For Quick Alerts
ALLOW NOTIFICATIONS  
For Daily Alerts

  ಸಂಗಾತಿಯ ಆಯ್ಕೆ ಮೊದಲು ಇದನ್ನೊಮ್ಮೆ ಓದಿಕೊಳ್ಳಿ

  By Hemanth
  |

  ಜೀವನದ ಪಯಣದಲ್ಲಿ ಸಂಗಾತಿಯ ಜತೆ ಬೇಕೇಬೇಕು. ಸಂಗಾತಿಯಿಲ್ಲದೆ ಹೋದರೆ ವೃದ್ಧಾಪ್ಯದಲ್ಲಿ ಭಾರೀ ನೋವು ಕಾಡುವುದು ಸಹಜ. ಜೀವನದ ಮೂರು ಘಟ್ಟಗಳನ್ನು ಸರಿಯಾಗಿ ನಿಭಾಯಿಸಿದರೆ ಮಾತ್ರ ಜೀವನವೆನ್ನುವುದು ಸಾರ್ಥಕವಾಗುವುದು. ಬಾಲ್ಯದಲ್ಲಿ ತಂದೆ ತಾಯಿಯ ಆಸರೆ, ಪ್ರೌಢಾವಸ್ಥೆಯಲ್ಲಿ ಸಂಗಾತಿಯ ಆಸರೆ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ಅತೀ ಅಗತ್ಯವಾಗಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಸಂಗಾತಿಯು ಅತೀ ಅಗತ್ಯ. ಸಂಗಾತಿಯಿಲ್ಲದೆ ಇದ್ದರೆ ಜೀವನ ಶೂನ್ಯವಾಗುವುದು. ಸಂಗಾತಿಯಿದ್ದರೆ ಜೀವನದ ಪ್ರತಿಯೊಂದು ಸುಖದುಃಖಗಳನ್ನು ಹಂಚಿಕೊಳ್ಳಬಹುದು.

  ಯಾವುದೇ ಸಮಸ್ಯೆಯಾದರೂ ಸಂಗಾತಿಯ ಜತೆ ಹಂಚಿಕೊಂಡು ಅದನ್ನು ಪರಿಹರಿಸಬಹುದು. ಆದರೆ ಇಂದಿನ ದಿನಗಳಲ್ಲಿ ಸಂಗಾತಿಯ ಹುಡುಕಾಟ ತುಂಬಾ ಕಷ್ಟ. ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ಸ್ವಾರ್ಥವನ್ನೇ ನೋಡುತ್ತಿರುವಾಗ ಸರಿಯಾದ ಆಯ್ಕೆಯ ಸಂಗಾತಿ ಸಿಗುವುದು ಕಷ್ಟ. ಸಂಗಾತಿಯ ಆಯ್ಕೆಯಲ್ಲಿ ಎಡವಿದರೆ ಜೀವನ ಪರ್ಯಂತ ಅದರ ನೋವನ್ನು ಅನುಭವಿಸಬೇಕಾಗುತ್ತದೆ. 

  ಸಂಗಾತಿ ಜೊತೆ ಜಗಳವಾಡಿದರೆ ಹೀಗೆ ಮಾಡಬಹುದೇ?

  ಇಂತಹ ತಪ್ಪುಗಳು ಹಲವರಿಂದ ಆಗುತ್ತದೆ. ಮದುವೆಗೆ ಮೊದಲೇ ಸಂಗಾತಿ ಜತೆಗೆ ಜೀವನ ಸಾಗಿಸುವಂತಹ ಸಂಪ್ರದಾಯವು ಭಾರತದಲ್ಲೂ ಬೆಳೆದು ನಿಲ್ಲುತ್ತಿದೆ. ಇಂತಹ ಸಮಯದಲ್ಲಿ ಸಂಗಾತಿ ಹೇಗಿರಬೇಕೆಂಬ ಅರಿವು ನಿಮಗೆ ಆಗುತ್ತದೆ. ಸಂಗಾತಿಯ ಆಯ್ಕೆಯಲ್ಲಿ ಎಡವಿ ಬೀಳುವ ಮೊದಲು ಈ ಲೇಖನವನ್ನು ಓದಿಕೊಂಡರೆ ತುಂಬಾ ಒಳ್ಳೆಯದು. ಬೋಲ್ಡ್ ಸ್ಕೈ ಸಂಗಾತಿಯ ಆಯ್ಕೆ ಹೇಗಿರಬೇಕು ಮತ್ತು ಸಂಗಾತಿಯ ಯಾವ ಗುಣಗಳನ್ನು ನೋಡಿ ಆಯ್ಕೆ ಮಾಡಬೇಕು ಎಂದು ಹೇಳಿಕೊಡಲಿದೆ ಅದನ್ನು ನೀವು ತಿಳಿಯಿರಿ...

  ಸಂಬಂಧ ಒಂದು ಬದಿಯಾಗಿದ್ದರೆ

  ಸಂಬಂಧ ಒಂದು ಬದಿಯಾಗಿದ್ದರೆ

  ಸಂಬಂಧದಲ್ಲಿ ಇಬ್ಬರು ಸಂಗಾತಿಗಳು ಸರಿಯಾದ ಪರಿಶ್ರಮ ವಹಿಸಬೇಕಾಗುತ್ತದೆ. ಸಂಬಂಧದಲ್ಲಿ ನೀವು ಹೆಚ್ಚಿನ ಭಾರ ಹೊರಬೇಕೆಂದು ನಿಮ್ಮ ಸಂಗಾತಿಯು ಬಯಸಿದರೆ ಆಗ ಖಂಡಿತವಾಗಿಯೂ ಇದು ಆರೋಗ್ಯಕಾರಿಯಲ್ಲ. ಎಲ್ಲಾ ಕೆಲಸ, ಮನೆಗೆ ಸಾಮಾನು ತರುವುದು ಮತ್ತು ಬಟ್ಟೆ ಹೊಗೆಯುವುದು ಹೀಗೆ ಪ್ರತಿಯೊಂದನ್ನು ನೀವೇ ಮಾಡುತ್ತಾ ಇದ್ದರೆ ಆಗ ಸಂಬಂಧದಲ್ಲಿ ಒಂಟಿತನ ಕಾಡಲು ಆರಂಭವಾಗುವುದು.

  ಭಾವನಾತ್ಮಕವಾಗಿ ಸಂಬಂಧದಲ್ಲಿ ಬಂಧಿಯಾಗಲು ಬಯಸಿಲ್ಲ

  ಭಾವನಾತ್ಮಕವಾಗಿ ಸಂಬಂಧದಲ್ಲಿ ಬಂಧಿಯಾಗಲು ಬಯಸಿಲ್ಲ

  ದೀರ್ಘ ಕಾಲದ ಸಂಬಂಧದ ಬಗ್ಗೆ ನೀವು ಈಗಲೇ ಯೋಚಿಸದೆ ಇರಬಹುದು. ಆದರೆ ಈ ಸಂಬಂಧಕ್ಕೆ ಅವರು ಬದ್ಧರಾಗಿದ್ದಾರೆಯಾ ಅಥವಾ ಇಲ್ಲವಾ ಎನ್ನುವುದನ್ನು ತಿಳಿಯಬೇಕು. ಸಂಬಂಧದ ಬಗ್ಗೆ ಬದ್ಧತೆಯಿಲ್ಲದೆ ಇದ್ದರೆ ಈ ಸಂಬಂಧವು ಯಾವುದೇ ಸಮಯದಲ್ಲೂ ಕುಸಿದು ಬೀಳಬಹುದು. ಜಗಳದ ವೇಳೆ ಆತ ಸಂಬಂಧ ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾನೆಯಾ? ಆತ ಹೀಗೆ ಮಾಡುತ್ತಾ ಇದ್ದರೆ ಖಂಡಿತವಾಗಿಯೂ ಆತನಿಗೆ ಬದ್ಧತೆಯಿಲ್ಲ.

  ಆತನ ಅಹಂ ದೊಡ್ಡದು

  ಆತನ ಅಹಂ ದೊಡ್ಡದು

  ಸಂಬಂಧದಲ್ಲಿ ಅಹಂ ಎನ್ನುವ ಪದವು ಬರಲೇಬಾರದು. ನಿಮ್ಮ ಸಂಗಾತಿಯು ಒಳ್ಳೆಯ ಜತೆಗಾರ ಮತ್ತು ಇಬ್ಬರ ಮಧ್ಯೆ ಅಹಂ ಇರಲೇಬಾರದು. ಆತ ಮಾಡಿದ ತಪ್ಪಿಗೆ ಯಾವತ್ತಾದರೂ ಕ್ಷಮೆ ಕೇಳಿದ್ದಾನೆಯಾ? ಆತನ ಅಹಂ ಕ್ಷಮೆ ಕೇಳಲು ಅಡ್ಡಿಯಾಗುತ್ತಿದೆಯಾ? ಹೀಗೆ ಇದ್ದರೆ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ.

  ತುಂಬಾ ಗೌಪ್ಯ ವಿಚಾರಗಳು ಇವೆಯಾ?

  ತುಂಬಾ ಗೌಪ್ಯ ವಿಚಾರಗಳು ಇವೆಯಾ?

  ಜತೆಯಾಗಿ ಬದುಕುತ್ತಾ ಇದ್ದರೂ ಆತನ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ತಿಳಿಯದೆ ಇದ್ದರೆ ನೀವು ಸಂಶಯ ಪಡಲೇಬೇಕು. ಆತ ತನ್ನ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ಮಾತನಾಡುತ್ತಿದ್ದಾನೆಯಾ? ಅವರನ್ನು ನೀವು ಭೇಟಿಯಾಗಿದ್ದೀರಾ? ಆತ ತನ್ನ ಕನಸು, ಪ್ರೇರಣೆ, ನಿರಾಶೆ ಮತ್ತು ಚಿಂತೆಯ ಬಗ್ಗೆ ಮಾತನಾಡುತ್ತಾನೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಉತ್ತರ ಇಲ್ಲ ಎಂದಾದರೆ ಆತನ ಚಪಲಕ್ಕೆ ನೀವು ಮತ್ತೊಂದು ಸೇರ್ಪಡೆ ಎಂದು ಭಾವಿಸಿಕೊಳ್ಳಿ. ಆತ ಯಾವುದೇ ಸಂಬಂಧಕ್ಕೆ ಯೋಗ್ಯನಲ್ಲ.

  ಸಂಬಂಧದಲ್ಲಿ ಸಂವಹನ ಶೂನ್ಯವಾಗಿದ್ದರೆ

  ಸಂಬಂಧದಲ್ಲಿ ಸಂವಹನ ಶೂನ್ಯವಾಗಿದ್ದರೆ

  ಸಂಬಂಧದಲ್ಲಿ ಸಂವಹನ ಎನ್ನುವುದು ತುಂಬಾ ಮುಖ್ಯ. ಬದ್ಧತೆಯಿರುವಂತಹ ಸಂಬಂಧದಲ್ಲಿ ಸಂಗಾತಿಗಳು ಪ್ರತಿಯೊಂದನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಸಂಗಾತಿಯು ಯಾವುದರ ಬಗ್ಗೆಯೂ ಮಾತನಾಡದೆ ಇದ್ದರೆ ಚಿಂತೆ ಮಾಡುವ ಸರದಿ ನಿಮ್ಮದಾಗಿದೆ.

  ಆತನ ಹಾಸ್ಯಪ್ರವೃತ್ತಿ ತಮಾಷೆಯಾಗಿಲ್ಲವೇ?

  ಆತನ ಹಾಸ್ಯಪ್ರವೃತ್ತಿ ತಮಾಷೆಯಾಗಿಲ್ಲವೇ?

  ವ್ಯಕ್ತಿಯೊಬ್ಬನು ಯಾವ ವಿಷಯದ ಬಗ್ಗೆ ನಗುತ್ತಾನೆ ಎನ್ನುವುದು ಆತನ ನಡವಳಿಕೆ ಬಗ್ಗೆ ತಿಳಿಸುತ್ತದೆ. ಹೀಯಾಳಿಸುವಂತಹ ಜೋಕ್ ಗಳನ್ನು ಹೇಳುತ್ತಾ ನಗುತ್ತಾ ಇದ್ದರೆ ಅದು ಖಂಡಿತವಾಗಿಯೂ ನಿಮಗೆ ನಗು ಉಂಟು ಮಾಡಲಿಕ್ಕಿಲ್ಲ. ಭಾವನೆಗಳೇ ಇಲ್ಲದ ತಮಾಷೆಯನ್ನು ಸಂಬಂಧದಲ್ಲಿ ಹಾಸ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ.

  ಜೀವನ ಸಂಗಾತಿಯ ಆಯ್ಕೆಯ ವಿಚಾರದಲ್ಲಿ, ತಪ್ಪದಿರಲಿ ಹೆಜ್ಜೆ

  English summary

  Women, Beware Of These Signs When In A Relationship

  The need to find a partner and a mate is perhaps almost universal. Who doesn't crave for a person to talk to, a shoulder to lean on and warm arms to cuddle into? As women, we all want that special someone in our lives sooner rather than later. We all yearn for someone to share the special moments and occasions with, someone who would support us through thick and thin. But this yearning may make us jump into relationships that are not really good for us.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more