ಮಹಿಳೆ ತುಟಿ ಕಚ್ಚಿ ನೀಡುವ ಸನ್ನೆ ಯಾವುದು?

Posted By: Lekhaka
Subscribe to Boldsky

ಸೃಷ್ಟಿಯ ಅತಿ ಸುಂದರವಾದ ಸೃಷ್ಟಿಗಳಲ್ಲಿ ಮಹಿಳೆಯು ಒಂದು ಎಂದರೆ ತಪ್ಪಾಗಲಾರದು. ಮಹಿಳೆಯ ಅಗಾಧ ಸೌಂದರ್ಯವನ್ನು ಹೊಗಳದವರೇ ಇಲ್ಲ. ಇಂತಹ ಸೌಂದರ್ಯವಿರುವ ಮಹಿಳೆಯರ ಕಣ್ಣುಗಳು ತುಂಬಾ ಆಕರ್ಷಕ. ಅದೇ ರೀತಿ ತುಟಿಗಳು ಕೂಡ. ಕೆಳ ತುಟಿಯನ್ನು ಕಚ್ಚಿ ಸನ್ನೆ ಮಾಡಿದರೆ ಎದುರಿಗಿರುವ ಪುರುಷ ಕಂಪ್ಲೀಟ್ ಬೌಲ್ಡ್. ಇದರಲ್ಲಿ ಸಂದೇಹವೇ ಬೇಡ. ತುಟಿ ಕಚ್ಚುವುದು ಅಷ್ಟು ಮಾದಕ ಯಾಕೆಂದು ನಿಮಗೆ ಯಾವತ್ತಾದರೂ ಅನಿಸಿದೆಯಾ? ಇದರ ಹಿಂದೆ ಹಲವಾರು ಕಾರಣಗಳು ಇವೆ.

ತುಟಿ ಕಚ್ಚಿವಾಗ ಮಹಿಳೆಯರಲ್ಲಿ ಕೂಡ ಕೆಲವೊಂದು ಬದಲಾವಣೆಗಳು ಆಗುವುದು. ಆದರೆ ತುಟಿ ಕಚ್ಚುವ ಮಹಿಳೆಯರನ್ನು ನೋಡಿದರೆ ಪುರುಷರು ಅಷ್ಟು ಮೋಹಗೊಳ್ಳುವುದು ಯಾಕೆ? ಇಂತಹ ಸರಳ ವಿಷಯದಲ್ಲಿ ಅಂತಹದ್ದೇನು ಅಡಗಿದೆ ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.... 

ಹುಡುಗರು ಹುಡುಗಿಯರ ತುಟಿ ನೋಡುವುದು ಯಾಕೆ?

ಹುಡುಗರು ಹುಡುಗಿಯರ ತುಟಿ ನೋಡುವುದು ಯಾಕೆ?

ಪಬ್ ನಲ್ಲಿ ಪುರುಷನು ಮಹಿಳೆಯೊಂದಿಗೆ ಫ್ಲರ್ಟ್ ಮಾಡುತ್ತಿರುವಾಗ ಆಕೆ ತುಟಿಗಳನ್ನು ಕಚ್ಚಿದರೆ ಆಗ ಪುರುಷ ಸಂಪೂರ್ಣವಾಗಿ ಮಾರು ಹೋಗುತ್ತಾನೆ. ಅದಕ್ಕೆ ಕಾರಣಗಳು ಇಲ್ಲಿದೆ....

ದೇಹಭಾಷೆಯು ತುಂಬಾ ಪ್ರಬಲ ಅಸ್ತ್ರ

ದೇಹಭಾಷೆಯು ತುಂಬಾ ಪ್ರಬಲ ಅಸ್ತ್ರ

ಪುರುಷರ ಅಥವಾ ಮಹಿಳೆಯರ ಗಮನ ಸೆಳೆಯಲು ಮಾತಿನ ಮೋಡಿ ಅಗತ್ಯವೆಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ದೇಹಭಾಷೆಯು ಆಕರ್ಷಿಸಲು ತುಂಬಾ ಪ್ರಬಲ ಅಸ್ತ್ರವಾಗಿದೆ. ಯಾವುದೇ ಶಬ್ದಕ್ಕಿಂತ ಜೋರಾಗಿ ದೇಹವು ಮಾತನಾಡಬಲ್ಲದು. ನೀವು ಒಬ್ಬಳು ಮಹಿಳೆಯ ಜತೆ ಮಾತನಾಡುವಾಗ ಆಕೆ ನಿಲ್ಲುವ ರೀತಿ, ಕೂದಲಿನೊಂದಿಗೆ ಆಟವಾಡುವ ಬಗೆ, ಮುಂದಕ್ಕೆ ಬಾಗುವುದು ಅಥವಾ ಮಾದಕ ನಗೆ ಬಿರುವುದು ಇವೆಲ್ಲವೂ ಯಾವುದೇ ಶಬ್ದಕ್ಕಿಂತ ತುಂಬಾ ಪ್ರಭಾವಶಾಲಿ.

ಸುಪ್ತ ಮನಸ್ಸಿನೊಳಗೆ ಆಕರ್ಷಣೆಯು ಅರಂಭವಾಗುವುದು

ಸುಪ್ತ ಮನಸ್ಸಿನೊಳಗೆ ಆಕರ್ಷಣೆಯು ಅರಂಭವಾಗುವುದು

ಕೆಲವೊಂದು ದೇಹಭಾಷೆಗಳು ಸ್ವಯಂಪ್ರೇರಿತ ಕ್ರಿಯೆಗಳಲ್ಲ. ಸುಪ್ತ ಮನಸ್ಸು ಕೆಲವೊಂದು ಸ್ವಯಂಪ್ರೇರಿತವಲ್ಲದ ಕ್ರಿಯೆಗಳನ್ನು ಮಾಡುತ್ತದೆ. ಇಂತಹ ಕ್ರಿಯೆಗಳಿಗೆ ಇಬ್ಬರ ಮಧ್ಯೆ ಬಲವಾದ ಆಕರ್ಷಣೆ ಬೇಕಾಗುತ್ತದೆ.

 ಮಹಿಳೆ ತನ್ನ ತುಟಿಗಳನ್ನು ಕಚ್ಚಿದರೆ...

ಮಹಿಳೆ ತನ್ನ ತುಟಿಗಳನ್ನು ಕಚ್ಚಿದರೆ...

ತುಟಿಗಳು ತುಂಬಾ ಮಾದಕ. ಅದರಲ್ಲೂ ಕೆಂದುಟಿಗಳು. ಈ ತುಟಿಗಳನ್ನು ಮಹಿಳೆ ಕಚ್ಚಿದರೆ ಆಗ ಎದುರಿಗಿರುವ ಪುರುಷ ಆಕರ್ಷಣೆಗೆ ಒಳಗಾಗುವುದು ಖಚಿತ. ಮಹಿಳೆಯು ತುಟಿಗಳನ್ನು ಕಚ್ಚುತ್ತ ನಿಮಗೆನೋ ಮನವರಿಕೆ ಮಾಡಲು ಪ್ರಯತ್ನಿಸುತ್ತಿರಬಹುದು ಅಥವಾ ತುಟಿಗಳನ್ನು ಕಚ್ಚಿ ಆಕೆ ಬೇರೆ ಯಾವುದೋ ವಿಷಯದ ಬಗ್ಗೆ ಯೋಚಿಸುತ್ತಿರಬಹುದು. ಆದರೆ ತುಟಿಗಳನ್ನು ಕಚ್ಚುವುದು ತುಂಬಾ ಮಾದಕವಾಗಿರುವುದು.

ನಿಮ್ಮ ಗಮನ ಆ ಕಡೆಗೆ ಹೋಗುವುದು

ನಿಮ್ಮ ಗಮನ ಆ ಕಡೆಗೆ ಹೋಗುವುದು

ನೀವು ಆಕೆಯೊಂದಿಗೆ ಫ್ಲರ್ಟ್ ಮಾಡಲು ಪ್ರಯತ್ನಿಸುತ್ತಾ ಇರುವಾಗ ಆಕೆ ತುಟಿಗಳನ್ನು ಕಚ್ಚಿದರೆ ಆಗ ನಿಮ್ಮ ಗಮನವೆಲ್ಲಾ ಆ ಕಡೆಗೆ ಹೋಗುತ್ತದೆ. ನಿಮ್ಮ ಮನಸ್ಸು ಆಕೆಗೆ ಮುತ್ತಿಕ್ಕುವ ಬಗ್ಗೆ ಯೋಚಿಸಬಹುದು. ಈ ಕಾರಣದಿಂದಾಗಿ ಮಹಿಳೆಯು ತನ್ನ ತುಟಿಗಳನ್ನು ಕಚ್ಚುತ್ತಿರಬಹುದು.

ನಿಮ್ಮಲ್ಲಿ ಕುತೂಹಲ ಉಂಟು ಮಾಡಲು

ನಿಮ್ಮಲ್ಲಿ ಕುತೂಹಲ ಉಂಟು ಮಾಡಲು

ನೀವು ಯಾರೊಂದಿಗಾದರೂ ಫ್ಲರ್ಟ್ ಮಾಡಲು ಪ್ರಯತ್ನಿಸುತ್ತಾ ಇರುವಾಗ ಎದುರಿನ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾ ಇದ್ದಾರೆ ಎಂದು ತಿಳಿಯಲು ನೀವು ಕಾತರಾಗಿರುತ್ತೀರಿ. ಆಕೆ ತುಟಿಗಳನ್ನು ಕಚ್ಚುತ್ತಾ ಇರುವಾಗ ನಿಮ್ಮ ದೇಹವು ಒಳ್ಳೆಯ ಸಂಕೇತ ಪಡೆಯುವುದು ಮತ್ತು ಈಗ ನಿಮ್ಮ ಸರದಿಯಾಗಿರುವುದು.

ಇದನ್ನು ನೀವು ಸಿನಿಮಾಗಳಲ್ಲಿ ನೋಡಿರಬಹುದು

ಇದನ್ನು ನೀವು ಸಿನಿಮಾಗಳಲ್ಲಿ ನೋಡಿರಬಹುದು

ತುಟಿಗಳನ್ನು ಕಚ್ಚುವುದು ತುಂಬಾ ಮಾದಕವೆಂದು ನಮಗೆ ಅನಿಸುವುದು ಹೇಗೆ ಎಂದರೆ ನಾವು ಇದನ್ನು ಹೆಚ್ಚಿನ ಸಿನಿಮಾಗಳಲ್ಲಿ ನೋಡಿರುತ್ತೇವೆ. ರೋಮ್ಯಾಂಟಿಕ್ ಸಿನಿಮಾಗಳಲ್ಲಿ ಮೊದಲ ಕಿಸ್ ಗೆ ಮೊದಲು ತುಟಿ ಕಚ್ಚುತ್ತಾ ನಾಚಿಕೆ ವ್ಯಕ್ತಪಡಿಸುವ ನಾಯಕಿಯನ್ನು ನೋಡಿರುತ್ತೇವೆ.

English summary

Why A Woman Biting Her Lips Is Hot

A woman biting her lip is surely a turn on to men. Are you wondering why lip biting is so hot? Well, there are certain reasons behind the phenomena. If a woman bites her lip, it surely turns on any man who is watching her. But what is it so hot about a woman biting her lower lip? Why men go crazy for such a simple thing?