For Quick Alerts
ALLOW NOTIFICATIONS  
For Daily Alerts

  ಆಕೆ ಎಷ್ಟೇ ಕ್ಲೋಸ್ ಇದ್ದರೂ, ಕೆಲವೊಂದು ವಿಷಯಗಳನ್ನು ಮಾತ್ರ ಹೇಳಲ್ಲ!

  By Deepu
  |

  ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಋಷಿ ಮಹರ್ಷಿಗಳಿಂದಲೇ ಸಾಧ್ಯವಾಗದೇ ಹೋದಾಗ ಹುಲುಮಾನವರಾದ ನಮಗೆ ತಿಳಿಯುವುದು ಅಸಾಧ್ಯವಾದ ಮಾತು. ಆದರೆ ಸೋಲೊಪ್ಪಿಕೊಳ್ಳದ ವಿಜ್ಞಾನಿಗಳು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿದರೂ ಹೆಣ್ಣಿನ ಮನಸ್ಸಿನಾಳಕ್ಕೆ ಬಿಡಿ, ಮೇಲ್ಪದವರನ್ನೂ ದಾಟಲು ಸಾಧ್ಯವಾಗಿಲ್ಲ. ಹೆಣ್ಣು ಎಂದರೆ ಮಾಯೆ ಎಂದು ಪುರಾಣದಲ್ಲಿಯೇ ಹೇಳಲಾಗಿದೆ.

  ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಚಂಚಲ ಮನಸ್ಸು ಒಂದು ರಹಸ್ಯವಾಗಿಯೇ ಉಳಿದಿದೆ. ಅದಕ್ಕೆ ಅಲ್ಲವೇ, ಹಿರಿಯರು ಹೇಳಿದ್ದು, ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಸಾಧ್ಯವಿಲ್ಲವೆಂದು. ಹೌದು! ಹುಡುಗಿಯರು ಸಾಮಾನ್ಯವಾಗಿ ತಮಗೆ ಏನು ಇಷ್ಟ ಮತ್ತು ಯಾವುದನ್ನು ಇಷ್ಟಪಡುವುದಿಲ್ಲ ಎಂದು ನೇರವಾಗಿ ಹೇಳಲು ಹೋಗುವುದಿಲ್ಲ.

  ಅದರಲ್ಲೂ ಕೆಲವು ವಿಷಯಗಳಲ್ಲಿ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಹೇಳುವಲ್ಲಿ ಮಹಿಳೆಯರು ಕೊಂಚ ಹಿಂದೇಟು ಹಾಕುತ್ತಾರೆ. ತಮ್ಮ ಜೀವನಸಂಗಾತಿಯ ಮನ ನೋಯಬಹುದು ಎಂಬ ಅಳುಕು ಇರುವ ವಿಷಯಗಳನ್ನಂತೂ ಆಕೆ ಹೇಳದೇ ತನ್ನ ಮನಸ್ಸಿನಲ್ಲಿಯೇ ಹುದುಗಿಸಿಕೊಳ್ಳಬಹುದು. ಈ ತರಹದ ನೂರಾರು ಯೋಚನೆಗಳು ಆಕೆಯ ತಲೆಯಲ್ಲಿದ್ದು ಇದನ್ನು ಅವಶ್ಯಕವೆಂದರೆ ಮಾತ್ರ, ಸೂಚ್ಯವಾಗಿ ಕೆಲವೇ ಪದಗಳಲ್ಲಿ ಹೇಳುತ್ತಾಳೆ. ಇಂಗ್ಲಿಷ್ ನಲ್ಲಿ "well" ಎಂಬ ಒಂದೇ ಪದಕ್ಕೆ ಕೆಲವಾರು ಅರ್ಥಗಳಿವೆ. ಆದರೆ ಮಹಿಳೆಯರು ಈ ಪದವನ್ನು ಬಳಸಿದಾಗ ಈ ಅರ್ಥಗಳಿಗೆ ಇನ್ನೂ ನೂರು ಅರ್ಥಗಳು ಸೇರುತ್ತವೆ.

  ಆಗ ಆಕೆಯ ಮನದಲ್ಲೇನಿದೆ ಎಂಬುದನ್ನು ಆಕೆಯ ಸಂಗಾತಿ ಅರಿತುಕೊಳ್ಳುವಷ್ಟು ಸೂಕ್ಷ್ಮಮತಿಯಾಗಿರಬೇಕಾಗುತ್ತದೆ. ಏಕೆಂದರೆ ಇದಕ್ಕೂ ಮುಂದಿನ ವಿಷಯವನ್ನು ಆಕೆ ನಿಮ್ಮಲ್ಲಿ ಹೇಳುವುದೇ ಇಲ್ಲ! ಕೊಂಚ ಗೊಂದಲವಾಯಿತೇ? ಕೆಳಗಿನ ಉದಾಹರಣೆಗಳು ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಲು ನೆರವಾಗಬಹುದು....  

  ಅವರೊಂದಿಗೆಲ್ಲಾ ಮಾತನಾಡಬೇಡ!

  ಅವರೊಂದಿಗೆಲ್ಲಾ ಮಾತನಾಡಬೇಡ!

  ಆಕೆ ಪುರುಷ ಸಹೋದ್ಯೋಗಿಗಳೊಂದಿಗೆ ಮಾತನಾಡುವುದು ನಿಮಗೆ ಇಷ್ಟವಿರುವುದಿಲ್ಲ. ಆದರೆ ಇಂತಹ ನಿಯಮಗಳನ್ನು ಆಕೆಯ ಮೇಲೆ ಹೇರಲು ಹೋಗಬೇಡಿ. ನಿಮ್ಮ ಚಿಂತೆಯನ್ನು ಆಕೆಗೆ ಹೇಳಿಬಿಡಿ. ಆದರೆ ನಿಯಮ ಹೇರಬೇಡಿ.

  ಆಕೆಯ ಡ್ರೆಸ್ ಬಗ್ಗೆ ಚಕಾರ ಎತ್ತಬೇಡಿ!

  ಆಕೆಯ ಡ್ರೆಸ್ ಬಗ್ಗೆ ಚಕಾರ ಎತ್ತಬೇಡಿ!

  ನಿಮ್ಮ ಉಡುಗೆ ತೊಡುಗೆ ಬಗ್ಗೆ ಯಾರಾದರೂ ಹೇಳಿದರೆ ಅದು ನಿಮಗೆ ಬೇಸರ ಮೂಡಿಸುವುದಿಲ್ಲವೇ? ಆಕೆಗೂ ಕೂಡ ಹಾಗೆಯೇ. ಕನಸಿನಲ್ಲೂ ಕೂಡ ಆಕೆಯ ಉಡುಗೆತೊಡುಗೆ ಬಗ್ಗೆ ಮಾತನಾಡಲು ಹೋಗಬೇಡಿ.

  ಸಾದಾ ಶರ್ಟ್ ಪ್ಯಾಂಟ್ ಆಕೆಗೆ ಇಷ್ಟವಾಗಲ್ಲ!

  ಸಾದಾ ಶರ್ಟ್ ಪ್ಯಾಂಟ್ ಆಕೆಗೆ ಇಷ್ಟವಾಗಲ್ಲ!

  ಮಹಿಳೆಯರಿಗೆ ತಮ್ಮ ಸಂಗಾತಿ ಇಂದಿನ ದಿನಕ್ಕೆ ಹಾಗೂ ಸಂದರ್ಭಕ್ಕೆ ಒಪ್ಪುವಂತಹ ಉಡುಗೆಗಳನ್ನೇ ತೊಡಬೇಕು ಎಂಬ ಬಯಕೆ ಇರುತ್ತದೆ. ಆಗ ಅವರು ನೇರವಾಗಿ ಈ ವಿಷಯವನ್ನು ಹೇಳದೇ 'ಎಲ್ಲರೂ ಸೂಟ್ ಧರಿಸುತ್ತಾರೆ' ಎಂದು ಸೂಚ್ಯವಾಗಿ ಹೇಳಬಹುದು. ಅಂದರೆ ಇದರ ಅರ್ಥ ಯಾವುದೋ ಸಂದರ್ಭದಲ್ಲಿ ಎಲ್ಲರೂ ಸೂಟ್ ಧರಿಸಿಕೊಂಡು ಬಂದಿದ್ದು ನೀವು ಮಾತ್ರ ಸಾದಾ ಶರ್ಟ್ ಪ್ಯಾಂಟ್ ಧರಿಸಿಕೊಂಡು ಬಂದರೆ ಇರಿಸು ಮುರುಸಾಗುವುದು ಆಕೆಗೆ ಇಷ್ಟವಿಲ್ಲ.

  ಕೆಲವೊಮ್ಮೆ ಏಕಾಂತವನ್ನು ಬಯಸುತ್ತಾರೆ

  ಕೆಲವೊಮ್ಮೆ ಏಕಾಂತವನ್ನು ಬಯಸುತ್ತಾರೆ

  ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಏಕಾಂತವನ್ನು ಬಯಸುತ್ತಾರೆ. ಅಥವಾ ತಮ್ಮ ಆತ್ಮೀಯರೊಂದಿಗೆ ಮಾತ್ರ ಕಳೆಯಲು ಬಯಸುತ್ತಾರೆ. ವಿಶೇಷವಾಗಿ ರಸದೂತಗಳ ಏರುಪೇರಿನ ಅಥವಾ ಭಾವೋದ್ವೇಗದ, ಆತಂಕ, ಖಿನ್ನತೆ ಮೊದಲಾದ ಸಂದರ್ಭಗಳಲ್ಲಿ ಆಕೆಗೆ ತನ್ನ ಸಂಗಾತಿಗಿಂತಲೂ ತನ್ನ ತಾಯಿ ಅಥವಾ ಆತ್ಮೀಯ ಗೆಳತಿಯ ಸಂಗವೇ ಹೆಚ್ಚು ಇಷ್ಟವಾಗುತ್ತದೆ. ಈ ಸಂದರ್ಭವನ್ನು ಆಕೆ ಎಂದಿಗೂ ನಿಮ್ಮಲ್ಲಿ ಹೇಳಲಾರಳು. ಆಗ ನೀವೇ ಇದನ್ನು ಅರ್ಥ ಮಾಡಿಕೊಂಡು ಆಕೆಯ ಏಕಾಂತಕ್ಕೆ ಅಡ್ಡಿ ಬರದಿದ್ದರೆ ಸರಿ.

  ಕೆಲವೊಂದನ್ನು ನಿಮ್ಮಂದ ಬಯಸುತ್ತಾಳೆ

  ಕೆಲವೊಂದನ್ನು ನಿಮ್ಮಂದ ಬಯಸುತ್ತಾಳೆ

  ವಿಶೇಷವಾಗಿ ಸಮಾಗಮದ ಸಮಯದಲ್ಲಿ ಎಷ್ಟೋ ವಿಷಯಗಳಲ್ಲಿ ನೀವಾಗಿ ಮುಂದುವರೆಯಬೇಕೆಂದು ಮತ್ತು ಹೊಸತನವನ್ನು ಆಚರಿಸಬೇಕೆಂದು ಆಕೆ ಬಯಸುತ್ತಾಳೆ. ಆದರೆ ಬಾಯಿ ಬಿಟ್ಟು ಹೇಳುವುದಿಲ್ಲ.

  ಅಪ್ಪಿತಪ್ಪಿಯೂ ಬೇರೆ ಹುಡುಗಿಯರನ್ನು ನೋಡಬೇಡಿ

  ಅಪ್ಪಿತಪ್ಪಿಯೂ ಬೇರೆ ಹುಡುಗಿಯರನ್ನು ನೋಡಬೇಡಿ

  ಬೇರೆ ಹುಡುಗಿಯರನ್ನು ನೋಡಬೇಡಿ ಆಕೆಯೊಂದಿಗೆ ನೀವು ಕುಳಿತುಕೊಂಡಿರುವಾಗ ಅವಳನ್ನೇ ಕೇಂದ್ರವಾಗಿರಿಸಿ. ಸುತ್ತಲಿನ ಬೇರೆ ಹುಡುಗಿಯರನ್ನು ನೋಡಿದರೆ ಆಕೆಗೆ ತುಂಬಾ ಕಿರಿಕಿರಿಯಾಗಬಹುದು.

  ಇದು ಓಕೆ, ಪರವಾಗಿಲ್ಲ!

  ಇದು ಓಕೆ, ಪರವಾಗಿಲ್ಲ!

  ಯಾವುದೇ ವಿಚಾರಕ್ಕಾಗಲಿ ಆಕೆ ಇದು ಓಕೆ, ಪರವಾಗಿಲ್ಲ ಎಂದು ಹೇಳುತ್ತಾಳೆಯೋ, ಅದನ್ನು ನೀವು ಓಕೆ ಎಂದು ಪರಿಗಣಿಸಲು ಹೋಗಬೇಡಿ. ಅದರರ್ಥ ಅದು ಇನ್ನೂ ಪರಿಪೂರ್ಣವಾಗಲು ನೀವು ಇನ್ನೂ ಏನೋ ಮಾಡಬೇಕು ಎಂದು ಆಕೆ ಹೇಳುತ್ತಿರುತ್ತಾಳೆ. ಅದು ಏನೆಂದು ನೀವೇ ಹುಡುಕಬೇಕು, ಇದನ್ನು ಆಕೆ ಓಕೆ ಎಂದು ಬಾಯಿ ಬಿಟ್ಟು ಹೇಳುವುದಿಲ್ಲ

  ತನ್ನಂತೆ-ಅವನೂ ಕೂಡ ಸುಂದರನಾಗಿರಬೇಕು!

  ತನ್ನಂತೆ-ಅವನೂ ಕೂಡ ಸುಂದರನಾಗಿರಬೇಕು!

  ಮಹಿಳೆಯರು ಸ್ವಾಭಾವಿಕವಾಗಿಯೇ ಸೌಂದರ್ಯಪ್ರಿಯರು. ಪುರುಷರೂ ತಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬ ವಿಷಯದ ಬಗ್ಗೆ ಜಾಗರೂಕರಾಗಿದ್ದರೂ ಈ ವಿಷಯದಲ್ಲಿ ಮಹಿಳೆಯರು ಹೆಚ್ಚು ಸೂಕ್ಷ್ಮಮತಿಗಳಾಗಿರುತ್ತಾರೆ. ವಿಶೇಷವಾಗಿ ಪುರುಷರ ಉಡುಗೆಯ ವಿಷಯ ಬಂದಾಗ ಪುರುಷರು ಸಾಮಾನ್ಯವಾಗಿ ತಮಗೆ ಆರಾಮ ಎನಿಸಿದ ಬಟ್ಟೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಎರಡನೆಯ ಆದ್ಯತೆ ಬಣ್ಣ ಇತ್ಯಾದಿಗಳಿಗೆ.

  ನಿಮ್ಮಿಂದ ಗಿಪ್ಟ್ ಬಯಸುತ್ತಾಳೆ

  ನಿಮ್ಮಿಂದ ಗಿಪ್ಟ್ ಬಯಸುತ್ತಾಳೆ

  ಹೆಂಗಸರಿಗೆ ಉಡುಗೊರೆಗಳೆಂದರೆ ಅಚ್ಚು ಮೆಚ್ಚು. ಆದರೆ ಅದನ್ನು ಅವರು ಬಾಯಿ ತೆಗೆದು ಹೇಳುವುದಿಲ್ಲ. ಆದರೆ ನೀವು ಮಾತ್ರ ಆಕೆಗೆ ನಿಯಮಿತವಾಗಿ ಕೆಲವೊಂದು ಉಡುಗೊರೆಗಳನ್ನು ಕಳುಹಿಸುತ್ತಾ ಇರಬೇಕು. ಆದರೂ ಆಕೆ ನಿಮ್ಮನ್ನು ಉಡುಗೊರೆಗಳಿಂದಲೆ ಅಳೆಯುವುದಿಲ್ಲ. ಆದರೆ ಈ ಪ್ರಕ್ರಿಯೆಯು ಮಹಿಳೆಯ ಅಗತ್ಯತೆಗಳಿಗೆ ನೀವು ಸ್ಪಂದಿಸುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ.

  ಕುಟುಂಬದ ವಿಚಾರಗಳು!

  ಕುಟುಂಬದ ವಿಚಾರಗಳು!

  ಆಕೆ ನಿಮ್ಮ ತಾಯಿಯ ಜೊತೆಗೆ ಅದ್ಭುತವಾದ ಅನುಬಂಧವನ್ನು ಹೊಂದಿರಬಹುದು. ಆದರೆ ಕುಟುಂಬದ ಜೊತೆಗೆ ಸಮಯ ಕಳೆಯುವ ಅವಕಾಶವನ್ನು ಒದಗಿಸಿದರೆ, ಆಕೆ ತನ್ನ ತಂದೆ-ತಾಯಿ ಕುಟುಂಬದ ಜೊತೆಗೆ ಸಮಯ ಕಳೆಯುತ್ತಾಳೆಯೇ ಹೊರತು, ನಿಮ್ಮ ಕುಟುಂಬದ ಜೊತೆಗಲ್ಲ. ಇದು ಏಕೆ ಎಂದು ಯಾವತ್ತಿಗೂ ಆಕೆ ನಿಮ್ಮೊಂದಿಗೆ ಹೇಳಿಕೊಳ್ಳುವುದಿಲ್ಲ. ಆದರೆ ನೀವೇ ಇದನ್ನು ಅರ್ಥ ಮಾಡಿಕೊಂಡು ಆಕೆಯನ್ನು ಆಕೆಯ ಪಾಡಿಗೆ ತನ್ನಿಷ್ಟದಂತೆ ಬಿಟ್ಟು ಬಿಡಿ.

  ಆಕೆಯೂ ಸುತ್ತಮುತ್ತಲ ವ್ಯಕ್ತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ

  ಆಕೆಯೂ ಸುತ್ತಮುತ್ತಲ ವ್ಯಕ್ತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾಳೆ

  ಸಾಮಾನ್ಯವಾಗಿ ಪುರುಷರು ತಮ್ಮ ಸುತ್ತಮುತ್ತಲ ವ್ಯಕ್ತಿಗಳ ಬಗ್ಗೆ, ವಿಶೇಷವಾಗಿ ಸುಂದರ ಯುವತಿಯರ ಬಗ್ಗೆ ಆಸಕ್ತ ನೋಟವನ್ನು ಹರಿಸುತ್ತಾರೆ. ಇದರರ್ಥ ಅವರು ತಮ್ಮ ಸಂಗಾತಿಯ ಬಗ್ಗೆ ಅನಾಸಕ್ತರೆಂದೇನೂ ಅಲ್ಲ. ಇದು ಪ್ರತಿ ಪುರುಷರಲ್ಲಿಯೂ ಇರುವ ಒಂದು ಗುಣವಾಗಿದೆ. ಇದೇ ರೀತಿ ಮಹಿಳೆಯರೂ ತಮ್ಮ ಸುತ್ತ ಮುತ್ತಲ ವ್ಯಕ್ತಿಗಳಲ್ಲಿ ಆಕರ್ಷಕರಾಗಿ ಕಾಣಬರುವ ವ್ಯಕ್ತಿಗಳತ್ತ ಮೆಚ್ಚುಗೆಯ ನೋಟವನ್ನು ಬೀರಬಹುದು. ಆದರೆ ಪುರುಷರಿಗೆ ಮಾತ್ರ ಈ ನೋಟ ಆಕೆ ತಮಗೆ ಮೋಸ ಮಾಡುತ್ತಿದ್ದಾಳೆ ಎಂದೇ ಅನ್ನಿಸಬಹುದು. ಆದರೆ ಈ ಬಗ್ಗೆ ಆಕೆ ಎಂದಿಗೂ ನಿಮಗೆ ಏನನ್ನೂ ಹೇಳಲಾರಳು.

  English summary

  Things a Girl Wants, But Wont Ask!

  Yes, women do hesitate to tell everything on your face especially if it is a sensitive matter that might hurt you.A lot might be going on in her head, but she may choose to express only a little to keep it simple for you. But you should not take it for granted.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more