ಆ ಒಂದು ಕ್ಷಣದಲ್ಲಿ ಎದುರಿನ ವ್ಯಕ್ತಿಗೆ ಆಕರ್ಷಿತವಾಗಿ ಬಿಡುತ್ತೇವೆ!

By: Deepu
Subscribe to Boldsky

ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಮ್ಮನ್ನು ತಾವು ಹೀರೋ-ಹೀರೊಯಿನ್ ಎಂದೇ ಭಾವಿಸುತ್ತಾರೆ. ಆ ಮಟ್ಟಿಗೆ ಅವರಿಗೆ ಅವರೇ ಆಕರ್ಷಕ ವ್ಯಕ್ತಿ. ತಮ್ಮಲ್ಲಿ ಇರುವ ಗುಣಗಳು ಮತ್ತೊಬ್ಬರಲ್ಲಿ ಇಲ್ಲ ಎಂದೇ ಅವರು ನಂಬಿರುತ್ತಾರೆ.

ಅದನ್ನು ಬಿಡಿ ಕೆಲವರನ್ನು ನೋಡಿದರೆ ಪ್ರತಿಯೊಬ್ಬರೂ ಆಕರ್ಷಿತರಾಗುತ್ತಾರಲ್ಲವೇ? ಅದು ಹೇಗೆ? ಅದರ ಹಿಂದಿನ ಕಾರಣಗಳನ್ನು ನಾವು ನಿಮಗೆ ಇಂದು ತಿಳಿಸುತ್ತೇವೆ. ಬನ್ನಿ ನಾವು ಒಬ್ಬರನ್ನು ನೋಡಿ ಆಕರ್ಷಿತರಾಗಲು ಇರುವ "ಆ ಅಂಶಗಳ" ಕುರಿತು ನಾವು ನಿಮಗೆ ಇಂದು ತಿಳಿಸುತ್ತೇವೆ

ವಾಸ್ತವ #1

ವಾಸ್ತವ #1

ಒಂದು ಅಧ್ಯಯನವು ಮನುಷ್ಯರು ಇತರರ ಸುಂದರ ಮುಖವನ್ನು ನೋಡಿ ಆಕರ್ಷಿತರಾಗುತ್ತಾರೆ ಎಂದು ತಿಳಿಸಿತು. ಓರೆ ಕೋರೆಗಳಿಲ್ಲದ ಮುಖವನ್ನು ನೋಡಿದರೆ ಎಂತಹವರಾದರೂ ಆಕರ್ಷಿತರಾಗುತ್ತಾರೆ. ಇದಕ್ಕೆ ಅಲ್ಲವೇ ಚಲನಚಿತ್ರ ನಟ-ನಟಿಯರು ನಮಗೆ ಆಕರ್ಷಕವಾಗಿ ಕಾಣುವುದು. ಅವರ ಮುಖವು ತಿದ್ದಿ ತೀಡಿದಂತೆ ಆಕರ್ಷಕವಾಗಿರುತ್ತದೆ. ಅದೇ ಅವರ ಆಕರ್ಷಣೆಯ ಗುಟ್ಟು ಎಂದು ನಮಗೂ ಗೊತ್ತು, ಅವರಿಗೂ ಗೊತ್ತು.

ವಾಸ್ತವ #2

ವಾಸ್ತವ #2

ಈ ಅಧ್ಯಯನವು ನಾವು ಮತ್ತೊಬ್ಬರ ದೇಹದ ಆಕಾರವನ್ನು ನೋಡಿ ಆಕರ್ಷಿತರಾಗುತ್ತೇವೆ ಎಂದು ತಿಳಿಸಿತು. ಬಳಕುವ ಬಳ್ಳಿ, ಸಿಕ್ಸ್-ಪ್ಯಾಕ್ ಸುಂದರಾಂಗ, ಇತರೆ ಮಾದರಿಯ ವ್ಯಕ್ತಿಗಳ ದೇಹದ ಆಕಾರವನ್ನೆ ನೋಡಿ ನಾವು ಆಕರ್ಷಿತರಾಗುತ್ತೇವೆ. ಅದರಲ್ಲಿಯೂ ನಮಗೆ ಗೊತ್ತೇ ಇಲ್ಲದೆ ಆಕರ್ಷಿತರಾಗುತ್ತೇವೆ ಎಂಬುದು ಸತ್ಯ.

ವಾಸ್ತವ #3

ವಾಸ್ತವ #3

ಆರೋಗ್ಯಕರವಾಗಿರುವ ಲುಕ್ (ಯೌವನ) ನಮ್ಮನ್ನು ಆಕರ್ಷಿಸುತ್ತದೆ. ಅದಕ್ಕೆ ಅಲ್ಲವೇ ರಜನಿಕಾಂತ್, ಅಮಿತಾಬ್ ಮುದುಕರು ಎಂದು ನಾವು ಒಪ್ಪುವುದಿಲ್ಲ. ರೇಖಾ-ಶ್ರೀದೇವಿಯವರನ್ನು ಸಹ ನಾವು ಹೀಗೆಯೇ ನೋಡುತ್ತೇವೆ. ಯೌವನ ವಯಸ್ಸಿನಿಂದಲ್ಲ, ಆರೋಗ್ಯಕರವಾಗಿ ಕಾಣುವುದರಲ್ಲಿ ಅಡಗಿದೆ.

ವಾಸ್ತವ #4

ವಾಸ್ತವ #4

ನೀವು ಯಾರನ್ನಾದರೂ ಧ್ವನಿಯನ್ನು ಕೇಳಿಯೇ ಇಷ್ಟಪಟ್ಟಿದ್ದೀರಾ? ಹೌದು, ಧ್ವನಿ ಸಹ ನಿಮ್ಮನ್ನು ಮೋಡಿ ಮಾಡುತ್ತದೆ. ಮಧುರವಾಗಿ ಮಾತನಾಡುವ ಹೆಂಗಸರು ಗಂಡಸರಿಗೆ ಪ್ರಿಯವಾದರೆ, ಕಂಚಿನ ಕಂಠದ ಪುರುಷರ ಧ್ವನಿ ಮಹಿಳೆಯರಿಗೆ ಪ್ರಿಯವಾಗಿರುತ್ತದೆ.

ವಾಸ್ತವ #5

ವಾಸ್ತವ #5

ನೀವು ಇದನ್ನು ನಂಬಲಾರಿರಿ! ಯಾರು ತುಂಬಾ ದೂರ ಓಡುತ್ತಾರೋ? ಅವರು ಆಕರ್ಷಕವಾಗಿ ಕಾಣುತ್ತಾರೆ. ಅಥ್ಲೆಟಿಕ್‌ನಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳಲ್ಲಿ ಟೆಸ್ಟೋಸ್ಟಿರೋನ್ ಮಟ್ಟಗಳು ಹೆಚ್ಚಾಗಿರುತ್ತವೆ. ಜೊತೆಗೆ ಓಟವು ದೇಹವನ್ನು ಉತ್ತಮ ಆಕಾರದಲ್ಲಿಡುತ್ತದೆ. ಪುರುಷರು ಓಡುತ್ತಿದ್ದಲ್ಲಿ, ಅವರಲ್ಲಿ ವೀರ್ಯಗಳ ಸಂಖ್ಯೆ ಸಹ ಅಧಿಕವಾಗಿ ಇರುತ್ತವೆ.

ವಾಸ್ತವ #6

ವಾಸ್ತವ #6

ಆಧುನಿಕ ವಿಶ್ವದಲ್ಲಿ ಬುದ್ಧಿವಂತಿಕೆ ಮತ್ತು ಜ್ಞಾನ ಸಹ ಆಕರ್ಷಣೆಯ ಅಂಶಗಳಾಗಿ ಪರಿಗಣಿಸಲ್ಪಡುತ್ತವೆ.

ವಾಸ್ತವ #7

ವಾಸ್ತವ #7

ಕೊನೆಯ ಅಂಶ ಸಾಮಾಜಿಕ ಸ್ಥಾನಮಾನ ಮತ್ತು ಸಂಪತ್ತು ಸಹ ಇಂದಿನ ದಿನಗಳಲ್ಲಿ ಆಕರ್ಷಣೆಯ ಅಂಶವಾಗಿ ಪರಿಗಣಿಸಲ್ಪಡುತ್ತದೆ. ಆದರೆ ತಾಳಿ, ಹಾಗೆಂದು ಹಣವೊಂದಿದ್ದರೆ ಸಾಕು ಎಂದು ಭಾವಿಸಬೇಡಿ. ಅದರ ಜೊತೆಗೆ ನಿಮ್ಮನ್ನು ಮೇಲೆ ಎದ್ದು ತೋರುವಂತೆ ಮಾಡುವ ಕೆಲವೊಂದು ಅಂಶಗಳು ಇರಬೇಕು ಎಂಬುದನ್ನು ಮರೆಯಬೇಡಿ.

 
Read more about: love, romance
English summary

What Makes You Attractive?

Most of us wonder why a guy or a girl in the college or workplace gets all the attention. We also wonder why we get attracted to someone without any obvious reason. We are 'wired' to get attracted to certain human traits. Yes, biology comes into the picture as it dictates some of our likes and dislikes. Human beings are programmed to perceive certain aspects of the human body as attractive or unattractive. Here are they:
Please Wait while comments are loading...
Subscribe Newsletter