For Quick Alerts
ALLOW NOTIFICATIONS  
For Daily Alerts

ಗರ್ಲ್ ಫ್ರೆಂಡ್ ಪಾಲಕರನ್ನು ಭೇಟಿಯಾಗುವ ಆಲೋಚನೆಗಳಿದ್ದರೆ-ಈ ಸಂಗತಿಗಳೆಲ್ಲಾ ನೆನಪಿರಲಿ

|

ನಿಮಗೆ ಗರ್ಲ್ ಫ್ರೆಂಡ್ ಇರುವಳಾ? ಇದ್ದರೆ ಅವಳೊಂದಿಗೆ ದೀರ್ಘಾವಧಿ ಒಡನಾಟವಿಟ್ಟುಕೊಳ್ಳಲು ಅಥವಾ ಅವಳನ್ನೇ ಬಾಳ ಸಂಗಾತಿಯಾಗಿ ಆರಿಸಿಕೊಳ್ಳಲು ಬಯಸುವಿರಾ? ನಿಮ್ಮ ಉತ್ತರ ಹೌದು ಎಂದಾದಲ್ಲಿ ಒಂದಿಲ್ಲೊಂದು ದಿನ ನೀವು ಆಕೆಯ ತಂದೆ-ತಾಯಿಯನ್ನು ಭೇಟಿ ಮಾಡಲೇಬೇಕಾಗುತ್ತದೆ. ಅವರಿಗೆ ನಿಮ್ಮ ಬಗ್ಗೆ ತಿಳಿಸಲು, ತನ್ನ ಮಗಳ ಕೈಹಿಡಿಯಲು ಬಯಸುತ್ತಿರುವ ಹುಡುಗ ಒಳ್ಳೆಯವನು ಎಂದು ಮನವರಿಕೆ ಮಾಡಲು ಈ ಭೇಟಿ ತುಂಬಾ ಪ್ರಾಮುಖ್ಯತೆ ಪಡೆದಿರುತ್ತದೆ. ಹಾಗಾದರೆ ಸಂಗಾತಿಯ ಪಾಲಕರನ್ನು ಭೇಟಿ ಮಾಡಲು ಹೋಗುವ ಮುನ್ನ ಏನೆಲ್ಲ ತಯಾರಿ ಮಾಡಿಕೊಳ್ಳಬೇಕು, ಯಾವೆಲ್ಲ ಅಂಶಗಳತ್ತ ಗಮನ ಹರಿಸಬೇಕು ಎಂಬ ಬಗ್ಗೆ ಈ ಅಂಕಣದಲ್ಲಿ ತಿಳಿಸಿದ್ದು ನೀವೂ ಓದಿಕೊಳ್ಳಿ.

ಫಸ್ಟ್ ಇಂಪ್ರೆಶನ್ ಈಸ್ ಲಾಸ್ಟ್ ಇಂಪ್ರೆಶನ್ ಎಂಬುದು ಗೊತ್ತಿರಲಿ

ಫಸ್ಟ್ ಇಂಪ್ರೆಶನ್ ಈಸ್ ಲಾಸ್ಟ್ ಇಂಪ್ರೆಶನ್ ಎಂಬುದು ಗೊತ್ತಿರಲಿ

ತನ್ನ ಗೆಳತಿಯ ತಂದೆ-ತಾಯಿಗಳನ್ನು ಮೊದಲ ಬಾರಿ ಭೇಟಿ ಮಾಡುವುದು ಪುರುಷನೊಬ್ಬನ ಜೀವನದಲ್ಲಿನ ಅತ್ಯಂತ ಒತ್ತಡದ ಆದರೂ ಅಷ್ಟೇ ಕುತೂಹಲಕರವಾದ ಸಂದರ್ಭವಾಗಿರುತ್ತದೆ. ಅವರನ್ನು ಮೊದಲ ಬಾರಿ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವುದು ಹಾಗೂ ತನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಹೇಗೆ ಮಾಡುವುದು ಎಂಬ ಚಿಂತೆಯಲ್ಲಿ ರಾತ್ರಿಗಳ ನಿದ್ರೆಯೂ ಹಾರಿ ಹೋಗಬಹುದು. ಭೇಟಿಯ ನಂತರ ಅದರ ಪರಿಣಾಮವೇನಾಗಬಹುದು ಎಂಬುದರ ಮೇಲೆ ನಿಮಗೆ ಹಿಡಿತವಿಲ್ಲದಿರಬಹುದು. ಆದರೆ ಭೇಟಿಯ ಸಂದರ್ಭದಲ್ಲಿ ನಿಮ್ಮ ನಡವಳಿಕೆ, ಮಾತು, ಶೈಲಿ ಮುಂತಾದುವುಗಳನ್ನು ಸರಿಯಾಗಿಟ್ಟುಕೊಂಡಲ್ಲಿ ಅದನ್ನೊಂದು ಉತ್ತಮ ಭೇಟಿಯಾಗಿ ಪರಿವರ್ತಿಸಬಹುದಾಗಿದೆ. ಫಸ್ಟ್ ಇಂಪ್ರೆಶನ್ ಈಸ್ ಲಾಸ್ಟ್ ಇಂಪ್ರೆಶನ್ ಎಂಬ ಇಂಗ್ಲಿಷ್ ಗಾದೆ ಮಾತನ್ನು ನೀವೆಲ್ಲರೂ ಕೇಳಿರಬಹುದು. ಅಂದರೆ ನಿಮ್ಮ ಬಗ್ಗೆ ಯಾರಿಗೇ ಆಗಲಿ ಮೊದಲ ಬಾರಿ ಮೂಡುವ ಅಭಿಪ್ರಾಯವೇ ಬಹುದಿನಗಳ ಕಾಲ ಮುಂದುವರಿಯುತ್ತದೆ. ಹೀಗಾಗಿ ಮೊದಲ ಭೇಟಿಯಲ್ಲಿ ನಿಮ್ಮ ಬಗ್ಗೆ ಬೆಸ್ಟ್ ಇಂಪ್ರೆಶನ್ ಮೂಡಿಸುವುದು ಅವಶ್ಯ.

ಅವರ ಮದುವೆ, ಪ್ರೀತಿಯ ಬಗ್ಗೆ ತಿಳಿಯಲು ಯತ್ನಿಸಿ

ಅವರ ಮದುವೆ, ಪ್ರೀತಿಯ ಬಗ್ಗೆ ತಿಳಿಯಲು ಯತ್ನಿಸಿ

ನಿಮ್ಮ ಗೆಳತಿಯ ತಂದೆ ಹಾಗೂ ತಾಯಿಗೆ ಇಷ್ಟವಾಗುವ ಅಂಶಗಳಾವುವು ಎಂಬುದರ ಬಗ್ಗೆ ನೀವು ಸಾಕಷ್ಟು ಅಧ್ಯಯನ ಮಾಡಿರಬಹುದು. ಅವರ ಮನಸ್ಸು ಕಠಿಣವಾ ಅಥವಾ ಬೆಣ್ಣೆಯಂತೆ ಮೃದುವಾ ಎಂಬ ಬಗ್ಗೆಯೂ ನೀವು ತಿಳಿದುಕೊಂಡಿರಬಹುದು. ಆದರೆ ಅವರ ಜೀವನದಲ್ಲಿನ ಲವ್ ಸ್ಟೋರಿ ಬಗ್ಗೆ ನಿಮಗೆ ಗೊತ್ತಿಲ್ಲವೆಂದಾದರೆ ಅದನ್ನು ಮೊದಲು ತಿಳಿಯಲೆತ್ನಿಸಿ. ಅವರ ಮದುವೆ ಹಿರಿಯರಿಂದ ನಿಶ್ಚಯಿಸಲ್ಪಟ್ಟಿತ್ತಾ ಅಥವಾ ಅದು ಲವ್ ಮ್ಯಾರೇಜ್ ಆಗಿತ್ತಾ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಿ. ಇದರ ಬಗ್ಗೆ ಗೊತ್ತಾದರೆ ಪ್ರೀತಿ ಹಾಗೂ ಮದುವೆಯ ಬಗ್ಗೆ ಅವರ ದೃಷ್ಟಿಕೋನ ಹೇಗಿರಬಹುದು ಎಂಬ ಬಗ್ಗೆ ಒಂದು ಸ್ಥೂಲ ಕಲ್ಪನೆ ಸಿಗುತ್ತದೆ.

Most Read: ಕೊನೆಗೂ ತನ್ನ ಹಿಂದಿನ ಸೆಕ್ಸ್ ಲೈಫ್ ಬಗ್ಗೆ ಪತಿಗೆ ತಿಳಿದು ಹೋಯಿತು!

ನಿಮ್ಮ ಉಡುಪುಗಳು ಹೀಗಿರಲಿ

ನಿಮ್ಮ ಉಡುಪುಗಳು ಹೀಗಿರಲಿ

ನಿಮ್ಮ ಉಡುಪು ಸೇರಿದಂತೆ ಹಲವಾರು ವಿಷಯಗಳು ನಿಮ್ಮ ಬಗ್ಗೆ ಒಂದು ಅಭಿಪ್ರಾಯ ಮೂಡಿಸಲು ನೆರವಾಗುತ್ತವೆ. ನೀವು ಮಾತು ಆರಂಭಿಸುವ ಮುನ್ನ ಎದುರಿಗಿನ ವ್ಯಕ್ತಿಯ ದೃಷ್ಟಿ ನಿಮ್ಮ ಮೇಲೆ ಬಿದ್ದಿರುತ್ತದೆ. ಅಂದರೆ ಮಾತಿಗಿಂತ ಮೊದಲು ನೋಟ ಕೆಲಸ ಮಾಡುತ್ತದೆ. ಹೀಗಾಗಿ ಮೊದಲ ನೋಟದಲ್ಲೇ ಉತ್ತಮ ಅಭಿಪ್ರಾಯ ಮೂಡುವಂತಾಗಲು ಒಳ್ಳೆಯ ಉಡುಪುಗಳನ್ನು ಧರಿಸುವುದು ಸಹ ಅಗತ್ಯವಾಗಿದೆ. ಗೆಳತಿಯ ಮನೆಗೆ ಹೋಗುವಾಗ ತೀರಾ ಫಾರ್ಮಲ್ ಅಥವಾ ಕ್ಯಾಶುವಲ್ ಡ್ರೆಸ್ಸಿಂಗ್ ಬೇಡ. ಎರಡರ ಮಧ್ಯದ ರೀತಿಯಲ್ಲಿ ನಿಮಗೊಪ್ಪುವ ಹಾಗೆ ಡೀಸೆಂಟ್ ಆಗಿ ಡ್ರೆಸ್ ಮಾಡುವುದು ಉತ್ತಮ. ಗೆಳತಿಯ ತಾಯಿಗೆ ಯಾವ ಬಣ್ಣ ಇಷ್ಟ ಎಂಬುದು ಗೊತ್ತಾದರೆ ಅದೇ ಬಣ್ಣದ ಉಡುಪು ಧರಿಸಿ ಅವರನ್ನು ಮೆಚ್ಚಿಸಲು ಯತ್ನಿಸಬಹುದು. ಯಾರಿಗೇ ಆಗಲಿ ಅವರಿಗಿಷ್ಟವಾದ ಬಣ್ಣವನ್ನು ನೋಡಿದಾಗ ಮೊದಲ ನೋಟದಲ್ಲಿ ಅದರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದಂತೆ. ಹೀಗಾಗಿ ಗರ್ಲ್ ಫ್ರೆಂಡ್ ತಾಯಿಗೆ ಯಾವ ಕಲರ್ ಇಷ್ಟ ಎಂಬುದನ್ನು ತಿಳಿದುಕೊಳ್ಳಿ.

ಒಂದು ಪುಟ್ಟ ಕಾಣಿಕೆ ಜೊತೆಗಿರಲಿ

ಒಂದು ಪುಟ್ಟ ಕಾಣಿಕೆ ಜೊತೆಗಿರಲಿ

ಒಂದೊಮ್ಮೆ ನೀವು ಗೆಳತಿಯ ಮನೆಗೆ ಹೋಗಿ ಅಲ್ಲಿಯೇ ಅವರ ಪಾಲಕರನ್ನು ಭೇಟಿ ಮಾಡುತ್ತಿರುವಿರಾದರೆ ಒಂದು ಕಾಣಿಕೆಯನ್ನು ಜೊತೆಗೆ ಒಯ್ಯಿರಿ. ಆದರೆ ತೀರಾ ದುಬಾರಿಯಾದ ಅಥವಾ ವೈಯಕ್ತಿಕವೆನಿಸುವ ಗಿಫ್ಟ್ ಬೇಕಿಲ್ಲ. ಸಿಹಿ ತಿಂಡಿ, ಚಾಕ್ಲೇಟು, ಅವರು ಓದು ಪ್ರಿಯರಾಗಿದ್ದಲ್ಲಿ ಉತ್ತಮ ಗ್ರಂಥ ಅಥವಾ ತಾಜಾ ಹೂವಿನ ಬೊಕ್ಕೆಯನ್ನು ಕಾಣಿಕೆಯಾಗಿ ನೀಡಬಹುದು.

ಈಗಲೇ ಅವರನ್ನು 'ಮಮ್ಮಿ' 'ಡ್ಯಾಡಿ' ಎನಬೇಡಿ

ಈಗಲೇ ಅವರನ್ನು 'ಮಮ್ಮಿ' 'ಡ್ಯಾಡಿ' ಎನಬೇಡಿ

ಗೆಳತಿಯ ತಂದೆ, ತಾಯಿಯರನ್ನು ಮೊದಲ ಭೇಟಿಯಲ್ಲೇ ಮಮ್ಮಿ, ಡ್ಯಾಡಿ ಎಂದು ಕರೆಯಲಾರಂಭಿಸುವುದು ಅತಿ ದೊಡ್ಡ ಪ್ರಮಾದವಾಗಬಹುದಾಗಿದೆ. ಈ ಮುನ್ನ ಅವರೊಂದಿಗೆ ಯಾವತ್ತೂ ಮಾತಾಡಿಲ್ಲವಾದರೆ ಸರ್, ಮ್ಯಾಡಂ ಎನ್ನುವುದೇ ಸೂಕ್ತ. ಅವರಾಗಿಯೇ ಸಲುಗೆ ಬೆಳೆಸಿಕೊಂಡು ಮಮ್ಮಿ, ಡ್ಯಾಡಿ ಎನ್ನಲು ಹೇಳಿದರೆ ಮಾತ್ರ ಹಾಗೆ ಕರೆಯಲಾರಂಭಿಸಿ. ಆದರೆ ನೀವಾಗಿಯೇ ಅವರಿಗೆ ಮಮ್ಮಿ, ಡ್ಯಾಡಿ ಎನ್ನಲು ಆರಂಭಿಸಿದರೆ ಮನೆಯಲ್ಲಿರುವ ಇತರ ಕುಟುಂಬ ಸದಸ್ಯರಿಗೆ ಮುಜುಗರವಾಗಬಹುದು ಹಾಗೂ ನಿಮ್ಮ ಭೇಟಿಯ ಉದ್ದೇಶ ಹಾಳಾಗಲೂಬಹುದು.

ಜಾಗರೂಕರಾಗಿ ವರ್ತಿಸಿ

ಜಾಗರೂಕರಾಗಿ ವರ್ತಿಸಿ

ಗೆಳತಿಯ ಪಾಲಕರ ಮಾತುಗಳನ್ನು ನೀವು ಲಕ್ಷ್ಯವಿಟ್ಟು ಆಲಿಸುತ್ತಿರಬಹುದು. ಆದರೆ ಹಾಗಂತ ಅವರಿಗೂ ತಿಳಿಯುವಂತೆ ನಿಮ್ಮ ವರ್ತನೆ ಇರಬೇಕಾಗುತ್ತದೆ. ಕೇವಲ ಮಾತುಗಳನ್ನು ಆಲಿಸುವುದು ಮಾತ್ರವಲ್ಲದೆ ಅವರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ. ಆದಾಗ್ಯೂ ಏನಾದರೂ ಅಹಿತಕರ ಮಾತುಗಳು ಬಂದಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡದೆ ಇರುವುದು ಒಳ್ಳೆಯದು.

Most Read: ನಿಮ್ಮನ್ನು ಬಿಟ್ಟು ಹೋದ ಮಾಜಿ ಸಂಗಾತಿಯನ್ನು ನಿಮ್ಮ ಮದುವೆಗೆ ಕರೆಯಬಹುದಾ..!?

ನಿಮ್ಮ ಫೋನ್ ಮೊದಲು ಬಂದ್ ಮಾಡಿ

ನಿಮ್ಮ ಫೋನ್ ಮೊದಲು ಬಂದ್ ಮಾಡಿ

ಗೆಳತಿಯ ಮನೆಗೆ ಪ್ರವೇಶವಾಗುವ ಮುನ್ನವೇ ನಿಮ್ಮ ಜೇಬಲ್ಲಿರುವ ಮೊಬೈಲ್ ಫೋನ್ ಆಫ್ ಮಾಡಿ. ಇದು ಒಂಥರಾ ವಿಚಿತ್ರ ಸಲಹೆ ಎನಿಸಬಹುದಾದರೂ ಹೀಗೆ ಮಾಡುವುದು ಅಗತ್ಯವಾಗಿದೆ. ನೀವು ಯಾವುದೋ ಸಾಮಾನ್ಯ ಭೇಟಿಗೆ ಹೋಗುತ್ತಿಲ್ಲ. ನಿಮ್ಮ ಸಂಗಾತಿಯ ತಂದೆ, ತಾಯಿಗಳೊಂದಿಗೆ ಮೊದಲ ಭೇಟಿ ಇದಾಗಿರುವುದರಿಂದ ಅಲ್ಲಿ ಯಾವುದೇ ಅಡೆತಡೆಗಳು ಇರಲೇಕೂಡದು. ಒಳ್ಳೆಯ ಸಂದರ್ಭದಲ್ಲಿ ಫೋನ್ ಕಿರಿಕಿರಿ ಬೇಡವೇ ಬೇಡ.

ಎಂಥ ಸಂದರ್ಭ ಎದುರಾದರೂ ಮೃದುವಾಗಿ ವರ್ತಿಸಿ

ಎಂಥ ಸಂದರ್ಭ ಎದುರಾದರೂ ಮೃದುವಾಗಿ ವರ್ತಿಸಿ

ಗೆಳತಿಯ ಪಾಲಕರೊಂದಿಗೆ ಭೇಟಿಯ ಸಂದರ್ಭದಲ್ಲಿ ಏನಾದರೂ ಆಗಬಹುದು. ಒಂದು ವೇಳೆ ನಿಮ್ಮಿಬ್ಬರ ಸಂಬಂಧಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿ ನಿಮ್ಮೊಂದಿಗೆ ಕೆಟ್ಟದಾಗಿ ಮಾತನಾಡಿದರೂ ನೀವು ಮಾತ್ರ ತಾಳ್ಮೆ ಕಳೆದುಕೊಳ್ಳಕೂಡದು. ಎಲ್ಲ ಲವ್ ಸ್ಟೋರಿಗಳಲ್ಲಿ ಒಂದಿಷ್ಟಾದರೂ ಕಷ್ಟಗಳು ಇದ್ದೇ ಇರುತ್ತವೆ ಎಂಬುದು ಸತ್ಯ. ಕಷ್ಟಗಳನ್ನು ಎದುರಿಸದೆ ಪ್ರೀತಿಯನ್ನು ಗೆಲ್ಲುವುದು ಆಗದು. ಹೀಗಾಗಿ ತಾಳ್ಮೆ ಇರಲಿ. ಎಷ್ಟೇ ಆದರೂ ಅವರು ನೀವು ಪ್ರೀತಿಸುತ್ತಿರುವ ಹುಡುಗಿಯ ಪಾಲಕರು. ಅವರ ಬಗ್ಗೆ ಒಂದು ಗೌರವ ಇರಲೇಬೇಕಾಗುತ್ತದೆ. ಅವರು ಏನೇ ಅಂದರೂ ವಿಧೇಯತೆ ಹಾಗೂ ವಿನಯದಿಂದ ವರ್ತಿಸಿದಲ್ಲಿ ಮುಂದೆ ಯಾವತ್ತೋ ಅದರ ಫಲ ಸಿಕ್ಕೇ ಸಿಗುತ್ತದೆ.

English summary

Are you planning to meet your girlfriend’s parents?

Meeting a girlfriend’s parents can be one of the most stressful yet exciting days in a man’s life. The anticipation of getting introduced and making a good impression can keep anyone awake for nights. You might not have any control over what might happen after the meeting, but you can definitely do the right things during the meeting to ensure that the rendezvous turns into a good experience.
Story first published: Tuesday, March 12, 2019, 15:13 [IST]
X
Desktop Bottom Promotion