತ್ತಾರೆ.

Most Read: ಡೇಟಿಂಗ್ ಮಾಡುವಾಗ ಗಂಡಸರು ಇಂಥ ಸುಳ್ಳು ಹೇಳುತ್ತಾರಂತೆ!

ಹಾಗಾದರೆ ದಾಂಪತ್ಯದಲ್ಲಿ ಪರಸ್ಪರರಿಗೆ ನೀಡಬೇಕಾದ ಸ್ವಾತಂತ್ರ್ಯ ಹಾಗೂ ಮಿತಿಗಳ ಬಗ್ಗೆ ಏನು?

"ಓರ್ವ ದಂಪತಿಗಳ ನಡುವೆ ಇರಬಹುದಾದ ಕಟ್ಟುಪಾಡುಗಳು ಬೇರೊಂದು ದಂಪತಿಗಳಿಗೆ ಅನ್ವಯಿಸದೇ ಇರಬಹುದು. ದಾಂಪತ್ಯದ ಖಾಸಗಿತನ ಪ್ರತಿ ದಂಪತಿಗಳಿಗೂ ಬೇರೆ ಬೇರೆ ವ್ಯಾಖ್ಯಾನ ನೀಡುತ್ತದೆ ಹಾಗೂ ಪ್ರತಿ ದಂಪತಿಗಳಲ್ಲಿಯೂ ಭಿನ್ನವಾಗಿರುತ್ತದೆ. ಉದಾಹರಣೆಗೆ ಓರ್ವ ದಂಪತಿಗಳು ಪರಸ್ಪರರ ಮೊಬೈಲಿನ ಗುಪ್ತಪದಗಳನ್ನು ಹಂಚಿಕೊಂಡು ಪರಸ್ಪರರ ಮೊಬೈಲನ್ನು ವೀಕ್ಷಿಸುತ್ತಿರ ಬಹುದು. ಒಂದು ವೇಳೆ ಹಠಾತ್ತಾಗಿ ಓರ್ವರು ತಮ್ಮ ಮೊಬೈಲಿನ ಗುಪ್ತಪದವನ್ನು ಬದಲಿಸಿ ತಮ್ಮ ಸಂಗಾತಿ ಇದನ್ನು ನೋಡದಿರುವಂತೆ ಮಾಡಿದರೆ ತಕ್ಷಣ ಅನುಮಾನದ ಪ್ರಶ್ನೆಗಳು ಉದ್ಭವವಾಗುತ್ತವೆ. ಅದರಲ್ಲೂ ಮೊಬೈಲ್ ಗುಪ್ತಪದ ನೀಡಿ ಕೆಲವು ಆಪ್ ಗಳನ್ನು ಮಾತ್ರವೇ ಗುಪ್ತಪದದಿಂದ ರಕ್ಷಿಸಿದ್ದರೆ ಇದು ಸಂಗಾತಿಯಲ್ಲಿ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಬಹುದು" ಎಂದು ಸಿಂಗ್ ವಿವರಿಸುತ್ತಾರೆ.

ದಂಪತಿಗಳ ನಡುವಣ ಸಂಬಂಧದಲ್ಲಿ ಅನ್ಯೋನ್ಯತೆ ಇದ್ದಾಗ ಯಾವುದೇ ಕ್ರಮ ಸರಿ ಅಥವಾ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಪರಸ್ಪರರಿಗೆ ಸರಿಹೋಗುವ ಯಾವುದೇ ಕ್ರಮವನ್ನು ಅನುಸರಿಸಿದರೆ ಇದರಲ್ಲಿ ಚಿಂತೆಗೆ ಕಾರಣವೇ ಇಲ್ಲ. ಆದರೆ ಯಾವುದೇ ಕ್ರಮ ತನ್ನ ಮಿತಿಯನ್ನು ಮೀರಬಾರದು ಅಷ್ಟೇ. ಒಂದು ವೇಳೆ ದಾಂಪತ್ಯದಲ್ಲಿ ಯಾವುದೇ ಅನುಮಾನ ಎದುರಾಗಿ ಇದನ್ನು ಖಚಿತಪಡಿಸಲು ಮೊಬೈಲಿನ ಗುಪ್ತಪದ ಬೇಕೇ ಬೇಕು ಎನ್ನುವ ಪರಿಸ್ಥಿತಿ ಎದುರಾದರೆ ಮಾತ್ರ ನೇರವಾಗಿ ಮಾತನಾಡುವುದೇ ಸರಿಯಾದ ಕ್ರಮವಾಗಿದೆ.

English summary

Should you share your phone's password with your partner?

Time and again, she has told him that as married couples they should not keep secrets and she is a strict follower of 'what's mine is yours and what's yours is mine'. However, her husband pays no heed to such talks and continues doing what he does. No wonder this seemingly simple thing has grown into an issue and they often fight over this.
X
Desktop Bottom Promotion